Karnataka logo

Karnataka Tourism
GO UP
Neer dosa cuisine

ನೀರ್ ದೋಸೆ

separator
  /  ನೀರ್ ದೋಸೆ

ದಕ್ಷಿಣ ಭಾರತದ ಜನಪ್ರಿಯ ಉಪಹಾರಗಳಲ್ಲಿ ದೋಸೆಯೂ ಒಂದು. ದೋಸೆಯನ್ನು ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ರುಬ್ಬಿದ ನಂತರ, ರಾತ್ರಿ ಇಡೀ ಅದನ್ನು ಇಟ್ಟು ಬೆಳಿಗ್ಗೆ ಬಿಸಿ ಹಂಚಿನ ಮೇಲೆ ವೃತ್ತಾಕಾರದಲ್ಲಿ ಹಾಕಿ ಬೇಯಿಸಲಾಗುತ್ತದೆ.

ನೀರ್ ದೋಸೆಯ ಬಗ್ಗೆ:

ದೋಸೆಯಲ್ಲಿಯೂ ಸಹ ಹಲವಾರು ತರಹದ ದೋಸೆಗಳನ್ನು ನೋಡಬಹುದು, ಉದಾಹರಣೆಗೆ: ಮಸಾಲೆ ದೋಸೆ (ದೋಸೆಯನ್ನು ಆಲೂಗಡ್ಡೆ ಪಲ್ಯದೊಂದಿಗೆ ಬಡಿಸಲಾಗುತ್ತದೆ), ಸೆಟ್ ದೋಸೆ (ಸಾಗುವಿನೊಂದಿಗೆ ಬಡಿಸುವ ಎರಡು ಅಥವಾ ಮೂರು ದಪ್ಪ ದೋಸೆಗಳು), ಪ್ಲೈನ್ ದೋಸೆ ಕರ್ನಾಟಕದಲ್ಲಿ ಮಾಡುವ ಕೆಲವು ಜನಪ್ರಿಯ ದೋಸೆಗಳಾಗಿವೆ.

ನೀರ್ ದೋಸೆ ಕರ್ನಾಟಕದ ಕರಾವಳಿಯಲ್ಲಿ ಸವಿಯಲಾಗುವ ಜನಪ್ರಿಯ ತಿಂಡಿಯಾಗಿದೆ. ನೀರ್ ದೋಸೆ ಎನ್ನುವುದು ನೆನೆಸಿದ ಅಕ್ಕಿಯಿಂದ ಮಾಡಿದ ಹಿಟ್ಟಿನಿಂದ ಮಾಡುವ ದೋಸೆಯ ವಿಧವಾಗಿದೆ (ಸಾಮಾನ್ಯ ದೋಸೆ ಅಥವಾ ಇಡ್ಲಿಯಂತೆ ಅಕ್ಕಿ-ಉದ್ದಿನಬೇಳೆ ನೆನೆಸಿ ರುಬ್ಬುವ ಅವಶ್ಯಕತೆ ಇಲ್ಲ). ಕೆಲವು ಗಂಟೆಗಳ ಕಾಲ ನೆನೆಸಿದ ನಂತರ, ಅಕ್ಕಿಯನ್ನು ರುಬ್ಬಿ ನೀರ್ ದೋಸೆಯ ಹಿಟ್ಟನ್ನು ತಯಾರಿಸಲಾಗುತ್ತದೆ. ರುಚಿಗೆ ಸ್ವಲ್ಪ ಉಪ್ಪು ಸೇರಿಸಲಾಗುತ್ತದೆ. ನೀರ್ ದೋಸೆಯನ್ನು ಹೆಚ್ಚಾಗಿ ಕಾಯಿ-ಹೂವು(ಬೆಲ್ಲ ಮತ್ತು ತುರಿದ ತೆಂಗಿನಕಾಯಿ) ಅಥವಾ ತರಕಾರಿ ಪಲ್ಯೆ ಮತ್ತು ಚಟ್ನಿಯೊಂದಿಗೆ ನೀಡಲಾಗುತ್ತದೆ. ಮಾಂಸಾಹಾರಿ ತಿನಿಸಾದ ಕೋಳಿ ಸಾರು (ಚಿಕನ್ ಗ್ರೇವಿ) ಅನ್ನು ನೀರ್ ದೋಸೆಯೊಂದಿಗೆ ಸವಿಯಬಹುದು. ಇದನ್ನು ಕೊಡವ ಪಾಕಪದ್ಧತಿಯ ಮಾಂಸಾಹಾರಿ ಸಾರಿನೊಂದಿಗೆ ಕೂಡಾ ಸವಿಯಬಹುದು.

ನೀರ್ ದೋಸೆಯನ್ನು ಎಲ್ಲಿ ಸವಿಯಬಹುದು:

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ  ಮತ್ತು ಕೆಲವು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನದ ಉಪಹಾರ ಗೃಹಗಳಲ್ಲಿ ನೀರ್ ದೋಸೆ ದೊರೆಯುತ್ತದೆ. ನೀರ್ ದೋಸೆಗೆ ಅಗ್ಗದ ಬೆಲೆಯಿದೆ ಮತ್ತು ಹಸಿವು ಮತ್ತು ರುಚಿ ತಣಿಸಲು ಸಹಾಯಕವಾಗಿದೆ. ಕರಾವಳಿ ಕರ್ನಾಟಕದ ಆಹಾರ ತಯಾರಿಸುವ ಬೆಂಗಳೂರಿನ ಉಪಹಾರ ಗೃಹಗಳಲ್ಲಿಯೂ ಇದು ಲಭ್ಯವಿದೆ.