ನಿಮ್ಮ ಸಲಹೆಗಳನ್ನು ಇಂದೇ ತಿಳಿಸಿ, ವೆಬ್ಸೈಟ್ ಅನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಅನುಕೂಲವಾಗುತ್ತದೆ. ಇಲ್ಲಿ ಹಂಚಿಕೊಳ್ಳಿ

Hero Image

ಕಬ್ಬನ್ ಪಾರ್ಕ್

ನಗರದ ಮಧ್ಯಭಾಗದಲ್ಲಿ ಸುಮಾರು 300 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಕಬ್ಬನ್ ಪಾರ್ಕ್, ಬೆಂಗಳೂರಿನ ಜನರಿಗೆ ನಗರದ ಗದ್ದಲದಿಂದ ದೂರವಿರುವ ಹ...

BENGALURU ATTRACTIONSCITY ATTRACTIONS

ನಗರದ ಮಧ್ಯಭಾಗದಲ್ಲಿ ಸುಮಾರು 300 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಕಬ್ಬನ್ ಪಾರ್ಕ್, ಬೆಂಗಳೂರಿನ ಜನರಿಗೆ ನಗರದ ಗದ್ದಲದಿಂದ ದೂರವಿರುವ ಹಸಿರಿನ ಸ್ವರ್ಗವಾಗಿದೆ. ಕೆಂಪಾದ ಸುಂದರ ಗೋಥಿಕ್ ಶೈಲಿಯ ಕಟ್ಟಡವಾದ ಶೇಷಾದ್ರಿ ಅಯ್ಯರ್ ಸ್ಮಾರಕ ಭವನದಲ್ಲಿ ರಾಜ್ಯ ಗ್ರಂಥಾಲಯವಿದೆ. ಉದ್ಯಾನವನದುದ್ದಕ್ಕೂ ಕಾರಂಜಿಗಳು, ಪ್ರತಿಮೆಗಳು, ಹೂ ಬಿಡುವ ಮರಗಳು ಮತ್ತು ಸೊಂಪಾದ ಹಸಿರು ತುಂಬಿಕೊಂಡಿವೆ.

ಇಲ್ಲಿ ಏನೇನು ಮಾಡಬಹುದು?

ಶೇಷಾದ್ರಿ ಅಯ್ಯರ್ ಸ್ಮಾರಕ ಭವನ ಕಬ್ಬನ್ ಪಾರ್ಕ್‌ನಲ್ಲಿ ಶೇಷಾದ್ರಿ ಅಯ್ಯರ್ ಸ್ಮಾರಕ ಭವನದಲ್ಲಿ ಕೇಂದ್ರ ಗ್ರಂಥಾಲಯವಿದೆ. ಕೇಂದ್ರ ಗ್ರಂಥಾಲಯವು ಸೋಮವಾರ, ಸಾರ್ವಜನಿಕ ರಜಾದಿನಗಳು ಮತ್ತು ತಿಂಗಳ ಎರಡನೇ ಮಂಗಳವಾರ ಹೊರತುಪಡಿಸಿ, ಪ್ರತಿದಿನ ಬೆಳಿಗ್ಗೆ 8:30 ರಿಂದ ಸಂಜೆ 7:30 ರವರೆಗೆ ತೆರೆದಿರುತ್ತದೆ. ಸ್ಮಾರಕ ಭವನದ ಎದುರುಗಡೆಯೇ ಬಣ್ಣಬಣ್ಣದ ಹೂವುಗಳಿಂದ ಕೂಡಿದ ಸುಂದರವಾದ ಉದ್ಯಾನವಿದೆ.

ಮಕ್ಕಳ ಆಟದ ಪ್ರದೇಶ ಮತ್ತು ಆಟಿಕೆ ರೈಲು ಜವಾಹರ್ ಬಾಲ್ ಭವನದ ಒಳಗಿರುವ ಆಟಿಕೆ ರೈಲು ಸವಾರಿಯು ಮಕ್ಕಳಿಗೆ ಜನಪ್ರಿಯ ಆಕರ್ಷಣೆಯಾಗಿದೆ.

ಅಕ್ವೇರಿಯಂ ಸರ್ಕಾರಿ ಅಕ್ವೇರಿಯಂನಲ್ಲಿ, ಸಂದರ್ಶಕರು ಮೂರು ಮಹಡಿಗಳಲ್ಲಿ ಪ್ರದರ್ಶಿಸಲಾದ ಜಲಚರಗಳನ್ನು ನೋಡಬಹುದು. ಸೋಮವಾರ ಮತ್ತು ಪರ್ಯಾಯ ಮಂಗಳವಾರ ಹೊರತುಪಡಿಸಿ, ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

ಪ್ರವೇಶ ಶುಲ್ಕ ಕಬ್ಬನ್ ಪಾರ್ಕ್‌ಗೆ ಪ್ರವೇಶ ಉಚಿತ.

ಕಬ್ಬನ್ ಪಾರ್ಕ್ ಸಮೀಪದ ಭೇಟಿ ನೀಡುವ ಸ್ಥಳಗಳು:

ವಿಧಾನಸೌಧ, ಕರ್ನಾಟಕ ಹೈಕೋರ್ಟ್, ಫ್ರೀಡಂ ಪಾರ್ಕ್, ಕಂಠೀರವ ಒಳಾಂಗಣ ಕ್ರೀಡಾಂಗಣ ಮತ್ತು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ಪಾರ್ಕ್‌ನಿಂದ ಕೆಲವೇ ಕಿಲೋಮೀಟರ್‌ಗಳ ದೂರದಲ್ಲಿವೆ.

ತಲುಪುವುದು ಹೇಗೆ?

ಕಬ್ಬನ್ ಪಾರ್ಕ್ ಅನ್ನು ಬೆಂಗಳೂರು ಮೆಟ್ರೋ (BMRCL), ಬಸ್ ಅಥವಾ ಟ್ಯಾಕ್ಸಿ ಮೂಲಕ ಬೆಂಗಳೂರು ನಗರದ ಯಾವುದೇ ಭಾಗದಿಂದ ತಲುಪಬಹುದು. ಪಾರ್ಕ್ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ 3 ಕಿ.ಮೀ, ಬೆಂಗಳೂರು ವಿಮಾನ ನಿಲ್ದಾಣದಿಂದ 35 ಕಿ.ಮೀ ದೂರದಲ್ಲಿದೆ. ಸಮಯಕ್ಕೆ ತಕ್ಕಂತೆ ಸಂಚಾರ ನಿರ್ಬಂಧಗಳು ಅನ್ವಯವಾಗಬಹುದು.