ಹೊನ್ನೆಮರಡು-ಸಾಹಸಮಯ ಚಟುವಟಿಕೆಗಳಲ್ಲಿ ಮಿಂದೇಳಿ
ಹೊನ್ನೆಮರಡು: ನೀವು ಮತ್ತು ನಿಮ್ಮ ಇಡೀ ಕುಟುಂಬ, ಹುಡುಗರು ಮತ್ತು ಹುಡುಗಿಯರು, ಪ್ರಕೃತಿ ಪ್ರೇಮಿಗಳು ಮತ್ತು ಸಾಹಸ ಉತ್ಸಾಹಿಗಳು ಸಂಪೂರ್ಣ ಪ್ಯಾಕೇಜ್ ಇರುವ ಸಾಹಸಮಯ ವಾರಾಂತ್ಯದ ವಿಹಾರಕ್ಕಾಗಿ ಹುಡುಕುತ್ತಿರುವಿರಾ? ಹಾಗಾದರೇ ನೀವು ಸಾಹಸದ ಜೊತೆಗೆ ನೆಮ್ಮದಿಯತ್ತ ಹೊರಡಿ. ಈ ಕುರಿತು ನಾವು ನಿಮಗೆ ಎಲ್ಲ ವಿವರಗಳನ್ನು ನೀಡುತ್ತೇವೆ. ಹೊನ್ನೆ ಮರಡು ನಿಮ್ಮ ಸಾಹಸಮಯ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಹೊನ್ನೆ ಮರಡು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಸಮೀಪವಿರುವ ಲಿಂಗನಮಕ್ಕಿ ಅಣೆಕಟ್ಟಿನ ಮೇಲಿರುವ ಒಂದು ಪರಿಪೂರ್ಣ ವಾರಾಂತ್ಯದ ವಿಹಾರ ತಾಣವಾಗಿದೆ.ಜೋಗ್ ಫಾಲ್ಸ್‌ಗೆ ಭೇಟಿ ನೀಡಲು ಕೆಲವು ಹೆಚ್ಚುವರಿ ಸಮಯವನ್ನು ಇಟ್ಟುಕೊಂಡು ವಾರಾಂತ್ಯದ ಪ್ರವಾಸವನ್ನು ಯೋಜಿಸಿ. ಜೋಗ ಜಲಪಾತವು ಭಾರತದ ಅತ್ಯಂತ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ ಮತ್ತು ಹೊನ್ನೆಮರಡುದಿಂದ ಕೇವಲ 15 ಕಿಮೀ ದೂರದಲ್ಲಿದೆ.
ಹಚ್ಚ ಹಸಿರಿನ ನಡುವೆ, ಶರಾವತಿ ನದಿಯ ಹಿನ್ನೀರು, ಮತ್ತು ಪಾದಯಾತ್ರೆ, ಕ್ಯಾನೋಯಿಂಗ್, ಕಯಾಕಿಂಗ್, ಹಿನ್ನೀರಿನಲ್ಲಿ ಈಜುವುದು, ಕ್ಯಾಂಪಿಂಗ್ ಮತ್ತು ಬೋನಾಫೈರ್ ನಂತಹ ಸಾಹಸ ಚಟುವಟಿಕೆಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಇದೊಂದು ಪರಿಪೂರ್ಣ ಸ್ಥಳವಾಗಿದೆ. ಹೊನ್ನೆ ಮರಡುವನ್ನು ಪಕ್ಷಿ ವೀಕ್ಷಕರ ಸ್ವರ್ಗ ಎಂದೇ ಕರೆಯಲಾಗುತ್ತದೆ, ಹೊನ್ನೆಮರಡು ಪ್ರಕೃತಿ ಪ್ರೇಮಿಗಳು ಮತ್ತು ಛಾಯಾಗ್ರಾಹಕರ ಜನಪ್ರಿಯ ಸ್ಥಳವಾಗಿದೆ. ಹೊನ್ನೆಮರಡು ಎಂಬ ಹೆಸರು ಹೊನ್ನೆ ಎಂಬ ಸ್ಥಳೀಯ ಮರದಿಂದ ಬಂದಿದೆ. ಹೊನ್ನೆ ಎಂದರೆ ಚಿನ್ನದ ಕೆರೆ ಎಂದರ್ಥ. ಹೊನ್ನೆಮರಡುವಿನ ಚಟುವಟಿಕೆಗಳು ಮುಂಜಾನೆ ಆರಂಭವಾಗಿ ಸೂರ್ಯಾಸ್ತದ ವೇಳೆಗೆ ಮುಕ್ತಾಯಗೊಳ್ಳುತ್ತವೆ. ಇಲ್ಲಿ ನೀವು ಅದ್ಭುತವಾದ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ವೀಕ್ಷಿಸಬಹುದು. ವರ್ಷಗಳ ಹಿಂದೆ ಮುಳುಗಿದ್ದ ಸಣ್ಣ ಬೆಟ್ಟಗಳ ರೂಪದಲ್ಲಿ ಸುಂದರವಾದ ದ್ವೀಪಗಳು ನಿಮ್ಮನ್ನು ಒಂದು ಸಣ್ಣ ಪಾದಯಾತ್ರೆಗೆ ಅಥವಾ ಶಿಬಿರಕ್ಕೆ ಸ್ವಾಗತಿಸುತ್ತವೆ.
ಹೊನ್ನೆಮರಡುವಿನಲ್ಲಿ ಸಾಹಸ ಚಟುವಟಿಕೆಗಳು
ಶರಾವತಿ ನದಿಯ ಹಿನ್ನೀರು
ಇಲ್ಲಿ ನಿಮಗೆ ಸಾಹಸಮಯ ಚಟುವಟಿಕೆಗಳನ್ನು ಕೈಗೊಳ್ಳಲು ಯಾವುದೇ ಸಂಘಟಿತ ಪ್ಯಾಕೇಜಗಳಿಲ್ಲ. ನೀವು ಇಲ್ಲಿ ಸಾಹಸಮಯ ಚಟುವಟಿಕೆಗಳನ್ನು ಮಾಡಲು ಸ್ಥಳೀಯರ ಸಹಾಯವನ್ನು ತೆಗೆದುಕೊಳ್ಳಬಹುದು. ನಿಮಗೆ ಇಲ್ಲಿ ಸುಂದರ ನೆನೆಪುಗಳನ್ನು ನೀಡಲು ಇಲ್ಲಿನ ಕೆಲವು ಸ್ಥಳೀಯರು ಪರಿಸರ ಸ್ನೇಹಿ ಪ್ರವಾಸವನ್ನು ಆಯೋಜಿಸುತ್ತಾರೆ. ಇಲ್ಲಿ ಪರಿಸರ-ಪ್ರವಾಸೋದ್ಯಮ ಸುಸ್ಥಿರ ಘಟಕವೊಂದನ್ನು ಪ್ರಶಸ್ತಿ ವಿಜೇತ ದಂಪತಿಗಳು ನಡೆಸುತ್ತಿದ್ದಾರೆ, ಅವರು ತೆರೆದ ನೀರಿನಲ್ಲಿ ಈಜುವುದು, ಕ್ಯಾನೋಯಿಂಗ್, ಕಯಾಕಿಂಗ್, ಹೈಕಿಂಗ್, ಕೊರಾಕಲ್ ಬೋಟ್ ರೈಡ್ ಮತ್ತು ವಿವಿಧ ಸಾಹಸ ಚಟುವಟಿಕೆಗಳನ್ನು ಒಳಗೊಂಡಿರುವ 2-3 ದಿನಗಳ ಪ್ಯಾಕೇಜ್‌ಗಳನ್ನು ನೀಡುತ್ತಾರೆ. ಈ ಪ್ಯಾಕೇಜ ಎಲ್ಲ ಹೆಚ್ಚಿನ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳು ಮತ್ತು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವ ಕ್ರಮಗಳನ್ನು ಒಳಗೊಂಡಿರುತ್ತವೆ. ಇದೊಂದು ಪರಿಸರ ಸ್ನೇಹಿ ತಾಣವಾಗಿದೆ. ಇಲ್ಲಿ ಧೂಮಪಾನ ಮತ್ತು ಮಧ್ಯಪಾನಗಳಿಗೆ ಅವಕಾಶವಿಲ್ಲ. ಇದು ಧೂಮಪಾನ, ಮದ್ಯಪಾನ ಮತ್ತು ಯಾವುದೇ ರಾಸಾಯನಿಕ ಆಧಾರಿತ ವೈಯಕ್ತಿಕ ಉತ್ಪನ್ನಗಳಿಗೆ ಶೂನ್ಯ ಸಹಿಷ್ಣುತೆಯ ವಲಯವಾಗಿದೆ. ಮತ್ತು ಇಲ್ಲಿ ನಿಮಗೆ ಮೊಬೈಲ್ ನೆಟವರ್ಕ್ ಸಿಗುವುದಿಲ್ಲ.
ಚಟುವಟಿಕೆಗಳು
ಹೊನ್ನೆಮರಡುವಿನಲ್ಲಿ ಕೊರಾಕಲ್ ರೈಡ್
ಶರಾವತಿ ನದಿಯ ಹಿನ್ನೀರಿನಲ್ಲಿ ಮುಳುಗಿರಿ. ಒಂದು ಸುಂದರವಾದ ಅನುಭವನ್ನು ನಿಮ್ಮದಾಗಿಸಿಕೊಳ್ಳಿ. ನೀವು ಪ್ರಕೃತಿ ಪ್ರಿಯರಾಗಿದ್ದರೆ, ಸಾಹಸ ಪ್ರಿಯರಾಗಿದ್ದರೆ, ಲ್ಯಾಂಡ್‌ಸ್ಕೇಪ್ ಛಾಯಾಗ್ರಾಹಕರಾಗಿದ್ದರೆ ಅಥವಾ ಸ್ವಲ್ಪ ತಾಜಾ ಗಾಳಿಯಲ್ಲಿ ಪಾಲ್ಗೊಳ್ಳಲು ಬಯಸಿದರೆ, ಹೊನ್ನೆಮರಡು ಕಡೆಗೆ ಹೋಗಿ.
ಬೆಳಿಗ್ಗೆ ಅಲ್ಲಿಗೆ ಬೇಗ ತಲುಪಿ. ಇದರಿಂದ ನೀವು ಎಲ್ಲಾ ಚಟುವಟಿಕೆಗಳನ್ನು ಆನಂದಿಸಬಹುದು. ಯಾವುದೇ ಚಟುವಟಿಕೆಗಳಿಗೆ ಆತುರಪಡಬೇಡಿ. ಕೇವಲ ತೊಡಗಿಸಿಕೊಳ್ಳಿ. ತಾಜಾ ಸುಗಂಧಭರಿತ ಕಾಫಿಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ ಮತ್ತು ನೇರವಾಗಿ ಜಲ ಕ್ರೀಡೆಗಳ ಕಡೆಗೆ ಹೋಗಿ. ಶರಾವತಿ ನದಿಯ ಶುದ್ಧತೆ ಮತ್ತು ದೈವತ್ವದಲ್ಲಿ ಮುಳುಗಿ. ನಿಮಗೆ ಈಜು ತಿಳಿದಿಲ್ಲದಿದ್ದರೆ ಚಿಂತಿಸಬೇಕಾಗಿಲ್ಲ. ಲೈಫ್-ಜಾಕೆಟ್‌ಗಳು ಎಲ್ಲವನ್ನೂ ಸುಲಭಗೊಳಿಸುತ್ತವೆ . ಅಲ್ಲಿ ಇರುವ ಎಲ್ಲ ಸಾಹಸಮಯ ಚಟುವಟಿಕೆಗಳನ್ನು ಆನಂದಿಸಿ. ಸುತ್ತಲೂ ಬೆಟ್ಟಗಳಿಂದ ಆವೃತವಾಗಿರುವ ಹೊನ್ನೆಮರಡುವಿನ ಸುಂದರ ಆಕಾಶದ ಕೆಳಗಿನ ತೆರೆದ ನೀರಿನಲ್ಲಿ ಈಜುವುದೆಂದರೇ ಸ್ವರ್ಗಕ್ಕೆ ಸಮಾನ. ಒಂದು ಅದ್ಭುತ ಅನುಭವ. ನೀವು ತೆರೆದ ನೀರಿನಲ್ಲಿ ಈಜುವುದರಿಂದ ನಿಮ್ಮ ದೇಹದ ಎಲ್ಲಾ ಸ್ನಾಯುಗಳು ಸರಳಗೊಳ್ಳುತ್ತವೆ ಮತ್ತು ಮನಸ್ಸು ನೆಮ್ಮದಿಯನ್ನು ಪಡೆಯುತ್ತದೆ. ರುಚಿಕರವಾದ ಸ್ಥಳೀಯ ಭೋಜನವೆಂದರೆ ನನಗೆ ತುಂಬಾ ಇಷ್ಟ. ನಾನು ಇಲ್ಲಿನ ಸ್ಥಳೀಯ ರುಚಿಕರ ಆಹಾರಗಳನ್ನು ಸೇವಿಸಿದ್ದೇನೆ.
ಹೊನ್ನೆಮರಡುವಿನಲ್ಲಿ ಕಯಾಕಿಂಗ್
ನಾವು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಮತ್ತೆ ನೀರಿನಲ್ಲಿ ಧುಮಿಕೆದೆವು. ಈ ಸಲ ಕಯಾಕಿಂಗ್ ಮತ್ತು ಕೋರಾಕಲ್ ಬೋಟಿಂಗ್ ರೈಡ್ ಗಾಗಿ. ಇದೊಂದು ಅದ್ಭುತ ಅನುಭವವಾಗಿತ್ತು. ಇಲ್ಲಿನ ಮಂತ್ರಮುಗ್ಧಗೊಳಿಸುವ ಸೂರ್ಯಾಸ್ತ ಮತ್ತು ನೀರಿನ ಮೇಲೆ ಅದರ ಪ್ರತಿಬಿಂಬ, ನೀಲಿ ಆಕಾಶದಲ್ಲಿ ತಮ್ಮ ಗೂಡುಗಳ ಕಡೆಗೆ ಸಾಗುತ್ತಿರುವ ಹಕ್ಕಿಗಳು ಮತ್ತು ಅವು ಮಾಡುವ ಚಿಲಿಪಿಲಿ. ಇದೆಲ್ಲವೂ ಇಲ್ಲಿನ ಪ್ರಕೃತಿ ವೈಭವವನ್ನು ಇಮ್ಮಡಿಗೊಳಿಸಿತ್ತು.
ನಕ್ಷತ್ರ ವೀಕ್ಷಣೆ ಮತ್ತು ಬೋನಾಫೈರ್ (ಅಗ್ನಿ ಧುನಿ)
ಹೊನ್ನೆಮರಡುವಿನಲ್ಲಿ ದೀಪೋತ್ಸವ
ನಾವು ಸ್ವಲ್ಪಹೊತ್ತು ಟ್ರೆಕ್ಕಿಂಗ್ ಮಾಡಿದ ನಂತರ ಒಂದು ಕಡೆ ನಿಂತೆವು. ನಂತರ ನಮ್ಮ ಸಹ ಪಯಣಿಗರೊಂದಿಗೆ ನಕ್ಷತ್ರ ವೀಕ್ಷಣೆ ಮತ್ತು ಬೋನಾಫೈರ್ ಆನಂದಿಸಿದೆವು. ಈ ಸಮಯ ನಿಜವಾಗಲೂ ಅದ್ಭುತವಾಗಿತ್ತು. ನಕ್ಷತ್ರಗಳ ಬೆಳಕಿನಲ್ಲಿ ಪ್ರೇರಣಾದಾಯಕ ಕಥೆಗಳನ್ನು ಪರಸ್ಪರ ಹಂಚಿಕೊಳ್ಳುವುದು ನಿಜಕ್ಕೂ ಆನಂದ ನೀಡುವಂತದ್ದು.
ಟ್ರೆಕ್ಕಿಂಗ್
ಎರಡನೇ ದಿನ ನಾವು ಟ್ರೆಕ್ಕಿಂಗ್ ಅನ್ನು ಸ್ವಲ್ಪ ಬೇಗನೇ ಆರಂಭಿಸಿದೆವು. ಅದೊಂದು ಸುಂದರ ಮುಂಜಾವು ಆಗಿತ್ತು. ಎಲ್ಲೆಡೆ ಕಪ್ಪು ಮೋಡಗಳು ಹರಡಿದ್ದವು ಮತ್ತು ಹಕ್ಕಿಗಳ ಚಿಲಿಪಿಲಿ ನಾದವು ಕೇಳುತ್ತಿತ್ತು. ಈ ಟ್ರೆಕ್ಕಿಂಗ್ ಚಿಕ್ಕ ಮತ್ತು ಸರಳವಾದುದಾಗಿತ್ತು. ಅಂದರೆ ಸುಮಾರು 4 ಕೀ ಮಿ ಟ್ರೆಕ್ಕಿಂಗ್ ಇದಾಗಿತ್ತು. ಮೊದಲ ಬಾರಿಗೆ ಅಂಕುಡೊಂಕಾದ ಹಾದಿಗಳ ಮೂಲಕ ದಾಟುವುದು ರೋಮಾಂಚನಕಾರಿಯಾದ ಅನುಭವವಾಗಿತ್ತು. ನನ್ನೊಂದಿಗೆ ಬಂದ ಇತರ ಸ್ನೇಹಿತರು ಒಂದು ಬೆಟ್ಟದ ಕಡೆಗೆ ಓಡಿದರು. ಅಲ್ಲಿ ಭೀಮನ ಹೆಜ್ಜೆ ಇದೆ ಎಂದು ಹೇಳಲಾಗುತ್ತದೆ. ನಾವು ಬೆಟ್ಟದ ಮೇಲೆ ಭೀಮನ ಹೆಜ್ಜೆ ಎಂದು ಹೇಳಲಾದ ಸ್ಥಳವನ್ನು ವೀಕ್ಷಿಸಿದೆವು.ಭೀಮನು ಈ ಸ್ಥಳಕ್ಕೆ ಭೇಟಿ ನೀಡಿದಾಗ ಈ ಅವನ ಹೆಜ್ಜೆ ಗುರುತುಗಳು ಮೂಡಿದವು ಎಂದು ಸ್ಥಳೀಯರಲ್ಲಿ ನಂಬಿಕೆ ಇದೆ.
ಎಲ್ಲ ವಿಷಯಗಳು ಕೊನೆಗೊಳ್ಳಬೇಕು ಅಲ್ಲವೇ? ಅಂತೆಯೇ ನಮ್ಮ ಹೊನ್ನೆಮರಡುವಿನ ಪಯಣ ಅಂತಿಮ ಹಂತಕ್ಕೆ ಬಂದಿತು. ನಾವು ನಮ್ಮ ಅತಿಥೇಯರಿಗೆ ವಿದಾಯ ಹೇಳಿ ಮುಂದಿನ ಪಯಣಕ್ಕೆ ಸಿದ್ಧರಾದೆವು. ನಮ್ಮ ಮುಂದಿನ ಪಯಣ ಜಗತ್ಪ್ರಸಿದ್ಧ ಜೋಗ ಜಲಪಾತಕ್ಕೆ ಹೋಗುವುದಾಗಿತ್ತು. ಶಿವಮೊಗ್ಗದಲ್ಲಿರುವ ಜೋಗ ಜಲಪಾತವು ಭಾರತದ ಎರಡನೇ ಅತಿ ಎತ್ತರದ ಧುಮ್ಮಿಕ್ಕುವ ಜಲಪಾತವಾಗಿದೆ.ಇಲ್ಲಿಗೊಮ್ಮೆ ನೀವು ಖಂಡಿತವಾಗಿಯೂ ಭೇಟಿ ನೀಡಲೇಬೇಕು.
ಶರಾವತಿ ನದಿಯ ಹಿನ್ನೀರು
ತಲುಪುವುದು ಹೇಗೆ?
ಶರಾವತಿ ನದಿಯ ಹಿನ್ನೀರು
ಹೊನ್ನೆಮರಡು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿರುವ ಶರಾವತಿ ನದಿಯ ಹಿನ್ನೀರು ಸುತ್ತುವರೆದಿರುವ ಒಂದು ಪುಟ್ಟ ಗ್ರಾಮ. ಈ ಸಾಹಸಮಯ ತಾಣವನ್ನು ರಸ್ತೆ, ರೈಲು ಮತ್ತು ವಿಮಾನದ ಮೂಲಕ ತಲುಪಬಹುದು.
ವಿಮಾನದ ಮೂಲಕ
ಹೊನ್ನೆಮರಡುವಿಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೇ ಮಂಗಳೂರು ವಿಮಾನ ನಿಲ್ದಾಣ. ಇದು ಮಂಗಳೂರಿನಿಂದ 200 ಕೀಲೊ ಮೀಟರ್ ದೂರದಲ್ಲಿದೆ. ಆದರೆ ಇಲ್ಲಿಗೆ ರೈಲು ಮತ್ತು ಬಸ್ಸಿನ ಮೂಲಕ ಪಯಣಿಸುವುದೇ ಒಂದು ಅದ್ಭುತ. ಈ ಸಮಯದಲ್ಲಿ ನೀವು ಇಲ್ಲಿನ ಪ್ರಕೃತಿ ವೈಭವವನ್ನು ಸವಿಯಬಹುದು.
ರೈಲಿನ ಮೂಲಕ
ಇಲ್ಲಿಗೆ ಬೆಂಗಳೂರು ಮತ್ತು ಮೈಸೂರಿನಿಂದ ತಲುಪಲು ರೈಲುಗಳಿವೆ. ಶಿವಮೊಗ್ಗದ ತಾಳಗುಪ್ಪ ಇಲ್ಲಿನ ಹತ್ತಿರ ರೇಲ್ವೆ ನಿಲ್ದಾಣವಾಗಿದೆ. ತಾಳಗುಪ್ಪ ರೇಲ್ವೆ ನಿಲ್ದಾಣದಿಂದ ಹೊನ್ನೆಮರಡು ತಲುಪಲು ನೀವು ಮತ್ತೆ ರಸ್ತೆ ಸಾರಿಗೆಯನ್ನು ಅವಲಂಬಿಸಬೇಕು. ತಾಳಗುಪ್ಪದಿಂದ ಹೊನ್ನೆಮರಡು ಸುಮಾರು ಹತ್ತು ಹನ್ನೆರಡು ಕೀ ಮಿ ದೂರದಲ್ಲಿದೆ. ಇಲ್ಲಿಗೆ ತಲುಪಲು ಲೋಕಲ್ ಜೀಪಗಳು ಮತ್ತು ಆಟೋ ರಿಕ್ಷಾಗಳು ಲಭ್ಯವಿದೆ.
ರಸ್ತೆ ಸಾರಿಗೆ ಮೂಲಕ
ಹೊನ್ನೆಮರಡು ತಲಪಲು ಇರುವ ಅತ್ಯುತ್ತಮ ಮಾರ್ಗವೆಂದರೆ ರಸ್ತೆ. ಬಸ್, ರೈಲು ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು. ಈ ಹಳ್ಳಿಯು ಮೈಸೂರು ಮತ್ತು ಬೆಂಗಳೂರಿನೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇದು ಬೆಂಗಳೂರಿನಿಂದ 400 ಕೀ ಮಿ ದೂರದಲ್ಲಿದೆ.
ತಲುಪಲು ಸರಿಯಾದ ಸಮಯ
ಹೊನ್ನೆಮರಡುವಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲದ ನಂತರದ ಸಮಯ. ಆಗ ಈ ಸ್ಥಳವು ಹಿನ್ನೀರಿನ ಕಾರಣದಿಂದ ಸುತ್ತಲೂ ಹಚ್ಚ ಹಸಿರು ಮತ್ತು ಸಂಪೂರ್ಣ ವೈಭವದಿಂದ ಕೂಡಿರುತ್ತದೆ. ಹಾಗಾಗಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಆಗಸ್ಟ್ ನಿಂದ ಜನವರಿ ತಿಂಗಳುಗಳು.ಇನ್ನೂ ಉಳಿದ ತಿಂಗಳುಗಳಲ್ಲಿ ಇಲ್ಲಿ ಸ್ವಲ್ಪ ಬೆಚ್ಚಗಿನ ವಾತಾವರಣ ಇರುತ್ತದೆ.
ಜೊತೆಗೆ ತೆಗೆದುಕೊಂಡಬೇಕಾದ ವಸ್ತುಗಳು
ಈ ಸ್ಥಳವು ಪರಿಸರ ಸ್ನೇಹಿ ಆಗಿದ್ದು ಪ್ರವಾಸಿಗರು ತಮ್ಮೊಂದಿಗೆ ತಟ್ಟೆಗಳು, ಚಮಚೆಗಳು, ಚಾಕುಕತ್ತರಿಗಳು, ಹೆಚ್ಚುವರಿ ಬಟ್ಟೆಗಳು, ಈಜು ಸಮವಸ್ತ್ರಗಳು, ಔಷಧಗಳು, ಸೊಳ್ಳೆ ನಿವಾರಕಗಳು ಮತ್ತು ಸನ್ ಸ್ಕ್ರೀನ್ ಲೋಷನ್ ಒಯ್ಯಬೇಕಾಗುತ್ತದೆ.
ಸುರಕ್ಷಿತವಾಗಿರಿ!