ಎಲ್ಲಿಗೆ ಹೋಗಬೇಕು
ಹೊಸತು ಏನು
ವ್ಯಾಪಾರ ಮತ್ತು ಪಾಲುದಾರಿಕೆ
SOS
|
ಲಾಗಿನ್ ಮಾಡಿ
ನಗರದ ಪ್ರೇಕ್ಷಣೀಯ ಆಕರ್ಷಣೆಗಳು
ನಗರದ ಪ್ರೇಕ್ಷಣೀಯ ಆಕರ್ಷಣೆಗಳನ್ನು ಅನ್ವೇಷಿಸಿ
ಬೆಂಗಳೂರು ಅರಮನೆ – ರಾಜವೈಭವದ ಪ್ರತೀಕ
ತ್ವರಿತ ಮಾಹಿತಿ ವಿವರ ಮಾಹಿತಿ ಸ್ಥಳ ವಸಂತ ನಗರ, ಬೆಂಗಳೂರು, ಕರ್ನಾಟಕ ಭೇಟಿ ನೀಡುವ ಸಮಯ ಬೆಳಿಗ್ಗೆ 10:00 – ಸಂಜೆ 5:30 ಪ್ರವೇಶ ಶುಲ್ಕ ₹240 (ಭಾರತೀಯರು), ₹460 (ವಿದೇಶಿಯರು) ಅಗತ್ಯವಿರುವ ಸಮಯ 2 ರಿಂದ 3 ಗಂಟೆಗಳು ಆಡಿಯೋ ಗೈಡ್ ಲಭ್ಯವಿದೆ (ಹೆಚ್ಚುವರಿ ಶುಲ್ಕ ಅನ್ವಯಿಸುತ್ತದೆ) ಭೇಟಿ ನೀಡಲು ಉತ್ತಮ ಸಮಯ ಅಕ್ಟೋಬರ್ನಿಂದ ಫೆಬ್ರವರಿ ಬೆಂಗಳೂರು ಅರಮನೆಯು ನಗರದ ಅತ್ಯಂತ ಸಾಂಪ್ರದಾಯಿಕ ರಾಜಮನೆತನದ ಹೆಗ್ಗುರುತುಗಳಲ್ಲಿ ಒಂದಾಗಿದೆ. ಇದರ ಭವ್ಯವಾದ ವಿನ್ಯಾಸ, ಶ್ರೀಮಂತ ಇತಿಹಾಸ ಮತ್ತು […]
ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಫಿ, ಬೆಂಗಳೂರು
ಬೆಂಗಳೂರಿನ ಹೊಸ ಸಾಂಸ್ಕೃತಿಕ ಹೆಗ್ಗುರುತು: ಕಲೆ ಮತ್ತು ತಂತ್ರಜ್ಞಾನದ ಸಮ್ಮಿಲನ. ವಸ್ತುಸಂಗ್ರಹಾಲಯದ ಬಗ್ಗೆ: ಕಥನ ಕಲೆಯ ಹೊಸ ಶಕೆ. ಮ್ಯೂಸಿಯಂ ಬಗ್ಗೆ ಬೆಂಗಳೂರಿನ ಹೃದಯಭಾಗದಲ್ಲಿರುವ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿ (MAP) ಸಂಗ್ರಹಾಲಯ ದಕ್ಷಿಣ ಭಾರತದ ಖಾಸಗಿ ಒಡೆತನವುಳ್ಳ ಮೊದಲ ಪ್ರಮುಖ ವಸ್ತುಸಂಗ್ರಹಾಲಯವಾಗಿದೆ. 2011 ರಲ್ಲಿ ಆರ್ಟ್ & ಫೋಟೋಗ್ರಫಿ ಫೌಂಡೇಶನ್ ಅನ್ನು ಅಭಿಷೇಕ್ ಪೊದ್ದಾರ್ ಅವರು ಯಾವುದೇ ಲಾಭೋದ್ದೇಶವಿಲ್ಲದ ಘಟಕವಾಗಿ ಸ್ಥಾಪಿಸಿದರು. ಜನರಲ್ಲಿ ವಸ್ತುಸಂಗ್ರಹಾಲಯಕ್ಕೆ ಹೋಗುವ ಸಂಸ್ಕೃತಿಯನ್ನು ಹುಟ್ಟು ಹಾಕುವ ಉದ್ದೇಶದೊಂದಿಗೆ ಕಲೆಯಲ್ಲಿ ಆಸಕ್ತಿಯನ್ನು ಬೆಳೆಸುವ ಗುರಿ ಕೂಡ ಇತ್ತು. ಹೀಗಿರುವಾಗ ಸಾಂಕ್ರಾಮಿಕ ಪಿಡುಗು ನಮ್ಮ ಮುಂದಿಟ್ಟ ಸವಾಲುಗಳ ಕಾರಣಕ್ಕೆ 2020 ರಲ್ಲಿ […]
ಮರಳು ಶಿಲ್ಪಕಲೆ ವಸ್ತುಸಂಗ್ರಹಾಲಯ, ಮೈಸೂರು
ಮೈಸೂರಿನ ಮರಳು ಶಿಲ್ಪಕಲೆ ವಸ್ತುಸಂಗ್ರಹಾಲಯವು ಕಲಾತ್ಮಕತೆಯನ್ನು ಅನಾವರಣಗೊಳಿಸುವ ಒಂದು ವಿಶಿಷ್ಟ ತಾಣವಾಗಿದೆ. ನೂರಕ್ಕೂ ಹೆಚ್ಚು ಟ್ರಕ್ ಲೋಡ್ ಮರಳಿನಿಂದ ರಚಿಸಲಾದ ಸುಮಾರು 150 ವಿಭಿನ್ನ ಶಿಲ್ಪಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇದು ಮೈಸೂರಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ನೋಡಲೇಬೇಕಾದ ಸ್ಥಳ. ಸುಮಾರು 13,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಸೂಕ್ಷ್ಮ ಮರಳು ಕಲಾಕೃತಿಗಳನ್ನು ಹಲವು ವರ್ಷಗಳ ಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ, ಮತ್ತು ಅವುಗಳನ್ನು ಮಳೆಯಿಂದ ರಕ್ಷಿಸಲು ತಾತ್ಕಾಲಿಕ ಛಾವಣಿಗಳನ್ನು ಅಳವಡಿಸಲಾಗಿದೆ. ಪ್ರಮುಖ ಪ್ರದರ್ಶನಗಳುವಸ್ತುಸಂಗ್ರಹಾಲಯವು ತನ್ನ ಆಕರ್ಷಕ […]
ಶ್ರೀ ಚಾಮರಾಜೇಂದ್ರ ಮೃಗಾಲಯ (ಮೈಸೂರು ಮೃಗಾಲಯ)
ಮೃಗಾಲಯ, ವೈವಿಧ್ಯಮಯ ಪ್ರಾಣಿ ಸಂಕುಲ
ಕಬ್ಬನ್ ಪಾರ್ಕ್
ನಗರದ ಮಧ್ಯಭಾಗದಲ್ಲಿ ಸುಮಾರು 300 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಕಬ್ಬನ್ ಪಾರ್ಕ್, ಬೆಂಗಳೂರಿನ ಜನರಿಗೆ ನಗರದ ಗದ್ದಲದಿಂದ ದೂರವಿರುವ ಹಸಿರಿನ ಸ್ವರ್ಗವಾಗಿದೆ. ಕೆಂಪಾದ ಸುಂದರ ಗೋಥಿಕ್ ಶೈಲಿಯ ಕಟ್ಟಡವಾದ ಶೇಷಾದ್ರಿ ಅಯ್ಯರ್ ಸ್ಮಾರಕ ಭವನದಲ್ಲಿ ರಾಜ್ಯ ಗ್ರಂಥಾಲಯವಿದೆ. ಉದ್ಯಾನವನದುದ್ದಕ್ಕೂ ಕಾರಂಜಿಗಳು, ಪ್ರತಿಮೆಗಳು, ಹೂ ಬಿಡುವ ಮರಗಳು ಮತ್ತು ಸೊಂಪಾದ ಹಸಿರು ತುಂಬಿಕೊಂಡಿವೆ. ಇಲ್ಲಿ ಏನೇನು ಮಾಡಬಹುದು? ಶೇಷಾದ್ರಿ ಅಯ್ಯರ್ ಸ್ಮಾರಕ ಭವನ ಕಬ್ಬನ್ ಪಾರ್ಕ್‌ನಲ್ಲಿ ಶೇಷಾದ್ರಿ ಅಯ್ಯರ್ ಸ್ಮಾರಕ ಭವನದಲ್ಲಿ ಕೇಂದ್ರ ಗ್ರಂಥಾಲಯವಿದೆ. ಕೇಂದ್ರ ಗ್ರಂಥಾಲಯವು ಸೋಮವಾರ, […]
ಬನ್ನೇರುಘಟ್ಟ ಜೈವಿಕ ಉದ್ಯಾನವನ
ಭಾರತದ ಮೊದಲ ಆನೆಗಳ ಅಭಯಾರಣ್ಯ
ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್: ಬೆಂಗಳೂರಿನ ಹಸಿರು ಸಿರಿ
ಬೆಂಗಳೂರಿನ ಗಿಜಿಗುಟ್ಟುವ ನಗರ ಜೀವನದ ಮಧ್ಯೆ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಕೇವಲ ಒಂದು ಉದ್ಯಾನವನ ಮಾತ್ರವಲ್ಲ, ಅದೊಂದು ಹಸಿರು ಸಿರಿ. ನಗರದ ದಕ್ಷಿಣ ಭಾಗದಲ್ಲಿ ನೆಲೆಸಿರುವ ಈ ಐತಿಹಾಸಿಕ ಉದ್ಯಾನವು 240 ಎಕರೆಗಳಷ್ಟು ವಿಶಾಲವಾಗಿ ಹರಡಿಕೊಂಡಿದ್ದು, ನಗರದ ಬಿಸಿಲ ಬೇಗೆಯಿಂದ ಪಾರಾಗಲು ಒಂದು ಆಹ್ಲಾದಕರ ತಾಣವಾಗಿದೆ. ನೀವು ಪ್ರಕೃತಿ ಪ್ರೇಮಿಯಾಗಿದ್ದರೆ, ಶಾಂತಿಯುತ ನಡಿಗೆಯನ್ನು ಇಷ್ಟಪಡುವವರಾಗಿದ್ದರೆ ಅಥವಾ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದರೆ, ಲಾಲ್‌ಬಾಗ್ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇಲ್ಲಿ ಅಪರೂಪದ ಸಸ್ಯ ಪ್ರಭೇದಗಳು, ವಿಶಾಲವಾದ ಹಸಿರು ಹುಲ್ಲುಹಾಸುಗಳು, ಸುಂದರವಾದ ಮರಗಳು […]
ಎಲ್ಲವನ್ನೂ ವೀಕ್ಷಿಸಿ
ನಗರದ ಪ್ರೇಕ್ಷಣೀಯ ಆಕರ್ಷಣೆಗಳು - Karnataka Tourism