Karnataka Tourism
GO UP
Image Alt

ಬೀದರ್‌ನಲ್ಲಿರುವ ಸ್ಮಾರಕಗಳು

separator
  /  ಬ್ಲಾಗ್   /  ಬೀದರ್‌ನಲ್ಲಿರುವ ಸ್ಮಾರಕಗಳು
Bidar Fort

ಬೀದರ್‌ನಲ್ಲಿರುವ ಸ್ಮಾರಕಗಳು

ಬೀದರ್ ಐತಿಹಾಸಿಕ ನಗರ ಆಗಿದ್ದು ಇದನ್ನು ಸಾಮಾನ್ಯವಾಗಿ ‘ವಿಸ್ಪರಿಂಗ್ ಸ್ಮಾರಕಗಳ ನಗರ’ ಎಂದು ಕರೆಯಲಾಗುತ್ತದೆ ಮತ್ತು ವೈಭವಯುತ ಐತಿಹಾಸಿಕ ಗತಕಾಲದಿಂದ 60 ಕ್ಕೂ ಹೆಚ್ಚು ಸ್ಮಾರಕಗಳನ್ನು ಹೊಂದಿದೆ. ಕರ್ನಾಟಕದ ಕಿರೀಟ ಎಂದು ಕರೆಯಲ್ಪಡುವ ಬೀದರ್ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿದೆ. ಬೀದರ್ ನಗರವನ್ನು ಚಾಲುಕ್ಯರು, ಕಾಕತೀಯರು, ತುಘಲಕ್‌ಗಳು, ರಾಷ್ಟ್ರಕೂಟರು, ಬಹಮನಿ ಶಾಹಿ ಮತ್ತು ಹೈದರಾಬಾದಿ ನಿಜಾಮರಂತಹ ಅನೇಕ ಆಡಳಿತಗಾರರು ಆಳಿದ್ದಾರೆ. ಬೀದರ್‌ನಲ್ಲಿರುವ ಸ್ಮಾರಕಗಳು ಜಿಲ್ಲೆಯ ಮತ್ತು ರಾಜ್ಯದ ಮಹತ್ವದ ಶ್ರೀಮಂತ ಇತಿಹಾಸವನ್ನು ವಿವರಿಸುತ್ತದೆ. ಬೀದರ್‌ನಲ್ಲಿರುವ ಸ್ಮಾರಕಗಳ ಅದ್ಭುತ ವಾಸ್ತುಶಿಲ್ಪವು ಹಿಂದೂ, ಟರ್ಕಿಶ್ ಮತ್ತು ಪರ್ಷಿಯನ್ ಶೈಲಿಗಳ ಆಸಕ್ತಿದಾಯಕ ಮಿಶ್ರಣವಾಗಿದೆ. ಬೀದರ್ ತನ್ನ ಹಲವಾರು ವಾಸ್ತುಶಿಲ್ಪ, ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಹೆಸರುವಾಸಿಯಾಗಿದ್ದು ತನ್ನ ಶ್ರೀಮಂತ ಪರಂಪರೆಯಿಂದಾಗಿ ಭಾರತದ ಪುರಾತತ್ವ ನಕ್ಷೆಯಲ್ಲಿ ನಗರವು ಪ್ರಮುಖ ಸ್ಥಾನವನ್ನು ಹೊಂದಿದೆ.
ಬೀದರ್‌ನಲ್ಲಿರುವ ಎಲ್ಲಾ 60 ಕ್ಕೂ ಹೆಚ್ಚು ಸ್ಮಾರಕಗಳು ಪ್ರಸಿದ್ಧವಾಗಿದ್ದು ಭೇಟಿ ನೀಡಲು ಯೋಗ್ಯವಾಗಿವೆ.ಇತಿಹಾಸ ಪ್ರಿಯರು ಬೀದರ್ ನಗರಕ್ಕೆ ಭೇಟಿ ನೀಡಲೇ ಬೇಕು.

ಬೀದರ್ ಕೋಟೆ

ಬೀದರ್ ಕೋಟೆ

ಇಸ್ಲಾಮಿಕ್ ವಾಸ್ತುಶಿಲ್ಪ ಮತ್ತು ನೀರು ಸರಬರಾಜು ವ್ಯವಸ್ಥೆಗೆ ಹೆಸರುವಾಸಿಯಾದ ಬೀದರ್ ಕೋಟೆಯು ಪ್ರಸಿದ್ಧವಾದ ಸ್ಮಾರಕವಾಗಿದ್ದು ಇಲ್ಲಿನ ಅವಶೇಷಗಳು ಐತಿಹಾಸಿಕ ಗತ ವೈಭವವನ್ನು ಸಾರುತ್ತವೆ. ಬೀದರ್ ಕೋಟೆಯನ್ನು 14 ನೇ ಶತಮಾನದಲ್ಲಿ ಅಹ್ಮದ್ ಶಾ ವಲಿ ಬಹಮಾನ್ ನಿರ್ಮಿಸಿದನು. ಏಕೆಂದರೆ ಬೀದರ್ ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಸುಲ್ತಾನ್ ಅಹ್ಮದ್ ಶಾ-I ಅವರು ಗುಲ್ಬರ್ಗಾದಿಂದ ಅಂದರೆ ಕಲ್ಬುರ್ಗಿ ಯಿಂದ ಬೀದರ್‌ಗೆ ರಾಜಧಾನಿಯನ್ನು ಬದಲಾಯಿಸಿದಾಗ ಈ ಕೋಟೆಯನ್ನು ನವೀಕರಿಸಿದರು. ಬೀದರ್ ಕೋಟೆಯಲ್ಲಿ 30 ಕ್ಕೂ ಹೆಚ್ಚು ಇಸ್ಲಾಮಿಕ್ ಸ್ಮಾರಕಗಳಿವೆ, ಕೋಟೆಗೆ ಏಳು ಪ್ರವೇಶದ್ವಾರಗಳಿವೆ. ಬೀದರ್ ಕೋಟೆಯು ಇಸ್ಲಾಮಿಕ್ ಮತ್ತು ಪರ್ಷಿಯನ್ ವಾಸ್ತುಶೈಲಿಯ 37 ಬುರುಜುಗಳೊಂದಿಗೆ ಲೋಹದ ಕವಚದ ಫಿರಂಗಿಗಳನ್ನು ಹೊಂದಿದೆ. ಮುಖ್ಯ ಕೋಟೆಯು ಮಹಲ್‌ಗಳು, ಮಸೀದಿಗಳನ್ನು ಹೊಂದಿದೆ.

ಪ್ರಯಾಣ ಸಲಹೆಗಳು:

  1. ಕೋಟೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.
  2. ಛಾಯಾಗ್ರಹಣವನ್ನು ಅನುಮತಿಸಲಾಗಿದೆ.
  3. ಕೋಟೆಯನ್ನು ನೋಡಲು ನಿಮಗೆ ಕನಿಷ್ಠ 2 ಗಂಟೆಗಳ ಅಗತ್ಯವಿದೆ.
  4. ಕೋಟೆಯ ಸಮಯಗಳು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ. (ಹೋಗುವ ಮೊದಲು ದಯವಿಟ್ಟು ಸ್ಥಳೀಯ ಅಧಿಕಾರಿಗಳೊಂದಿಗೆ ಸಮಯವನ್ನು ಪರಿಶೀಲಿಸಿ)

ಬಹಮನಿ ಗೋರಿಗಳು

ಬಹಮನಿ ಗೋರಿಗಳು

ಸುಂದರವಾಗಿ ಅಲಂಕರಿಸಲ್ಪಟ್ಟ ಗುಮ್ಮಟದ ಸಮಾಧಿಗಳು ಮತ್ತು ಅಷ್ಟೂರ್‌ನಲ್ಲಿರುವ 12 ಬಹಮನಿ ಸಮಾಧಿಗಳ ವಿಶಿಷ್ಟ ಸಮೂಹಗಳಿಗೆ ಬೀದರ್‌ನಲ್ಲಿ ಪ್ರತಿಯೊಬ್ಬ ಪ್ರವಾಸಿಗರು, ಇತಿಹಾಸ ಉತ್ಸಾಹಿಗಳು ಮತ್ತು ಪುರಾತತ್ತ್ವ ಶಾಸ್ತ್ರ ಮತ್ತು ಪ್ರಾಚೀನ ವಾಸ್ತುಶೈಲಿಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿರುವವರು ಭೇಟಿ ನೀಡಲೇಬೇಕು. ಅಹ್ಮದ್ ಶಾ ಅಲ್-ವಾಲಿ ನಿರ್ಮಿಸಿದ ಈ ಗೋರಿಗಳು ಭವ್ಯವಾದ ಗುಮ್ಮಟಗಳು, ಗೂಡುಗಳು ಮತ್ತು ಕಮಾನುಗಳನ್ನು ಅಳವಡಿಸಿಕೊಂಡಿವೆ. ಈ ಗೋರಿಗಳ ಪ್ರಮುಖ ಆಕರ್ಷಣೆಯೆಂದರೆ ಸುವರ್ಣ ಬಣ್ಣದಲ್ಲಿ ಬರೆಯಲಾದ ಕುರಾನ್‌ನ ಪದ್ಯಗಳನ್ನು ಕೆತ್ತಲಾದ ಆಕರ್ಷಕ ಗೋಡೆಗಳು. ಇದು ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಈ ಸಮಾಧಿಗಳು ಸುಂದರವಾದ ಹೂವಿನ ವಿನ್ಯಾಸಗಳು, ಧಾರ್ಮಿಕ ಪಠ್ಯಗಳು, ಅದ್ಭುತವಾದ ಚಿತ್ರಿಸಿದ ಛಾವಣಿಗಳು, ಕಲಾತ್ಮಕವಾಗಿ ಚಿತ್ರಿಸಿದ ಅಂಚುಗಳನ್ನು ಪ್ರದರ್ಶಿಸುತ್ತವೆ. ಈ ಅಷ್ಟೂರ್ ಅಥವಾ ಬಹಮನಿ ಗೋರಿಗಳು ಎಲ್ಲಾ ವಿಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪ್ರಯಾಣ ಸಲಹೆಗಳು:

  1. ಬಹಮನಿ ಗೋರಿಗಳು ಅಷ್ಟೂರ್ ಗ್ರಾಮದಲ್ಲಿವೆ ಮತ್ತು ರೈಲು ನಿಲ್ದಾಣದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ.
  2. ಈ ಸಮಾಧಿಗಳನ್ನು ನೋಡಲು ನಿಮಗೆ ಕನಿಷ್ಠ ಒಂದು ಗಂಟೆ ಬೇಕು.
  3. ಸಮಾಧಿಗಳು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ತೆರೆದಿರುತ್ತವೆ. ಆದಾಗ್ಯೂ, ವಿಶೇಷ ದಿನಗಳಲ್ಲಿ ಸಮಯವು ಭಿನ್ನವಾಗಿರಬಹುದು. ಅಷ್ಟೂರ್ ತಲುಪುವ ಮೊದಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಮಯವನ್ನು ಪರಿಶೀಲಿಸಬೇಕು.

ಮಹ್ಮದ್ ಗವಾನರ ಮದರಸ

ಮಹ್ಮದ್ ಗವಾನರ ಮದರಸ

ಮೊಹಮುದ್ ಗವಾನ್ ಮದರಸಾವು 1460 ರ ದಶಕದಲ್ಲಿ ನಿರ್ಮಿಸಲಾದ ಇಸ್ಲಾಮಿಕ್ ಕಾಲೇಜಿನ ಅವಶೇಷಗಳು ಮೂರು ಅಂತಸ್ತಿನ ಪಾರಂಪರಿಕ ಆಸ್ತಿಯಾಗಿದ್ದು, ಸಂಕೀರ್ಣವಾದ ಟೈಲ್ ಕೆಲಸ ಮತ್ತು ಕುರಾನ್‌ನ ಪದ್ಯಗಳಿಂದ ಅಲಂಕರಿಸಲ್ಪಟ್ಟಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳ ಪಟ್ಟಿಯಲ್ಲಿ ಈ ಹೆಗ್ಗುರುತು ಪರಂಪರೆಗೆ ವಿಶೇಷ ಸ್ಥಾನವಿದೆ. ಈ ಮದರಸಾವು ಒಂದು ಕಾಲದಲ್ಲಿ ಮಸೀದಿ, ಗ್ರಂಥಾಲಯ, ಉಪನ್ಯಾಸ ಭವನಗಳು, ಪ್ರಾಧ್ಯಾಪಕರ ನಿವಾಸಗಳು ಮತ್ತು ವಿದ್ಯಾರ್ಥಿ ಕೋಣೆಗಳನ್ನು ಹೊಂದಿತ್ತು.ಇಲ್ಲಿ ವಿದ್ಯಾರ್ಥಿಗಳಿಗೆ ಅರೇಬಿಕ್, ಪರ್ಷಿಯನ್ ಭಾಷೆಗಳು, ತತ್ವಶಾಸ್ತ್ರ, ಖಗೋಳಶಾಸ್ತ್ರ, ದೇವತಾಶಾಸ್ತ್ರ ಮತ್ತು ಗಣಿತವನ್ನು ಕಲಿಸಲಾಗುತ್ತಿತ್ತು. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ಸೌಲಭ್ಯಗಳನ್ನು ನೀಡಲಾಗುತ್ತದೆ.ಮೊಹಮ್ಮದ್ ಗವಾನ್ ಕಟ್ಟಡದ ಮದ್ರಸಾವು 1695 ರಲ್ಲಿ ಗನ್ ಪೌಡರ್ ಸ್ಫೋಟದಿಂದಾಗಿ ಸಾಕಷ್ಟು ಹಾನಿಯನ್ನು ಅನುಭವಿಸಿತು. ಆದಾಗ್ಯೂ, ಅದರ ಬಲವಾದ ನಿರ್ಮಾಣ ಮತ್ತು ಅದ್ಭುತವಾದ ವಾಸ್ತುಶಿಲ್ಪದಿಂದಾಗಿ, ಇದು ಇನ್ನೂ ತನ್ನ ವೈಭವವನ್ನು ಉಳಿಸಿಕೊಂಡಿದೆ. ಹಸಿರು, ಹಳದಿ ಮತ್ತು ಬಿಳಿ ಬಣ್ಣಗಳ ವರ್ಣರಂಜಿತ ಹೆಂಚುಗಳಿಂದ ಕೂಡಿದ ಮುಂಭಾಗ, 300 ಕ್ಕೂ ಹೆಚ್ಚು ಸಂಪುಟಗಳ ಹಸ್ತಪ್ರತಿಗಳು, ಕಲಾಕೃತಿಗಳು ಮತ್ತು ಕುರಾನ್‌ನಿಂದ ಉಲ್ಲೇಖಗಳೊಂದಿಗೆ ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ಹೊಂದಿರುವ ಬೃಹತ್ ಗ್ರಂಥಾಲಯ ಸೇರಿದಂತೆ ಹಲವು ಕಾರಣಗಳಿಗಾಗಿ ಈ ಮದರಸಾವು ಇತಿಹಾಸ ಉತ್ಸಾಹಿಗಳು, ಸಾಹಿತ್ಯ ಪ್ರೇಮಿಗಳು ಮತ್ತು ಪ್ರಯಾಣಿಕರನ್ನು ಆಕರ್ಷಿಸುತ್ತದೆ. .

ಪ್ರಯಾಣ ಸಲಹೆಗಳು:

  1. ಮದ್ರಸ ಬೀದರ್ ಕೋಟೆ ಮತ್ತು ಚೌಬಾರಾಕ್ಕೆ ಹತ್ತಿರದಲ್ಲಿದೆ.
  2. ಇದು ರೈಲು ನಿಲ್ದಾಣದಿಂದ ಕೇವಲ 2 ಕಿಮೀ ದೂರದಲ್ಲಿದೆ.
  3. ಸ್ಮಾರಕವನ್ನು ನೋಡಲು ನೀವು ಕನಿಷ್ಟ ಒಂದು ಗಂಟೆ ಕಳೆಯಬೇಕು.
  4. ಸಮಾಧಿಗಳು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ತೆರೆದಿರುತ್ತವೆ. ಆದಾಗ್ಯೂ, ವಿಶೇಷ ದಿನಗಳಲ್ಲಿ ಸಮಯವು ಭಿನ್ನವಾಗಿರಬಹುದು. ಸ್ಥಳವನ್ನು ತಲುಪುವ ಮೊದಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಮಯವನ್ನು ಪರಿಶೀಲಿಸಿ.
  5. ಸಾಕಷ್ಟು ವಾಕಿಂಗ್ ಇರುವುದರಿಂದ ಆರಾಮದಾಯಕ ಪಾದರಕ್ಷೆಗಳನ್ನು ಧರಿಸಿ.
  6. ಸ್ಮಾರಕಕ್ಕೆ ಯಾವುದೇ ಪ್ರವೇಶ ಟಿಕೆಟ್ ಇರುವುದಿಲ್ಲ.

ಬಸವ ಕಲ್ಯಾಣ

ಬಸವ ಕಲ್ಯಾಣ

ಬೀದರ್ ಜಿಲ್ಲೆಯಿಂದ ಕೇವಲ 80 ಕಿಮೀ ದೂರದಲ್ಲಿರುವ ಬಸವಕಲ್ಯಾಣವು ಕಲ್ಯಾಣ ಚಾಲುಕ್ಯ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಒಂದು ಕಾಲದಲ್ಲಿ ಬಸವಕಲ್ಯಾಣವು ಈ ಪ್ರದೇಶದ ಸಂಪತ್ತು ಮತ್ತು ಸಮೃದ್ಧಿಯ ಕೇಂದ್ರವಾಗಿತ್ತು. ಕೋಟೆ, ದೇವಸ್ಥಾನ, ಸರೋವರ, ಅನುಭವ ಮಟಪ, ಮತ್ತು ಪರುಷ ಕಟ್ಟೆ (ತತ್ವಜ್ಞಾನಿಗಳ ಕಟ್ಟೆ) ಗಳಿಗೆ ಹೆಸರುವಾಸಿಯಾದ ಈ ಸ್ಥಳವು ದೊಡ್ಡ ಮಹಾನಗರವಾಗಿತ್ತು. ತನ್ನ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾದ ಬಸವಕಲ್ಯಾಣವು 12 ನೇ ಶತಮಾನದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸುಧಾರಕ ಬಸವೇಶ್ವರರ ಕರ್ಮಭೂಮಿಯಾಗಿದೆ.. ಈ ಕಾಂಪ್ಲೆಕ್ಸ್ ಮೋತಿ ಮಹಲ್, ಹೈದರಿ ಮಹಲ್ ಮತ್ತು ಪೀರನ್ ದುರ್ಗದಂತಹ ಕೆಲವು ಇಸ್ಲಾಮಿಕ್ ಸ್ಮಾರಕಗಳನ್ನು ಸಹ ಹೊಂದಿದೆ. ಚಾಲುಕ್ಯರು ಮತ್ತು ನಂತರ ನಿಜಾಮರ ಆಳ್ವಿಕೆಯಲ್ಲಿ ನಿರ್ಮಿಸಲಾದ ಕೋಟೆಯಲ್ಲಿರುವ ವಸ್ತುಸಂಗ್ರಹಾಲಯವು 10 ಮತ್ತು 11 ನೇ ಶತಮಾನಗಳ ಐತಿಹಾಸಿಕ ಅಮೂಲ್ಯ ವಸ್ತುಗಳು ಮತ್ತು ಜೈನ ವಿಗ್ರಹಗಳ ಅಪಾರ ಸಂಗ್ರಹವನ್ನು ಹೊಂದಿದೆ.

ಪ್ರಯಾಣ ಸಲಹೆಗಳು:

  1. ಭಾರತೀಯರಿಗೆ ಕಡಿಮೆ ಪ್ರವೇಶ ಶುಲ್ಕ ಮತ್ತು ವಿದೇಶಿಯರಿಗೆ ಸ್ವಲ್ಪ ಹೆಚ್ಚಿನ ಶುಲ್ಕವಿದೆ.
  2. ಇದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.
  3. ಬೀದರ್‌ನಿಂದ ಬಸ್‌ಗಳು ಮತ್ತು ಕ್ಯಾಬ್‌ಗಳು ಸಂಚರಿಸುತ್ತವೆ. ರೈಲಿನ ಮೂಲಕವೂ ಬಸವಕಲ್ಯಾಣ ತಲುಪಬಹುದು.
  4. ಬಸವಕಲ್ಯಾಣ ತಲುಪಲು ಸುಮಾರು ಒಂದು ಗಂಟೆ 20 ನಿಮಿಷಗಳು ಬೇಕಾಗುತ್ತದೆ.
ಬೀದರ್ ತಲುಪುವುದು ಹೇಗೆ?

ಬೀದರ್ ಜಿಲ್ಲೆಯು ರೈಲು, ರಸ್ತೆ ಮತ್ತು ವಿಮಾನ ಸಾರಿಗೆ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಬೀದರ್‌ಗೆ ಸಮೀಪವಿರುವ ದೊಡ್ಡ ಪಟ್ಟಣ ಎಂದರೆ ತೆಲಂಗಾಣ ರಾಜ್ಯದ ಹೈದರಾಬಾದ್ ಆಗಿದೆ. ಹೈದರಾಬಾದ್ ಬೀದರ್ ನಿಂದ ಸುಮಾರು 150 ಕಿ.ಮೀ. ದಲ್ಲಿದ್ದರೇ ಬೆಂಗಳೂರು, ಕರ್ನಾಟಕ ರಾಜ್ಯದ ರಾಜಧಾನಿ ಸುಮಾರು 690 ಕಿಮೀ ದೂರದಲ್ಲಿದೆ.

ವಿಮಾನದ ಸಾರಿಗೆ

ಬೀದರ್ ಉಡಾನ್ ಯೋಜನೆಯಡಿಯಲ್ಲಿ ವಿಮಾನ ನಿಲ್ದಾಣವನ್ನು ಹೊಂದಿದ್ದು ಬೆಂಗಳೂರಿಗೆ ಸಂಪರ್ಕ ಹೊಂದಿದೆ. ಇದಕ್ಕೆ ಹತ್ತಿರದ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಹೈದರಾಬಾದ್. ಇದು ಬೀದರ್ ನಗರದಿಂದ 149 ಕಿಮೀ ದೂರದಲ್ಲಿದೆ. ಬೀದರ್ ಹೈದರಾಬಾದ್ ನಿಂದ ರಸ್ತೆ ಮತ್ತು ರೈಲಿನ ಮೂಲಕ ಉತ್ತಮ ಸಂಪರ್ಕ ಹೊಂದಿದೆ.

ರೇಲ್ವೆ ಸಾರಿಗೆ

ಜಿಲ್ಲಾ ಕೇಂದ್ರವಾಗಿರುವ ಬೀದರ್ ಉತ್ತಮ ಸಂಪರ್ಕ ಹೊಂದಿದ ರೈಲು ನಿಲ್ದಾಣವನ್ನು ಹೊಂದಿದೆ. ದೇಶದ ವಿವಿಧ ಭಾಗಗಳಿಂದ ರೈಲುಗಳು ಬೀದರ್‌ಗೆ ಬರುತ್ತವೆ. ಇದಕ್ಕೆ ಹತ್ತಿರದ ಮತ್ತು ದೊಡ್ಡ ರೈಲ್ವೇ ಜಂಕ್ಷನ್ ಎಂದರೆ ವಾಡಿ ಜಂಕ್ಷನ್, ಇದು ಸುಮಾರು 140 ಕಿ.ಮೀ ದಲ್ಲಿದೆ.

ರಸ್ತೆ ಸಾರಿಗೆ

ಬೀದರ್ ಉತ್ತಮ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಬೀದರ್ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಇತರ ಪ್ರಮುಖ ನಗರಗಳಿಗೆ ಉತ್ತಮ ಬಸ್ ಸಂಪರ್ಕ ಹೊಂದಿದೆ. ಬೀದರ್ ನಗರವನ್ನು ನೋಡಲು ಬೀದರ್ ಅಥವಾ ಹೈದರಾಬಾದ್‌ನಿಂದ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು.

ಭೇಟಿ ನೀಡಲು ಉತ್ತಮ ಸಮಯ

ಉತ್ತರ ಕರ್ನಾಟಕದಲ್ಲಿರುವ ಬೀದರ್ ರಾಜ್ಯದ ಇತರ ಜಿಲ್ಲೆಗಳಿಗಿಂತ ತುಲನಾತ್ಮಕವಾಗಿ ಉಷ್ಣ ಪ್ರದೇಶವಾಗಿದೆ. ಬೀದರ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲದ ನಂತರದ ಸಮಯ. ಅಂದರೆ ಸೆಪ್ಟೆಂಬರ್‌ನಿಂದ ಫೆಬ್ರವರಿ ತಿಂಗಳುಗಳು ಬೀದರ್‌ಗೆ ಭೇಟಿ ನೀಡಲು ಉತ್ತಮ ಸಮಯ ಆಗಿದೆ.

ಏನು ಖರೀದಿಸಬೇಕು

ಬೀದರ್‌ನ ಸ್ಥಳೀಯ, ಜಿಐ (ಭೌಗೋಳಿಕ ಸೂಚನೆ) ಟ್ಯಾಗ್‌ನೊಂದಿಗೆ ಬಿದ್ರಿವೇರ್ ಅನ್ನು 14 ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಅಭಿವೃದ್ಧಿಪಡಿಸಲಾಯಿತು. ಬೀದರ್‌ನ ಜನಪ್ರಿಯ ಲೋಹದ ಕರಕುಶಲತೆಯು ಭಾರತದ ಪ್ರಮುಖ ಕರಕುಶಲ ವಸ್ತುಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಸಂಕೀರ್ಣವಾದ ಕರಕುಶಲತೆಯನ್ನು ಹೊಂದಿರುವ ಬೆಳ್ಳಿಯಿಂದ ಕೆತ್ತಿದ, ಬಿಳಿ ಹಿತ್ತಾಳೆಯು ಸೊಗಸಾದ ಕಲಾಕೃತಿಗಳು, ಮನೆಯ ಅಲಂಕಾರಗಳು ಮತ್ತು ಆಭರಣಗಳನ್ನು ಖರೀದಿಸಬಹುದು. ಈ ಪಾರಂಪರಿಕ ನಗರದಿಂದ ಬಿದ್ರಿವೇರ್ ಅನ್ನು ಖರೀದಿಸಬೇಕು.
ಇಸ್ಲಾಮಿಕ್ ಮತ್ತು ಹಿಂದೂ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಬೀದರ್‌ನಲ್ಲಿರುವ ಐತಿಹಾಸಿಕ ಅವಶೇಷಗಳು ಮತ್ತು ಸ್ಮಾರಕಗಳು ಪ್ರವಾಸಿಗರು ಮತ್ತು ಇತಿಹಾಸ ಪ್ರಿಯರಿಗೆ ಸ್ವರ್ಗವಾಗಿದೆ.

ಬಿದ್ರಿವೇರ್

ಚಿತ್ರ ಕ್ರೆಡಿಟ್‌ಗಳು:: ಅಮನ್ ಚನ್ನ, ದಿನೇಶ್ ಗಡ್ಡಿ ಮತ್ತು ಬೀದರ್ ಸೌಂದರ್ಯ