Karnataka Tourism
GO UP
Image Alt

ಕೆಳದಿ ರಾಮೇಶ್ವರ ದೇವಸ್ಥಾನ

separator
  /  ಬ್ಲಾಗ್   /  ಕೆಳದಿ ರಾಮೇಶ್ವರ ದೇವಸ್ಥಾನ

ಕೆಳದಿ ರಾಮೇಶ್ವರ ದೇವಸ್ಥಾನ

ಅವರಿಂದ

ಕೆಳದಿ ರಾಮೇಶ್ವರ ದೇವಸ್ಥಾನ

ಕರ್ನಟಕ ರಾಜ್ಯವು ಎಲ್ಲ ರೀತಿಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇಲ್ಲಿ ಅನ್ವೇಷಿಸಲು ಸಾಕಷ್ಟು ಪ್ರದೇಶಗಳಿವೆ. ಅಂತೆಯೇ ಶಿವಮೊಗ್ಗವು ತನ್ನ ಭವ್ಯವಾದ ಜೋಗ ಜಲಪಾತಕ್ಕೆ ಹೆಸರುವಾಸಿಯಾಗಿದ್ದರೂ, ಇಲ್ಲಿ ಪ್ರವಾಸಿಗರುಭೇಟಿ ನೀಡಲೇಬೇಕಾದ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಅಂತಹ ಒಂದು ಸ್ಥಳವೆಂದರೆ ಪ್ರಾಚೀನ ಕೆಳದಿ ರಾಮೇಶ್ವರ ದೇವಾಲಯ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಕೆಳದಿ ರಾಮೇಶ್ವರ ದೇವಸ್ಥಾನವು ಕೆಳದಿ ದೇವಸ್ಥಾನದಿಂದ ಕೆಲವು ಮೈಲುಗಳಷ್ಟು ದೂರದಲ್ಲಿರುವ ಇಕ್ಕೇರಿ ದೇವಸ್ಥಾನದ ಅವಳಿ ದೇವಸ್ಥಾನ ಎಂದೂ ಕರೆಯಲ್ಪಡುತ್ತದೆ.

ಕೆಳದಿ ದೇವಸ್ಥಾನ ಕುರಿತು

ಗಣೇಶ ದೇವಾಲಯ

ಕೆಳದಿ ಅರಸರು ಎಂದೂ ಕರೆಯಲ್ಪಡುವ ನಾಯಕರ ಆಳ್ವಿಕೆಗೆ ಒಳಪಟ್ಟ ಪಟ್ಟಣದಲ್ಲಿ ಇರುವ ಈ ದೇವಾಲಯವು ಕ್ರಿ.ಶ. 1500 ರಷ್ಟು ಹಿಂದಿನದಾಗಿದೆ. ಇದು ಪರಂಪರೆ ಮತ್ತು ವಾಸ್ತುಶಿಲ್ಪದ ಅತ್ಯುತ್ತಮ ಐತಿಹಾಸಿಕ ಉದಾಹರಣೆಯಾಗಿದೆ.ಈ ದೇವಾಲಯವನ್ನು ನಾಯಕರ ದೊರೆ ಚೌಡಪ್ಪ ನಾಯಕರು ನಿರ್ಮಿಸಿದರು. ಹೊಯ್ಸಳ-ದ್ರಾವಿಡ ಶೈಲಿಯ ವಾಸ್ತುಶಿಲ್ಪಶೈಲಿಯಲ್ಲಿ ಈ ದೇವಾಲಯಗಳನ್ನು ನಿರ್ಮಾಣಗೊಂಡಿದ್ದು ತನ್ನ ಶಿಲ್ಪಕಲೆ,ಕೆತ್ತನೆಗಳಿಂದ ಪ್ರಸಿದ್ಧವಾಗಿದೆ. 24 ಅಡಿ ಎತ್ತರದ ಸ್ತಂಭದ ಮೇಲೆ ಗಣೇಶನಿಗೆ ಗೌರವ ಸಲ್ಲಿಸುತ್ತಿರುವ ಮಹಿಳೆಯ ಮೂರ್ತಿಯು ಸುಲ್ತಾನ್ ಔರಂಗಜೇಬನ ವಿರುದ್ಧ ಧೈರ್ಯದಿಂದ ಹೋರಾಡಿದ ಕೆಳದಿ ರಾಣಿ ಚೆನ್ನಮ್ಮನದ್ದು ಎಂದು ನಂಬಲಾಗಿದೆ. ರಾಮೇಶ್ವರ ದೇವಾಲಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಾಲಯವು ಅಂದಿನ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಕಲೆಯನ್ನು ಚಿತ್ರಿಸುತ್ತದೆ ಮತ್ತು ಸಾಮ್ರಾಜ್ಯದ ವೈಭವದ ಗತಕಾಲವನ್ನು ಪ್ರದರ್ಶಿಸುತ್ತದೆ.
ಕೆಳದಿಯು ಪ್ರಖ್ಯಾತ ಕೆಳದಿ ನಾಯಕರ ಮೊದಲ ರಾಜಧಾನಿಯಾಗಿತ್ತು. ನಂತರ ಬಂದ ಅರಸ ಚಂದ್ರಪ್ಪ ನಾಯಕ ರು(ಕ್ರಿ.ಶ. 1499-1544) ತಮ್ಮ ರಾಜಧಾನಿಯನ್ನು ಇಕ್ಕೇರಿಗೆ ಮತ್ತು ವೀರಭದ್ರ ನಾಯಕರು (ಕ್ರಿ.ಶ. 1629-1645) ಕ್ರಿ.ಶ 1639 ರಲ್ಲಿ ಬಿದನೂರಿಗೆ ವರ್ಗಾಯಿಸಿದರು.
ನೀವು ಆವರಣದ ಅಚ್ಚುಕಟ್ಟಾಗಿ ನಿರ್ವಹಿಸಲಾದ ಹುಲ್ಲುಹಾಸುಗಳನ್ನು ಪ್ರವೇಶಿಸುತ್ತಿದ್ದಂತೆ ನಿಮಗೆ ಮುಖಮಂಟಪ ಮತ್ತು ಮಹಾಮಂಟಪದೊಂದಿಗೆ ಇರುವ ಈ 16 ನೇ ಶತಮಾನದ ದೇವಾಲಯ ಕಂಡುಬರುತ್ತದೆ. ರಾಮೇಶ್ವರ ದೇವಸ್ಥಾನದ ಮುಂದೆ ಶಿವನಿಗೆ ಅಭಿಮುಖವಾಗಿರುವ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಮಂಟಪಗಳು ರಾಮೇಶ್ವರ ಮತ್ತು ವೀರಭದ್ರ ದೇವರಿಗೆ ಸಾಮಾನ್ಯವಾಗಿದೆ.
ದೇವಾಲಯವು ವೀರಭದ್ರ ದೇವಾಲಯದ ಹೊರಭಾಗದಲ್ಲಿ ಎತ್ತರದ ದ್ವಜಸ್ತಂಭದೊಂದಿಗೆ ಎತ್ತರದ ವೇದಿಕೆಯ ಮೇಲೆ ನೆಲೆಗೊಂಡಿದೆ. ಈ ದ್ವಜಸ್ತಂಭದ ಮೇಲೆ ಶಿವನ ವಾಹನವಾದ ನಂದಿ ಕುಳಿತಿದೆ.

ಕೆಳದಿ ದೇವಸ್ಥಾನ

ವೀರಭದ್ರ ದೇವಾಲಯದ ಒಳಗಿನ ರಚನೆಯು ಸಿಂಹಗಳು, ಹುಲಿಗಳು, ಆನೆಗಳು, ಕುದುರೆಗಳು ಮತ್ತು ಇತರ ಅನೇಕ ಪಕ್ಷಿಗಳಂತಹ ವಿವಿಧ ಪ್ರಾಣಿಗಳ ರಚನೆಗಳೊಂದಿಗೆ ಕೆಲವು ಅದ್ಭುತವಾದ ಕರಕುಶಲ ಕೆತ್ತನೆಗಳನ್ನು ಹೊಂದಿದೆ. ಗರ್ಭಗುಡಿಯ ಚಾವಣಿಯು ಸುಂದರವಾಗಿ ಕೆತ್ತಲಾದ ಗಂಡಬೇರುಂಡವನ್ನು ಹೊಂದಿದೆ. ಗಂಡಬೇರುಂಡವು ಧೈರ್ಯ ಮತ್ತು ಶಕ್ತಿಯನ್ನು ಸಂಕೇತಿಸುವ ಎರಡು ತಲೆಯ ಪಕ್ಷಿಯಾಗಿದೆ ಮತ್ತು ವಿಜಯನಗರ ರಾಜರು, ಮೈಸೂರಿನ ಒಡೆಯರು ಮತ್ತು ಕೆಳದಿ ಸಾಮ್ರಾಜ್ಯದ ಸಂಕೇತವಾಗಿತ್ತು. ಈ ಗಂಡಬೇರುಂಡವು ಕರ್ನಾಟಕದ ಬಹುತೇಕ ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳ ಮೇಲೆ ಕಂಡುಬರುವ ವ ಸಂಕೇತವಾಗಿದೆ. ಈಗ ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಿರ್ವಹಿಸುತ್ತಿದೆ.

ತಲುಪುವುದು ಹೇಗೆ?

ಶಿವಮೊಗ್ಗ ಜಿಲ್ಲೆಯಲ್ಲಿರುವ ಕೆಳದಿ ದೇವಸ್ಥಾನವು ಮುಖ್ಯ ಪಟ್ಟಣದಿಂದ ಸಾಗರದ ಕಡೆಗೆ ಸರಿಸುಮಾರು 80 ಕಿಮೀ ದೂರದಲ್ಲಿದೆ. ಕೆಳದಿಯನ್ನು ತಲುಪಲು ಉತ್ತಮ ಮಾರ್ಗವೆಂದರೆ ರಸ್ತೆ ಮಾರ್ಗವಾಗಿದೆ. ನೀವು ರಸ್ತೆ ಸಾರಿಗೆ, ವಿಮಾನ ಅಥವಾ ರೈಲಿನ ಮೂಲಕ ಶಿವಮೊಗ್ಗವನ್ನು ತಲುಪಬಹುದು.

ವಿಮಾನದ ಮೂಲಕ

ಹತ್ತಿರದ ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣವೆಂದರೆ ಮಂಗಳೂರು. ಮಂಗಳೂರಿನಿಂದ ಕೆಳದಿಯು ಸರಿಸುಮಾರು 200 ಕಿಮೀ ದೂರದಲ್ಲಿದೆ ಮತ್ತು ರಸ್ತೆ ಸಾರಿಗೆಯ ಮೂಲಕ ತಲುಪಲು ಸುಮಾರು 4 ಗಂಟೆಗಳು ತೆಗೆದುಕೊಳ್ಳುತ್ತದೆ.

ರೇಲ್ವೆ ಮೂಲಕ

ಶಿವಮೊಗ್ಗವು ಭಾರತದ ಪ್ರಮುಖ ಪಟ್ಟಣ ಮತ್ತು ನಗರಗಳಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಅತಿದೊಡ್ಡ ರೈಲು ನಿಲ್ದಾಣವೆಂದರೆ ಬೆಂಗಳೂರು ಇದು ಸುಮಾರು 6 ಗಂಟೆಗಳ ದೂರದಲ್ಲಿದೆ.

ರಸ್ತೆ ಸಾರಿಗೆ ಮೂಲಕ

ಶಿವಮೊಗ್ಗದಿಂದ ಕೆಳದಿಯು 80 ಕಿಮೀ ದೂರದಲ್ಲಿದೆ ಮತ್ತು ನೀವು ರಸ್ತೆ ಸಾರಿಗೆ ಮೂಲಕ ಸುಮಾರು ಒಂದೂವರೆ ಗಂಟೆಯಲ್ಲಿ ತಲುಪಬಹುದು. ರಸ್ತೆಗಳು ಉತ್ತಮ ಸ್ಥಿತಿಯಲ್ಲಿದ್ದು ಸುಖಕರ ಪ್ರಯಾಣ ಮಾಡಬಹುದು.

ಭೇಟಿ ನೀಡಲು ಉತ್ತಮ ಸಮಯ


ಶಿವಮೊಗ್ಗದಲ್ಲಿ ತಾಪಮಾನ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಕೆಳದಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್ ನಿಂದ ಫೆಬ್ರವರಿ ನಡುವಿನ ತಿಂಗಳುಗಳು. ಚಳಿಗಾಲವು ಭೇಟಿ ನೀಡಲು ಉತ್ತಮ ಸಮಯವಾಗಿದೆ.

ಕೆಳದಿ/ಸುತ್ತಮುತ್ತಲಿರುವ ಪ್ರದೇಶಗಳು


ಜೋಗ್ ಫಾಲ್ಸ್ ಸೇರಿದಂತೆ ನೀವು ಇಲ್ಲಿ ಇಕ್ಕೇರಿಯ ಅಘೋರೇಶ್ವರ ದೇವಾಲಯ, ಶೃಂಗೇರಿ ಮಠ, ಮುರುಡೇಶ್ವರ ದೇವಾಲಯ, ಮತ್ತು ಅರಸಲು ರೈಲು ನಿಲ್ದಾಣ (ಮಾಲ್ಗುಡಿ ಡೇಸ್ ಸ್ಟೇಷನ್ ಎಂದು ಜನಪ್ರಿಯವಾಗಿದೆ), ಶರಾವತಿ ಬ್ಯಾಕ್ ವಾಟರ್ಸ್, ಸಕ್ರೆಬೈಲ್ ಆನೆ ಶಿಬಿರ, ಕೊಡಚಾದ್ರಿ ಬೆಟ್ಟಗಳು ಮತ್ತು ಇನ್ನೂ ಹೆಚ್ಚು ಪ್ರದೇಶಗಳಿಗೆ ಭೇಟಿ ನೀಡಬಹುದು.

ಹೆಚ್ಚಿನ ಮಾಹಿತಿ:

1. ದೇವಾಲಯವು ವರ್ಷವಿಡೀ ತೆರೆದಿರುತ್ತದೆ ಮತ್ತು ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು.
2. ದೇವಸ್ಥಾನ ಪ್ರವೇಶ ಶುಲ್ಕ ಇಲ್ಲ
3. ದೇವಸ್ಥಾನವು ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಆರುಗಂಟೆಯವರೆಗೆ ತೆರೆದಿರುತ್ತದೆ.
4. ದೇವಸ್ಥಾನದ ಒಳಗಡೆ ಕ್ಯಾಮೆರಾ ಮತ್ತು ವಿಡಿಯೋ ಚಿತ್ರೀಕರಣಕ್ಕೆ ಅನುಮತಿಸಲಾಗಿದೆ
5. ದೇವಸ್ಥಾನಕ್ಕೆ ಹೋಗುವಾಗ ಸೂಕ್ತ ಬಟ್ಟೆಗಳನ್ನು ಧರಿಸಿ