ಭದ್ರಾ ವನ್ಯಜೀವಿ ಅಭಯಾರಣ್ಯ
ಭದ್ರಾ ವನ್ಯಜೀವಿ ಅಭಯಾರಣ್ಯವು ಸಂರಕ್ಷಿತ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 490 ಚದರ ಕಿ.ಮೀ. ವ್ಯಾಪಿಸಿದೆ.
ಭದ್ರಾ ವನ್ಯಜೀವಿ ಅಭಯಾರಣ್ಯದ ಆಕರ್ಷಣೆಗಳು:
- ಜೀಪ್ ಸಫಾರಿ: ಭದ್ರಾ ವನ್ಯಜೀವಿ ಅಭಯಾರಣ್ಯದೊಳಗೆ ಅರಣ್ಯ ಇಲಾಖೆ ಜೀಪ್ ಸಫಾರಿ ಆಯೋಜಿಸುತ್ತದೆ. 30 ಕ್ಕೂ ಹೆಚ್ಚು ಹುಲಿಗಳು ಮತ್ತು 20 ಚಿರತೆಗಳು ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿವೆ. ಹಾಗಾಗಿ ಭದ್ರಾದಲ್ಲಿನ ಅರಣ್ಯ ಸಫಾರಿಯಲ್ಲಿ ಹುಲಿ ಮತ್ತು ಚಿರತೆಗಳನ್ನು ನೋಡಬಹುದಾದ ಸಂಭವನೀಯತೆ ಹೆಚ್ಚಿದೆ.
- ಭದ್ರಾ ಅಣೆಕಟ್ಟು: ಭದ್ರಾ ಅಣೆಕಟ್ಟು ತನ್ನ ದ್ವಾರಗಳ ಮೂಲಕ ನೀರನ್ನು ಬಿಡುಗಡೆ ಮಾಡುವಾಗ ದೂರದಿಂದ ನೋಡಲು ನಯನ ಮನೋಹರವಾಗಿ ಕಾಣುತ್ತದೆ.
- ಭದ್ರಾ ಜಲಾಶಯದ ಒಳಗೆ ದೋಣಿ ವಿಹಾರ ಮಾಡಬಹುದಾಗಿದೆ.
- ರಮಣೀಯ ಸೂರ್ಯಾಸ್ತ ನೋಟ ನೋಡಬಹುದಾಗಿದೆ.
- ಮುಳ್ಳಯ್ಯನಗಿರಿ ಶಿಖರ ಕರ್ನಾಟಕದ ಅತಿ ಎತ್ತರದ ಶಿಖರವಾಗಿದ್ದು ಹತ್ತಿರದಲ್ಲಿದೆ.
- 120 ಕ್ಕೂ ಹೆಚ್ಚು ವಿವಿಧ ಸಸ್ಯ ಮತ್ತು ಮರದ ಪ್ರಭೇದಗಳನ್ನು ನೋಡಬಹುದಾಗಿದೆ
- ವೈವಿಧ್ಯಮಯ ಪಕ್ಷಿಗಳು, ಸರೀಸೃಪಗಳು ಮತ್ತು ಕಾಡು ಪ್ರಾಣಿಗಳನ್ನು ಗುರುತಿಸುವ ಸಾಧ್ಯತೆ ಇದೆ.
ಭದ್ರಾ ವನ್ಯಜೀವಿ ಅಭಯಾರಣ್ಯವನ್ನು ತಲುಪುವುದು ಹೇಗೆ?
ಭದ್ರಾ ವನ್ಯಜೀವಿ ಅಭಯಾರಣ್ಯವು ಬೆಂಗಳೂರಿನಿಂದ 265 ಕಿ.ಮೀ ಮತ್ತು ಶಿವಮೊಗ್ಗದಿಂದ 32 ಕಿ.ಮೀ ದೂರದಲ್ಲಿದೆ. ಮಂಗಳೂರು ಸುಮಾರು 200 ಕಿ.ಮೀ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಭದ್ರಾವತಿ ರೈಲು ನಿಲ್ದಾಣ 25 ಕಿ.ಮೀ ದೂರದಲ್ಲಿದೆ. ಭದ್ರಾವತಿ ಪಟ್ಟಣಕ್ಕೆ ಅತ್ಯುತ್ತಮ ಸರ್ಕಾರಿ ಮತ್ತು ಖಾಸಗಿ ಬಸ್ ಸೇವೆ ಲಭ್ಯವಿದೆ. ಭದ್ರಾ ಅಣೆಕಟ್ಟು ಅಥವಾ ವನ್ಯಜೀವಿ ಅಭಯಾರಣ್ಯವನ್ನು ತಲುಪಲು ಟ್ಯಾಕ್ಸಿಗಳನ್ನು ಭದ್ರಾವತಿ, ಚಿಕ್ಕಮಗಳೂರು ಅಥವಾ ಶಿವಮೊಗ್ಗದಿಂದ ಬಾಡಿಗೆಗೆ ಪಡೆಯಬಹುದಾಗಿದೆ.
ವಸತಿ: ಜಂಗಲ್ ಲಾಡ್ಜರ್ಸ್ ಮತ್ತು ರೆಸಾರ್ಟ್‌ಗಳು ಭದ್ರಾ ರಿವರ್ ಟೆರ್ನ್ ಲಾಡ್ಜ್ ಅನ್ನು ನಡೆಸುತ್ತಿದೆ. ಇಲ್ಲಿ ಭದ್ರಾ ಅಣೆಕಟ್ಟು / ಹಿನ್ನೀರಿನ ವೀಕ್ಷಣೆ ಮಾಡಬಹುದಾದ ಕುಟೀರಗಳಿವೆ. ಭದ್ರಾವತಿ ಮತ್ತು ಶಿವಮೊಗ್ಗ ನಗರಗಳಲ್ಲಿ (25-30 ಕಿ.ಮೀ) ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ