Karnataka Tourism
GO UP

ರಾಮನಗರದಲ್ಲಿ ಬಂಡೆ ಏರುವ ಸಾಹಸ

separator
ಕೆಳಗೆ ಸ್ಕ್ರಾಲ್ ಮಾಡಿ

ರಾಮನಗರ ಜಿಲ್ಲೆಯು ಬೃಹದಾಕಾರದ  ಬಂಡೆಗಳಿಗೆ ಹೆಸರುವಾಸಿಯಾಗಿದೆ. ರಾಮನಗರದಲ್ಲಿರುವ ರಾಮದೇವರ ಬೆಟ್ಟ ಸಾಹಸವನ್ನು ಪ್ರಯತ್ನಿಸುವವವರನ್ನು  ಮತ್ತು ಪರ್ವತಾರೋಹಿಗಳನ್ನು ಆಕರ್ಷಿಸುತ್ತದೆ. ಬಂಡೆ ಆರೋಹಣ ಮತ್ತು  ಹಗ್ಗವನ್ನು ಉಪಯೋಗಿಸಿಕೊಂಡು ಹತ್ತುವುದು (ರಾಪೆಲಿಂಗ್) ಚಟುವಟಿಕೆಗಳು ಸಾಹಸದ ಅರ್ಥವನ್ನು ನೀಡುತ್ತದೆ ಮತ್ತು ಒಬ್ಬರ ತಾಳ್ಮೆ ಮತ್ತು ಫಿಟ್ನೆಸ್ ಮಟ್ಟವನ್ನು ಪರೀಕ್ಷಿಸುತ್ತವೆ.

ರಾಮನಗರದಲ್ಲಿ ರಾಕ್ ಕ್ಲೈಂಬಿಂಗ್ ಗೆ ಸಿದ್ಧತೆ ಹೇಗೆ ಮಾಡಬೇಕು :

ಹಲವಾರು ಪ್ರಯಾಣ ಕಂಪನಿಗಳು ರಾಮನಗರಕ್ಕೆ ಮಾರ್ಗದರ್ಶಿ ಪ್ರವಾಸಗಳು ಮತ್ತು  ರಾಕ್ ಕ್ಲೈಂಬಿಂಗ್ ಸಿದ್ಧತೆಗಳನ್ನು  ನಡೆಸುತ್ತವೆ. ರಾಕ್ ಕ್ಲೈಂಬಿಂಗ್ ಅನ್ನು ಏಕಾಂಗಿಯಾಗಿ ಅಥವಾ ಸಣ್ಣ ಗುಂಪುಗಳಲ್ಲಿ ತಜ್ಞರ ಸಹಾಯ ಮತ್ತು ಮೇಲ್ವಿಚಾರಣೆಯಿಲ್ಲದೆ ಮಾಡಲು ಸಾಧ್ಯವಿಲ್ಲ.  ರಾಕ್ ಕ್ಲೈಂಬಿಂಗ್ ನಂತಹ ಚಟುವಟಿಕೆಗಳಿಗೆ ಒಬ್ಬರು ಈ ಕೆಳಗಿನ ಲಿಂಕ್ ಗೆ ಸೈನ್ ಅಪ್ ಮಾಡಬಹುದು. Https://www.wandertrails.com/activities/ramanagara-trek ಪರಿಶೀಲಿಸಿ

ಗಮನಿಸಬೇಕಾದ ಅಂಶಗಳು:

  • ಮಳೆಗಾಲದಿಂದ ದೂರವಿರಿ- ಮಳೆಗಾಲ- ಮಳೆ ಮತ್ತು ಜಾರು ಬಂಡೆಗಳಿಂದಾಗಿ ಜೂನ್ ನಿಂದ ಸೆಪ್ಟೆಂಬರ್ ನಲ್ಲಿ  ರಾಕ್ ಕ್ಲೈಂಬಿಂಗ್ ಮಾಡುವುದರಿಂದ ಸೂಕ್ತವಲ್ಲ.
  • ಅನುಮತಿ ಅಗತ್ಯವಿದೆ: ರಾಮನಗರದಲ್ಲಿ ರಾಕ್ ಕ್ಲೈಂಬಿಂಗ್ ಮಾಡುವುದಕ್ಕೆ ಅರಣ್ಯ ಇಲಾಖೆಯಿಂದ ಮುಂಗಡ ಅನುಮತಿ ಅಗತ್ಯವಿದೆ. ನಿಮ್ಮ ವ್ಯವಸ್ಥಾಪಕರು ಅದನ್ನು ನಿಮಗಾಗಿ ವ್ಯವಸ್ಥೆ ಮಾಡುತ್ತಾರೆ

ರಾಮನಗರ ಬಳಿ ಭೇಟಿ ನೀಡಬೇಕಾದ ಸ್ಥಳಗಳು: ಮಾಗಡಿ(36 ಕಿ.ಮೀ), ಕನ್ವಾ ಜಲಾಶಯ (18 ಕಿ.ಮೀ), ದೊಡ್ಡ ಆಲದ ಮರ (30 ಕಿ.ಮೀ) ಮೆಲುಕೋಟೆ ಇವು ಜೊತೆಗೆ ಭೇಟಿ ನೀಡಲು ಹತ್ತಿರದ ಕೆಲವು ಆಕರ್ಷಣೆಗಳು.
ರಾಮನಗರ ತಲುಪುವುದು ಹೇಗೆ: ರಾಮನಗರ ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ಬೆಂಗಳೂರು ವಿಮಾನ ನಿಲ್ದಾಣ (100 ಕಿ.ಮೀ) ಹತ್ತಿರದ ವಿಮಾನ ನಿಲ್ದಾಣವಾಗಿದೆ. ರಾಮನಗರ ಬೆಂಗಳೂರಿನಿಂದ ರೈಲು ಮತ್ತು ರಸ್ತೆಯ ಉತ್ತಮ ಸಂಪರ್ಕ ಹೊಂದಿದೆ.
ರಾಮನಗರ ಬಳಿ ಉಳಿಯಲು ಸ್ಥಳಗಳು: ರಾಮನಗರದಲ್ಲಿ ಬಜೆಟ್ ಹೋಟೆಲ್‌ಗಳು ಲಭ್ಯವಿದೆ. ಶಿಲ್ಹಂದರ ರಾಮನಗರದಲ್ಲಿ ಉಳಿಯಲು ಒಂದು ಐಷಾರಾಮಿ ರೆಸಾರ್ಟ್ ಆಗಿದೆ. ಬೆಂಗಲೂರಿನ ಕೆಂಗೇರಿಯಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.

Tour Location

Leave a Reply

Accommodation
Meals
Overall
Transport
Value for Money