ಮಸಾಲೆ ದೋಸೆಯ ಇನ್ನೊಂದು ಜನಪ್ರಿಯ ವಿಧವಾಗಿದೆ ಮೈಸೂರು ಮಸಾಲೆ ದೋಸೆ. ಒಳಭಾಗದಲ್ಲಿ ಹಚ್ಚಿದ ಕೆಂಪು ಮೆಣಸು-ಬೆಳ್ಳುಳ್ಳಿ ಚಟ್ನಿಯೊಂದಿಗೆ ಮೈಸೂರು ಮಸಾಲೆ ದೋಸೆ ಸಾಮಾನ್ಯ ಮಸಾಲೆ ದೋಸೆಯಂತೆಯೇ ಇರುತ್ತದೆ.
ಮೈಸೂರು ಮಸಾಲೆ ದೋಸೆಯನ್ನು ಹೇಗೆ ತಯಾರಿಸಲಾಗುತ್ತದೆ:
ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಕೆಲವು ಗಂಟೆಗಳವರೆಗೆ ನೆನೆ ಹಾಕಿ ಅದನ್ನು ನುಣ್ಣಗೆ ರುಬ್ಬಿ ಹುದುಗು ಬರಲು ರಾತ್ರಿಪೂರ್ತಿ ಬಿಡಿ. ದೋಸೆ ಹಿಟ್ಟು ಸಿದ್ಧವಾಗುತ್ತದೆ. ದೋಸೆ ಸಿದ್ಧ ಮಾಡುವ ಮುನ್ನ ಹಿಟ್ಟಿಗೆ ಉಪ್ಪು ಸೇರಿಸಲಾಗುತ್ತದೆ. ಕೆಂಪು ಮೆಣಸು ಮತ್ತು ಬೆಳ್ಳುಳ್ಳಿಯನ್ನು ಪ್ರತ್ಯೇಕವಾಗಿ ಬಳಸಿ ಚಟ್ನಿ ಸಿದ್ಧಪಡಿಸಲಾಗುತ್ತದೆ ಇದರೊಂದಿಗೆ ಹಿಸುಕಿದ ಆಲೂಗಡ್ಡೆ ಇರುತ್ತದೆ. ದೋಸೆ ಹಿಟ್ಟನ್ನು ವೃತ್ತಾಕಾರದ ಪ್ಯಾನ್‌ನಲ್ಲಿ ಹುಯ್ದು ತೆಳುವಾಗಿ ಹರಡಿಸಿ ಕಂದು ಬಣ್ಣ ಬರುವವರೆಗೆ ಬಿಸಿ ಮಾಡಲಾಗುತ್ತದೆ. ಒಳಭಾಗಕ್ಕೆ (ಬಿಳಿ ಬಣ್ಣ) ಮೆಣಸು-ಬೆಳ್ಳುಳ್ಳಿ ಚಟ್ನಿಯನ್ನು ಹಚ್ಚಲಾಗುತ್ತದೆ, ಆಲೂಗಡ್ಡೆ ಪಲ್ಯವನ್ನು ಸೇರಿಸಲಾಗುತ್ತದೆ ಮತ್ತು ದೋಸೆಯನ್ನು ಮಡಿಚಲಾಗುತ್ತದೆ. ಬಡಿಸಲು ಮೈಸೂರು ಮಸಾಲೆ ದೋಸೆ ಸಿದ್ಧವಾಗಿದೆ.
ಯಾವುದರೊಂದಿಗೆ ಬಡಿಸಲಾಗುತ್ತದೆ:
ಸಣ್ಣ ತುಂಡು ಬೆಣ್ಣೆಯನ್ನು ಮೈಸೂರು ಮಸಾಲೆ ದೋಸೆಯ ಮೇಲ್ಭಾಗದಲ್ಲಿ ಇರಿಸಲಾಗುತ್ತದೆ. ತೆಂಗಿನ ಕಾಯಿ ಚಟ್ನಿ, ಪುದೀನಾ ಚಟ್ನಿ ಮತ್ತು ಸಾಂಬಾರ್ ಅನ್ನು ಮೈಸೂರು ಮಸಾಲೆ ದೋಸೆಯೊಂದಿಗೆ ಹೆಚ್ಚಾಗಿ ನೀಡಲಾಗುತ್ತದೆ.
ಮೈಸೂರು ಮಸಾಲೆ ದೋಸೆ ಎಲ್ಲೆಲ್ಲಿ ದೊರೆಯುತ್ತದೆ:
ಕರ್ನಾಟಕದ ಹೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ನಿರ್ದಿಷ್ಟವಾಗಿ ಬೆಂಗಳೂರು-ಮೈಸೂರು ಪ್ರದೇಶದಲ್ಲಿ ಮೈಸೂರು ಮಸಾಲೆ ದೋಸೆಯನ್ನು ಉಪಹಾರ ಮತ್ತು ರಾತ್ರಿಯೂಟಕ್ಕೆ ನೀಡಲಾಗುತ್ತದೆ. ಮೈಸೂರು ಮಸಾಲ ದೋಸೆಯನ್ನು ನೀಡುವ ಹತ್ತಿರದ ರೆಸ್ಟೋರೆಂಟ್‌ಗಳನ್ನು ಕಂಡುಹಿಡಿಯಲು ಆಹಾರ ವಿತರಣಾ ಅಪ್ಲಿಕೇಶನ್‌ಗಳನ್ನು ಬಳಸಬಹುದು. ನಾಲ್ಕು ಜನರಿರುವ ಕುಟುಂಬದವರಿಗೆ ಒಂದು ದೋಸೆ ಸಾಕಾಗುವಂತೆ ಕೆಲವೊಂದು ರೆಸ್ಟೋರೆಂಟ್‌ಗಳು ಮೈಸೂರು ಮಸಾಲೆ ದೋಸೆಯನ್ನು ಹೆಚ್ಚುವರಿ ದೊಡ್ಡ ಗಾತ್ರದಲ್ಲಿ ನೀಡುತ್ತವೆ.