ಅಂತರಾಷ್ಟ್ರೀಯ ಹುಲಿ ದಿನ
ವಿಶ್ವದ ಹುಲಿ ಜನಸಂಖ್ಯೆಯ ಸುಮಾರು 80% ರಷ್ಟನ್ನು ಭಾರತ ಹೊಂದಿದೆ ಎಂದು ನಿಮಗೆ ತಿಳಿದಿದೆಯೇ?
ಅಂತರಾಷ್ಟ್ರೀಯ ಹುಲಿ ದಿನವನ್ನು ಏಕೆ ಆಚರಿಸಲಾಗುತ್ತದೆ?
ಪ್ರತಿ ವರ್ಷ ಜುಲೈ 29 ಅನ್ನು ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಹುಲಿ ಸಂಬಂಧಿತ ಸಮಸ್ಯೆಗಳಿಗೆ ವೀಡಿಯೊಗಳು, ಇನ್ಫೋಗ್ರಾಫಿಕ್ಸ್ ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳುವ ಮೂಲಕ ಹುಲಿ ಸರಂಕ್ಷಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರನ್ನು ತೊಡಗಿಸಿಕೊಳ್ಳುವ ಮೂಲಕ ಜಾಗೃತಿ ಮತ್ತು ಬೆಂಬಲವನ್ನು ನೀಡಲಾಗುತ್ತದೆ. 2010 ರಲ್ಲಿ, 13 ಹೆಚ್ಚು ಹುಲಿ ಇರುವ ಶ್ರೇಣಿಯ ದೇಶಗಳು 2022 ರ ವೇಳೆಗೆ ಕಾಡು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಸಾಮಾನ್ಯ ಗುರಿಯೊಂದಿಗೆ ಒಟ್ಟುಗೂಡಿದವು. ಪ್ರಸ್ತುತ, ಸೈಬೀರಿಯನ್ ಹುಲಿ, ಬೆಂಗಾಲ್ ಹುಲಿ, ಮಲಯನ್ ಹುಲಿ, ಸುಮಾತ್ರನ್ ಹುಲಿ ಮತ್ತು ಇಂಡೋ ಚೈನೀಸ್ ಹುಲಿ ಜಾತಿಯಲ್ಲಿ ಕೆಲವೇ ಹುಲಿಗಳು ಜೀವಂತವಾಗಿವೆ ಎಂಬುದು ಕಳವಳದ ಸಂಗತಿ ಆಗಿದೆ.
ಕರ್ನಾಟಕದಲ್ಲಿ ಹುಲಿಗಳು
ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ನಡೆಸಿದ 2010 ರ ಹುಲಿ ಜನಗಣತಿಯ ಪ್ರಕಾರ, ಕರ್ನಾಟಕವು ದೇಶದ ಹೆಚ್ಚು ಹುಲಿ ಜನಸಂಖ್ಯೆಯಲ್ಲಿನ್ನು ಹೊಂದಿರುವ ಅಗ್ರ ಮೂರು ರಾಜ್ಯಗಳ ಅಡಿಯಲ್ಲಿ ಬರುತ್ತದೆ. ರಾಜ್ಯದಲ್ಲಿ 5 ಹುಲಿ ಸಂರಕ್ಷಿತ ಪ್ರದೇಶಗಳಿವೆ: ಅವುಗಳೆಂದರೆ ಬಂಡೀಪುರ, ಭದ್ರಾ ಸರಂಕ್ಷಿತ ಪ್ರದೇಶ, ನಾಗರಹೊಳೆ ರಾಷ್ಟ್ರೀಯ ಸರಂಕ್ಷಿತ ಪ್ರದೇಶ,, ದಾಂಡೇಲಿ – ಅಂಶಿ ಮತ್ತು BRT ಹುಲಿ ಸಂರಕ್ಷಿತ ಪ್ರದೇಶಗಳು.ಇಲ್ಲಿ ಗರಿಷ್ಠ ಸಂಖ್ಯೆಯ ಹುಲಿಗಳಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ
ನೀಲಗಿರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ವಿಸ್ತರಣೆಯಾಗಿದೆ. 874.20 ಚದರ ಕಿಲೋಮೀಟರ್‌ನಲ್ಲಿ ಹರಡಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು 1973 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ತರಲಾಯಿತು. ಬಂಡೀಪುರವು ನಾಗರಹೊಳೆ ಮತ್ತು ಮುದುಮಲೈ ಮೀಸಲು ಅರಣ್ಯಗಳನ್ನು ಒಳಗೊಂಡಿರುವ ಮೀಸಲು ಪ್ರದೇಶದ ಒಂದು ಭಾಗವಾಗಿದೆ. ಈ ಪ್ರದೇಶವು ಕರ್ನಾಟಕ, ತಮಿಳುನಾಡು ಮತ್ತು ಕೇರಳ ಎಂಬ ಮೂರು ರಾಜ್ಯಗಳಲ್ಲಿ ಹರಡಿದೆ ಮತ್ತು ಮೈಸೂರು ವನ್ಯಜೀವಿ ವಿಭಾಗದ ಅಡಿಯಲ್ಲಿ ಬರುತ್ತದೆ, ಆದಾಗ್ಯೂ, ಭೂದೃಶ್ಯವನ್ನು ಮೈಸೂರು ಮತ್ತು ಚಾಮರಾಜನಗರ ಎಂಬ ಎರಡು ಜಿಲ್ಲೆಗಳು ಹಂಚಿಕೊಂಡಿವೆ. ಇತರ ಎರಡು ಮೀಸಲುಗಳನ್ನು ಮುದುಮಲೈ ಮೀಸಲು ಮತ್ತು ವಯನಾಡ್ ವನ್ಯಜೀವಿ ಅಭಯಾರಣ್ಯ ಎಂದು ಕರೆಯಲಾಗುತ್ತದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಅನೇಕ ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಮತ್ತು ಇತರ ದುರ್ಬಲ ಜಾತಿಯ ಪ್ರಾಣಿ ಮತ್ತು
ಸಸ್ಯಗಳಿಗೆ ನೆಲೆಯಾಗಿದೆ. ಬಂಡೀಪುರವು ಆನೆಗಳು, ಚಿರತೆಗಳು, ಧೋಲೆ, ಸಾಂಬಾರ್, ಸೋಮಾರಿ ಕರಡಿ, ಚಿತಾಲ್ ಮತ್ತು ಹುಲಿಗಳಿಗೆ ಪ್ರಸಿದ್ಧವಾಗಿದೆ. ಬಂಡೀಪುರವು ಮೈಸೂರಿನಿಂದ ಕೇವಲ 70 ಕಿಮೀ ಮತ್ತು ಬೆಂಗಳೂರಿನಿಂದ 220 ಕಿಮೀ ದೂರದಲ್ಲಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಭದ್ರ ಹುಲಿ ಸಂರಕ್ಷಿತ ಪ್ರದೇಶ
ಬೆಂಗಳೂರಿನಿಂದ ಕೇವಲ 282 ಕಿಮೀ ಮತ್ತು ಮಂಗಳೂರಿನಿಂದ 185 ಕಿಮೀ ದೂರದಲ್ಲಿ ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಿದ್ದು 120 ಜಾತಿಯ ಸಸ್ಯಗಳಿಗೆ ನೆಲೆಯಾಗಿದೆ . ಈ ಅಭಯಾರಣ್ಯವು ಹುಲಿಗಳು, ಗೌರ್, ಆನೆ, ಕಾಡುಹಂದಿ, ಕರಡಿ, ಕಪ್ಪು ಚಿರತೆ, ಕಾಡಿನ ಬೆಕ್ಕು, ನರಿ ಮತ್ತು ಇತರ ಅನೇಕ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ವಾಸಸ್ಥಾನವಾಗಿದೆ. ಎತ್ತರದ ಭೂಪ್ರದೇಶಗಳು, ಕಡಿದಾದ ಬೆಟ್ಟಗಳು, ಹಚ್ಚ ಹಸಿರು ಮತ್ತು ಆಕರ್ಷಕ ಹುಲ್ಲುಗಾವಲುಗಳನ್ನು ಒಳಗೊಂಡಿರುವ ಇಲ್ಲಿನ ಅಸಾಮಾನ್ಯ ಭೂದೃಶ್ಯಗಳು ಕೇವಲ ವನ್ಯಜೀವಿ ಉತ್ಸಾಹಿಗಳನ್ನು ಮಾತ್ರವಲ್ಲದೆ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತವೆ. ಇತರ ಆಕರ್ಷಣೆಗಳಲ್ಲಿ ಒಂದಾದ ಕಲ್ಲತ್ತಿಗಿರಿ ಶಿಖರವು 1875 ಮೀಟರ್ ಎತ್ತರವನ್ನು ಹೊಂದಿದೆ . ಚಿಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪಶ್ಚಿಮ ಘಟ್ಟಗಳ ಸುಂದರವಾದ ಭೂದೃಶ್ಯಗಳು ವನ್ಯಜೀವಿ ಅನ್ವೇಷಕರನ್ನು ಸೇರಿದಂತೆ ಪ್ರಯಾಣಿಕರನ್ನೂ ಸಹ ಆಹ್ವಾನಿಸುತ್ತವೆ. ಇಲ್ಲಿ ಇತರ ಆಕರ್ಷಣೆಗಳಲ್ಲಿ ಒಂದಾಗಿರುವ 300 ವರ್ಷಗಳಷ್ಟು ಹಳೆಯದಾದ ತೇಗದ ಮರವು ಇದ್ದು ಇದು ಅಂದಾಜು 36 ಮೀಟರ್ ಎತ್ತರ ಮತ್ತು 5.84 ಮೀಟರ್ ಮಧ್ಯದ ಸುತ್ತಳತೆ ಹೊಂದಿದೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ
ಬಿಆರ್ ಹಿಲ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬಿಳಿಗಿರಿ ರಂಗನ ಬೆಟ್ಟಗಳು ಚಾಮರಾಜನಗರದಲ್ಲಿದೆ ಮತ್ತು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸಂರಕ್ಷಿತ ಮೀಸಲು ಪ್ರದೇಶವಾಗಿದ್ದು ಸರ್ಕಾರವು ಇದನ್ನು 2011 ರಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿತು. ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಂಗಮದಲ್ಲಿರುವ ಅನುಕೂಲವೆಂದರೆ, ಈ ಹುಲಿ ಸಂರಕ್ಷಿತ ಪ್ರದೇಶವು ಎರಡೂ ಪರ್ವತ ಶ್ರೇಣಿಗಳಿಗೆ ವಿಶಿಷ್ಟವಾದ ಪರಿಸರ-ವ್ಯವಸ್ಥೆಯ ಅತ್ಯುತ್ತಮ ನೆಲೆಯಾಗಿದೆ. ಈ ಪ್ರದೇಶವು ವಿಧದ ಭಾರಿ ಗಾತ್ರದ ಪೊದೆಗಳು, ಒಣ ಮತ್ತು ಆರ್ದ್ರ ಎಲೆಯುದುರುವ ಕಾಡುಗಳು, ಮಂಜಿನಿಂದ ಕೂಡಿದ ಬೆಟ್ಟಗಳು ಮತ್ತು ಹಚ್ಚ ಹಸಿರಿನಿಂದ ಕೂಡಿದೆ. ಕನ್ನಡದಲ್ಲಿ ಬಿಳಿಗಿರಿ ಎಂದರೆ ಬಿಳಿ ಕಲ್ಲು ಎಂದರ್ಥ. ಈ ಬೆಟ್ಟದಲ್ಲಿ ಭಗವಾನ್ ರಂಗಸ್ವಾಮಿ ದೇವಾಲಯವಿದೆ. ಇಲ್ಲಿ ಕಂಡು ಬರುವ ಬಿಳಿ ಮೋಡಗಳು ಎಲ್ಲರನ್ನೂ ಆಕರ್ಷಿಸುತ್ತವೆ. 65 ಕ್ಕೂ ಹೆಚ್ಚು ಹುಲಿಗಳೊಂದಿಗೆ, ಬಿ ಆರ್ ಟಿ ವಿಶ್ವದ ಅತ್ಯಂತ ಭರವಸೆಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಕಾಜಿರಂಗ ಮತ್ತು ಪೆಂಚ್‌ಗೆ ಹೋಲಿಸಿದರೆ, ಬಿ ಆರ್ ಟಿ ಹೆಚ್ಚಿನ ಸಾಂದ್ರತೆಯ ಹುಲಿ ಉದ್ಯಾನವಾಗಿದೆ.
ಬಿ ಆರ್ ಟಿ ರಿಸರ್ವ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕಾಳಿ ಹುಲಿ ಸಂರಕ್ಷಿತ ಪ್ರದೇಶ
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶವು ಹಳಿಯಾಳ, ಕಾರವಾರ ಮತ್ತು ಜೋಯಿಡಾ ತಾಲೂಕಿನ ಅರಣ್ಯ ಪ್ರದೇಶವನ್ನು ಒಳಗೊಂಡಿದೆ. 1956 ರಲ್ಲಿ ಈ ಅರಣ್ಯ ಪ್ರದೇಶವನ್ನು ದಾಂಡೇಲಿ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಗಿದೆ. 1987 ರಲ್ಲಿ ಈ ಪ್ರದೇಶದಲ್ಲಿ ಅಂಶಿ ರಾಷ್ಟ್ರೀಯ ಉದ್ಯಾನವನವನ್ನು ನಂತರ ಈ ಉದ್ಯಾನವನವನ್ನು 2015 ರಲ್ಲಿ ಕಾಳಿ ಟೈಗರ್ ರಿಸರ್ವ್ ಎಂದು ಮರುನಾಮಕರಣ ಮಾಡಲಾಯಿತು ಇದು ಸುಮಾರು 250 ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಂಡಿದೆ.
ಈ ಪ್ರದೇಶದಲ್ಲಿ ಬ್ಲ್ಯಾಕ್ ಪ್ಯಾಂಥರ್ ,ಹುಲಿ, ಆನೆ, ಕರಡಿ, ಕಾಡುಹಂದಿ, ಲಾಂಗೂರ್, ಜಿಂಕೆ, ನರಿ, ಚಿರತೆ, ಸಿವೆಟ್ ಮತ್ತು ಇನ್ನೂ ಅನೇಕ ಕಾಡು ಪ್ರಾಣಿಗಳು ವಾಸವಾಗಿವೆ. ಜೊತೆಗೆ ನೀವು ತೀಕ್ಷ್ಣವಾದ ಕಣ್ಣು ಹೊಂದಿದ್ದರೆ ಈ ಪ್ರದೇಶದಲ್ಲಿ ನೀವು ನಾಗರಹಾವು, ರಸ್ಸೆಲ್ ವೈಪರ್, ಕ್ರೈಟ್, ಇಲಿ ಹಾವು ಮತ್ತು ಇನ್ನೂ ಅನೇಕ ಸರೀಸೃಪಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಈ ಮೀಸಲು ಪ್ರದೇಶವು ಸಸ್ಯ ಮತ್ತು ಪ್ರಾಣಿಗಳ ಹೊರತಾಗಿ, ಸುಮಾರು 200 ಜಾತಿಯ ಪಕ್ಷಿಗಳನ್ನು ಸಹ ಹೊಂದಿದೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ
ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ನೆಲೆಗೊಂಡಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದೂ ಕರೆಯಲಾಗುತ್ತದೆ. ಒಟ್ಟು 643.39 ವಿಸ್ತೀರ್ಣವನ್ನು ಹೊಂದಿರುವ ಈ ಉದ್ಯಾನವನವನ್ನು 1988 ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ನವೀಕರಿಸಲಾಯಿತು ಮತ್ತು ಇದು ವನ್ಯಜೀವಿಗಳ ಸ್ವರ್ಗವಾಗಿದೆ. ಇದು ಒಂದು ಕಡೆ ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ಬೆಟ್ಟಗಳು, ವಯನಾಡ್ ವನ್ಯಜೀವಿ ಅಭಯಾರಣ್ಯ ಮತ್ತು ಇನ್ನೊಂದು ಬದಿಯಲ್ಲಿ ಕಬಿನಿ ಜಲಾಶಯದಿಂದ ಸುತ್ತುವರಿದಿದೆ. ದಟ್ಟವಾದ ಕಾಡಿನ ಮೂಲಕ ಹಾದುಹೋಗುವ ಹೊಳೆಗಳು ಮತ್ತು ನದಿಗಳ ಸಂಖ್ಯೆಯಿಂದಾಗಿ ಉದ್ಯಾನವನಕ್ಕೆ ಅದರ ಹೆಸರು ಬಂದಿದೆ. ದೇಶದ ಅಗ್ರ 5 ಹೆಚ್ಚಿನ ಸಾಂದ್ರತೆಯ ಹುಲಿ ಜನಸಂಖ್ಯೆಯಲ್ಲಿ ಒಂದಾದ ನಾಗರಹೊಳೆಯು ಕ್ರಮವಾಗಿ ಕಾರ್ಬೆಟ್ ಮತ್ತು ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶಗಳ ನಂತರ ಬರುತ್ತದೆ. ಇಲ್ಲಿನ ಅದ್ಭುತವಾದ ಭೂದೃಶ್ಯಗಳು ವನ್ಯಜೀವಿ ಉತ್ಸಾಹಿ ಮತ್ತು ಪ್ರಕೃತಿ ಪ್ರೇಮಿಯನ್ನು ಬೆರಗುಗೊಳಿಸುತ್ತವೆ. ಕರ್ನಾಟಕದ ಪ್ರಮುಖ ಹುಲಿ ಮೀಸಲು ಪ್ರದೇಶವಾದ ಇದು ಹೆಚ್ಚಿನ ಸಂಖ್ಯೆಯ ಪ್ರಾಣಿಗಳಿಗೆ ಆವಾಸ ಸ್ಥಾನವಾಗಿದೆ. ಇಲ್ಲಿ ಹುಲಿ, ಚಿರತೆ, ಆನೆಗಳು, ಕರಡಿ, ಜಿಂಕೆ, ಗೌರ್, ಚೀತಾಲ್, ಸಾಂಬಾರ್, ಹುಲ್ಲೆ ಸೇರಿದಂತೆ ಅನೇಕ ಪ್ರಾಣಿಗಳು ಇಲ್ಲಿವೆ.
ನಾಗರಹೊಳೆ ಮೀಸಲು ಪ್ರದೇಶದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ