GO UP

ಆಗುಂಬೆ

separator
Scroll Down

ಆಗುಂಬೆ ಪಶ್ಚಿಮ ಘಟ್ಟದ ​​ಒಂದು ಸಣ್ಣ ಹಳ್ಳಿ. ಬೆಂಗಳೂರಿನಿಂದ 350 ಕಿ.ಮೀ ಮತ್ತು ಹತ್ತಿರದ ದೊಡ್ಡ ನಗರವಾದ ಶಿವಮೊಗ್ಗದಿಂದ 93 ಕಿ.ಮೀ. ದೂರವಿರುವ ಆಗುಂಬೆ ಮೇಘಾಲಯದ ಚಿರಪುಂಜಿ ನಂತರ ದೇಶದ ಎರಡನೇ ಅತಿ ಹೆಚ್ಚು ಮಳೆಯಾಗುವ ತಾಣವಾಗಿದೆ. ಹಾಗಾಗಿ ಆಗುಂಬೆಯನ್ನು ಕರ್ನಾಟಕದ ಚಿರಾಪುಂಜಿ ಎಂದೂ ಕರೆಯಲಾಗುತ್ತದೆ. 

 

ಆಗುಂಬೆಗೆ ಏಕೆ ಭೇಟಿ ನೀಡಬೇಕು?

  • ಸೂರ್ಯಾಸ್ತ: ಆಗುಂಬೆಯಿಂದ ಸೂರ್ಯಾಸ್ತದ ನೋಟವು ಅತ್ಯಂತ ವಿಖ್ಯಾತವಾಗಿದ್ದು ದೂರದೂರದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸೂರ್ಯಾಸ್ತದ ಸಮಯದಲ್ಲಿ ಭೇಟಿ ನೀಡಿ ಈ ಕಾರಣಕ್ಕೇ ಮೀಸಲಾದ ವೀಕ್ಷಣಾ ಮಂಚದಿಂದ ಸುಂದರ ಸೂರ್ಯಾಸ್ತ ನೋಡಬಹುದಾಗಿದೆ. 
  • ಚಾರಣಗಳಲ್ಲಿ ಭಾಗವಹಿಸಿ: ಕೆಲವು ಖಾಸಗಿ ಸಂಸ್ಥೆಗಳು ಆಗುಂಬೆಯಲ್ಲಿ ಅನುಭವಿ ಮಾರ್ಗದರ್ಶಕರೊಂದಿಗೆ ಚಾರಣಗಳನ್ನು ಆಯೋಜಿಸುತ್ತವೆ. ಇದು ಅಪರೂಪದ ಜಾತಿಯ ಹಾವುಗಳು, ಕಪ್ಪೆಗಳು, ಕೀಟಗಳು ಮತ್ತು ಇತರ ಕಾಡು ಪ್ರಾಣಿ ಮತ್ತು ಸಸ್ಯ ಪ್ರಭೇದಗಳನ್ನು ವೀಕ್ಷಿಸಲು ಸಹಾಯ ಮಾಡುತ್ತದೆ. Https://www.darter.in/photography-tours/wildlife/agumbe/ ಪರಿಶೀಲಿಸಿ
  • ಜಲಪಾತಗಳು: ಆಗುಂಬೆಯಿಂದ ಕೆಲವೇ ಕಿ.ಮೀ ದೂರದಲ್ಲಿ ಹಲವು ಪ್ರಸಿದ್ಧ ಜಲಪಾತಗಳಿವೆ. ಬರ್ಕಣ ಜಲಪಾತ, ಜೋಗಿ ಗುಂಡಿ ಜಲಪಾತ ಮತ್ತು ಒನಕೆ ಅಬ್ಬಿ ಜಲಪಾತ ಇತ್ಯಾದಿ. ಇವನ್ನು ಚಾರಣ ಮೂಲಕ ತಲುಪಬಹುದಾಗಿದೆ ಮತ್ತು ಮುಂಗಾರು ಮುಗಿದ ನಂತರ ಭೇಟಿ ಕೊಡುವುದು ಸೂಕ್ತವಾಗಿದೆ. 
  • 14 ತೀಕ್ಷ್ಣ ತಿರುವುಗಳು: ಆಗುಂಬೆ ಬೆಟ್ಟದ ಮೇಲೆ ಏರಲು ಮತ್ತು ಕೆಳಕ್ಕೆ ಇಳಿಯಲು 14 ತೀಕ್ಷ್ಣವಾದ ತಿರುವುಗಳ (ಹೇರ್ ಪಿನ್ ಬೆಂಡ್) ಮೂಲಕ ಸಾಗಬೇಕಾಗುತ್ತದೆ. ಬೆಟ್ಟದ ಮೇಲೆ ಪೂರ್ಣ ಗಾತ್ರದ ಬಸ್ಸುಗಳು ಮತ್ತು ಟ್ರಕ್‌ಗಳನ್ನು ಅನುಮತಿಸಲಾಗುವುದಿಲ್ಲ. ಲಘು ವಾಹನಗಳನ್ನಷ್ಟೇ ಬಿಡಲಾಗುತ್ತದೆ. ಈ ತಿರುವುಗಳ ಮೂಲಕ ಚಾಲನೆ ಮಾಡಲು ಸಾಕಷ್ಟು ಚಾಕಚಕ್ಯತೆ, ಧೈರ್ಯ ಬೇಕಾಗುತ್ತದೆ. 
  • ಮಾಲ್ಗುಡಿ ಡೇಸ್: ಆರ್.ಕೆ.ನಾರಾಯಣ್ ಅವರ ಕಾದಂಬರಿ ಆಧಾರಿತ ಜನಪ್ರಿಯ ದೂರದರ್ಶನ ಧಾರಾವಾಹಿ ಮಾಲ್ಗುಡಿ ಡೇಸ್‌ನ ಹಲವಾರು ದೃಶ್ಯಗಳು ಆಗುಂಬೆ ಸುತ್ತಲೂ ಚಿತ್ರೀಕರಿಸಲಾಗಿದೆ. ನೀವು ಮಾಲ್ಗುಡಿ ಡೇಸ್ ಚಿತ್ರೀಕರಣಗೊಂಡ ಮನೆಗೆ ಭೇಟಿ ನೀಡಬಹುದು ಮತ್ತು ಧಾರಾವಾಹಿಯ ಇತರ ದೃಶ್ಯಗಳನ್ನು ಊರಿನ ವಿವಿಧ ಭಾಗದಲ್ಲಿ ಗುರುತಿಸಲು ಸಾಧ್ಯವಾಗುತ್ತದೆ.
  • ಸರೋವರ ಮತ್ತು ದೋಣಿ ವಿಹಾರ: ಅರಣ್ಯ ಚೆಕ್ ಪೋಸ್ಟ್ ಬಳಿ ದೋಣಿ ವಿಹಾರ ಸೌಲಭ್ಯವಿರುವ ಸಣ್ಣ ಸರೋವರ ಲಭ್ಯವಿದೆ.

ಹತ್ತಿರದ ಆಕರ್ಷಣೆಗಳು:

ಆಗುಂಬೆಗೆ ಭೇಟಿ ನೀಡಿದರೆ ಹತ್ತಿರದ ಆಕರ್ಷಣೆಗಳಾದ ಕುಂದಾದ್ರಿ ಬೆಟ್ಟ (16 ಕಿ.ಮೀ), ಶೃಂಗೇರಿ (ಆಗುಂಬೆಯಿಂದ 30 ಕಿ.ಮೀ) ಮತ್ತು ಕುಪ್ಪಳ್ಳಿ (ಆಗುಂಬೆಯಿಂದ 45 ಕಿ.ಮೀ) ಯನ್ನು ಕೂಡ ನೋಡಬಹುದಾಗಿದೆ. 

ಆಗುಂಬೆಗೆ ತಲುಪುವುದು:

ಬೆಂಗಳೂರಿನಿಂದ ಆಗುಂಬೆ ತನಕ ಒಂದು ನೇರ ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಮಂಗಳೂರು ಮತ್ತು ಶಿವಮೊಗ್ಗ ಹತ್ತಿರದ ರೈಲ್ವೆ ನಿಲ್ದಾಣಗಳಾಗಿದ್ದು, ಆಗುಂಬೆ ತಲುಪಲು ಆಗಾಗ್ಗೆ ಖಾಸಗಿ ಬಸ್ಸುಗಳು ಲಭ್ಯವಿರುತ್ತವೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆಗುಂಬೆಯಿಂದ 100 ಕಿ.ಮೀ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ.

ವಸತಿ: 

ಆಗುಂಬೆ ಸೀಮಿತ ಸಂಖ್ಯೆಯ ಹೋಟೆಲ್‌ಗಳನ್ನು ಮತ್ತು ಮನೆ ವಸತಿ ಹೊಂದಿದೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳು ನಿರ್ವಹಿಸುತ್ತಿರುವ ಸೀತಾನದಿ ನೇಚರ್ ಕ್ಯಾಂಪ್ ಆಗುಂಬೆಯಿಂದ 15 ಕಿ.ಮೀ ದೂರದಲ್ಲಿದೆ. ಆಗುಂಬೆಯಿಂದ 30 ಕಿ.ಮೀ ದೂರದಲ್ಲಿರುವ ಹತ್ತಿರದ ಪಟ್ಟಣವಾದ ತೀರ್ಥಹಳ್ಳಿಯಲ್ಲಿ ಹೆಚ್ಚಿನ ಆಯ್ಕೆಗಳು ಲಭ್ಯವಿದೆ.

     

    Tour Location