Karnataka logo

Karnataka Tourism
GO UP

ಹಸ್ತ ಶಿಲ್ಪ ಕಲಾ – ಒಂದು ಪರಂಪರೆ ಮತ್ತು ವಾಸ್ತುಶಿಲ್ಪದ ಅದ್ಭುತ

separator
ಕೆಳಗೆ ಸ್ಕ್ರಾಲ್ ಮಾಡಿ

ಹಸ್ತ ಶಿಲ್ಪ ಕಲಾ – ಒಂದು ಪರಂಪರೆ ಮತ್ತು ವಾಸ್ತುಶಿಲ್ಪದ ಅದ್ಭುತ

ಹಸ್ತ ಶಿಲ್ಪ ಕಲಾ ಗ್ರಾಮದ ಕುರಿತು

ಉಡುಪಿಯ ಮಣಿಪಾಲದ ಹಸ್ತ ಶಿಲ್ಪ ಕಲಾಗ್ರಾಮವು ತನ್ನೆಡೆಗೆ ಎಲ್ಲರನ್ನು ಸೆಳೆಯುತ್ತಿದೆ. ಇದನ್ನು ಮ್ಯೂಸಿಯಂ ಅಂತಲೂ ಕರೆಯುತ್ತಾರೆ. ಆದರೆ ಇದಕ್ಕೆ ಉತ್ತರ ಹೌದು ಅಥವಾ ಇಲ್ಲ. ಇದು ಮ್ಯೂಸಿಯಂ ಹೌದು ಮತ್ತು ಶೈಕ್ಷಣಿಕ ಸಂಸ್ಥೆಯು ಹೌದು. ಇದು ಭಾರತೀಯ ಪರಂಪರೆಯ ಕಲಾಕೃತಿಗಳು ಮತ್ತು ಸುವರ್ಣ ಯುಗದ ಸಂಸ್ಕೃತಿಯನ್ನು ಒಳಗೊಂಡಿರುವ ಮುಕ್ತ ವಸ್ತುಸಂಗ್ರಹಾಲಯವಾಗಿದೆ. ಸಾಂಪ್ರದಾಯಿಕ ಮನೆಗಳು, ಕಲಾಕೃತಿಗಳು, ಜವಳಿ, ಪಾತ್ರೆಗಳು, ಪೀಠೋಪಕರಣಗಳು, ಕರಕುಶಲ ವಸ್ತುಗಳು ಮತ್ತು ಆಟಿಕೆಗಳ ಅದ್ಭುತ ವಸ್ತುಸಂಗ್ರಹಾಲಯ ಆಗಿದೆ.ಪರಂಪರೆಯ ರಚನೆಯನ್ನು ಒಟ್ಟುಗೂಡಿಸುವ ಮತ್ತು ಅದರ ಮೂಲ ವೈಭವಕ್ಕೆ ಮರುಸ್ಥಾಪಿಸುವ, ಅವುಗಳನ್ನು ಸಂರಕ್ಷಿಸುವ ಮತ್ತು ಸಂಶೋಧಕರು ಮತ್ತು ಸಮಾನ ಆಸಕ್ತಿಯ ಜನರಿಗೆ ಪ್ರದರ್ಶಿಸುವ ಅದ್ಭುತ ದೃಶ್ಯೀಕರಣ.- ಇದಾಗಿದೆ. ಹಸ್ತ ಶಿಲ್ಪ ಕಲಾ ಗ್ರಾಮವು ಖಂಡಿತವಾಗಿಯೂ ನಿಮ್ಮನ್ನು ವಿಸ್ಮಯಗೊಳಿಸುತ್ತದೆ ಆದರೆ ಇದು ಅಮ್ಯೂಸ್ಮೆಂಟ್ ಪಾರ್ಕ್ ಅಥವಾ ಪಿಕ್ನಿಕ್ ಸ್ಪಾಟ್ ಅಲ್ಲ. ಇದು ಸಂಪೂರ್ಣವಾಗಿ ಶೈಕ್ಷಣಿಕ ಸಂಸ್ಥೆಯಾಗಿದ್ದು, ಆವರಣದೊಳಗೆ ಯಾವುದೇ ವಾಣಿಜ್ಯ ಚಟುವಟಿಕೆಗಳಿಲ್ಲ. ಇದು ಟ್ರಸ್ಟ್‌ನಿಂದ ನಡೆಸಲ್ಪಡುತ್ತದೆ.

ಹಸ್ತ ಶಿಲ್ಪ ಕಲಾ ಗ್ರಾಮದ ಕಥೆ

ಉಡುಪಿಯಲ್ಲಿ ಜನಿಸಿದ ವಿಜಯನಾಥ್ ಶೆಣೈ ಅವರು ತಮ್ಮ ಮನೆಯನ್ನು ಸಾಂಪ್ರದಾಯಿಕ ವಾಸ್ತುಶೈಲಿಯಲ್ಲಿ ನಿರ್ಮಿಸುವ ಸಲುವಾಗಿ ಹತ್ತಿರದ ಸ್ಥಳಗಳಲ್ಲಿ ಹಳೆಯ ಮನೆಗಳ ವಿನ್ಯಾಸಗಳು ಮತ್ತು ವಸ್ತುಗಳನ್ನು ಹುಡುಕುತ್ತಿದ್ದರು. ಅವರು ತಮ್ಮ ಹುಡುಕಾಟವನ್ನು ಎಲ್ಲೆಡೆ ವಿಸ್ತರಿಸಿದರು. ಬ್ಯಾಂಕರ್ ಆಗಿದ್ದ ವಿಜಯನಾಥ್ ಶೆಣೈ ಅವರಿಗೆ ಈ ಹಂತದಲ್ಲಿ ಇಂತಹ ಅಪರೂಪದ ಮಾದರಿಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆ ಆಗಿ ನೀಡಬೇಕೆಂಬ ಬಯಕೆ ಉಂಟಾಯಿತು. ಈಗಾಗಲೇ ಇಂತಹ ಹಲವು ಪರಂಪರೆಯ ಮನೆಗಳು , ದೇವಾಲಯಗಳು ನಿರ್ಲಕ್ಷ ಕಾರಣದಿಂದಾಗಿ ಅವಸಾನದತ್ತ ಬಂದಿದ್ದವು. ಹೀಗಾಗಿ ಶೆಣೈ ಅವರು ಅವುಗಳನ್ನು ರಕ್ಷಿಸುವ ನಿರ್ಧಾರ ಮಾಡಿದರು. ಅವರು ತಮ್ಮ 60 ನೇ ವಯಸ್ಸಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರು. ಶೆಣೈ ಅವರು ತಮ್ಮ ವಿನೂತನ ಕಲ್ಪನೆಯೊಂದಿಗೆ ಸ್ಥಳೀಯ ಆಡಳಿತದ ಅಧಿಕಾರಿಗಳನ್ನು ಸಂಪರ್ಕಿಸಿದರು ಮತ್ತು ಅವರಿಗೆ 1993 ರಲ್ಲಿ 6 ಎಕರೆ ಭೂಮಿಯನ್ನು ನೀಡಲಾಯಿತು. ಶೆಣೈ ಅವರು ಕರ್ನಾಟಕ, ಆಂದ್ರಪ್ರದೇಶ, ಕೇರಳ, ತಮಿಳುನಾಡಿನಿಂದ ಅನೇಕ ಅಪರೂಪದ ಸಂಗ್ರಹಗಳನ್ನು, ಸ್ಮಾರಕಗಳನ್ನು ತಂದು ಇಲ್ಲಿ ರಕ್ಷಿಸಿದರು.
ಒಟ್ಟಿನಲ್ಲಿ ಪರಂಪರೆ ಮತ್ತು ವಾಸ್ತುಶಿಲ್ಪದಲ್ಲಿ ಶೆಣೈ ಅವರ ತೀವ್ರ ಆಸಕ್ತಿಯು ಹಸ್ತ ಶಿಲ್ಪ ಕಲಾ ಗ್ರಾಮಕ್ಕೆ ಜನ್ಮ ನೀಡಿತು.
ಇದು ಮಣಿಪಾಲದಲ್ಲಿ ಕರ್ನಾಟಕ ಸರ್ಕಾರವು ನೀಡಿದ ವಿಸ್ತಾರವಾದ 6 ಎಕರೆ ಭೂಮಿಯಲ್ಲಿ ನೆಲೆಗೊಂಡಿದೆ, ಈಗ 18 ಪಾರಂಪರಿಕ ಮನೆಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ಸುಮಾರು 80% ರಷ್ಟು ಅವುಗಳ ಮೂಲ ವೈಭವದೊಂದಿಗೆ ಮರುಸ್ಥಾಪಿಸಲಾಗಿದೆ. ಈ ಮರುಸ್ಥಾಪಿಸುವಿಕೆಯು ಸಾಂಪ್ರದಾಯಿಕ ಅನುಭವಿ ಕುಶಲಕರ್ಮಿಗಳ ಸಹಾಯದಿಂದ ಇದು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ.

ಪ್ರತಿ ಮನೆಯು ಅದರ ಮೂಲ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ವೆಚ್ಚದಾಯಕವಾಗಿದ್ದು, ಅದು ಡಾಕ್ಯುಮೆಂಟೇಶನ್ ಮಾಡುವುದು, ಅಲ್ಲಿಂದ ತೆಗೆಯುವುದು, ಸಾಗಿಸುವುದು ಮತ್ತು ಅಂತಿಮವಾಗಿ ಮರುಸ್ಥಾಪಿಸುವಂತಹ ವಿವಿಧ ಹಂತಗಳಲ್ಲಿ ಕಾರ್ಯವಿಧಾನವನ್ನು ಹೊಂದಿದೆ. ನಾರ್ವೇಜಿಯನ್, ಫಿನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ರಾಯಭಾರ ಕಚೇರಿಗಳು ತಮ್ಮ ಸಿಎಸ್‌ಆರ್ ಯೋಜನೆಗಳ ಅಡಿಯಲ್ಲಿ ಈ ಹಸ್ತ ಶಿಲ್ಪ ಪರಂಪರೆ ಗ್ರಾಮ ನಿರ್ವಹಿಸಲು ಧನ ಸಹಾಯವನ್ನು ಮಾಡುತ್ತವೆ. ಹಸ್ತ ಶಿಲ್ಪ ಕಲಾ ಗ್ರಾಮವು ಕರ್ನಾಟಕ ಸರ್ಕಾರ ಮತ್ತು ಇತರ ಕೆಲವು ಖಾಸಗಿ ಏಜೆನ್ಸಿಗಳ ಸಹಾಯದಿಂದ ನಿರ್ವಹಿಸಲ್ಪಡುತ್ತದೆ.

ನೀವು ಇಲ್ಲಿ ಏನು ನೋಡಬಹುದು.

ಈ ಗ್ರಾಮವು ನಿಮ್ಮನ್ನು ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ, ಅತ್ಯುನ್ನತ ಕರಕುಶಲತೆ ಮತ್ತು ವಾಸ್ತುಶಿಲ್ಪಕ್ಕೆ ಕರೆದೊಯ್ಯುತ್ತದೆ. ನೀವು ಇಲ್ಲಿ ಮಲೆನಾಡು, ದಕ್ಷಿಣ ಮತ್ತು ಉತ್ತರ ಕೆನರಾದಿಂದ 18 ಪಾರಂಪರಿಕ ಮನೆಗಳು ಮತ್ತು ಐತಿಹಾಸಿಕ ಉತ್ತರ ಕರ್ನಾಟಕದ ಕೆಲವು ಮನೆಗಳ ಸೌಂದರ್ಯವನ್ನು ನೀವು ಇಲ್ಲಿ ವೀಕ್ಷಿಸಬಹುದು. ಇಲ್ಲಿ 13 ನೇ ಶತಮಾನದ ಹರಿಹರ ಮಂದಿರ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳ ಸಾಂಪ್ರದಾಯಿಕ ದೇವಾಲಯಗಳು ನಿಮ್ಮನ್ನು ವಿಸ್ಮಯಗೊಳಿಸುತ್ತವೆ. ಬಸ್ತಾರ್-ಛತ್ತೀಸ್‌ಗಢದ ಬುಡಕಟ್ಟು ಕಲೆಯ ಅಪರೂಪದ ಸಂಗ್ರಹಗಳು ಮತ್ತು ದಕ್ಷಿಣ ಕೆನರಾದ ಜಾನಪದ ದೇವತೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿಯೊಂದು ಮನೆ, ಪ್ರತಿ ವಸ್ತುಸಂಗ್ರಹಾಲಯ, ಮತ್ತು ಪ್ರತಿ ಕಂಬ ಅಥವಾ ಅಂಗಳವು ಒಂದು ಕಥೆಯನ್ನು ಹೇಳುತ್ತದೆ.ಇಲ್ಲಿನ ಕೆಲವು ವಾಸಸ್ಥಳಗಳನ್ನು ನೀವು ಕಳೆದುಕೊಳ್ಳಲು ಖಂಡಿತವಾಗಿಯೂ ಬಯಸುವುದಿಲ್ಲ ಅವುಗಳಲ್ಲಿನ ವೈಬ್‌ಗಳು ಮತ್ತು ಸಕಾರಾತ್ಮಕತೆಯನ್ನು ನೀವು ಇನ್ನೂ ಅನುಭವಿಸಬಹುದು.

ಇಲ್ಲಿ ಪ್ರತಿಯೊಂದು ಮನೆಯನ್ನು ವಿವರವಾಗಿ ವಿವರಿಸಲಾಗದಿದ್ದರೂ, ಕೆಲವು ಪ್ರಮುಖವಾದವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಮುಧೋಳ ಅರಮನೆ

ಮುಧೋಳ ಅರಮನೆ

ಮರಾಠ ಮತ್ತು ರಾಜಸ್ಥಾನಿ ಶೈಲಿಯ ವಾಸ್ತುಶಿಲ್ಪದ ಸುಂದರ ಮಿಶ್ರಣವಾದ ಮಾದರಿ ಮುಧೋಳ ಅರಮನೆಯನ್ನು ಬಾಗಲಕೋಟೆ ಜಿಲ್ಲೆಯಿಂದ ಸಾಗಿಸಲಾಯಿತು. ಸಂಕೀರ್ಣವಾದ ಕೆತ್ತಿದ ಬಾಗಿಲುಗಳು ಮತ್ತು ವರ್ಣರಂಜಿತ ರೋಮಾಂಚಕ ಕಿಟಕಿಗಳನ್ನು ಹೊಂದಿರುವ ಈ 19 ನೇ ಶತಮಾನದ ಅದ್ಭುತವನ್ನು ಎಲ್ಲಾ ಭವ್ಯತೆಯೊಂದಿಗೆ ಅದರ ಮೂಲ ವೈಭವಕ್ಕೆ ಮರುಸ್ಥಾಪಿಸಲಾಗಿದೆ.

ಕುಕನೂರಿನ ಕಮಲ ಮಹಲ್

ಕುಕನೂರು ಮುಧೋಳ ಅರಮನೆಯ ಕಮಲ ಮಹಲ್

ಕುಕನೂರಿನ ಕಮಲ್ ಮಹಲನ್ನು 1341 ರಲ್ಲಿ ನಿರ್ಮಿಸಲಾಯಿತು. ಇದು ವಿಜಯ ನಗರ ಸಾಮ್ರಾಜ್ಯದ ಕೊಡುಗೆ ಆಗಿದೆ. ಇದು ವಿಜಯನಗರ ಸಾಮ್ರಾಜ್ಯದ ಸೇನಾ ಮುಖ್ಯಸ್ಥರ ಖಾಸಗಿ ಕಚೇರಿಯಾಗಿತ್ತು.

ಡೆಕ್ಕನ್ ನವಾಬ್ ಮಹಲ್

ಡೆಕ್ಕನ್ ನವಾಬ್ ಮಹಲ್

ಹೆಸರೇ ಹೇಳುವಂತೆ, ಡೆಕ್ಕನ್ ನವಾಬಿ ಮಹಲ್ ಹುಮ್ನಾಬಾದ್‌ನ ಬರೀದ್ ಶಾಹಿ ರಾಜವಂಶದ ನವಾಬರ ಭವ್ಯವಾದ ಮತ್ತು ಅದ್ದೂರಿ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ. ಮಹಲ್‌ನಲ್ಲಿರುವ ಪ್ರತಿಯೊಂದು ತುಣುಕನ್ನು ಪ್ರಪಂಚದ ವಿವಿಧ ಭಾಗಗಳಿಂದ ತರಲಾಯಿತು. ಬೆಲ್ಜಿಯನ್ ಗಾಜಿನ ಕಿಟಕಿಗಳು, ಜರ್ಮನ್ ಟೈಲ್ಸ್, ಬ್ರಿಟಿಷ್ ಕಬ್ಬಿಣದ ಮೆಟ್ಟಿಲುಗಳು, ಆಸ್ಟ್ರಿಯಾದಿಂದ ಗೊಂಚಲುಗಳು, ಆಮದು ಮಾಡಿದ ವೈನಗಳು ಮತ್ತು ಇಟಾರ್ಗಳು (ಸುಗಂಧ ದ್ರವ್ಯ) ಇವೆಲ್ಲವೂ ಹೆಚ್ಚು ನವಾಬಿ ಶೈಲಿಯನ್ನು ಪ್ರತಿಬಿಂಬಿಸುತ್ತವೆ.

ಕುಂಜೂರ ಚೌಕಿಮನಿ

ಸುಮಾರು 200 ವರ್ಷಗಳಷ್ಟು ಹಳೆಯದಾದ, ಕುಂಜೂರ್ ಚೌಕಿಮನೆ, ಅಂಗಳದ ಎರಡು ಅಂತಸ್ತಿನ ಮನೆಯನ್ನು ಕೇರಳದ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮನೆಯನ್ನು ಮಂಡಲದ ಮಾದರಿ ಅಥವಾ ಮಧ್ಯದ ಅಂಗಳಕ್ಕೆ ಹೊಂದಿಕೆಯಾಗುವಂತೆ ಮಧ್ಯವನ್ನು ತೆರೆದಿರುವ ಕಾರ್ಡಿನಲ್ ದಿಕ್ಕುಗಳಿಗೆ ಜೋಡಿಸಲಾದ ಗ್ರಿಡ್ ಅನ್ನು ಅನುಸರಿಸಿ ನಿರ್ಮಿಸಲಾಗಿದೆ. ಅರ್ಚಕ ಕುಟುಂಬದ ಮನೆಯನ್ನು ಪ್ರತಿ ಕೋಣೆಯ ಕಾರ್ಯಚಟುವಟಿಕೆಗೆ ಅನುಗುಣವಾಗಿ ನಿರ್ಮಿಸಲಾಗಿದೆ.

ಹರಿಹರ ಮಂದಿರ

ಹರಿಹರ ಮಂದಿರ

1216 ರಲ್ಲಿ ನಿರ್ಮಾಣವಾಗಿದ್ದ ಹರಿಹರ ದೇವಾಲಯದಲ್ಲಿ ಶಿವ, ಪಾರ್ವತಿ ದೇವಿ ಮತ್ತು ಭಗವಾನ್ ವಿಷ್ಣು ದೇವರುಗಳನ್ನು ಪೂಜಿಸಲಾಗುತ್ತದೆ. ಈ ನಿಗೂಢ ಮರದ ದೇವಾಲಯವನ್ನು ಹಸ್ತ ಶಿಲ್ಪ ಕಲಾ ಗ್ರಾಮಕ್ಕೆ ತರಲಾಯಿತು ಮತ್ತು ಈ ದೇವಾಲಯದಲ್ಲಿ ಇನ್ನೂ ಅನೇಕ ದೇವತೆಗಳನ್ನು ಪೂಜಿಸಲಾಗುತ್ತದೆ. ಗರ್ಭಗುಡಿಯ ಛಾವಣಿಗಳು ಮತ್ತು ಮುಖ್ಯ ಬಾಗಿಲುಗಳ ಮೇಲಿನ ಸಂಕೀರ್ಣವಾದ ಮರದ ಕೆತ್ತನೆಗಳು ಶಿವ ಪುರಾಣ ಮತ್ತು ವಿಷ್ಣು ಪುರಾಣದ ಪೌರಾಣಿಕ ಕಥೆಗಳನ್ನು ಆಧರಿಸಿವೆ.

ಮಂಗಳೂರು ಕ್ರಿಶ್ಚಿಯನ್ ಮನೆ

ಮಂಗಳೂರಿನ ಕ್ರಿಶ್ಚಿಯನ್ ಹೌಸ್

ರೋಮನ್ ಗೋಥಿಕ್ ಮತ್ತು ಬ್ರಿಟಿಷ್ ಸಂಸ್ಕೃತಿಯಿಂದ ಪ್ರೇರಿತವಾದ ಪೋರ್ಚುಗೀಸ್-ಪ್ರಭಾವಿತ ಮಂಗಳೂರು ಕ್ರಿಶ್ಚಿಯನ್ ಮನೆಯನ್ನು ಚಿಕಮಗಳೂರಿನಿಂದ ಸಾಗಿಸಲಾಯಿತು. ಈ ಮಂಗಳೂರಿನ ಕ್ರಿಶ್ಚಿಯನ್ ಕ್ಲಾಸಿಕ್ ವಿಂಟೇಜ್ ಇಂಪಾಲಾ ತನ್ನ ನೋಟದಿಂದ ಎಲ್ಲರನ್ನು ಸೆಳೆಯುತ್ತದೆ. ಆ ಮನೆ ಕ್ರಿಶ್ಚಿಯನ್ ಮಿಷನರಿಗೆ ಸೇರಿತ್ತು.

ತಲುಪುವುದು ಹೇಗೆ?

ವಿಮಾನ ಸಾರಿಗೆ ಮೂಲಕ

ಮಂಗಳೂರು ವಿಮಾನ ನಿಲ್ದಾಣವು ಮಣಿಪಾಲದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಹತ್ತಿರದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಹಸ್ತ ಶಿಲ್ಪ ಕಲಾ ಗ್ರಾಮವನ್ನು ತಲುಪಲು ಕ್ಯಾಬ್‌ಗಳು ಮತ್ತು ಬಸ್ಸುಗಳು ಸುಲಭವಾಗಿ ಲಭ್ಯವಿವೆ. ಅಲ್ಲಿಗೆ ತಲುಪಲು ಸುಮಾರು 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ರೈಲು ಸಾರಿಗೆ ಮೂಲಕ

ಮಣಿಪಾಲವು ಉಡುಪಿ ರೈಲು ನಿಲ್ದಾಣದಿಂದ ಕೇವಲ 2 ಕಿಮೀ ದೂರದಲ್ಲಿದೆ. ರೈಲು ನಿಲ್ದಾಣದಿಂದ ಶಿಲ್ಪ ಕಲಾ ಗ್ರಾಮಕ್ಕೆ ಆಟೋ ರಿಕ್ಷಾಗಳು ಮತ್ತು ಕ್ಯಾಬ್‌ಗಳು ಸುಲಭವಾಗಿ ಲಭ್ಯವಿವೆ.

ರಸ್ತೆ ಸಾರಿಗೆ ಮೂಲಕ

ಮಣಿಪಾಲ ಬಸ್ ನಿಲ್ದಾಣವನ್ನು ಬೆಂಗಳೂರು ಅಥವಾ ಮಂಗಳೂರಿನಿಂದ ಯಾವುದೇ KSRTC ಸೇವೆಗಳ ಮೂಲಕ ತಲುಪಬಹುದು. ಹಸ್ತ ಶಿಲ್ಪ ಕಲಾ ಗ್ರಾಮವನ್ನು ಮಣಿಪಾಲ ಮತ್ತು ಇತರ ನಿಲ್ದಾಣಗಳಿಂದ ಬಸ್‌ಗಳ ಮೂಲಕವೂ ತಲುಪಬಹುದು.

ತ್ವರಿತ ಮಾಹಿತಿ:

  • ಚಳಿಗಾಲವು ಅತ್ಯುತ್ತಮ ಋತುವಾಗಿದೆ. ಅಕ್ಟೋಬರ್ ನಿಂದ ಫೆಬ್ರವರಿ ನಡುವೆ ಭೇಟಿ ನೀಡಿ ಅಥವಾ ಬೇಸಿಗೆಯಲ್ಲಿ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಒಯ್ಯಿರಿ.
  • ಎ ಮನೆಗೆ ಪ್ರವೇಶಿಸುವಾಗ ನೀವು ಶೂಗಳನ್ನು ತೆಗೆಯಬೇಕಾಗಿರುವುದರಿಂದ ಆರಾಮದಾಯಕವಾದ ಪಾದರಕ್ಷೆಗಳನ್ನು ಧರಿಸಿ.
  • ಹಿರಿಯ ನಾಗರಿಕರು ಮತ್ತು ವಿಶೇಷ ವಿಕಲ ಚೇತನರಿಗೆ ಎಲೆಕ್ಟ್ರಿಕ್ ವಾಹನಗಳು ಲಭ್ಯವಿವೆ.
  • ನಿಮ್ಮ ಕುಡಿಯುವ ಬಾಟಲಿಯನ್ನು ಒಯ್ಯಿರಿ. ಮತ್ತೆ ಇಲ್ಲಿ ಮತ್ತೆ ನೀರನ್ನು ತುಂಬಿಸಕೊಳ್ಳಬಹುದಾದ ಮಣ್ಣಿನ ನೀರಿನ ಮಡಕೆಗಳು ಕೆಲವು ಸ್ಥಳಗಳಲ್ಲಿ ಲಭ್ಯವಿವೆ.
  • ಆವರಣದಲ್ಲಿ ವಿಶ್ರಾಂತಿ ಕೊಠಡಿಗಳು ಲಭ್ಯವಿದೆ.
  • ಯಾವುದೇ ಆಹಾರ ಪದಾರ್ಥಗಳನ್ನು ಅನುಮತಿಸಲಾಗುವುದಿಲ್ಲ ಅಥವಾ ಆವರಣದ ಒಳಗೆ ಲಭ್ಯವಿರುವುದಿಲ್ಲ.
  • ವಯಸ್ಕರಿಗೆ 300 ರೂ ಮತ್ತು 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮತ್ತು ವಯಸ್ಕರೊಂದಿಗೆ ಬರುವ ವಿದ್ಯಾರ್ಥಿಗಳಿಗೆ ರೂ 150 ಪ್ರವೇಶ ಟಿಕೆಟ್ ಇದೆ. ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಅಥವಾ ಮ್ಯೂಸಿಯಂನ ಕೌಂಟರ್‌ನಲ್ಲಿ ಲಭ್ಯವಿದೆ.
  • ಇಲ್ಲಿ ಕ್ಯಾಮೆರಾ ಬಳಸಲು ಪ್ರತ್ಯೇಕ ಚಾರ್ಜ್ ಇದೆ. ಕ್ಯಾಮೆರಾಗಳ ಟಿಕೆಟ್ 250 ರೂ.
  • ಮ್ಯೂಸಿಯಂ ಸಮಯವು 10 ರಿಂದ ಸಂಜೆ 5 ರವರೆಗೆ ಇರುತ್ತದೆ. ವಸ್ತುಸಂಗ್ರಹಾಲಯವನ್ನು ನೋಡಲು ಸುಮಾರು 2 ಗಂಟೆಗಳು ಬೇಕಾಗುವುದರಿಂದ, ಕೊನೆಯ ಟಿಕೆಟ್ ಅನ್ನು ಮಧ್ಯಾಹ್ನ 3 ಗಂಟೆಗೆ ನೀಡಲಾಗುತ್ತದೆ.
  • ಸೋಮವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಮ್ಯೂಸಿಯಂ ತೆರೆ ದಿರುತ್ತದೆ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ

 

Tour Location

 

Leave a Reply

Accommodation
Meals
Overall
Transport
Value for Money