ಕಾವೇರಿ ಸಂಕ್ರಮಣ
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅಕ್ಟೋಬರ್ ಮಧ್ಯದಲ್ಲಿ (ಹಿಂದೂ ಕ್ಯಾಲೆಂಡರ್ ಪ್ರಕಾರ ತುಲಾ ತಿಂಗಳ ಮೊದಲ ದಿನ) ಕಾವೇರಿ ಸಂಕ್ರಮಣವನ್ನು ಆಚರಿಸಲಾಗುತ್ತದೆ. ತಲಕಾವೇರಿ ದೇವಸ್ಥಾನದಲ್ಲಿರುವ ಪುಷ್ಕರಿಣಿ ಸಮೀಪದ ಕುಂಡಿಕೆಯಿಂದ ಕಾವೇರಿ ನದಿ ಉಗಮವಾಗುತ್ತದೆ (ತೀರ್ತೋದ್ಭವ) ಮತ್ತು ಈ ನೀರಿನಲ್ಲಿ ಪವಿತ್ರ ಸ್ನಾನ ಮಾಡಲು ಸಾವಿರಾರು ಭಕ್ತರು ತಲಕಾವೇರಿ ಮತ್ತು ಭಾಗಮಂಡಲಕ್ಕೆ ಆಗಮಿಸುತ್ತಾರೆ.
ಬಸವನಗುಡಿ ಕಡಲೆ ಕಾಯಿ ಪರಿಷೆ
ಬಸವನಗುಡಿ ಕಡಲೆ ಕಾಯಿ ಪರಿಷೆ ಬೆಂಗಳೂರು ನಗರದ ಬಸವನಗುಡಿ ಪ್ರದೇಶದಲ್ಲಿ ನಡೆಯುವ ವಾರ್ಷಿಕ ನೆಲಗಡಲೆ ಜಾತ್ರೆ. ಬಸವನಗುಡಿ ಕಡಲೆ ಕಾಯಿ ಪರಿಷೆಯನ್ನು ಬುಲ್ ಟೆಂಪಲ್ ರಸ್ತೆಯ ಎರಡೂ ಬದಿಗಳಲ್ಲಿ ಮತ್ತುಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಸಲಾಗುತ್ತದೆ.
ಕರ್ನಾಟಕ ರಾಜ್ಯೋತ್ಸವ ದಿನ
ಕರ್ನಾಟಕ ರಾಜ್ಯ ಸಂಸ್ಥಾಪನಾ ದಿನವನ್ನು ಪ್ರತಿವರ್ಷ ನವೆಂಬರ್ 1 ರಂದು ‘ರಾಜ್ಯೋತ್ಸವ’ ದಿನವಾಗಿ ಆಚರಿಸಲಾಗುತ್ತದೆ. 1956 ರ ನವೆಂಬರ್ 1 ರಂದು ದಕ್ಷಿಣ ಭಾರತದ ಕನ್ನಡ ಮಾತನಾಡುವ ಪ್ರದೇಶಗಳ ವಿಲೀನದ ಮೂಲಕ ಕರ್ನಾಟಕ ರಾಜ್ಯವನ್ನು ಸ್ಥಾಪಿಸಲಾಯಿತು.
ಗೌರಿ ಹಬ್ಬ
ಗೌರಿ ಹಬ್ಬ ಗಣೇಶನ ತಾಯಿ ಗೌರಿಗೆ ಅರ್ಪಿತ ಆಚರಣೆಯಾಗಿದೆ. ಗಣೇಶ ಚತುರ್ಥಿಗೆ ಒಂದು ದಿನ ಮೊದಲು ಗೌರಿ ಹಬ್ಬ ಆಚರಿಸಲಾಗುತ್ತದೆ. ಒಟ್ಟಿಗೆ ಎರಡು ಹಬ್ಬಗಳನ್ನು ಗೌರಿ ಗಣೇಶ ಹಬ್ಬ ಎಂದು ಕರೆಯಲಾಗುತ್ತದೆ.
ಗೊಂಬೆ ಹಬ್ಬ
ಗೊಂಬೆ ಹಬ್ಬವನ್ನು ಪ್ರತಿವರ್ಷ ದಸರಾ / ನವರಾತ್ರಿಯ ಸಮಯದಲ್ಲಿ ಉತ್ಸಾಹಿ ವ್ಯಕ್ತಿಗಳು ಆಚರಿಸುತ್ತಾರೆ. ಗೊಂಬೆಗಳ ಉತ್ಸವವು ತಮ್ಮ ಪರಿಕಲ್ಪನೆ, ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಗೊಂಬೆಗಳನ್ನು ಸಂಗ್ರಹಿಸುವುದು
ಯಕ್ಷಗಾನ
ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ.
ಪುಳಿಯೋಗರೆ
ಪುಳಿಯೋಗರೆ ಕರ್ನಾಟಕದ ಜನಪ್ರಿಯ ಖಾದ್ಯವಾಗಿದೆ. ಅನ್ನದಿಂದ ತಯಾರಿಸುವ ಪುಳಿಯೋಗರೆ ರುಚಿಯಲ್ಲಿ ಸ್ವಲ್ಪ ಹುಳಿಯಿದ್ದು ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ಸಮಯ ಹೆಚ್ಚಾಗಿ ಸೇವಿಸಲಾಗುತ್ತದೆ.
ತಟ್ಟೆ ಇಡ್ಲಿ
ತಟ್ಟೆ ಇಡ್ಲಿ ಇಡ್ಲಿಯ ಜನಪ್ರಿಯ ರೂಪಾಂತರವಾಗಿದೆ. ಸಾಮಾನ್ಯ ಇಡ್ಲಿ ಚಿಕ್ಕದಾಗಿದ್ದು ತೆಳ್ಳಗಿದ್ದರೆ ತಟ್ಟೆ ಇಡ್ಲಿ ಸುತ್ತಳತೆ ಮತ್ತು ದಪ್ಪದಲ್ಲಿ ದೊಡ್ಡದಾಗಿರುತ್ತದೆ ಮತ್ತು ಅದನ್ನು ವೃತ್ತಾಕಾರದ ತಟ್ಟೆಯಲ್ಲಿ ಬೇಯಿಸುವುದರಿಂದ ಈ ಹೆಸರು ಪಡೆದುಕೊಂಡಿದೆ.
ಮೈಸೂರು ಪಾಕ್
ಮೈಸೂರು ಪಾಕ್ ಕರ್ನಾಟಕದಿಂದ ಜನಪ್ರಿಯ ಸಿಹಿ ತಿನಿಸು. ಮೈಸೂರು ಪಾಕನ್ನು ತುಪ್ಪ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ‘ಪಾಕ್’ ಎಂಬ ಪದವು ಪಾಕದಿಂದ ಹುಟ್ಟಿಕೊಂಡಿತು, ಇದು ಮೈಸೂರು ಪಾಕ್‌ನಲ್ಲಿ ಸಿಹಿಗಾಗಿ ಬಳಸುವ ಸಕ್ಕರೆ ಪಾಕವನ್ನು ಸೂಚಿಸುತ್ತದೆ.