ಮೈಸೂರಿನಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳು
ಮೈಸೂರಿನಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳು: ಮೈಸೂರು ತನ್ನ ಇತಿಹಾಸ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ವಿಶ್ವಪ್ರಸಿದ್ಧವಾಗಿದೆ. ಇದನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯುತ್ತಾರೆ. ಈ ಸ್ಥಳವು ರಜಾದಿನಗಳಲ್ಲಿ ಅಥವಾ ವಾರಾಂತ್ಯದಲ್ಲಿ ಭೇಟಿ ನೀಡಲು ಸೂಕ್ತವಾಗಿದೆ. ಕಲೆ, ವಾಸ್ತುಶಿಲ್ಪ ಮತ್ತು ಭವ್ಯ ಇತಿಹಾಸದಲ್ಲಿ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಮೈಸೂರಿನ ನಗರವು ನಿಮ್ಮ ಪ್ರವಾಸವನ್ನು ಸ್ಮರಣೀಯ ರಜೆಯನ್ನಾಗಿಸುವುದರಲ್ಲಿ ಸಂಶಯವಿಲ್ಲ. ನೀವು ಮೈಸೂರಿಗೆ ಟ್ರಿಪ್ ಹೊರಟಾಗ ನೀವು ಅಲ್ಲಿ ಭೇಟಿ ನೀಡಲೇ ಬೇಕಾದ ಸ್ಥಳಗಳ ಪಟ್ಟಿಯನ್ನು ಇಲ್ಲಿ ನಿಮ್ಮ ಅನುಕೂಲಕ್ಕಾಗಿ ನೀಡಲಾಗಿದೆ.
ಮೈಸೂರು ಅರಮನೆ :
ಮೈಸೂರು ಅರಮನೆಯು ದೇಶದ ಅತ್ಯಂತ ಪ್ರಸಿದ್ಧ ಅರಮನೆಗಳಲ್ಲಿ ಒಂದಾಗಿದೆ. ಈ ಅರಮನೆಯು ಒಡೆಯರ್ ರಾಜಮನೆತನಕ್ಕೆ ಸೇರಿದುದಾಗಿದೆ. ಮೈಸೂರು ಅರಮನೆಯನ್ನು ಅಂಬಾವಿಲಾಸ ಅರಮನೆ ಎಂತಲೂ ಕರೆಯುತ್ತಾರೆ. ಭವ್ಯವಾದ ಅರಮನೆಯು ಅದ್ಭುತವಾದ ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. ಇದು ನೋಡಲು ತುಂಬಾ ಆಕರ್ಷಕವಾಗಿದೆ. ಇದರ ಶ್ರೀಮಂತ ಇತಿಹಾಸ ತಿಳಿಯಲು ಮತ್ತು ಇದರ ವಾಸ್ತುಶಿಲ್ಪದಿಂದ ಸ್ಪೂರ್ತಿಗೊಳ್ಳಲು ಖಂಡಿತವಾಗಿ ಮೈಸೂರು ಅರಮನೆಗೆ ಭೇಟಿ ನೀಡಿ.
ಚಾಮುಂಡೇಶ್ವರಿ ದೇವಸ್ಥಾನ :
ಮೈಸೂರಿಗೆ ಭೇಟಿ ನೀಡಿದ ಪ್ರತಿಯೊಬ್ಬ ಪ್ರವಾಸಿಗನೂ ತಪ್ಪದೇ ಭೇಟಿ ನೀಡಲು ಬಯಸುವ ಪ್ರಮುಖ ಸ್ಥಳವೆಂದರೇ ಅದು ಐತಿಹಾಸಿಕ ಚಾಮುಂಡೇಶ್ವರಿ ದೇವಸ್ಥಾನ. ಇದು ಮೈಸೂರಿನ ಕೀರಿಟದಲ್ಲಿ ಅಮೂಲ್ಯ ರತ್ನವಾಗಿದೆ. ಈ ಧಾರ್ಮಿಕ ಕೇಂದ್ರವು ಪ್ರತಿಯೊಬ್ಬ ಯಾತ್ರಾರ್ಥಿ ಮತ್ತು ಪ್ರವಾಸಿಗನನ್ನು ಆಕರ್ಷಿಸುತ್ತದೆ. ಈ ದೇವಾಲದ ಕಲಾತ್ಮಕ ವಾಸ್ತುಶಿಲ್ಪ ಮನಮೋಹಕವಾಗಿದೆ. ಇದು ದೇವಸ್ಥಾನವು ಬೆಟ್ಟದ ಮೇಲೆ ಇದ್ದು ಇಲ್ಲಿ ನೆಲೆಸಿರುವ ಚಾಮುಂಡಿ ತಾಯಿಯು ತನ್ನ ಭಕ್ತರನ್ನು ಕರೆಯುತ್ತಾಳೆ.
ಬಂಡಿಪುರ ರಾಷ್ಟ್ರೀಯ ಉದ್ಯಾನವನ :
ಈ ವಿಶ್ವಪ್ರಸಿದ್ಧ ರಾಷ್ಟ್ರೀಯ ಉದ್ಯಾನವನ್ನು 1974ರಲ್ಲಿ ಸ್ಥಾಪಿಸಲಾಯಿತು. ಚಾಮರಾಜ ನತಗ ಗುಂಡ್ಲುಪೇಟೆಯಲ್ಲಿರುವ ಇದು ಭಾರತದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ಎರಡನೇ ರಾಷ್ಟ್ರೀಯ ಉದ್ಯಾನವನ್ನು ಆಗಿತ್ತು. ಇದನ್ನು ಬಂಡಿಪುರ ನ್ಯಾಷನಲ್ ಪಾರ್ಕ್ ಅಂತಲೂ ಕರೆಯುತ್ತಾರೆ. ಇದು ಹುಲಿ ಸಂರಕ್ಷಣಾ ಪ್ರಾಜೆಕ್ಟ್ ಅಡಿಯಲ್ಲಿ ನೋಂದಾಯಿಸಲ್ಪಟ್ಟ ದೇಶದ ಅತ್ಯಂತ ಪ್ರಮುಖ ಹುಲಿ ಸಂರಕ್ಷಣೆ ಮೀಸಲು ಪ್ರದೇಶಗಳಲ್ಲಿ ಒಂದಾಗಿದೆ. ಬಂಡೀಪುರ ಹುಲಿ ರಕ್ಷಿತಾರಣ್ಯ ಎಂದು ಪ್ರಸಿದ್ಧವಾಗಿರುವ ಈ ರಾಷ್ಟ್ರೀಯ ಉದ್ಯಾನವನವು ಹಿಂದೆ ಮೈಸೂರು ಸಾಮ್ರಾಜ್ಯದ ಆಡಳಿತಗಾರರ ಖಾಸಗಿ ಬೇಟೆಯ ಪ್ರದೇಶವಾಗಿತ್ತು. ಈ ರಾಷ್ಟ್ರೀಯ ಉದ್ಯಾನದ ಒಂದು ಭಾಗವು ನೀಲಗಿರಿ ಬಯೋಸ್ಫಿಯರ್ ರಿಸರ್ವ್‌ಗೆ ಸೇರುತ್ತದೆ. ಇದು ದಕ್ಷಿಣ ಭಾರತದ ಅತಿದೊಡ್ಡ ಸಂರಕ್ಷಿತ ಪ್ರದೇಶವಾಗಿದ್ದು ದಕ್ಷಿಣ ಏಷ್ಯಾದ ಅತಿ ದೊಡ್ಡ ಕಾಡು ಆನೆಗಳ ಆವಾಸ ಸ್ಥಾನವಾಗಿದೆ. ನೀವು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳು, ಚಿರತೆಗಳು, ಕರಡಿಗಳು, ಭಾರತೀಯ ಆನೆಗಳು, ಸಾಂಬಾರ್ ಸೇರಿದಂತೆ, ಇನ್ನೂ ಹಲವು ಪಕ್ಷಿ ಪ್ರಾಣಿಗಳನ್ನು ಕಾಣಬಹುದು.
ಪ್ರಸಿದ್ಧ ಮೈಸೂರು ದೋಸೆ ಮತ್ತು ಮೈಸೂರು ಪಾಕ ರುಚಿ ನೋಡಿ :
ಮೈಸೂರು ಮಸಾಲಾ ದೋಸೆಯ ಹೆಸರು ಯಾರು ತಾನೇ ಕೇಳಿಲ್ಲ. ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರು ಬರುವುದು. ಈಗ ಮೈಸೂರು ಮಸಾಲಾ ದೋಸೆ ಪ್ರಸಿದ್ಧವಾಗಿದೆ. ದೋಸೆಯ ಮೇಲೆ ಕೆಂಪು ಚಟ್ನಿಯನ್ನು ಹರಡಿ ಇದನ್ನು ತಯಾರಿಸಲಾಗುತ್ತದೆ. ತಿನ್ನಲು ರುಚಿಯೋ ರುಚಿ. ಮೈಸೂರು ಮಸಾಲಾ ದೋಸೆಯ ಹೆಸರು ಯಾರು ತಾನೇ ಕೇಳಿಲ್ಲ. ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರು ಬರುವುದು. ಈಗ ಮೈಸೂರು ಮಸಾಲಾ ದೋಸೆ ಪ್ರಸಿದ್ಧವಾಗಿದೆ. ದೋಸೆಯ ಮೇಲೆ ಕೆಂಪು ಚಟ್ನಿಯನ್ನು ಹರಡಿ ಇದನ್ನು ತಯಾರಿಸಲಾಗುತ್ತದೆ. ತಿನ್ನಲು ರುಚಿಯೋ ರುಚಿ. ಗರಿಗರಿಯಾಗಿರುವ ಮಸಾಲೆದೋಸೆಯನ್ನು ತೆಂಗಿನ ಕಾಯಿ ಚಟ್ನಿ, ಸಾಂಬಾರ್ ಮತ್ತು ತುಪ್ಪದೊಂದಿಗೆ ಸೇವಿಸಬೇಕು. ಆಗ ಅದರ ರುಚಿಯೇ ಬೇರೆ. ಅದರಂತೆ ಇಲ್ಲಿನ ಮೈಸೂರು ಪಾಕ್ ಇಲ್ಲಿನ ಮಸಾಲಾ ದೋಸೆಯಷ್ಟೇ ಪ್ರಸಿದ್ಧಿಯನ್ನು ಪಡೆದಿದೆ. ಸಿಹಿ ತಿಂಡಿಯಾಗಿರುವ ಮೈಸೂರು ಪಾಕ್
ಕನ್ನಡಿಗರ ಹೆಮ್ಮೆ. ಮೈಸೂರು ಪಾಕ್ ಕಡಲೆ ಹಿಟ್ಟು, ತುಪ್ಪ, ಸಕ್ಕರೆಯನ್ನು ಸೇರಿಸಿ ಮಾಡುವ ಸಿಹಿ ತಿಂಡಿಯಾಗಿದೆ. ಇದನ್ನು ಮೈಸೂರು ಮಹಾರಾಜರಾದ ಒಡೆಯರ್ IV ರ ಕಾಲದಲ್ಲಿ ಮೊದಲ ಬಾರಿಗೆ ತಯಾರಿಸಲಾಯಿತು. ಈಗ ಇದು ವಿಶ್ವ ಪ್ರಸಿದ್ಧಿಯನ್ನು ಪಡೆದಿದೆ. ನೀವು ಮುಂದೆ ಮೈಸೂರಿಗೆ ಭೇಟಿ ನೀಡಿದರೇ ಮೈಸೂರು ಪಾಕ್ ಮತ್ತು ದೋಸೆ ತಿನ್ನುವುದನ್ನು ಮರೆಯಲೇ ಬೇಡಿ.
3D ಸೆಲ್ಫಿ ಗ್ಯಾಲರಿ:
ನೀವು ಈ 3 ಡಿ ಗ್ಯಾಲರಿಯನ್ನು ಮೈಸೂರಿನ ಮರಳು ಶಿಲ್ಪಕಲಾ ವಸ್ತುಸಂಗ್ರಾಹಲಯದಲ್ಲಿ ನೋಡಬಹುದು. ಇಲ್ಲಿ ನೀವು ಸೆಲ್ಫಿ ತೆಗೆದುಕೊಂಡರೇ ಅದ್ಭುತವಾದ ಅನುಭವ ನಿಮ್ಮದಾಗುತ್ತದೆ. ನೀವು ಸ್ವತಃ ಅಂತಹ ಸ್ಥಳಗಳ ಮುಂದೆಯೇ ನಿಂತು ಭಾವಚಿತ್ರವನ್ನು ತೆಗೆದುಕೊಂಡಂತೇ ನಿಮಗೆ ಅನಿಸುತ್ತದೆ. ಈ ಗ್ಯಾಲರಿ ಹಲವು ಕಲಾ ಚಿತ್ರಗಳನ್ನು ಹೊಂದಿದ್ದು ನಿಮ್ಮ ಮನಸ್ಸಿಗೆ ಮುದ ನೀಡುತ್ತಿದೆ. ಆಧುನಿಕ ಸ್ಪರ್ಶವುಳ್ಳ ಈ ಗ್ಯಾಲರಿ ನಿಮ್ಮ ಮನಸ್ಸಿಗೆ ಆನಂದ ನೀಡುವುದರಲ್ಲಿ ಸಂಶಯವಿಲ್ಲ.