ಭಕ್ತರ ಇಷ್ಟಾರ್ಥಗಳನ್ನು ನಿಮಿಷಗಳಲ್ಲಿಯೇ ಈಡೇರಿಸುವ ದೇವಿಯ ಬಗ್ಗೆ ನೀವು ಕೇಳಿದ್ದೀರಾ? ಪ್ರಶಾಂತವಾದ ಕಾವೇರಿ ನದಿಯ ದಡದಲ್ಲಿ ನೆಲೆಸಿರುವ ನಿಮಿಷಾಂಬಾ ದೇವಸ್ಥಾನವು ಪಾರ್ವತಿ ದೇವಿಯ ಅವತಾರಕ್ಕೆ ಸಮರ್ಪಿತವಾದ ಪವಿತ್ರ ಕ್ಷೇತ್ರವಾಗಿದೆ. ನಿಮಿಷಾಂಬಾ ದೇವಿಯು ಭಕ್ತರ ಜೀವನದ ಕಷ್ಟಕಾರ್ಪಣ್ಯಗಳು ಮತ್ತು ಅಡೆತಡೆಗಳನ್ನು ಒಂದು ನಿಮಿಷದಲ್ಲಿಯೇ ನಿವಾರಿಸುತ್ತಾಳೆ ಎಂಬ ಬಲವಾದ ನಂಬಿಕೆಯು ಭಕ್ತರಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿದೆ; ಇದೇ ಕಾರಣಕ್ಕೆ ಈ ದೇವಾಲಯವು ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಶ್ರೀರಂಗಪಟ್ಟಣದಿಂದ ಸಂಗಮಕ್ಕೆ ಹೋಗುವ ರಸ್ತೆಯಲ್ಲಿ ಕೇವಲ 2 ಕಿಲೋಮೀಟರ್ ದೂರದಲ್ಲಿರುವ ಈ ದೇವಸ್ಥಾನವು, ಶ್ರೀರಂಗಪಟ್ಟಣ ಮತ್ತು ಮೈಸೂರು ಪ್ರವಾಸದ ವೇಳೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಆಧ್ಯಾತ್ಮಿಕ ಮತ್ತು ಭಕ್ತಿಯ ತಾಣವಾಗಿದೆ. ಕಾವೇರಿ ನದಿಯ ತಟದ ಕಲ್ಲಿನ ಮೆಟ್ಟಿಲುಗಳು ಮತ್ತು ಸುತ್ತಲಿನ ರಮಣೀಯ ಭೂದೃಶ್ಯಗಳು ನಿಮಿಷಾಂಬಾ ದೇವಸ್ಥಾನದ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ.
ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆ
ಏಳು ಅಂತಸ್ತಿನ ರಾಜಗೋಪುರ ಮತ್ತು ಪ್ರಶಾಂತವಾದ ನದಿತೀರದ ಪರಿಸರಕ್ಕೆ ಹೆಸರುವಾಸಿಯಾದ ನಿಮಿಷಾಂಬಾ ದೇವಸ್ಥಾನವು ಮೈಸೂರು ಒಡೆಯರ ಕಾಲದ ಆಧ್ಯಾತ್ಮಿಕ ಮತ್ತು ವಾಸ್ತುಶಿಲ್ಪ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಸುಮಾರು 300 ವರ್ಷಗಳ ಹಿಂದೆ, ಕ್ರಿ.ಶ. 1610 ಮತ್ತು 1638ರ ನಡುವೆ ನಿರ್ಮಿಸಲಾದ ಈ ದೇವಾಲಯವು ಮೈಸೂರಿನ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯೊಂದಿಗೂ ನಂಟು ಹೊಂದಿದೆ.

ಪುರಾಣಗಳ ಪ್ರಕಾರ, ಸುಮನಸ್ಕ ಎಂಬ ರಾಜನು ತನ್ನ ಪ್ರಜೆಗಳ ಕಲ್ಯಾಣಕ್ಕಾಗಿ ಮುಕ್ತಕ ಋಷಿಗಳ ನೇತೃತ್ವದಲ್ಲಿ ಪೌಂಡರೀಕ ಯಜ್ಞವನ್ನು ನಡೆಸಲು ಇಚ್ಛಿಸಿದನು. ಆದರೆ, ಜಾನು ಮತ್ತು ಸುಮಂಡಲ ಎಂಬ ರಾಕ್ಷಸರು ತಮ್ಮ ಸೈನ್ಯದೊಂದಿಗೆ ಬಂದು ಯಜ್ಞಕ್ಕೆ ಭಂಗ ತರಲು ಪ್ರಯತ್ನಿಸಿದರು ಮತ್ತು ರಾಜ್ಯಕ್ಕೆ ಬೆದರಿಕೆಯೊಡ್ಡಿದರು. ಯಾವುದೇ ಆಯುಧಗಳಿಂದ ತಮಗೆ ಸಾವು ಬಾರದಂತೆ ಬ್ರಹ್ಮದೇವರಿಂದ ವರ ಪಡೆದಿದ್ದ ಈ ರಾಕ್ಷಸರ ಸಂಹಾರಕ್ಕಾಗಿ ಮುಕ್ತಕ ಋಷಿಗಳು ಆದಿಶಕ್ತಿ ದೇವಿಯನ್ನು ಪ್ರಾರ್ಥಿಸಿದರು. ಆಗ ಯಜ್ಞಕುಂಡದಿಂದ ಕ್ಷಣಾರ್ಧದಲ್ಲಿ ಪ್ರತ್ಯಕ್ಷಳಾದ ದೇವಿಯು ರಾಕ್ಷಸರನ್ನು ಸಂಹರಿಸಿದಳು. ಹೀಗೆ ಒಂದು ನಿಮಿಷದಲ್ಲಿ (ಕ್ಷಣಮಾತ್ರದಲ್ಲಿ) ಭಕ್ತರ ರಕ್ಷಣೆಗೆ ಧಾವಿಸಿ ಬಂದ ಕಾರಣದಿಂದಾಗಿ, ‘ನಿಮಿಷ’ ಮತ್ತು ಪಾರ್ವತಿ ದೇವಿಯ ಇನ್ನೊಂದು ಹೆಸರಾದ ‘ಅಂಬಾ’ ಸೇರಿ ಆಕೆಗೆ ನಿಮಿಷಾಂಬಾ ಎಂಬ ಹೆಸರು ಬಂದಿತು.
ಗರ್ಭಗುಡಿಯೊಳಗೆ ಭಕ್ತರು ತ್ರಿಶೂಲ, ಡಮರು, ಅಭಯಹಸ್ತ ಮತ್ತು ವರದಹಸ್ತಗಳನ್ನು ಧರಿಸಿರುವ ಸುಂದರವಾಗಿ ಅಲಂಕೃತಗೊಂಡ ನಿಮಿಷಾಂಬಾ ದೇವಿಯ ವಿಗ್ರಹವನ್ನು ದರ್ಶಿಸಬಹುದು. ಅರ್ಚಕರು ದೇವಿಯ ಪೂಜೆಗೆ ಕುಂಕುಮವನ್ನು ಬಳಸುತ್ತಾರೆ ಹಾಗೂ ದೇವಿಯ ಎದುರು ಕಲ್ಲಿನಲ್ಲಿ ಕೆತ್ತಲಾದ ಶ್ರೀಚಕ್ರವನ್ನು ಪ್ರತಿಷ್ಠಾಪಿಸಲಾಗಿದೆ. ಸೂರ್ಯವಂಶದ ರಾಜನಾದ ಮುಕ್ತರಾಜನು ಈ ಸ್ಥಳದಲ್ಲಿ ತಪಸ್ಸು ಮಾಡಿ ಈ ಶ್ರೀಚಕ್ರವನ್ನು ಸ್ಥಾಪಿಸಿದನೆಂದು ನಂಬಲಾಗಿದೆ. ಈ ದೇವಾಲಯದ ಸಂಕೀರ್ಣದಲ್ಲಿ ಶಿವ ಮತ್ತು ಲಕ್ಷ್ಮೀನಾರಾಯಣ ದೇವರಿಗೆ ಸಮರ್ಪಿತವಾದ ಗುಡಿಗಳೂ ಇವೆ. ಮುಖಮಂಟಪವನ್ನು ಹೊಂದಿರುವ ಸರಳ ವಾಸ್ತುಶಿಲ್ಪದ ಈ ದೇವಾಲಯದಲ್ಲಿ ಮೂರೂ ಸನ್ನಿಧಿಗಳು ಒಂದೇ ಸಾಲಿನಲ್ಲಿ ನೆಲೆಗೊಂಡಿವೆ.

ಪ್ರವಾಸಿಗರ ಮಾಹಿತಿ
ಸಮಯದ ವಿವರ
ನಿಮಿಷಾಂಬಾ ದೇವಸ್ಥಾನಕ್ಕೆ ವರ್ಷಪೂರ್ತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ; ಆದ್ದರಿಂದ ದೇವಾಲಯದ ಪೂಜಾ ವೇಳಾಪಟ್ಟಿಗೆ ಅನುಗುಣವಾಗಿ ನಿಮ್ಮ ಭೇಟಿಯನ್ನು ಯೋಜಿಸುವುದರಿಂದ ಸುಗಮ ದರ್ಶನ ಪಡೆಯಬಹುದು. ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಸಮಯ ಬದಲಾಗಬಹುದಾದ್ದರಿಂದ, ಪ್ರಯಾಣಿಸುವ ಮುನ್ನ ವೇಳಾಪಟ್ಟಿಯನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.
| ವಿವರ | ಮಾಹಿತಿ |
| ದೇವಸ್ಥಾನ ತೆರೆಯುವ ಸಮಯ | ಬೆಳಿಗ್ಗೆ ಸುಮಾರು 6:00 ರಿಂದ ರಾತ್ರಿ 8:30 ರವರೆಗೆ |
| ಬೆಳಗಿನ ದರ್ಶನ | ಬೆಳಿಗ್ಗೆ ಸುಮಾರು 7:30 ರಿಂದ ಮಧ್ಯಾಹ್ನ 12:00 ರವರೆಗೆ |
| ಸಂಜೆಯ ದರ್ಶನ | ಸಂಜೆ ಸುಮಾರು 4:00 ರಿಂದ ರಾತ್ರಿ 8:30 ರವರೆಗೆ (ಪೂಜಾ ಸಮಯ ಬದಲಾಗಬಹುದು) |
| ಅಭಿಷೇಕದ ಸಮಯ | ಬೆಳಿಗ್ಗೆ 6:30 ರಿಂದ 7:30 ರವರೆಗೆ |
| ಮಹಾ ನೈವೇದ್ಯ | ಮಧ್ಯಾಹ್ನ 12:00 ಗಂಟೆಗೆ |
| ಪ್ರದೋಷ ಕಾಲ ಅಭಿಷೇಕ | ಸಂಜೆ 6:30 – 7:30 (ಭಾನುವಾರ, ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆ ಮತ್ತು ಸರ್ಕಾರಿ ರಜಾದಿನಗಳಲ್ಲಿ ಇರುವುದಿಲ್ಲ) |
| ಅನ್ನ ಪ್ರಸಾದ (ಉಚಿತ ಊಟ) | ಲಭ್ಯತೆಯು ಬದಲಾಗಬಹುದು |
| ಪ್ರವೇಶ ಶುಲ್ಕ | ಸಾಮಾನ್ಯ ದರ್ಶನಕ್ಕೆ ಉಚಿತ |
| ವಸ್ತ್ರ ಸಂಹಿತೆ (Dress Code) | ಪುರುಷರು ಮತ್ತು ಮಹಿಳೆಯರಿಗೆ ಸಭ್ಯ ಉಡುಪು |
ಪ್ರವೇಶ ನಿಯಮಗಳು
- ಉಡುಪುಗಳು : ಪುರುಷರು ಮತ್ತು ಮಹಿಳೆಯರಿಬ್ಬರೂ ದೇವಾಲಯಕ್ಕೆ ಸೂಕ್ತವಾದ ಸಭ್ಯ ಹಾಗೂ ಗೌರವಾನ್ವಿತ ಉಡುಪುಗಳನ್ನು ಧರಿಸಬೇಕು; ಸಾಂಪ್ರದಾಯಿಕ ಭಾರತೀಯ ಉಡುಗೆಗಳಿಗೆ ಆದ್ಯತೆ ನೀಡಲಾಗುತ್ತದೆ.
- ಛಾಯಾಗ್ರಹಣ (Photography): ಛಾಯಾಗ್ರಹಣದ ನಿಯಮಗಳು ಬದಲಾಗಬಹುದು. ಸಾಮಾನ್ಯವಾಗಿ ಹೊರ ಆವರಣದಲ್ಲಿ ಫೋಟೋ ತೆಗೆಯಲು ಅವಕಾಶವಿದ್ದರೂ, ಗರ್ಭಗುಡಿಯ ಒಳಗೆ ನಿರ್ಬಂಧವಿರುತ್ತದೆ. ಫೋಟೋ ತೆಗೆಯುವ ಮುನ್ನ ದೇವಾಲಯದ ಅಧಿಕಾರಿಗಳ ಅನುಮತಿ ಪಡೆಯಿರಿ.
- ದೇವಾಲಯದ ಶಿಷ್ಟಾಚಾರ: ದೇವಾಲಯದ ಒಳಗೆ, ವಿಶೇಷವಾಗಿ ಪ್ರಾರ್ಥನೆ ಮತ್ತು ದೀಪಾರಾಧನೆಯ ಸಮಯದಲ್ಲಿ ಮೌನದಿಂದ ಇರಿ ಅಥವಾ ಮೆಲ್ಲು ದ್ವನಿಯಲ್ಲಿ ಮಾತನಾಡಿ.
ಪ್ರಮುಖ ತಾಣಗಳು
ನಿಮಿಷಾಂಬಾ ದೇವಸ್ಥಾನದ ಭೇಟಿಯೊಂದಿಗೆ ಶ್ರೀರಂಗಪಟ್ಟಣದ ಹಲವಾರು ಐತಿಹಾಸಿಕ ಮತ್ತು ಧಾರ್ಮಿಕ ತಾಣಗಳನ್ನು ನೀವು ಸುಲಭವಾಗಿ ವೀಕ್ಷಿಸಬಹುದು:
ಶ್ರೀ ರಂಗನಾಥಸ್ವಾಮಿ ದೇವಸ್ಥಾನ
ಶ್ರೀ ರಂಗನಾಥಸ್ವಾಮಿ ದೇವಸ್ಥಾನ: ಶ್ರೀರಂಗಪಟ್ಟಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ಕಾವೇರಿ ನದಿಯ ತಟದಲ್ಲಿರುವ ಮೂರು ಪ್ರಮುಖ ರಂಗನಾಥ ಕ್ಷೇತ್ರಗಳಲ್ಲಿ ಇದು ಮೊದಲನೆಯದಾಗಿದ್ದು, ಇದನ್ನು ‘ಆದಿ ರಂಗ’ ಎಂದು ಕರೆಯಲಾಗುತ್ತದೆ.



Dariya Daulat Bagh
Built in 1784 CE, Dariya Daulat Bagh was Tipu Sultan’s summer palace and is one of the best-known heritage attractions in Srirangapatna. The palace is decorated with intricate teakwood construction, elaborate paintings and murals.

Gumbaz-e-Shahi
Built by Tipu Sultan, the Gumbaz is a mausoleum holding the grave of Tipu Sultan, his father Hyder Ali, and his mother Fatima Begum. Its Indo-Islamic architectural character and landscaped surroundings make it an important stop for visitors.
Colonel Bailey’s Dungeon
Located within the historic fort area is an underground prison from the reign of Tipu Sultan and Hyder Ali. Colonel Bailey’s Dungeon is associated with the imprisonment of British officers during the Anglo-Mysore Wars.
Festivals & Special Occasions
The Nimishamba Temple is particularly significant during Nimishamba Jayanti, celebrated on Vaishakha Shuddha Dashami. The Somavamsha Arya Kshatriya community is commonly associated with this festival. Another occasion celebrated at the Nimishamba Temple is Vasavamba Jayanti, observed by Arya Vaishya communities.
During full moon days and festivals such as Vijaydashmi, Shivaratri, Ugadi and Deepavali a special worship is performed. If you wish for a quieter experience, plan your trip on a weekday instead of during peak tourist season or around festivals.
Nearby Attractions & Day Trips
Ranganathittu Bird Sanctuary
It is one of Karnataka’s well-known bird watching destinations for resident and migratory birds.


Karighatta
Karighatta, or Elephant Hill, is associated with a temple dedicated to Lord Srinivasa, a manifestation of Lord Vishnu.

Krishnaraja Sagar Dam and Brindavan Gardens
The Krishna Raja Sagar Dam (KRS Dam) is built across the Kaveri River in Mandya district. At the bottom of the dam are the beautiful Brindavan Gardens, which are popular for their landscapes and illuminated fountain displays. Krishna Raja Sagar Dam (KRS Dam) is also known as Kannambadi Katte.

Balmuri Falls
Balmuri Falls is where the Cauvery River falls over a low check dam, making shallow pools and gentle rapids. It lies close to the KRS Dam, and is frequented by families and visitors.
How to Reach Nimishamba Temple
| From | Distance (approx.) | By Road | By Train |
| Bengaluru | 130–140 km to Srirangapatna | Around 3–4 hours, depending on traffic | Trains to Srirangapatna/Mysuru; journey time varies |
| Mysuru | Around 18–20 km to Srirangapatna | Around 30–45 minutes | Around 15 minutes to Srirangapatna by direct train |
| Mandya | Around 40 km to Srirangapatna | Around 1 hour | Trains available towards Srirangapatna |
| Hassan | Around 120 km | Around 3 hours | Connections vary |
| Mangaluru | Around 190–200 km | Around 4.5 – 5.5 hours | Connections vary |
The nearest airport to Srirangapatna is Mysuru Airport at Mandakalli, which is roughly 25 km away. Kempegowda International Airport in Bengaluru is the closest global gateway which offers more international and domestic connectivity.
Best Time to Visit Nimishamba Temple
- October to February is the perfect time for temple visits, sightseeing and exploring Srirangapatna comfortably.
- July to September is preferred by the visitors as the surroundings become lush and green during monsoon.
- To beat the heat and crowds early morning visits are perfect.
Where to Stay
Travellers visiting Nimishamba Temple can stay in Srirangapatna as there are several local guesthouses, lodges, and hotels in Srirangapatna town. You can also check out Hotel Mayura Riverview, operated by KSTDC in Srirangapatna. In Mysuru you can find many resorts and restaurants for a luxurious experience.
Conclusion
If you’re in Karnataka and hoping to seek instant blessings with a scenic river view, then Nimishamba Temple should be a must-visit for you. Plan your visit to Nimishamba Temple and experience the serene charm of this shrine.
FAQs:
What are Nimishamba Temple timings?
The temple’s opening hours are around 6:00 am to 8:30 pm, although individual pooja and darshan periods can vary. Visitors planning a specific seva should confirm the schedule before visiting.
What is the distance from Srirangapatna town to Nimishamba Temple?
The temple is approximately 2 km from Srirangapatna town, in Ganjam, on the road towards Sangam.
Is Nimishamba Temple suitable for a family day trip?
Yes. Its location close to Srirangapatna makes it suitable for a family itinerary combining temple visits, heritage monuments, the Cauvery riverside and nearby attractions.
Is there an entry fee for Nimishamba Temple?
While general temple entry is free, certain special poojas or sevas may have separate charges.
What is the dress code for Nimishamba Temple?
Men and women both are expected to wear modest, respectful, and traditional attire.