Karnataka logo

Karnataka Tourism
GO UP
Haalbai

ಹಾಲುಬಾಯಿ

separator
  /  ಹಾಲುಬಾಯಿ

ಹಾಲುಬಾಯಿ ಕರ್ನಾಟಕದ ವಿಶಿಷ್ಟ ಸಿಹಿ ತಿನಿಸು. ಹಾಲುಬಾಯಿ  ಇಡ್ಲಿ / ದೋಸೆ ತಯಾರಿಸಲು ಬಳಸುವ ಅಕ್ಕಿಯಿಂದ ತಯಾರಿಸುವ ಖಾದ್ಯ.  ಹಾಲುಬಾಯಿಯನ್ನು ಹಲವಾರು ಮನೆಗಳಲ್ಲಿ ಹಬ್ಬದ ಸಿಹಿ ಅಥವಾ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲು ತಯಾರಿಸಲಾಗುತ್ತದೆ.

ಹಾಲುಬಾಯಿ ಅನ್ನು ಹೇಗೆ ತಯಾರಿಸಲಾಗುತ್ತದೆ?

ಇಡ್ಲಿ / ದೋಸೆ ಅಕ್ಕಿಯನ್ನು ಮೃದುಗೊಳಿಸಲು ಕೆಲವು ಗಂಟೆಗಳ ಕಾಲ ನೆನೆಸಿ, ನಂತರ ರುಬ್ಬಿ ಹಿಟ್ಟು ಪಡೆಯಲಾಗುತ್ತದೆ.

ಈ ಹಿಟ್ಟನ್ನು  ತೆಂಗಿನ ಹಾಲಿನೊಂದಿಗೆ ಬೆರೆಸಿ ನಂತರ ತುಪ್ಪ ಮತ್ತು ಬೆಲ್ಲವನ್ನು ಸೇರಿಸಲಾಗುತ್ತದೆ ಈ  ಮಿಶ್ರಣವನ್ನು ಹದವಾಗಿ ಕಾಯಿಸಿ ದ್ರವ ರೂಪದಿಂದ ಘನ ರೂಪಕ್ಕೆ ತರಲಾಗುತ್ತದೆ. ಈ ಹಂತದಲ್ಲಿ ಏಲಕ್ಕಿ, ಲವಂಗ ಮುಂತಾದವುಗಳನ್ನು ಸೇರಿಸಿ ರುಚಿ ಹೆಚ್ಚಿಸಬಹುದಾಗಿದೆ. ಚೆನ್ನಾಗಿ ಕಾದ ನಂತರ ಸಮವಾಗಿ ಹರಡಿ ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಲಾಗುತ್ತದೆ. ಗೋಡಂಬಿ ಅಥವಾ ಬಾದಾಮಿ ತುಂಡನ್ನು ಹಾಲುಬಾಯಿಯ  ಮೇಲೆ ಜೋಡಿಸಬಹುದು.

ಹಾಲುಬಾಯಿಯಲ್ಲಿ ಬಳಸುವ ಬೆಲ್ಲ ನೈಸರ್ಗಿಕವಾಗಿರುವುದರಿಂದ ಸಕ್ಕರೆ ಖಾಯಿಲೆ  ಹೊಂದಿರುವವರೂ ಸಹ ಹಾಲುಬಾಯಿಯನ್ನು ಆತಂಕವಿಲ್ಲದೆ ತಿನ್ನಬಹುದಾಗಿದೆ. 

ಹಾಲುಬಾಯಿ ಎಲ್ಲಿ ಸಿಗುತ್ತದೆ?

ತೆಂಗಿನ ಹಾಲಿನ ಬಳಕೆಯಿಂದಾಗಿ ಹಾಲುಬಾಯಿ ಬೇಗ ಹಾಳಾಗುತ್ತದೆ.  ಆದ್ದರಿಂದ ಇದನ್ನು ಉಪಹಾರ ಗೃಹಗಳು ಅಥವಾ ಬೇಕರಿಗಳಲ್ಲಿ ಸಂಗ್ರಹಿಸಿ ಇಡುವುದಿಲ್ಲ.  ಮುಂಚಿತವಾಗಿ ತಿಳಿಸಿದರೆ ಮಾಡಿದರೆ ತಯಾರಿಸಿ ಕೊಡಬಹುದು. ಹಾಲುಬಾಯಿ ಎಲ್ಲಿ ಸಿಗುತ್ತದೆ ಎಂದು ತಿಳಿಯಲು ನಿಮ್ಮ ಅತಿಥೇಯರು ಸಹಾಯ ಮಾಡಬಹುದು.