GO UP
Image Alt

ಬಾಳೆಹಣ್ಣಿನ ಬನ್

separator
  /  ಬಾಳೆಹಣ್ಣಿನ ಬನ್

ಮಂಗಳೂರು ಬಾಳೆಹಣ್ಣಿನ ಬನ್ ಕರಾವಳಿ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ತಿನಿಸು. ಬಾಳೆಹಣ್ಣಿನ ಬನ್ ಅನ್ನು ಮಾಗಿದ ಬಾಳೆಹಣ್ಣು, ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಕರಾವಳಿ ಕರ್ನಾಟಕಕ್ಕೆ ಭೇಟಿ ನೀಡಿದಾಗ ಬಾಳೆಹಣ್ಣಿನ ಬನ್ ರುಚಿ ನೋಡಬಹುದಾಗಿದೆ

ಬಾಳೆಹಣ್ಣಿನ ಬನ್ ಅನ್ನು ಹೇಗೆ ತಯಾರಿಸಲಾಗುತ್ತದೆ?

ಸಂಪೂರ್ಣವಾಗಿ ಮಾಗಿದ (ಗಳಿತ) ಬಾಳೆಹಣ್ಣನ್ನು ಆಯ್ಕೆ ಮಾಡಿ, ಸಕ್ಕರೆ, ಮೊಸರು, ಉಪ್ಪು, ಅಡಿಗೆ ಸೋಡಾ ಜೀರಿಗೆ ಮತ್ತು ಮೈದಾ ಹಿಟ್ಟನ್ನು ಚೆನ್ನಾಗಿ ಮಿಶ್ರ ಮಾಡಿ ರಾತ್ರಿಯಿಡಿ ಹುದುಗಿಸಲಾಗುತ್ತದೆ.

ಮರುದಿನ ಹಿಟ್ಟಿನ ಸಣ್ಣ ಭಾಗಗಳನ್ನು ಬಿಸಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಬನ್ ಕಂದು ಬಣ್ಣಕ್ಕೆ ತಿರುಗಿದ ನಂತರ ಬಾಣಲೆಯಿಂದ ತೆಗೆದು ಸೋಸಲಾಗುತ್ತದೆ.

ಆಲೂಗಡ್ಡೆ ಮತ್ತು ಕ್ಯಾರೆಟ್‌ನಿಂದ ತಯಾರಿಸಿದ ಸಾಗು, ತೆಂಗಿನಕಾಯಿ ಚಟ್ನಿ ಬಾಳೆಹಣ್ಣಿನ ಬನ್ ಅನ್ನು ನಂಜಿಗೊಳ್ಳಲು ಉತ್ತಮವಾಗಿರುತ್ತದೆ ‌

ಬಾಳೆಹಣ್ಣು ಬನ್ ಎಲ್ಲಿ ಸಿಗುತ್ತದೆ?

ಕರಾವಳಿ ಕರ್ನಾಟಕ ನಗರಗಳಾದ ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ  ಮುಂತಾದ ಕಡೆಯ ಹೆಚ್ಚಿನ ಉಪಾಹಾರ ಗೃಹಗಳು ಮತ್ತು ಬೇಕರಿಗಳಲ್ಲಿ ಬಾಳೆಹಣ್ಣಿನ ಬನ್  ಸುಲಭವಾಗಿ ಸಿಗುತ್ತದೆ. ಇತರ ನಗರಗಳಲ್ಲಿ ಮಂಗಳೂರು ಬಾಳೆಹಣ್ಣು ಬನ್  ಸಿಗುವ ಹತ್ತಿರದ  ಉಪಾಹಾರ ಗೃಹಗಳನ್ನು ಕಂಡು ಹಿಡಿಯಲು ಆಹಾರ ವಿತರಣಾ ಆಪ್ಲಿಕೇಷನ್ ಗಳನ್ನು ಬಳಸಬಹುದಾಗಿದೆ.