Karnataka Tourism
GO UP
Tambuli

ತಂಬುಳಿ

separator
  /  ತಂಬುಳಿ

ತಂಬುಳಿ  ಕರ್ನಾಟಕದ ಹಿತವಾದ, ಆರೋಗ್ಯಕರ ಮೊಸರು ಆಧಾರಿತ ಭಕ್ಷ್ಯವಾಗಿದೆ. ಊಟದ ಸಮಯದಲ್ಲಿ ಹೆಚ್ಚಾಗಿ ಸಾಂಬಾರ್  ಅಥವಾ ಸಾರಿನ   ಮೊದಲು ತಂಬುಳಿಯನ್ನು ಬಡಿಸಲಾಗುತ್ತದೆ. ಇದನ್ನು ಅನ್ನದೊಂದಿಗೆ  ಸೇವಿಸಲಾಗುತ್ತದೆ .

ತಂಬುಳಿಯ ವಿಧಗಳು

ಉರುಗ, ದೊಡ್ಡಪತ್ರೆ, ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಜೀರಾ, ಮೆಂತೆ  (ಮೆಂತ್ಯ ಬೀಜಗಳು), ಕೆಲವೊಂದು ತರಕಾರಿ ತಿರುಳುಗಳು (ಉದಾಹರಣೆಗೆ ಸೌತೆಕಾಯಿ, ಸೋರೆಕಾಯಿ, ಪಡುವಲಕಾಯಿ, ಕುಂಬಳಕಾಯಿ ಇತ್ಯಾದಿ), ಪಾಲಕ್, ಬಸಳೆ ಸೊಪ್ಪು ,ಕೊತ್ತಂಬರಿ   ಸೊಪ್ಪು, ಕರಿಬೇವಿನ ಎಲೆಗಳಿಂದ ತಂಬುಳಿಯನ್ನು ತಯಾರಿಸಬಹುದು.

ತಂಬುಳಿ ಯನ್ನು ಹೇಗೆ ತಯಾರಿಸಲಾಗುತ್ತದೆ?

ಉರುಗ/ ದೊಡ್ಡಪತ್ರೆ ಎಲೆಗಳನ್ನು ಹಸಿ / ಒಣ  ಮೆಣಸಿನಕಾಯಿ , ಜೀರಿಗೆಯ ಜೊತೆಗೆ ಸ್ವಲ್ಪ ಬಿಸಿ ಮಾಡಿ ತೆಂಗಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸರ್ ಗ್ರೈಂಡರ್ ಬಳಸಿ  ನುಣ್ಣಗೆ ಅರೆಯಲಾಗುತ್ತದೆ. ಈ ಮಿಶ್ರಣಕ್ಕೆ ಮೊಸರು ಬೆರೆಸಿದರೆ ಚೆನ್ನಾಗಿ ಕಲಸಿದರೆ ತಂಬುಳಿ ಸೇವಿಸಲು ಸಿದ್ಧ. ಉತ್ತಮ ಸುವಾಸನೆ ಮತ್ತು ರುಚಿಗೆ ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ ಇತ್ಯಾದಿಗಳನ್ನು ಎಂದೆರಡು  ಎರಡು ಚಮಚ ಎಣ್ಣೆಯಲ್ಲಿ ಹುರಿದು ಒಗ್ಗರಣೆ ಹಾಕಬಹುದು. ತಂಬುಳಿಗೆ ಬಳಸುವ ಮುಖ್ಯ ಪದಾರ್ಥವನ್ನು  ಅವಲಂಬಿಸಿ ತಯಾರಿಸುವ ವಿಧಾನ ಸ್ವಲ್ಪ ಬದಲಾಗಬಹುದು. 

ತಂಬುಳಿಯನ್ನು ಅನ್ನದೊಂದಿಗೆ ಬೆರೆಸಿ ಉಣ್ಣುವುದು ಉತ್ತಮ. ಹೆಚ್ಚಾಗಿ ಹಬ್ಬದ ಊಟಗಳು ಹಾಗೂ ಮುಖ್ಯ  ಸಮಾರಂಭಗಳಲ್ಲಿ ತಂಬುಳಿಯನ್ನು ಜೀರ್ಣಕಾರಕವಾಗಿ ಸಾರು ಅಥವಾ ಸಾಂಬಾರ್‌ನಂತಹ ಮುಖ್ಯ ಖಾದ್ಯದ ಮೊದಲು ಬಡಿಸಲಾಗುತ್ತದೆ .

ತಂಬುಳಿಯು ಆರೋಗ್ಯವರ್ಧಕ ಸತ್ವಗಳಿರುವ ಎಲೆಗಳು ಅಥವಾ ಇತರ ನೈಸರ್ಗಿಕ  ಪದಾರ್ಥಗಳಿಂದ ತಯಾರಿಸಲ್ಪಟ್ಟಿರುವುದರಿಂದ ಔಷಧೀಯ ಗುಣಗಳನ್ನು ಹೊಂದಿದೆ ಎಂಬ ನಂಬಿಕೆಯಿದೆ.  

ತಂಬುಳಿ ಎಲ್ಲಿ  ಲಭ್ಯವಿದೆ ?

ತಂಬುಳಿ ಪ್ರತ್ಯೇಕವಾಗಿ  ಖರೀದಿಗೆ ಸಿಗುವ ಸಾಧ್ಯತೆ ಕಡಿಮೆ. ಕೆಲವು ರೆಸ್ಟೋರೆಂಟ್‌ಗಳು ತಮ್ಮ ತಟ್ಟೆ ಊಟದ  ಭಾಗವಾಗಿ ಒಂದು ಕಪ್ ತಂಬುಳಿಯನ್ನು ನೀಡುತ್ತವೆ.