GO UP

ನಾಲ್ಕುನಾಡು ಅರಮನೆ

separator
Scroll Down

ನಾಲ್ಕುನಾಡು  ಅರಮನೆ 18ನೇ ಶತಮಾನದ ಅರಮನೆಯಾಗಿದ್ದು, ಇದನ್ನು ದೊಡ್ಡ ವೀರ ರಾಜೇಂದ್ರ ನಿರ್ಮಿಸಿದ್ದಾರೆ. ಕೊಡಗಿನ ಆಡಳಿತಗಾರರ ವಿರುದ್ಧ ಸಮರ ಸಾರಿದ್ದ ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷ್ ಪಡೆಗಳ ಕಣ್ತಪ್ಪಿಸಿ ರಾಜಮನೆತನದ ಮುಖ್ಯವ್ಯಕ್ತಿಗಳನ್ನು ಸುರಕ್ಷಿತವಾಗಿಡಲು ನಾಲ್ಕುನಾಡು ಅರಮನೆಯನ್ನು ಬಳಸಲಾಯಿತು.

ನಾಲ್ಕುನಾಡು ಅರಮನೆಯ ಮುಖ್ಯಾಂಶಗಳು

  • ಸುಂದರವಾದ ವಿನ್ಯಾಸದೊಂದಿಗೆ ಸಣ್ಣ ಅರಮನೆ: ನಾಲ್ಕುನಾಡು ಅರಮನೆಯಲ್ಲಿ ವಿಸ್ತಾರವಾದ ಮರದ ಕೆತ್ತನೆಗಳು, ವರ್ಣಚಿತ್ರಗಳು ಮತ್ತು ಸಾಂಪ್ರದಾಯಿಕ ವಿನ್ಯಾಸವಿದೆ
  • ಕಗ್ಗತ್ತಲ ಕೊಠಡಿಗಳು: ಕೈದಿಗಳಿಗೆ ಕೂಡಿಡಲು ನಾಲ್ಕು ಕಗ್ಗತ್ತಲ ಕೊಠಡಿ‌ಗಳು ಅರಮನೆಯ ಹಿಂದೆ ಇವೆ
  • ಕೊಡಗು ರಾಜಕುಮಾರಿಯರ ಸಮಾಧಿಗಳು: ಟಿಪ್ಪು ಸುಲ್ತಾನನನ್ನು ಮದುವೆಯಾದ ಕೊಡಗು ರಾಜಕುಮಾರಿಯರ ಎರಡು ಗೋರಿಗಳನ್ನು ನಾಲ್ಕುನಾಡು ಅರಮನೆ ಆವರಣದಲ್ಲಿ ನಿರ್ಮಿಸಲಾಗಿದೆ
  • ಜೇನುನೊಣ ಕೇಂದ್ರ: ರಾಜ್ಯ ಸರ್ಕಾರ ನಡೆಸುವ ಜೇನುನೊಣ ಕೇಂದ್ರವು ನಾಲ್ಕುನಾಡು ಅರಮನೆಯಿಂದ ಕಾರ್ಯನಿರ್ವಹಿಸುತ್ತದೆ. 
  • ಗೋಡೆಯ ವರ್ಣಚಿತ್ರಗಳು: ನಾಲ್ಕುನಾಡು ಅರಮನೆಯ ಗೋಡೆಗಳ ಮೇಲಿನ ಕೆಲವು ಮೂಲ ವರ್ಣಚಿತ್ರಗಳನ್ನು ದುರಸ್ತಿ ಮಾಡಿ ಪುನಃಸ್ಥಾಪಿಸಲಾಗಿದೆ, ಇದರಲ್ಲಿ ರಾಜನು ಆನೆ ಸವಾರಿ ಮಾಡುವ  ಮೆರವಣಿಗೆಯ ವರ್ಣಚಿತ್ರಗಳನ್ನು ಕಾಣಬಹುದಾಗಿದೆ. ಸುತ್ತಲೂ ಕಾವಲುಗಾರರು ಮತ್ತು ಸಂಗೀತ ತಂಡಗಳಿವೆ.

ತಲುಪುವುದು ಹೇಗೆ? ನಾಲ್ಕುನಾಡು ಅರಮನೆಯು ಬೆಂಗಳೂರಿನಿಂದ 261 ಕಿ.ಮೀ ಮತ್ತು ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ. ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 85 ಕಿ.ಮೀ ದೂರದಲ್ಲಿದ್ದರೆ, ಕಣ್ಣೂರು ಮತ್ತು ಮೈಸೂರು ಎರಡು ಪ್ರಮುಖ ರೈಲು ನಿಲ್ದಾಣಗಳಾಗಿದ್ದು, ನಾಲ್ಕುನಾಡು ಅರಮನೆಯಿಂದ 100-130 ಕಿ.ಮೀ ದೂರದಲ್ಲಿವೆ. ನಾಲ್ಕುನಾಡು ತಲುಪಲು ಮಡಿಕೇರಿಯಲ್ಲಿ ಅಥವಾ ಕಾಕಬ್ಬೆಯಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ವಸತಿ: ಕಿಂಗ್ಸ್ ಕಾಟೇಜ್ ಮತ್ತು ಪ್ಯಾಲೇಸ್ ಎಸ್ಟೇಟ್ ಎರಡು ಜನಪ್ರಿಯ ಹೋಂಸ್ಟೇಗಳಾಗಿವೆ. ನಾಲ್ಕುನಾಡು ಅರಮನೆಯ ಪಕ್ಕದಲ್ಲೇ ಇವೆ.

    Tour Location

    Leave a Reply

    Accommodation
    Meals
    Overall
    Transport
    Value for Money