Karnataka Tourism
GO UP

ಶ್ರೀ ಸೊಗಲ ಕ್ಷೇತ್ರ

separator
ಕೆಳಗೆ ಸ್ಕ್ರಾಲ್ ಮಾಡಿ

ಶ್ರೀ ಸೊಗಲ ಕ್ಷೇತ್ರ: ಸೊಗಲ ಒಂದು ದೇವಾಲಯದ ಪಟ್ಟಣ ಮತ್ತು ಸುಗೊಳ ಮುನಿ ಎಂಬ ಋಷಿಯಿಂದ ಪ್ರಸಿದ್ದಿಗೆ ಬಂದ  ಐತಿಹಾಸಿಕ ಸ್ಥಳವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಿಂದ 16 ಕಿ.ಮೀ ದೂರದಲ್ಲಿರುವ  ಬೆಟ್ಟ ಶ್ರೇಣಿಯಲ್ಲಿ ಸೊಗಲ ಕ್ಷೇತ್ರವಿದೆ. 

ಸೊಗಲದ ಆಕರ್ಷಣೆಗಳು

  • ಸೋಮೇಶ್ವರ ದೇವಸ್ಥಾನ: ಸೊಗಲದ ಪ್ರಮುಖ ದೇವಾಲಯವು ಅದರ ಒಳಗಿನ ಗರ್ಭಗೃಹದ ಎರಡೂ ಕಡೆಗಳಲ್ಲಿ ಸುಂದರ ವಿನ್ಯಾಸದ ಕಿಟಕಿಗಳು, ವಿಸ್ತಾರವಾಗಿ ಕೆತ್ತಿದ ದ್ವಾರಗಳಿವೆ. ರಾಷ್ಟ್ರಕೂಟ ಕಾಲದಲ್ಲಿ ನಿರ್ಮಿಸಲಾಗಿರುವ ಸೋಮೇಶ್ವರ ದೇವಸ್ಥಾನದ ಮುಖ್ಯ ಸಭಾಂಗಣವು ಚೌಕ, ವೃತ್ತ ಮತ್ತು ಅಷ್ಟಭುಜಾಕೃತಿಯ ಸ್ತಂಭಗಳನ್ನು ಹೊಂದಿದೆ.
  • ಕಲ್ಯಾಣ ಮಂಟಪ: ಶಿವ ಮತ್ತು ಪಾರ್ವತಿ ದೇವಿ ವಿವಾಹವಾದ ಸ್ಥಳ ಎಂದು ನಂಬಲಾದ ಮದುವೆ ಮಂಟಪ. ಮದುವೆ ಉಡುಪಿನಲ್ಲಿ ಶೃಂಗಾರಗೊಂಡ ಶಿವ ಮತ್ತು ಪಾರ್ವತಿ ದೇವಿಯ ಚಿತ್ರಗಳು ಇಲ್ಲಿವೆ.
  • ವೀರಭದ್ರ ದೇವಸ್ಥಾನ
  • ಭ್ರಮರಾಂಬ ದೇವಸ್ಥಾನ: ಪಾರ್ವತಿ ದೇವತೆ ತಪಸ್ಸಿನಲ್ಲಿ ತೊಡಗಿದ ಚಿತ್ರಣವಿದೆ. 
  • ಸಿದ್ಧೇಶ್ವರ ಲಿಂಗ ಗುಹೆ ದೇಗುಲ
  • ಕದಂಬ ನಾರಾಯಣ ಕೋಟೆ ಅವಶೇಷಗಳು
  • ಅಜ್ಜಪ್ಪನ ಗುಡಿ
  • ಸೂರ್ಯ ಚಂದ್ರ ದೇಗುಲ
  • ಗಿರಿಜಾ ದೇವಸ್ಥಾನ
  • ಮಿನಿ ಜಲಪಾತ (18 ಮೀಟರ್ ಎತ್ತರ)
  • ಶಿವನಿಗೆ ಅರ್ಪಿತವಾದ ತೊದ್ದಪ್ಪಯ್ಯ ದೇವಸ್ಥಾನ

ತಲುಪುವುದು ಹೇಗೆ ಶ್ರೀ ಸೊಗಲ ಕ್ಷೇತ್ರ: ಸೊಗಲ ಬೆಂಗಳೂರಿನಿಂದ 500 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಬೆಳಗಾವಿಯಿಂದ 63 ಕಿ.ಮೀ.ದೂರದಲ್ಲಿದೆ. ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ. ಸೊಗಲ ತಲುಪಲು ಬೆಳಗಾವಿಯಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಸೀಮಿತ ಬಸ್ಸುಗಳು ಲಭ್ಯವಿದೆ.

ವಸತಿ: ಸೊಗಲದಿಂದ 20 ಕಿ.ಮೀ ದೂರದಲ್ಲಿರುವ ಬೈಲಹೊಂಗಲ್ ನಲ್ಲಿ ಬಜೆಟ್ ಹೋಟೆಲ್ ಲಭ್ಯವಿದೆ. ಬೆಳಗಾವಿ ನಗರದಲ್ಲಿ ಹೆಚ್ಚಿನ ಆಯ್ಕೆಗಳು ಲಭ್ಯವಿದೆ.

 

Tour Location

 

Leave a Reply

Accommodation
Meals
Overall
Transport
Value for Money