Mysore Palace: ಮೈಸೂರು ಅರಮನೆಯು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಭವ್ಯತೆ ಮತ್ತು ರಾಜ ಪರಂಪರೆಯ ಸಂಕೇತವಾಗಿದೆ. ಪ್ರತಿವರ್ಷ ಆರು ದಶಲಕ್ಷ ಪ್ರವಾಸಿಗರನ್ನು ಭೇಟಿಕೊಡುವ ಮೈಸೂರು ಅರಮನೆಯು ಉತ್ತರ ಪ್ರದೇಶದ ರಾಜ್ಯದ ತಾಜ್ ಮಹಲ್ ನಂತರ ಭಾರತದ ಎರಡನೇ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ.
ಇತಿಹಾಸ: ಮೈಸೂರು ಅರಮನೆಯನ್ನು 14 ನೇ ಶತಮಾನದ ಆರಂಭದಲ್ಲಿ ಒಡೆಯರ್ ರಾಜಮನೆತನ ಆಳ್ವಿಕೆಯಲ್ಲಿ ಕಟ್ಟಿಸಲಾಯಿತು. ಮೂಲ ಅರಮನೆಯನ್ನು ಮರದಿಂದ ನಿರ್ಮಿಸಲಾಗಿತ್ತು. ಒಮ್ಮೆ ಸಿಡಿಲು ಬಡಿದಾಗ(ಕ್ರಿ.ಶ. 1638 ರಲ್ಲಿ), ಒಮ್ಮೆ ಟಿಪ್ಪು ಸುಲ್ತಾನ್ ದಾಳಿಯಿಂದ (ಕ್ರಿ.ಶ. 1739 ರಲ್ಲಿ) ಮತ್ತು ಕ್ರಿ.ಶ. 1897 ರಲ್ಲಿ ಮತ್ತೊಮ್ಮೆ ಬೆಂಕಿಯಿಂದ ನಾಶವಾಯಿತು. ಪ್ರಸ್ತುತ ಮೈಸೂರು ಅರಮನೆಯುನ್ನು ನಾಲ್ಕನೆಯ ಬಾರಿ ಪುನ ನಿರ್ಮಾಣಗೊಳಿಸಲಾಗಿದೆ. ಮೈಸೂರು ಅರಮನೆಯು ಕೊನೆಯ ನವೀಕರಣವನ್ನು 1912 ರಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್ ವಿನ್ಯಾಸದನ್ವಯ ಪೂರ್ಣಗೊಳಿಸಲಾಯಿತು.
ಮೈಸೂರು ಅರಮನೆಯ ಪ್ರಮುಖ ಆಕರ್ಷಣೆಗಳು
- ಚಿನ್ನದ ಅಂಬಾರಿ: ಅಂಬಾರಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಚಿನ್ನದ ಸಿಂಹಾಸನವು 80 ಕಿ.ಗ್ರಾಂ ಚಿನ್ನದ ಹಾಳೆಗಳಿಂದ ಸಿಂಗರಿಸಿದ ಮರದ ರಚನೆಯಾಗಿದೆ.
- ಸಾರ್ವಜನಿಕ ದರ್ಬಾರ್ ಹಾಲ್: ಮಹಾರಾಜರು ತನ್ನ ಮಂತ್ರಿಗಳು ಮತ್ತು ಸಂದರ್ಶಕರನ್ನು ಭೇಟಿ ಮಾಡುವ ದೊಡ್ಡ ಪ್ರಾಂಗಣ
- ವರ್ಣಚಿತ್ರಗಳು ಮತ್ತು ಭಾವಚಿತ್ರಗಳು: ಅರಮನೆಯ ಗೋಡೆಗಳಲ್ಲಿ ದಸರಾ ಮೆರವಣಿಗೆಗಳು ಮತ್ತು ಹಿಂದಿನ ಇತರ ಅದ್ಭುತ ಕ್ಷಣಗಳನ್ನು ಚಿತ್ರಿಸುವ ವರ್ಣಚಿತ್ರಗಳಿವೆ.
- ಮದುವೆ ಮಂಟಪ: ರಾಜಮನೆತನದ ವಿವಾಹ ಮತ್ತಿತರ ಪ್ರಮುಖ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದ್ದ ಮಂಟಪ.
- ಕುಸ್ತಿ ಅಂಗಳ: ಕುಸ್ತಿ ಸ್ಪರ್ಧೆಗಳು ನಡೆವ ಅಖಾಡ
- ಪೀಠೋಪಕರಣಗಳು: ರಾಜ ಮನೆತನದವರು ಉಪಯೋಗಿಸುತ್ತಿದ್ದ ಪೀಠೋಪಕರಣಗಳನ್ನು ನೋಡಬಹುದಾಗಿದೆ.
ಸಮಯ:
- ಭೇಟಿ: ಮೈಸೂರು ಅರಮನೆಯು (Mysore Palace) ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ.
- ದೀಪಾಲಂಕಾರ: ಮೈಸೂರು ಅರಮನೆಯನ್ನು ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಸಂಜೆ 7 ರಿಂದ ರಾತ್ರಿ 8 ರವರೆಗೆ ಲಕ್ಷ ವಿದ್ಯುತ್ ದೀಪಗಳನ್ನು ಬಳಸಿ ಬೆಳಗಿಸಲಾಗುತ್ತದೆ.
- ಧ್ವನಿ ಮತ್ತು ಬೆಳಕಿನ ಪ್ರದರ್ಶನ: ವಾರದ ದಿನಗಳಲ್ಲಿ 45 ನಿಮಿಷಗಳ ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಸಂಜೆ 7 ಮತ್ತು 8 ಗಂಟೆಗೆ ನಡೆಸಲಾಗುತ್ತದೆ (ಸೋಮವಾರದಿಂದ ಬುಧವಾರ: ಕನ್ನಡ, ಗುರುವಾರದಿಂದ ಶನಿವಾರ: ಇಂಗ್ಲಿಷ್)
ತಲುಪುವುದು ಹೇಗೆ: ಮೈಸೂರು ಬೆಂಗಳೂರಿನಿಂದ 150 ಕಿ.ಮೀ ದೂರದಲ್ಲಿದೆ. ಮೈಸೂರು ವಿಮಾನ ನಿಲ್ದಾಣವು ನಗರದಿಂದ 12 ಕಿ.ಮೀ ದೂರದಲ್ಲಿದೆ. ಕೆಎಸ್‌ಆರ್‌ಟಿಸಿ ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈಬಸ್ ಸೇವೆಯನ್ನು ನಡೆಸುತ್ತಿದೆ. ಮೈಸೂರು ಕರ್ನಾಟಕದ ವಿವಿಧ ಭಾಗಗಳಿಂದ ರಸ್ತೆ ಮತ್ತು ರೈಲು ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಮೈಸೂರಿನ ಯಾವುದೇ ಭಾಗದಿಂದ ಆಟೋ, ಟ್ಯಾಕ್ಸಿ ಅಥವಾ ಟಾಂಗಾ ಬಳಸಿ ಮೈಸೂರು ಅರಮನೆಯನ್ನು ತಲುಪಬಹುದಾಗಿದೆ.
ವಸತಿ: ಮೈಸೂರು ನಗರವು ಎಲ್ಲಾ ದರ್ಜೆಯ ಹೋಟೆಲ್ ಮತ್ತು ರೆಸಾರ್ಟ್‌ಗಳನ್ನು ಹೊಂದಿದೆ.
ಅಧಿಕೃತ ವೆಬ್‌ಸೈಟ್: https://www.mysorepalace.gov.in/