Karnataka Tourism
GO UP
Image Alt

ಸ್ಕಂದಗಿರಿ

separator
  /  ಬ್ಲಾಗ್   /  ಸ್ಕಂದಗಿರಿ
Skandagiri Trek

ಸ್ಕಂದಗಿರಿ

ಕಾಳಾವರ ದುರ್ಗ ಎಂದೂ ಕರೆಯಲ್ಪಡುವ ಸ್ಕಂದಗಿರಿ ಬೆಟ್ಟಗಳು ತಮ್ಮ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗಳಿಗೆ ಹೆಸರುವಾಸಿಯಾಗಿದ್ದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಲ್ಲಿ 18 ನೇ ಶತಮಾನದ ಟಿಪ್ಪು ಸುಲ್ತಾನ್ ಕೋಟೆಯ ಅವಶೇಷಗಳನ್ನು ಮೇಲ್ಭಾಗದಲ್ಲಿ ಕಾಣಬಹುದು. ನೀವು ತೇಲುವ ಮೋಡಗಳ ಮೇಲೆ ಮಂತ್ರಮುಗ್ಧಗೊಳಿಸುವ ಸೂರ್ಯೋದಯಕ್ಕಾಗಿ ಟ್ರೆಕ್ಕಿಂಗ್ ಮಾಡಬಹುದು ಅಥವಾ ಹಗಲಿನಲ್ಲಿಯೂ ಟ್ರೆಕ್ಕಿಂಗ್ ಮಾಡಿ ಮೋಡಿಗೊಳಿಸುವ ಸೂರ್ಯಾಸ್ತವನ್ನು ವೀಕ್ಷಿಸಬಹುದು.

Skandagiri Hills

ಸ್ಕಂದಗಿರಿ ಬೆಟ್ಟಗಳು

ಸ್ಕಂದಗಿರಿಯು ತನ್ನ ಅದ್ಭುತವಾದ ಮಂಜಿನ ನೋಟಗಳು ಮತ್ತು ಬೆಟ್ಟಗಳ ಮೇಲಿನ ಮೋಡಗಳಿಂದಾಗಿ ಬೆಂಗಳೂರಿನ ಸುತ್ತಲೂ ಹೆಚ್ಚು ಬೇಡಿಕೆಯಿರುವ ಚಾರಣಗಳಲ್ಲಿ ಒಂದಾಗಿದೆ. ಇದನ್ನು ಚಾರಣ ಮಾಡಲು ಮಧ್ಯಮ ಮಟ್ಟದ ಶ್ರಮದ ಅವಶ್ಯಕತೆ ಇದೆ. ನೀವು ಇಲ್ಲಿ ಇರುವ ದಟ್ಟ ಹಾದಿಗಳು, ಕಡಿದಾದ ಇಳಿಜಾರುಗಳು ಮತ್ತು ಕಲ್ಲಿನ ಬಂಡೆಗಳ ಕುರಿತು ಎಚ್ಚರದಿಂದ ಇರಬೇಕು. ಇವುಗಳನ್ನು ದಾಟುವುದು ನಿಮಗೆ ಜೀವಮಾನದ ಅನುಭವವನ್ನು ನೀಡುತ್ತದೆ.

ಇಲ್ಲಿನ ರಾತ್ರಿ ಚಾರಣವು ಚಾರಣಿಗರಿಗೆ ,ನಿಸರ್ಗ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಸ್ವರ್ಗವಾಗಿದೆ. ಈ ಬೆಟ್ಟಗಳ ತುದಿಯನ್ನು ತಲುಪಲು ಕಾಡು ಮತ್ತು ಹಚ್ಚ ಹಸಿರಿನ ದಟ್ಟವಾದ ಕಾಡಿನ ಮೂಲಕ ಬೆಟ್ಟಗಳನ್ನು ಹತ್ತಬೇಕು. ಇದು ಒಂದು ರಮ್ಯ ಅನುಭವವೇ ಸರಿ. ಸ್ಕಂದಗಿರಿಯು ನಂದಿ ಬೆಟ್ಟಗಳು ಮತ್ತು ಮುದ್ದೇನಹಳ್ಳಿಯ ಮೇಲೆ ಸರಿಸುಮಾರು 1350 ಮೀಟರ್ ಎತ್ತರದಲ್ಲಿದೆ.

Kalavara Durga

ಸ್ಕಂದಗಿರಿ ಬೆಟ್ಟಗಳು

ಚಾರಣಿಗರ ಸ್ವರ್ಗ ಮತ್ತು ಪ್ರಕೃತಿ ಪ್ರಿಯರಿಗೆ ಆನಂದದಾಯಕವಾಗಿರುವ ಸ್ಕಂದಗಿರಿ 8 ಕಿಮೀ ಟ್ರೆಕ್ ದೂರವನ್ನು ಪೂರ್ಣಗೊಳಿಸಲು ಸುಮಾರು 6-8 ಗಂಟೆಗಳನ್ನು ಅವಶ್ಯಕವಾಗಿದೆ. ಕೋಟೆಯ ಅವಶೇಷಗಳು ಮತ್ತು ಬೆಟ್ಟಗಳ ಮೇಲಿರುವ ಶಿವನ ದೇವಾಲಯವು ನಿಮ್ಮನ್ನು ಬೆರಗುಗೊಳಿಸುತ್ತದೆ. ಬೆಂಗಳೂರಿನಿಂದ ಕೇವಲ 70 ಕಿಮೀ ದೂರದಲ್ಲಿರುವ ಸ್ಕಂದಗಿರಿಯು ಸೂರ್ಯೋದಯ ವೀಕ್ಷಣೆಗೆ ಹೆಸರುವಾಸಿಯಾಗಿದೆ .. ಶ್ರಮದಾಯಕ ಚಾರಣದ ನಂತರ ಇಲ್ಲಿ ಕಾಣುವ ಪರಿಪೂರ್ಣ ಸೂರ್ಯೋದಯದ ವೀಕ್ಷಣೆಗಳು ನಿಮ್ಮ ಚಾರಣದ ಆಯಾಸವನ್ನು ಕಡಿಮೆಗೊಳಿಸಿ ನಿಮ್ಮನ್ನು ಉಲ್ಲಾಸಿತರನ್ನಾಗಿಸುತ್ತವೆ.

ತಲುಪಲು ಉತ್ತಮ ಸಮಯ

Skandagiri Trek

ಸ್ಕಂದಗಿರಿ ಬೆಟ್ಟಗಳು

ಸ್ಕಂದಗಿರಿಯು ಸೂರ್ಯೋದಯದ ಚಾರಣಕ್ಕೆ ಹೆಸರುವಾಸಿಯಾಗಿದೆ, ಇದನ್ನು ವರ್ಷವಿಡೀ ಆನಂದಿಸಬಹುದು. ಆದಾಗ್ಯೂ, ನೀವು ರಾತ್ರಿಯಲ್ಲಿ ಚಾರಣ ಮಾಡಲು ಬಯಸದಿದ್ದರೆ, ಸ್ಕಂದಗಿರಿಯನ್ನು ಚಾರಣ ಮಾಡಲು ಚಳಿಗಾಲವು ಅತ್ಯುತ್ತಮ ಸಮಯವಾಗಿದೆ. ಮತ್ತು ಬೇಸಿಗೆಯಲ್ಲಿ ಚಾರಣ ಕಾರ್ಯಕ್ರಮವನ್ನು ಕೈಗೊಳ್ಳಬೇಡಿ. ಮಾನ್ಸೂನ್ ಸಮಯದಲ್ಲಿ ಪ್ರಾಣಿಗಳು ಮತ್ತು ಸಸ್ಯಗಳು ಚಾರಣದ ಆಹ್ಲಾದತೆಯನ್ನು ಹೆಚ್ಚಿಸುತ್ತವೆಯಾದರೂ ಅ ಸಮಯದಲ್ಲಿ ಬಂಡೆಗಳು ತುಂಬಾ ಜಾರುತ್ತವೆ. ಹೀಗಾಗಿ ಆ ಸಮಯದಲ್ಲಿ ಚಾರಣವನ್ನು ಮಾಡಬೇಡಿ.

ತಲುಪುವುದು ಹೇಗೆ?

Trekking point

ಸ್ಕಂದಗಿರಿ ಬೆಟ್ಟಗಳು

ಸ್ಕಂದಗಿರಿ ಬೆಂಗಳೂರಿನಿಂದ ಸುಮಾರು 70 ಕಿಮೀ ದೂರದಲ್ಲಿದ್ದು ಸ್ವಂತ ವಾಹನದ ಮೂಲಕ ತಲುಪಬಹುದು. ರಸ್ತೆಯ ಮೂಲಕ ತಲುಪಲು ಸುಮಾರು ಒಂದು ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಪ್ರಯಾಣಿಸಿ, ನಂತರ ಕಾಳಾವಾರ ಗ್ರಾಮದಲ್ಲಿ ಬೇಸ್ ಅಥವಾ ಟ್ರೆಕ್ ಪ್ರಾರಂಭವಾಗುವ ಸ್ಥಳವನ್ನು ತಲುಪಿ.
ಬೆಂಗಳೂರು ದೇಶದ ಎಲ್ಲಾ ಪ್ರಮುಖ ಮತ್ತು ಸಣ್ಣ ನಗರಗಳೊಂದಿಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ತ್ವರಿತ ಮಾಹಿತಿ:
1. ಇದರ ಚಾರಣ ಶ್ರಮವು ಮಧ್ಯಮ ಮಟ್ಟದ್ದಾಗಿದೆ.
2. ಸರಿಯಾದ ಟ್ರೆಕ್ಕಿಂಗ್ ಶೂಗಳನ್ನು ಧರಿಸಿ.
3. ಚಾರಣದ ದೂರ ಸುಮಾರು 8 ಕಿ.ಮೀ ಇದೆ.
4. ಚಾರಣಕ್ಕೆ ಬೇಕಾದಷ್ಟು ನೀರು ಮತ್ತು ತಿಂಡಿಗಳನ್ನು ಒಯ್ಯಿರಿ.
5. ರಾತ್ರಿ ಚಾರಣಕ್ಕೆ ಹೆಡ್‌ಲ್ಯಾಂಪ್ / ಟಾರ್ಚ್ ಅತ್ಯಗತ್ಯ.
6. ಕಸ ಹಾಕಬೇಡಿ.

ಚಿತ್ರ ಕ್ರೆಡಿಟ್‌ಗಳು : ವಿನಿ ಕಟ್ಯಾಲ್, ರಾಮ ಕೃಷ್ಣ, ಅಮಿಯಾಂಗ್‌ಶು ನಾಥ್, ಜ್ಯೋತಿ ಕಟಾರಿಯಾ