ಹೋಲಿ ಟ್ರಿನಿಟಿ ಚರ್ಚ್ ಅನ್ನು 1852 ರಲ್ಲಿ ಬ್ರಿಟಿಷ್ ಸರ್ಕಾರವು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಬ್ರಿಟಿಷ್ ಸೈನಿಕರ ಅನುಕೂಲಕ್ಕಾಗಿ ನಿರ್ಮಿಸಿತು. ಹೋಲಿ ಟ್ರಿನಿಟಿ ಚರ್ಚ್ ಇಂಗ್ಲಿಷ್ ನವೋದಯ (ರಿನೈಸ್ಸಾನ್ಸ್ ) ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ ಮತ್ತು ಏಕ ಕಾಲದಲ್ಲಿ 700 ಕ್ಕೂ ಹೆಚ್ಚು ಜನರಿಗೆ ಪ್ರಾರ್ಥನಾ ಅವಕಾಶ ಕಲ್ಪಿಸುತ್ತದೆ.
ಹೋಲಿ ಟ್ರಿನಿಟಿ ಚರ್ಚ್ ಅನ್ನು ಆ ಸಮಯದಲ್ಲಿ ಲಭ್ಯವಿದ್ದ ಅತ್ಯುತ್ತಮ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿತ್ತು. ಚರ್ಚ್‌ನ ಗಂಟೆಯನ್ನು ಲಂಡನ್‌ನ ಮಿಯರ್ಸ್ ಫೌಂಡ್ರಿಯಲ್ಲಿ ಅಚ್ಚು ಹಾಕಲಾಯಿತು, ಪೈಪ್ ಗಳನ್ನು (ಲೋಹದ ಸಂಗೀತ ಕೊಳವೆಗಳು) ಲಂಡನ್‌ನಿಂದ ಆಮದು ಮಾಡಿಕೊಳ್ಳಲಾಯಿತು. ಹೋಲಿ ಟ್ರಿನಿಟಿ ಚರ್ಚ್ ಹಲವಾರು ಭಿತ್ತಿಚಿತ್ರಗಳು, ಪ್ರತಿಮೆಗಳು ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಕಲಾಕೃತಿಗಳನ್ನು ಒಳಗೊಂಡಿದೆ.
ಹೋಲಿ ಟ್ರಿನಿಟಿ ಚರ್ಚ್ ಸಾಮೂಹಿಕ ಪ್ರಾರ್ಥನಾ ಸಮಯಗಳು:
ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಪ್ರತಿದಿನ ಬೆಳಗ್ಗೆ 6.30 ಗಂಟೆ ಮತ್ತು ಸಂಜೆ 6 ಗಂಟೆಗೆ (ರಜಾದಿನಗಳಲ್ಲಿ ಬೆಳಗ್ಗೆ 9 ಗಂಟೆಗೆ)
ಹತ್ತಿರ: ಎಂಜಿ ರಸ್ತೆ (1 ಕಿ.ಮೀ) ಮತ್ತು ಕಮರ್ಷಿಯಲ್ ಸ್ಟ್ರೀಟ್ (2.8 ಕಿ.ಮೀ) ಹೋಲಿ ಟ್ರಿನಿಟಿ ಚರ್ಚ್ ಬಳಿಯ ಜನಪ್ರಿಯ ಶಾಪಿಂಗ್ ಬೀದಿಗಳಾಗಿವೆ. ಕಬ್ಬನ್ ಪಾರ್ಕ್ (4.5 ಕಿ.ಮೀ), ಸೇಂಟ್ ಪ್ಯಾಟ್ರಿಕ್ ಚರ್ಚ್ (1.8 ಕಿ.ಮೀ) ಮತ್ತು ಉಲ್ಸೂರ್ ಸರೋವರ (3.4 ಕಿ.ಮೀ) ಭೇಟಿ ನೀಡಬಹುದಾದ ಹತ್ತಿರದ ಇತರ ಆಕರ್ಷಣೆಗಳು.
ಹೋಲಿ ಟ್ರಿನಿಟಿ ಚರ್ಚ್ ಅನ್ನು ಹೇಗೆ ತಲುಪುವುದು?
ಹೋಲಿ ಟ್ರಿನಿಟಿ ಚರ್ಚ್ ಟ್ರಿನಿಟಿ ಸರ್ಕಲ್‌ನಲ್ಲಿದೆ, ಇದು ಎಂಜಿ ರಸ್ತೆಯ ಅಂತ್ಯದಲ್ಲಿದೆ, ಮೆಜೆಸ್ಟಿಕ್‌ನಿಂದ 6.5 ಕಿ.ಮೀ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 37 ಕಿ.ಮೀ. ದೂರವಾಗುತ್ತದೆ. ಟ್ರಿನಿಟಿ ಮೆಟ್ರೋ ನಿಲ್ದಾಣವು ಹತ್ತಿರದ ಮೆಟ್ರೋ (400 ಮೀಟರ್) ನಿಲ್ದಾಣವಾಗಿದೆ. ಟ್ರಿನಿಟಿ ವೃತ್ತಕ್ಕೆ ಬೆಂಗಳೂರಿನ ಎಲ್ಲಾ ಭಾಗಗಳಿಂದ ಅತ್ಯುತ್ತಮ ಬಸ್ ಸಂಪರ್ಕವಿದೆ.
ವಸತಿ: ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹಲವು ಬಜೆಟ್ ಮತ್ತು ಐಷಾರಾಮಿ ಹೋಟೆಲ್‌ಗಳು ಲಭ್ಯವಿದೆ.