Karnataka Tourism
GO UP

Archive

ಹೋಳಿಗೆ ಎಂದೂ ಕರೆಯಲ್ಪಡುವ ಒಬ್ಬಟ್ಟು, ಹಬ್ಬಗಳು ಮತ್ತು ವಿಶೇಷ ಕಾರ್ಯಕ್ರಮಗಳ ಸಮಯ ತಯಾರಿಸಲ್ಪಡುವ ಕರ್ನಾಟಕದ ಸಿಹಿ ಖಾದ್ಯವಾಗಿದೆ.

ಮಜ್ಜಿಗೆ ಕರ್ನಾಟಕದಲ್ಲಿದ್ದಾಗ ನೀವು ರುಚಿ ನೋಡಲೇಬೇಕಾದ ತಂಪು ಪಾನೀಯವಾಗಿದೆ. ಮಜ್ಜಿಗೆಯು ಮೊಸರಿನ ತೆಳುಗೊಳಿಸಿದ ರೂಪವಾಗಿದ್ದು ಉಪ್ಪು ಮತ್ತು ಹಸಿರು ಮೆಣಸಿನಕಾಯಿಯ ಸೇರಿಸಿ ಸ್ವಲ್ಪ ಉಪ್ಪು, ಸ್ವಲ್ಪ ಖಾರದ ರುಚಿ ನೀಡಿ ತಯಾರಿಸಲಾಗುತ್ತದೆ. ಬಿಸಿಲಿನಲ್ಲಿ ಅಲೆದು ಬಂದವರಿಗೆ ಮಜ್ಜಿಗೆ ನೈಸರ್ಗಿಕ ತಂಪು ಪಾನೀಯವಾಗಿದೆ.

ಕಡುಬು ಕರ್ನಾಟಕದ ಜನಪ್ರಿಯ ಉಪಹಾರ ಭಕ್ಷ್ಯ. ಇಡ್ಲಿ ಹಿಟ್ಟನ್ನು ಹಲಸಿನ ಎಲೆಗಳಿಂದ ಮಾಡಿದ ಲೋಟ ‌(ಹಲಸಿನ ಕೊಟ್ಟೆ)ಗಳಲ್ಲಿ ಬೇಯಿಸಲಾಗುತ್ತದೆ. ಇಡ್ಲಿಯ ರುಚಿಯೊಂದಿಗೆ ಹಲಸಿನ ಎಲೆಯ ಸತ್ವ, ಪರಿಮಳ ಹೀರಿಕೊಂಡು ಕಡುಬು ತಯಾರಾಗುತ್ತದೆ.

ಹಾಲುಬಾಯಿ ಕರ್ನಾಟಕದ ವಿಶಿಷ್ಟ ಸಿಹಿ ತಿನಿಸು. ಹಾಲುಬಾಯಿ ಇಡ್ಲಿ / ದೋಸೆ ತಯಾರಿಸಲು ಬಳಸುವ ಅಕ್ಕಿಯಿಂದ ತಯಾರಿಸುವ ಖಾದ್ಯ. ಹಾಲುಬಾಯಿಯನ್ನು ಹಲವಾರು ಮನೆಗಳಲ್ಲಿ ಹಬ್ಬದ ಸಿಹಿ ಅಥವಾ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲು ತಯಾರಿಸಲಾಗುತ್ತದೆ.

ಪಡ್ಡು ಎಂದೂ ಕರೆಯಲ್ಪಡುವ ಗುಳಿಯಪ್ಪ ದಕ್ಷಿಣ ಭಾರತದಲ್ಲಿ ಜನಪ್ರಿಯ ಖಾದ್ಯವಾಗಿದ್ದು, ಇದನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಪನಿಯರಂ (ತಮಿಳುನಾಡು) ಮತ್ತು ಪೊಂಗನಾಲು (ತೆಲಂಗಾಣ, ಆಂಧ್ರ ಪ್ರದೇಶ) ಇತರ ಜನಪ್ರಿಯ ಹೆಸರುಗಳು.

ಕರ್ನಾಟಕವು ಕಾಫಿ ಬೀಜಗಳ ದೊಡ್ಡ ರಫ್ತುದಾರ ರಾಜ್ಯವಾಗಿದೆ. ಚಿಕ್ಕ ಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅತ್ಯುತ್ತಮ ಕಾಫಿಯನ್ನು ಬೆಳೆಯಲಾಗುತ್ತದೆ. ಕನ್ನಡಿಗರಿಗೆ ಕಾಫಿ ಪ್ರಮುಖ ಪಾನೀಯವಾಗಿದೆ. ಫಿಲ್ಟರ್ ಕಾಫಿ ಕಾಫಿಯ ಅತ್ಯಂತ ಜನಪ್ರಿಯ ರೂಪವಾಗಿದೆ.

ಚಿತ್ರಾನ್ನ ಕರ್ನಾಟಕದ ಜನಪ್ರಿಯ ಖಾದ್ಯ. ಚಿತ್ರಾನ್ನ ತಯಾರಿಸಲು ಸುಲಭ ಮತ್ತು ಅತ್ಯಂತ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದುದರಿಂದ ಚಿತ್ರಾನ್ನದ ಬಳಕೆ ಹೆಚ್ಚು.