Karnataka logo

Karnataka Tourism
GO UP

ಎಚ್‌ಎಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ

separator
ಕೆಳಗೆ ಸ್ಕ್ರಾಲ್ ಮಾಡಿ

ಎಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಭಾರತದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ವಾಯುಯಾನ ಮತ್ತು ವೈಮಾನಿಕ ತಂತ್ರಜ್ಞಾನಗಳಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಕಟಿಬದ್ಧವಾಗಿದೆ. ಬೆಂಗಳೂರಿನಲ್ಲಿರುವ ಎಚ್‌ಎಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ ಸ್ವಾತಂತ್ರ್ಯದ ನಂತರ ಭಾರತದ ವಾಯುಯಾನ ಕ್ಷೇತ್ರದಲ್ಲಿ ಆದ ವಿಕಾಸವನ್ನು ಪ್ರದರ್ಶಿಸುತ್ತದೆ. 2001 ರಲ್ಲಿ ಸ್ಥಾಪನೆಯಾದ ಎಚ್‌ಎಎಲ್ ಏರೋಸ್ಪೇಸ್ ವಸ್ತುಸಂಗ್ರಹಾಲಯವು ವಾಯುಯಾನ ಉತ್ಸಾಹಿಗಳನ್ನು ಕೈಬೀಸಿ ಕರೆಯುತ್ತದೆ. 

ಎಚ್‌ಎಎಲ್ ಏರೋಸ್ಪೇಸ್ ಮ್ಯೂಸಿಯಂನಲ್ಲಿ ಏನು ನೋಡಬಹುದು?

  • ಹಾಲ್ 1: 1940 ರಿಂದ ವಾಯುಯಾನದ ಬೆಳವಣಿಗೆಯನ್ನು ತೋರಿಸುವ ಛಾಯಾಚಿತ್ರಗಳು
  • ಹಾಲ್ 2: ವಿಮಾನ ಎಂಜಿನ್‌ನ ವಿವಿಧ ಕಾರ್ಯಗಳನ್ನು ತೋರಿಸುತ್ತದೆ. ವಿವಿಧ ವಿಮಾನ ಎಂಜಿನ್‌ಗಳ ಅರ್ಧ ಕತ್ತರಿಸಿದ (ಕಟ್ ಸೆಕ್ಷನ್) ಭಾಗವನ್ನು ಇಲ್ಲಿ ಕಾಣಬಹುದು
  • ಹೊರಾಂಗಣ ಪ್ರದರ್ಶನಗಳು: ಮಿಗ್ -21, ಕಿರಣ್, ಅಜಿತ್, ಲಕ್ಷ್ಯ ಮತ್ತು ಇತರ ಪ್ರಮುಖ ವಿಮಾನಗಳು ಪ್ರದರ್ಶನಕ್ಕಿಡಲಾಗಿದೆ
  • ಗ್ರಂಥಾಲಯ: ವಾಯುಯಾನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಮತ್ತು ಉಪಯುಕ್ತ ಪುಸ್ತಕಗಳ ಅಪರೂಪದ ಸಂಗ್ರಹವನ್ನು ಹೊಂದಿರುವ ಗ್ರಂಥಾಲಯ
  • ಸಿಮ್ಯುಲೇಟರ್: ಪೈಲಟ್ ಸೀಟಿನಲ್ಲಿ ಕುಳಿತು ಹಕ್ಕಿಯಂತೆ ಹಾರುವ ಅನುಭವವನ್ನು ಸಿಮ್ಯುಲೇಟರ್ ನೀಡುತ್ತದೆ.
  • ಉದ್ಯಾನಗಳು: ಗುಲಾಬಿ ಉದ್ಯಾನ, ಮಕ್ಕಳ ಆಟದ ಪ್ರದೇಶ, ಗಿಡಮೂಲಿಕೆ ಉದ್ಯಾನ ಮ್ಯೂಸಿಯಂ ಕ್ಯಾಂಪಸ್‌ನಲ್ಲಿ ಲಭ್ಯವಿದೆ.

ಸಮಯಗಳು: ಎಚ್‌ಎಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

ತಲುಪುವುದು ಹೇಗೆ? ಎಚ್‌ಎಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿದೆ, ಬೆಂಗಳೂರು ನಗರ ಕೇಂದ್ರದಿಂದ (ಮೆಜೆಸ್ಟಿಕ್) 17 ಕಿ.ಮೀ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 40 ಕಿ.ಮೀ. ದೂರದಲ್ಲಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣವು ಎಚ್‌ಎಎಲ್ ಏರೋಸ್ಪೇಸ್ ವಸ್ತುಸಂಗ್ರಹಾಲಯವನ್ನು ಪ್ರವೇಶಿಸಲು ಹತ್ತಿರದ ಮೆಟ್ರೋ ಆಗಿದೆ. ಹಳೆಯ ವಿಮಾನ ನಿಲ್ದಾಣ ರಸ್ತೆಯನ್ನು ಬೆಂಗಳೂರಿನ ಯಾವುದೇ ಭಾಗದಿಂದ ಮೆಟ್ರೋ, ಬಸ್, ಆಟೋ ಅಥವಾ ಟ್ಯಾಕ್ಸಿ ಬಳಸಿ ತಲುಪಬಹುದು.

ವಸತಿ: ಲೀಲಾ ಪ್ಯಾಲೇಸ್ ಎಚ್‌ಎಎಲ್ ಏರೋಸ್ಪೇಸ್ ಮ್ಯೂಸಿಯಂನಿಂದ 6 ಕಿ.ಮೀ ದೂರದಲ್ಲಿರುವ ಐಷಾರಾಮಿ ಹೋಟೆಲ್ ಆಗಿದೆ. ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.

 

Tour Location

 

Leave a Reply

Accommodation
Meals
Overall
Transport
Value for Money