Karnataka Tourism
GO UP

ರಾಮಕೃಷ್ಣ ಆಶ್ರಮ

separator
ಕೆಳಗೆ ಸ್ಕ್ರಾಲ್ ಮಾಡಿ

ರಾಮಕೃಷ್ಣ ಆಶ್ರಮ ವು ಶ್ರೀ ರಾಮಕೃಷ್ಣ ಪರಮಹಂಸರು ಸ್ಥಾಪಿಸಿದ ಹಿಂದೂ ಮಠವಾಗಿದ್ದು ರಾಮಕೃಷ್ಣ ಮಿಷನ್‌ನ ಭಾಗವಾಗಿದೆ. ಶ್ರೀ ರಾಮಕೃಷ್ಣ ಪರಮಹಂಸರು ಅವರು 19 ನೇ ಶತಮಾನದ ಸಂತರಾಗಿದ್ದರು ಮತ್ತು  ವಿವಿಧ ಸಾಮಾಜಿಕ ಸುಧಾರಣೆಗಳನ್ನುಜಾರಿಗೆ ತಂದ ಕೀರ್ತಿಗೆ ಪಾತ್ರರಾಗಿದ್ದಾರೆ. 

ರಾಮಕೃಷ್ಣ ಆಶ್ರಮ ಸಂಘಟನೆಯು ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ನಡೆಸುತ್ತಿದೆ. ಬಸವನಗುಡಿಯಲ್ಲಿರುವ ರಾಮಕೃಷ್ಣ ಆಶ್ರಮ ಬೆಂಗಳೂರು ನಗರದ ಪ್ರಮುಖ ಆದ್ಯಾತ್ಮಿಕ ಕೇಂದ್ರವಾಗಿದೆ.

ರಾಮಕೃಷ್ಣ ಆಶ್ರಮದ ಮುಖ್ಯಾಂಶಗಳು

  • ಪೂಜೆ, ಆರತಿ ಮತ್ತು ಭಜನೆಗಳು: ಪ್ರತಿದಿನ ಬೆಳಿಗ್ಗೆ ಪೂಜೆ ನಡೆಯುತ್ತದೆ ಮತ್ತು ಸಂಜೆ ಆರತಿ ಮತ್ತು ಭಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
  • ಪ್ರವಚನ ಮತ್ತು ಉಪನ್ಯಾಸಗಳು: ರಾಮಕೃಷ್ಣ ಮಿಷನ್‌ನ ಹಿರಿಯ ಸದಸ್ಯರು ವಿವೇಕಾನಂದ ಶತಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರವಚನಗಳನ್ನು ವಾರಕ್ಕೊಮ್ಮೆ ನಡೆಸುತ್ತಾರೆ. ರಾಮಕೃಷ್ಣ ಪರಮಹಂಸರ ಜೀವನ ಮತ್ತು ಸಾಧನೆಗಳ ಬಗ್ಗೆ ತಿಳಿದುಕೊಳ್ಳಲು, ಆಧ್ಯಾತ್ಮಿಕ ಪ್ರಶ್ನೆಗಳಿದ್ದರೆ ಕೇಳಿ ಉತ್ತರ ಪಡೆಯಲು ಉತ್ತಮ ಅವಕಾಶವಾಗಿದೆ.
  • ಸತ್ಸಂಗ: ಆಧ್ಯಾತ್ಮಿಕ ಭಜನೆ, ಯೋಗ ಮತ್ತು ಪ್ರಾರ್ಥನಾ ಕಾರ್ಯಕ್ರಮಗಳು 
  • ಆಚರಣೆಗಳು: ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ, ದುರ್ಗಾ ಪೂಜೆ, ಮಹಾ ಶಿವರಾತ್ರಿ, ವಿನಾಯಕ ಚತುರ್ಥಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ರಾಮಕೃಷ್ಣ ಆಶ್ರಮ ವಿಶೇಷ ಪೂಜೆಗಳು, ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ನಡೆಸುತ್ತದೆ.

ಭೇಟಿ ನೀಡುವ ಸಮಯಗಳು: ರಾಮಕೃಷ್ಣ ಆಶ್ರಮದ ಮುಖ್ಯ ಬೆಳಿಗ್ಗೆ 5 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8.30 ರವರೆಗೆ ಸಂದರ್ಶಕರಿಗೆ ತೆರೆದಿರುತ್ತದೆ. ಕಚೇರಿ, ಗ್ರಂಥಾಲಯ ಮತ್ತು ಇತರ ಸೌಲಭ್ಯಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಸಂಜೆ 4 ರಿಂದ ಸಂಜೆ 6.30 ರವರೆಗೆ ತೆರೆದಿರುತ್ತವೆ.

ತಲುಪುವುದು ಹೇಗೆ?

ರಾಮಕೃಷ್ಣ ಆಶ್ರಮ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 40 ಕಿ.ಮೀ ಮತ್ತು ಬೆಂಗಳೂರು ನಗರ ಕೇಂದ್ರದಿಂದ (ಮೆಜೆಸ್ಟಿಕ್) 5 ಕಿ.ಮೀ ದೂರದಲ್ಲಿದೆ. ಬೆಂಗಳೂರು ಹತ್ತಿರದ ರೈಲು ನಿಲ್ದಾಣವಾಗಿದೆ. ರಾಷ್ಟ್ರೀಯ ಕಾಲೇಜು ಹತ್ತಿರದ ಮೆಟ್ರೋ ನಿಲ್ದಾಣವಾಗಿದೆ.  ಆಶ್ರಮವನ್ನು ಬೆಂಗಳೂರಿನ ಯಾವುದೇ ಭಾಗದಿಂದ ಬಸ್, ಮೆಟ್ರೋ, ಆಟೋ ಅಥವಾ ಟ್ಯಾಕ್ಸಿ ಬಳಸಿ ತಲುಪಬಹುದಾಗಿದೆ. 

ವಸತಿ: ಆಶ್ರಮ ಬಳಿ ಕೆಆರ್ ಮಾರುಕಟ್ಟೆ ಮತ್ತು ಮೆಜೆಸ್ಟಿಕ್ ಪ್ರದೇಶ (5 ಕಿ.ಮೀ ದೂರದಲ್ಲಿ) ಹಲವಾರು ಬಜೆಟ್ ಹೋಟೆಲ್‌ಗಳನ್ನು ಹೊಂದಿದೆ. ಜಯನಗರ, ರೆಸಿಡೆನ್ಸಿ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಯಲ್ಲಿ ಐಷಾರಾಮಿ ಹೋಟೆಲ್‌ಗಳು ಲಭ್ಯವಿದೆ.

ಅಧಿಕೃತ ವೆಬ್‌ಸೈಟ್: http://rkmathbangalore.org/

Tour Location

Leave a Reply

Accommodation
Meals
Overall
Transport
Value for Money