Karnataka Tourism
GO UP
Image Alt

ಧಾರವಾಡ ಪೇಡ

separator
  /  ಧಾರವಾಡ ಪೇಡ

ಧಾರವಾಡ ಪೇಡ ಉತ್ತರ ಕರ್ನಾಟಕದ ಧಾರವಾಡ ನಗರದಲ್ಲಿ ಪರಿಚಯಿಸಲ್ಪಟ್ಟ ರುಚಿಕರವಾದ ಸಿಹಿ ತಿಂಡಿ. ಧಾರವಾಡ ಪೇಡ 175 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಜಿಐ (ಭೂವೈಜ್ಞಾನಿಕ ಗುರುತಿನ) ಟ್ಯಾಗ್ ಅನ್ನು ಪಡೆದಿದೆ. ಜಿಐ ಮುದ್ರೆ ಆಹಾರದ ಭೌಗೋಳಿಕ ಮೂಲವನ್ನು ಧೃಡೀಕರಿಸುತ್ತದೆ. 

ಧಾರವಾಡ ಪೇಡವನ್ನು ಹೇಗೆ ತಯಾರಿಸಲಾಗುತ್ತದೆ?

ಪನೀರ್, ಹಾಲು ಮತ್ತು ಸಕ್ಕರೆ ಧಾರವಾಡ ಪೇಡ ಮುಖ್ಯ ಪದಾರ್ಥಗಳಾಗಿವೆ. ಧಾರವಾಡ ಪೇಡದಲ್ಲಿ ಬಳಸುವ ಹಾಲನ್ನು ಧಾರವಾಡದ ಎಮ್ಮೆಗಳಿಂದ ಸಂಗ್ರಹಿಸಲಾಗುತ್ತದೆ, ಧಾರವಾಡ ಪೇಡವು ತನ್ನ ವಿಶಿಷ್ಟ ರುಚಿಯನ್ನು ಈ ಎಮ್ಮೆಯ ಹಾಲಿನಿಂದ ಪಡೆಯುವುದರಿಂದ ಸಾಮಾನ್ಯ ಹಸುವಿನ ಹಾಲು ಬಳಸಿ ಧಾರವಾಡ ಪೇಡದ ರುಚಿಯನ್ನು ನಕಲು ಮಾಡಲು ಕಷ್ಟವಾಗುತ್ತದೆ. ತೇವಾಂಶವನ್ನು ಹೋಗಲಾಡಿಸಲು ಪನೀರ್ ಅನ್ನು ತುಂಡುಗಳಾಗಿ ಕತ್ತರಿಸಿ ಮಧ್ಯಮ ಜ್ವಾಲೆಯ ಮೇಲೆ ಕಾಯಿಸಲಾಗುತ್ತದೆ. ತುಪ್ಪ, ಸಕ್ಕರೆ ಮತ್ತು ಹಾಲಿನೊಂದಿಗೆ ಬೆರೆಸಿ ಬಣ್ಣ ಕಂದು ಬಣ್ಣ ಬರುವವರೆಗೆ ಸಂಸ್ಕರಿಸಲಾಗುತ್ತದೆ. ಈ ಮಿಶ್ರಣವನ್ನು ಬ್ಲೆಂಡರ್ ಬಳಸಿ ಸಣ್ಣ ತುಂಡುಗಳಾಗಿ ಪುಡಿಮಾಡಲಾಗುತ್ತದೆ. ಪುಡಿಮಾಡಿದ ಪನೀರ್-ಹಾಲು-ಸಕ್ಕರೆ ಮಿಶ್ರಣವನ್ನು ಅಪೇಕ್ಷಣೀಯ ಆಕಾರ ನೀಡಿ ಬಾಣಲೆಯಲ್ಲಿ ಬಿಸಿಮಾಡಲಾಗುತ್ತದೆ. ಪರಿಮಳಕ್ಕಾಗಿ ಏಲಕ್ಕಿ ಸೇರಿಸಬಹುದಾಗಿದೆ. ಹೀಗೆ ಸಿದ್ಧವಾದ ಧಾರವಾಡ ಪೇಡವನ್ನು ಬಿಳಿ ಸಕ್ಕರೆ ಪುಡಿಯಲ್ಲಿ ಹೊರಳಾಡಿಸಿದರೆ ಧಾರವಾಡ ಪೇಡ ತಿನ್ನಲು/ಮಾರಲು ಸಿದ್ಧ. 

ಧಾರವಾಡ ಪೇಡವನ್ನು ಎಲ್ಲಿ ಸವಿಯಬಹುದು?

ಧಾರವಾಡ ಪೇಡವನ್ನು ಖರೀದಿಸಲು ಅತ್ತ್ಯುತ್ತಮ ಸ್ಥಳವೆಂದರೆ ಉತ್ತರ ಕರ್ನಾಟಕದ ಧಾರವಾಡ ನಗರ. ಧಾರವಾಡವು ಬೆಂಗಳೂರಿನ ವಾಯುವ್ಯಕ್ಕೆ 440 ಕಿ.ಮೀ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣವಾಗಿದೆ (ಧಾರವಾಡದಿಂದ 25 ಕಿ.ಮೀ). ಧಾರವಾಡಕ್ಕೆ  ರೈಲು ಮತ್ತು ರಸ್ತೆಯ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಿಗೆ ಉತ್ತಮ ಸಂಪರ್ಕವಿದೆ. ಧಾರವಾಡ ಪೇಡ ಕರ್ನಾಟಕದ ಇತರ ಭಾಗಗಳಲ್ಲಿನ ಹಲವಾರು ಬೇಕರಿಗಳು ಮತ್ತು ಸಿಹಿ ತಿನಿಸು ಅಂಗಡಿಗಳಲ್ಲಿ ಸಹ ಲಭ್ಯವಿದೆ.