Karnataka Tourism
GO UP

ಲುಂಬಿನಿ ಉದ್ಯಾನ

separator
ಕೆಳಗೆ ಸ್ಕ್ರಾಲ್ ಮಾಡಿ

ಲುಂಬಿನಿ ಉದ್ಯಾನ

ಲುಂಬಿನಿ ಗಾರ್ಡನ್ಸ್ (ಲುಂಬಿನಿ ಉದ್ಯಾನ) ಉತ್ತರ ಬೆಂಗಳೂರಿನ ವಾಟರ್ ಥೀಮ್ ಪಾರ್ಕ್ ಮತ್ತು ಮನರಂಜನಾ ಕೇಂದ್ರವಾಗಿದೆ. ಲುಂಬಿನಿ ಉದ್ಯಾನವು ನಾಗವಾರ ಸರೋವರದ ದಡದಲ್ಲಿ 1.5 ಕಿ.ಮೀ ಹಮ್ಮಿಕೊಂಡಿದೆ. 

ಬೆಂಗಳೂರಿನ ಲುಂಬಿನಿ ಉದ್ಯಾನದ ಆಕರ್ಷಣೆಗಳು:

  • ದೋಣಿ ವಿಹಾರ: 2 ಆಸನಗಳಿಂದ 12 ಆಸನಗಳವರೆಗಿನ ವಿವಿಧ ಆಸನ ಸಾಮರ್ಥ್ಯವಿರುವ ದೋಣಿಗಳು ಸರೋವರದಲ್ಲಿ ಮೋಜಿನ ಸವಾರಿಗಾಗಿ ಲಭ್ಯವಿದೆ
  • ಮನೋರಂಜನಾ ಸವಾರಿಗಳು: ಬುಲ್ ಫೈಟಿಂಗ್, ಆಟಿಕೆ ರೈಲುಗಳು, ಹೆಲಿಕಾಪ್ಟರ್ ಆಕಾರದ ಆಟಿಕೆಗಳು, ರಿವರ್ಸ್ ಬಂಗೀ ಜಂಪಿಂಗ್ ಮತ್ತು ಇನ್ನಷ್ಟು ಆಟಗಳು ಲಭ್ಯವಿವೆ. 
  • ನೀರಾಟ: ಎಲ್ಲಾ ವಯಸ್ಸಿನವರಿಗೆ ಹಲವು ಜಾರುಬಂಡಿ, ನೀರಾಟದ ಪ್ರದೇಶಗಳಿವೆ. 
  • ತೇಲುವ ಉಪಾಹಾರಗೃಹ 
  • ಆಹಾರ ಮಳಿಗೆಗಳು
  • ಕಾರ್ಯಕ್ರಮ ಮಂಟಪ: ಕುಟುಂಬ / ಕಾರ್ಪೊರೇಟ್ ಕಾರ್ಯಕ್ರಮ‌ಗಳಿಗೆ ಸೂಕ್ತವಾಗಿದೆ.
  • ಸಮಯ: ಲುಂಬಿನಿ ಉದ್ಯಾನಗಳು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.

ಲುಂಬಿನಿ ಗಾರ್ಡನ್‌ನಲ್ಲಿ ಲಭ್ಯವಿರುವ ವಿವಿಧ ಆಕರ್ಷಣೆಗಳು ಮತ್ತು ಅನುಭವಗಳನ್ನು ಆನಂದಿಸಲು ಕನಿಷ್ಠ ಅರ್ಧ ದಿನವನ್ನು ಕಳೆಯುವುದು ಉತ್ತಮ ಆಯ್ಕೆಯಾಗಿರಲಿದೆ. 

ಹತ್ತಿರದಲ್ಲಿ ಇನ್ನೇನಿದೆ: ಬೆಂಗಳೂರು ಅರಮನೆ (10 ಕಿ.ಮೀ), ಕಬ್ಬನ್ ಪಾರ್ಕ್ (12 ಕಿ.ಮೀ), ಫ್ರೀಡಂ ಪಾರ್ಕ್ (11 ಕಿ.ಮೀ) ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಟಿಪ್ಪು ಸುಲ್ತಾನ್ ಅವರ ಬೇಸಿಗೆ ಅರಮನೆ (15 ಕಿ.ಮೀ) ಲುಂಬಿನಿ ಉದ್ಯಾನಕ್ಕೆ ಹತ್ತಿರವಿರುವ ಕೆಲವು ಆಕರ್ಷಣೆಗಳಾಗಿವೆ. 

ಲುಂಬಿನಿ ಉದ್ಯಾನಗಳನ್ನು ತಲುಪುವುದು ಹೇಗೆ? ಲುಂಬಿನಿ ಗಾರ್ಡನ್ಸ್ ಬೆಂಗಳೂರು ವಿಮಾನ ನಿಲ್ದಾಣದಿಂದ 28 ಕಿ.ಮೀ ಮತ್ತು ಬೆಂಗಳೂರು ನಗರ ಕೇಂದ್ರದಿಂದ (ಮೆಜೆಸ್ಟಿಕ್) 12 ಕಿ.ಮೀ ದೂರದಲ್ಲಿದೆ. ಲುಂಬಿನಿ ಉದ್ಯಾನಗಳನ್ನು ಬೆಂಗಳೂರಿನ ಎಲ್ಲಾ ಭಾಗಗಳಿಂದ ಸಾರ್ವಜನಿಕ ಸಾರಿಗೆ ಅಥವಾ ಟ್ಯಾಕ್ಸಿ ಬಳಸಿ ತಲುಪಬಹುದಾಗಿದೆ. 

ಲುಂಬಿನಿ ಉದ್ಯಾನ ವಸತಿ: ಬೆಂಗಳೂರು ನಗರದಲ್ಲಿ ಹಲವಾರು ಹೋಟೆಲ್ ಸೌಲಭ್ಯಗಳಿವೆ.

ಅಧಿಕೃತ ವೆಬ್‌ಸೈಟ್: Check Here

Tour Location

Leave a Reply

Accommodation
Meals
Overall
Transport
Value for Money