Karnataka logo

Karnataka Tourism
GO UP
Mysore Pak

ಮೈಸೂರು ಪಾಕ್

separator
  /  ಮೈಸೂರು ಪಾಕ್

ಮೈಸೂರು ಪಾಕ್ ಕರ್ನಾಟಕದಿಂದ ಜನಪ್ರಿಯ ಸಿಹಿ ತಿನಿಸು.  ಮೈಸೂರು ಪಾಕನ್ನು ತುಪ್ಪ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ‘ಪಾಕ್’ ಎಂಬ ಪದವು ಪಾಕದಿಂದ ಹುಟ್ಟಿಕೊಂಡಿತು, ಇದು ಮೈಸೂರ್ ಪಾಕ್‌ನಲ್ಲಿ ಸಿಹಿಗಾಗಿ ಬಳಸುವ ಸಕ್ಕರೆ ಪಾಕವನ್ನು ಸೂಚಿಸುತ್ತದೆ. ಉತ್ತಮ ಗುಣಮಟ್ಟದ ಮೈಸೂರ್ ಪಾಕ್ ಬಾಯಲ್ಲಿಟ್ಟುಕೊಂಡಾಗ ಜಗಿಯುವ ಅವಶ್ಯಕತೆ ಇಲ್ಲದೆಯೇ ಕರಗುತ್ತದೆ. ಎಲ್ಲರೂ ಆಸ್ವಾದಿಸುವ ಮೈಸೂರು ಪಾಕ್ ಗೆ ವಿಶ್ವದೆಲ್ಲೆಡೆ ಬೇಡಿಕೆಯಿದೆ. ಮೈಸೂರು ಮಹಾರಾಜರ ಅರಮನೆಯ ಅಡಿಗೆ ಮನೆಯಲ್ಲಿ ಬಾಣಸಿಗನೊಬ್ಬನಿಂದ ಆಕಸ್ಮಿಕವಾಗಿ ಮೈಸೂರ್ ಪಾಕ್ ಕಂಡುಹಿಡಿಯಲ್ಪಟ್ಟಿತು ಮತ್ತು ಇದು ತಕ್ಷಣ ಮಹಾರಾಜರ ಮೆಚ್ಚುಗೆಗೆ ಪಾತ್ರವಾಯಿತು ಎಂದು ನಂಬಲಾಗುತ್ತದೆ. 

ತಯಾರಿ:

  • ಹಂತ 1: ತುಪ್ಪ + ಕಡಲೆ ಹಿಟ್ಟಿನ ಮಿಶ್ರಣ: ಹಸುವಿನ ಹಾಲಿನ ತುಪ್ಪವನ್ನು ಬಿಸಿಯಾಗುವವರೆಗೆ ಹದವಾದ ಬೆಂಕಿಯಲ್ಲಿ ಬಿಸಿಮಾಡಲಾಗುತ್ತದೆ. ನಂತರ ಕಡಲೆ ಹಿಟ್ಟನ್ನು ಬಿಸಿ ತುಪ್ಪಕ್ಕೆ ಸೇರಿಸಲಾಗುತ್ತದೆ, ಮಿಶ್ರಣವು ಕಂದು ಬಣ್ಣಕ್ಕೆ ತಿರುಗುವವರೆಗೆ ಹಲವಾರು ನಿಮಿಷಗಳ ಕಾಲ ನಿರಂತರವಾಗಿ ಹುರಿಯಲಾಗುತ್ತದೆ. ತುಪ್ಪದ ಶುದ್ಧತೆ ಮತ್ತು ತಯಾರಿಕೆಯ ಪ್ರಕ್ರಿಯೆಯು ಮೈಸೂರ್ ಪಾಕ್‌ನ ರುಚಿಯಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಉಂಟುಮಾಡುತ್ತದೆ.
  • ಹಂತ 2: ಪಾಕ : ಸಕ್ಕರೆಯನ್ನು ನೀರಿನಲ್ಲಿ ಬೆರೆಸಿ ಸಕ್ಕರೆ ಪಾಕವಾಗುವವರೆಗೆ ಕುದಿಸಲಾಗುತ್ತದೆ. ಮೊದಲೇ ತಯಾರಿಸಿದ ತುಪ್ಪ + ಕಡಲೆ ಹಿಟ್ಟಿನ ಮಿಶ್ರಣವನ್ನು ಈಗ ಪಾಕಕ್ಕೆ ಸೇರಿಸಿ ನಿರಂತರವಾಗಿ ಕಲಸಲಾಗುತ್ತದೆ. ಮೈಸೂರ್ ಪಾಕ್ ಹೀಗೆ  ಸಿದ್ಧವಾಗುತ್ತದೆ
  • ಹಂತ 3: ತಂಪಾಗಿಸುವಿಕೆ ಮತ್ತು ಕತ್ತರಿಸುವುದು: ಮೈಸೂರು ಪಾಕ್ ಅನ್ನು ಸ್ವಲ್ಪ ತಣ್ಣಗಾಗಲು ಬಿಟ್ಟು ನಂತರ ಅವಶ್ಯಕತೆಗನುಗುಣವಾಗಿ ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ.

ತಿಳಿದುಕೊಳ್ಳಬೇಕಾದ ಇತರ ವಿಷಯಗಳು:

ಮೈಸೂರ್ ಪಾಕ್‌ನಲ್ಲಿ  ಅತ್ಯುತ್ತಮವಾದವು ಬಾಯಿಯಲ್ಲಿ ಇಟ್ಟಾಗ  ಕರಗುತ್ತದೆ.

ತಯಾರಿಸಿದ ಕೆಲವೇ ವಾರಗಳಲ್ಲಿ ಮೈಸೂರು ಪಾಕನ್ನು ಸೇವಿಸುವುದು ಉತ್ತಮ. ಶೈತ್ಯೀಕರಿಸಿದರೆ   ಒಂದೆರಡು ತಿಂಗಳು ಸಂರಕ್ಷಿಸಬಹುದು.

ಎಲ್ಲಿ ಸಿಗುತ್ತದೆ? ಮೈಸೂರ್ ಪಾಕ್ ಕರ್ನಾಟಕದಾದ್ಯಂತದ ಹೆಚ್ಚಿನ ಬೇಕರಿಗಳು ಮತ್ತು ಸಿಹಿ ತಿನಿಸಿನ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿದೆ. ಕರ್ನಾಟಕದ ಹಲವಾರು ರೆಸ್ಟೋರೆಂಟ್‌ಗಳು ಮೈಸೂರ್ ಪಾಕ್ ತುಂಡೊಂದನ್ನು ಅನ್ನು ಊಟದ ಭಾಗವಾಗಿ ನೀಡುತ್ತವೆ.