Karnataka Tourism
GO UP
birds festival

ಕರ್ನಾಟಕ ಪಕ್ಷಿ ಹಬ್ಬ

separator
  /  ಕರ್ನಾಟಕ ಪಕ್ಷಿ ಹಬ್ಬ

ಸುಂದರವಾದ ಪಕ್ಷಿಗಳನ್ನು ವೀಕ್ಷಿಸುತ್ತಾ ಹೊಸ ವರ್ಷವನ್ನು ಪ್ರಾರಂಭಿಸಿ

ಪಕ್ಷಿ ವೀಕ್ಷಣೆ ಒಂದು ಜನಪ್ರಿಯ ಚಟುವಟಿಕೆಯಾಗಿದೆ, ವಿಶೇಷವಾಗಿ ಚಳಿಗಾಲದಲ್ಲಿ ಪಕ್ಷಿ ವೀಕ್ಷಕರು ವಲಸೆ ಬರುವ ಅನೇಕ ಪಕ್ಷಿಗಳನ್ನು ವೀಕ್ಷಿಸಲು ಪ್ರಯತ್ನಿಸುತ್ತಾರೆ. ದೇಶದ ಒಂದು ಪ್ರಮುಖ ಪಕ್ಷಿ ಪ್ರದೇಶವೆಂದರೆ ಕರ್ನಾಟಕದ BRT ಹುಲಿ ಮೀಸಲು ಪ್ರದೇಶ. ಇದು ಕರ್ನಾಟಕ ಪಕ್ಷಿ ಉತ್ಸವದ 7ನೇ ಮುದ್ರಣದ ವೇದಿಕೆಯಾಗಲಿದೆ. ಇದನ್ನು ಕರ್ನಾಟಕ ಅರಣ್ಯ ಇಲಾಖೆ ಮತ್ತು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ಜಂಟಿಯಾಗಿ ಆಯೋಜಿಸಲಾಗುತ್ತಿದೆ.
ಬಿಲಿಗಿರಿ ರಂಗನಾಥಸ್ವಾಮಿ ದೇವಾಲಯದ ಹುಲಿ ಮೀಸಲು ಪ್ರದೇಶ ,ಇದನ್ನು BR ಹಿಲ್ಸ್ ಎಂದು ಕರೆಯುತ್ತಾರೆ ಇದು ಎಲ್ಲ ರೀತಿಯ ಜೀವಿಗಳಿಗೂ ಆಶ್ರಯಿಸುಯಿಸುವಲ್ಲಿ ಹೆಸರುವಾಸಿಯಾಗಿದೆ. ಈ ಅರಣ್ಯ ಮೀಸಲು ಎಲೆಗಳು ಉದುರುವ, ನಿತ್ಯಹರಿದ್ವರ್ಣದ ಮತ್ತು ಹುಲ್ಲುಗಾವಲಿನ ಮಿಶ್ರಣದ ಸಸ್ಯವರ್ಗವನ್ನು ಹೊಂದಿದೆ ಆದ್ದರಿಂದ ವೈವಿಧ್ಯಮಯ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ಪಕ್ಷಿವೀಕ್ಷಕರಿಗೆ ಇದು ಪ್ರಸಿದ್ಧ ತಾಣವಾಗಿದೆ.
ಈ ಪ್ರದೇಶದಲ್ಲಿ 270 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿವೆ. ಬ್ಲ್ಯಾಕ್ ಈಗಲ್(ಕಪ್ಪು ಹದ್ದು), ಸ್ಕಾರ್ಲೆಟ್ ಮಿನಿವೆಟ್, ವೆಲ್ವೆಟ್-ಫ್ರಂಟೆಡ್ ನಥಾಚ್, ರೂಫಸ್-ಬೆಲ್ಲಿಡ್ ಈಗಲ್, ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್, ಹಲವಾರು ಜಾತಿಯ ಮರಕುಟಿಗಗಳು, ಡ್ರೊಂಗೊಗಳು, ಲೋರಿಕೀಟ್, ಪ್ಲಮ್-ಹೆಡ್ ಪ್ಯಾರಾಕೀಟ್, ನೀಲಿ – ಗಡ್ಡದ ಜೇನು-ಭಕ್ಷಕ, ಮತ್ತು ಮಲಬಾರ್ ವಿಸ್ಲಿಂಗ್ ಥ್ರಷ್ ಈ ಮೀಸಲು ಪ್ರದೇಶದಲ್ಲಿ ಕಂಡುಬರುವ ಪಕ್ಷಿಗಳು.
2021 ರ ಕರ್ನಾಟಕ ಪಕ್ಷಿ ಉತ್ಸವವು 2021 ರ ಜನವರಿ 5 ರಿಂದ 7 ರವರೆಗೆ BRT ಹುಲಿ ಮೀಸಲು ಪ್ರದೇಶದಲ್ಲಿ ನಡೆಯಲಿದೆ. ಪ್ರಖ್ಯಾತ ಭಾಷಣಕಾರರ ಮಾತುಕತೆಗಳು, ಪ್ರಸ್ತುತಿಗಳು ಮತ್ತು ಪಕ್ಷಿ ವೀಕ್ಷಣೆ ನಡಿಗೆಗಳು ಈ ಮೂರು ದಿನಗಳ ಸುದೀರ್ಘ ಉತ್ಸವದ ಮುಖ್ಯ ಅಂಶಗಳಾಗಿವೆ.