ಯೋಗವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಭಾರತೀಯ ಮೂಲದ ವ್ಯಾಯಾಮ ಮತ್ತು ಆರೋಗ್ಯ ನಿರ್ವಹಣೆಗೆ ಬಹಳ ಪರಿಣಾಮಕಾರಿಯಾದ ಚಟುವಟಿಕೆಯಾಗಿದೆ. ವೇದ ಸಾಹಿತ್ಯದಲ್ಲಿ ಯೋಗದ ಉಲ್ಲೇಖವಿದೆ ಮತ್ತು ಶತಮಾನಗಳಿಂದ ಸಂತರು ಮತ್ತು ಆಧ್ಯಾತ್ಮಿಕ ಗುರುಗಳು ಯೋಗಾಭ್ಯಾಸ ಮಾಡುತ್ತಿದ್ದ ಇತಿಹಾಸವಿದೆ. ಪಾಶ್ಚಿಮಾತ್ಯ ಜಗತ್ತಿಗೆ ಯೋಗದ ಪರಿಕಲ್ಪನೆಯನ್ನು ವಿವರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.
ಯೋಗದ ವಿವಿಧ ಆಸನಗಳನ್ನು ದೇಹದ ಒಂದು ಅಥವಾ ಹೆಚ್ಚಿನ ಭಾಗಗಳಿಗೆ ವ್ಯಾಯಾಮವಾಗುವಂತೆ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಯೋಗವನ್ನು ಅಭ್ಯಾಸ ಮಾಡುವವರು ಪ್ರತಿದಿನ ಸರಿಯಾದ ರೀತಿಯಲ್ಲಿ ಮತ್ತು ನಿರ್ದಿಷ್ಟ ಅನುಕ್ರಮದಲ್ಲಿ ಈ ಆಸನಗಳನ್ನು ಅಭ್ಯಯಿಸಬೇಕಾಗುತ್ತದೆ. ಪರಿಣಿತ ಗುರುಗಳ ಅಥವಾ ತರಬೇತುದಾರರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡುವುದು ಸೂಕ್ತ.
ಪ್ರತಿವರ್ಷ ಜೂನ್ ೨೧ ರಂದು ವಿಶ್ವ ಯೋಗ ದಿನವಾಗಿ ಆಚರಿಸಲಾಗುತ್ತದೆ.
ಜನಪ್ರಿಯ ಯೋಗಾಸನಗಳು:
- ಸೂರ್ಯ ನಮಸ್ಕಾರ (ಸೂರ್ಯನ ಎದುರು ಬೆಳಿಗ್ಗೆ 12 ವಿವಿಧ ಭಂಗಿಗಳಲ್ಲಿ ನಮಸ್ಕರಿಸುವುದು )
- ಭುಜಂಗಾಸನ
- ಸಿರ್ಸಾಸನ (ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಲ್ಲುವ ಭಂಗಿ)
- ವೀರಭದ್ರಾಸನ
- ತಾಡಾಸನ
- ಶವಾಸನ (ದೇಹದ ಎಲ್ಲಾ ಅಂಗಗಳ ವಿಶ್ರಾಂತಿಗಾಗಿ ಅಭ್ಯಾಸದ ಕೊನೆಯಲ್ಲಿ ನಡೆಸಲಾಗುವ ಆಸನ)
ಯೋಗದ ಪ್ರಮುಖ ಆರೋಗ್ಯ ಪ್ರಯೋಜನಗಳು:
- ದೈಹಿಕ ಸಾಮರ್ಥ್ಯ ವರ್ಧನೆ, ಒತ್ತಡದಿಂದ ಮುಕ್ತಿ ಮತ್ತು ವಿಶ್ರಾಂತಿಗೆ ಯೋಗ ಸಹಾಯ ಮಾಡುತ್ತದೆ.
- ಸ್ನಾಯು ಬಲವನ್ನು ಸುಧಾರಿಸುತ್ತದೆ
- ರಕ್ತ ಪರಿಚಲನೆ ಉತ್ತಮಗೊಳಿಸುತ್ತದೆ
- ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ
- ಮೂಳೆ ಮತ್ತು ಕೀಲುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ
- ಹೃದಯ ಬಡಿತವನ್ನು ಉತ್ತಮಗೊಳಿಸುತ್ತದೆ
- ಗಮನ ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ.
ಅಂತರರಾಷ್ಟ್ರೀಯ ಯೋಗ ದಿನ: ಪ್ರತಿ ವರ್ಷದ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತದೆ. ಯೋಗವನ್ನು ಉತ್ತೇಜಿಸುವ ಚಟುವಟಿಕೆಗಳನ್ನು ದೇಶಾದ್ಯಂತದ ಸಂಸ್ಥೆಗಳಲ್ಲಿ ನಡೆಸಲಾಗುತ್ತದೆ.
ಯೋಗವನ್ನು ಎಲ್ಲಿ ಕಲಿಯಬಹುದು??
ಹೆಚ್ಚಿನ ರೆಸಾರ್ಟ್‌ಗಳು ಮುಂಜಾನೆಯ ಚಟುವಟಿಕೆಯಾಗಿ ಯೋಗಾಭ್ಯಾಸದ ಆಯ್ಕೆ ನೀಡುತ್ತವೆ. ಮುಂದಿನ ಲಭ್ಯವಿರುವ ಯೋಗ ತರಗತಿಯಲ್ಲಿ ಭಾಗವಹಿಸಲು ರೆಸಾರ್ಟ್ ಅತಿಥಿಗಳು ನೋಂದಣಿ ಮಾಡಿಕೊಳ್ಳಬಹುದು ಮತ್ತು ತರಬೇತಿ ಪಡೆದ ಯೋಗ ಶಿಕ್ಷಕರಿಂದ ಯೋಗ ಕುರಿತ ಪ್ರಾಥಮಿಕ ವಿಷಯಗಳನ್ನು ಕಲಿಯಬಹುದು. ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರುಗಳಲ್ಲಿ ಅಲ್ಪಾವಧಿಯ ಯೋಗ ತರಗತಿಗಳು ಲಭ್ಯವಿದೆ. ಆರ್ಟ್ ಆಫ್ ಲಿವಿಂಗ್, ಇಶಾ ಯೋಗದಂತಹ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ತಮ್ಮದೇ ಆದ ಯೋಗ ಮಾದರಿಯ ತರಗತಿಗಳನ್ನು ನಡೆಸುತ್ತವೆ.