ಬಿಗ್ ರಾಕ್ ಡರ್ಟ್ ಪಾರ್ಕ್ ಒಂದು ಸಾಹಸ ಮೋಟಾರ್ ಸೈಕಲ್ ಸವಾರಿ ತರಬೇತಿ ಕೇಂದ್ರವಾಗಿದ್ದು, ಕರ್ನಾಟಕದ ಪ್ರಸಿದ್ಧ ಮೋಟಾರ್ ಸೈಕಲ್ ರೇಸರ್ ಸಿ.ಎಸ್.ಸಂತೋಷ್ ನಿರ್ವಹಿಸುತ್ತಿದ್ದಾರೆ. ಇದು ಕೋಲಾರ ಪಟ್ಟಣದ ಹೊರ ವಲಯದಲ್ಲಿದೆ.
ಮೋಟಾರ್ ಸೈಕಲ್ ಸವಾರಿಯಲ್ಲಿ ಪರಿಣತಿ ಹೊಂದಬಯಸುವ ಉತ್ಸಾಹಿಗಳು ಬಿಗ್ ರಾಕ್ ಡರ್ಟ್ ಪಾರ್ಕಿಗೆ ಭೇಟಿ ಕೊಟ್ಟು ನುರಿತ ಪರಿಣಿತರಿಂದ ತರಬೇತಿ ಪಡೆಯಬಹುದಾಗಿದೆ. ಆಮದು ಮಾಡಲಾದ ಉತ್ತಮ ಗುಣಮಟ್ಟದ ಡರ್ಟ್ ಬೈಕುಗಳನ್ನು ಬಳಸಿ ಕಚ್ಚಾ ರಸ್ತೆಯಲ್ಲಿ, ರಸ್ತೆಯೇ ಇಲ್ಲದ ಪ್ರದೇಶದಲ್ಲಿ ವೇಗವಾಗಿ ಬೈಕ್ ಚಾಲನೆ ಮಾಡುವ ಸೂಕ್ಷ್ಮ ಕಲೆಯನ್ನು ಕಲಿತುಕೊಳ್ಳಬಹುದಾಗಿದೆ ಮತ್ತು ಸ್ವತಃ ಸವಾರಿ ಮಾಡಿ ಅಭ್ಯಾಸ ಮಾಡಬಹುದಾಗಿದೆ.
ಬಿಗ್ ರಾಕ್ ಡರ್ಟ್ ಪಾರ್ಕ್‌ನಲ್ಲಿ ಅರ್ಧ ದಿನಅತಿಥಿಗಳಿಗೆ ಪೂರ್ಣ ಸುರಕ್ಷತಾ ಕವಚ (ಜಾಕೆಟ್, ಶೂ ಇತ್ಯಾದಿ) ಮತ್ತು ಹೆಲ್ಮೆಟ್ ನೀಡಲಾಗುವುದು.
- ಮೊದಲು ತರಗತಿಯ ಒಳಗಡೆ ಮೋಟಾರ್‌ಸೈಕಲ್ ರೇಸಿಂಗ್- ವಿಶೇಷವಾಗಿ ಡರ್ಟ್ ಬೈಕ್‌ಗಳ- ವಿಷಯದಲ್ಲಿ ತಿಳಿದಿರಲೇ ಬೇಕಾದ ಸೂಕ್ಷ್ಮ ವಿಚಾರಗಳನ್ನು ಹೇಳಿ ಕೊಡಲಾಗುವುದು. ಸರಿಯಾಗಿ ಕುಳಿತುಕೊಳ್ಳುವ ಭಂಗಿ, ಸೂಕ್ತ ನಿಯಂತ್ರಣಕ್ಕಾಗಿ ಹ್ಯಾಂಡಲ್‌ಬಾರ್‌ಗಳನ್ನು ಹೇಗೆ ಹಿಡಿದಿಟ್ಟುಕೊಳ್ಳುವುದು, ಮೂಲೆಗಳಲ್ಲಿ ತಿರುಗುವಾಗ ಏನು ಮಾಡಬೇಕು, ಮಾಡಬಾರದು ಇತ್ಯಾದಿಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.
- ಅತಿಥಿಗಳು ಸುರಕ್ಷತಾ ಬಾಂಡ್ ಸಹಿ ಮಾಡಬೇಕಾಗುತ್ತದೆ.
- ಈಗ ಹೊರಾಂಗಣ ಅಭ್ಯಾಸದ ಸಮಯ. ಅತಿಥಿಗಳು ಹೊಂಡಗಳು, ತೀಕ್ಷ್ಣವಾದ ತಿರುವುಗಳು, ಮಿನಿ ಬೆಟ್ಟಗಳನ್ನು ಒಳಗೊಂಡ ಮಿನಿ ಟ್ರ್ಯಾಕ್‌ನಲ್ಲಿ ಡರ್ಟ್ ಬೈಕ್‌ಗಳನ್ನು ಓಡಿಸಬಹುದು. ತಜ್ಞ ತರಬೇತುದಾರರು ಗಮನಿಸಿ ಸಲಹೆಗಳನ್ನು ನೀಡುತ್ತಾರೆ.
- ನಂತರ ಕಾಡಿನಲ್ಲಿ ಸವಾರಿ ಇರುತ್ತದೆ- ನಿಮ್ಮ ಸ್ನೇಹಿತರೊಂದಿಗೆ ಡರ್ಟ್ ಬೈಕು ಸವಾರಿ ಮಾಡುವುದು, ಕಾಡಿನಲ್ಲಿ ರಸ್ತೆಯೇ ಇಲ್ಲದ ಪ್ರದೇಶದಲ್ಲಿ ಓಡಿಸುವುದು, ತಜ್ಞರಿಂದ ಮಾರ್ಗದರ್ಶನ ಪಡೆದು ತಪ್ಪುಗಳನ್ನು ತಿದ್ದಿಕೊಳ್ಳುವುದು ಉತ್ತಮ ಅನುಭವವಾಗಿರುತ್ತದೆ.
ಸಮಯ: ಬೆಳಗಿನ ತರಗತಿ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನದ ತರಗತಿ ಮಧ್ಯಾಹ್ನ 1.30 ಕ್ಕೆ ಪ್ರಾರಂಭವಾಗುತ್ತದೆ.
ಕಾದಿರಿಸುವುದು ಹೇಗೆ?
ಬಿಗ್ ರಾಕ್ ಡರ್ಟ್ ಪಾರ್ಕ್ ನಿರ್ವಾಹಕರನ್ನು ಮುಂಚಿತವಾಗಿ ಸಂಪರ್ಕಿಸಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಉತ್ತಮ. ತರಗತಿಗಳನ್ನು ಗ್ರಾಹಕರ ಮತ್ತು ತರಬೇತುದಾರರ ಲಭ್ಯತೆಯ ಆಧಾರದ ಮೇಲೆ ನಡೆಸಲಾಗುತ್ತದೆ. ವಿವರಗಳು http://www.cssantosh.com/bigrockdirtpark
ಹತ್ತಿರ: ಅಂತರಗಂಗೆ 23 ಕಿ.ಮೀ ದೂರದಲ್ಲಿದೆ.
ತಲುಪುವುದು ಹೇಗೆ?
ಬಿಗ್ ರಾಕ್ ಡರ್ಟ್ ಪಾರ್ಕ್ ಬೆಂಗಳೂರಿನಿಂದ 90 ಕಿ.ಮೀ ಮತ್ತು ಕೋಲಾರ ನಗರದಿಂದ 20 ಕಿ.ಮೀ ದೂರದಲ್ಲಿದೆ. ಬೆಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬಂಗಾರಪೇಟೆ ಹತ್ತಿರದ ರೈಲು ನಿಲ್ದಾಣ (23 ಕಿ.ಮೀ). ಬಿಗ್ ರಾಕ್ ಡರ್ಟ್ ಪಾರ್ಕ್ ತಲುಪಲು ಕೋಲಾರ / ಬಂಗಾರಪೇಟೆಯಲ್ಲಿ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.
ವಸತಿ: ಕೋಲಾರ ನಗರವು ಅನೇಕ ವಾಸ್ತವ್ಯದ ಆಯ್ಕೆಗಳನ್ನು ಹೊಂದಿದೆ.