Karnataka logo

Karnataka Tourism
GO UP
Madalapatti Coorg

ಮಹಿಳಾ ಪ್ರಯಾಣಿಕರಿಗೆ ಕರ್ನಾಟಕದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು

separator
  /  ಬ್ಲಾಗ್   /  ಮಹಿಳಾ ಪ್ರಯಾಣಿಕರಿಗೆ ಕರ್ನಾಟಕದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು
Women Travellers

ಮಹಿಳಾ ಪ್ರಯಾಣಿಕರಿಗೆ ಕರ್ನಾಟಕದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು

ಕೇವಲ ಹುಡುಗರೇಕೆ ಪ್ರವಾಸದ ವಿನೋದವನ್ನು ಅನುಭವಿಸಬೇಕು. ಮಹಿಳೆಯರೇನು ಯಾರಿಗೇನು ಕಮ್ಮಿ ಇಲ್ಲ. ಈಗ ಸಾಕಷ್ಟು ಮಹಿಳೆಯರು ಒಬ್ಬಂಟಿಯಾಗಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ನೀವು ಕೂಡ ಪ್ರವಾಸ ಕೈಗೊಳ್ಳಿ. ಮತ್ತು ಅಪರಿಮಿತ ಆನಂದವನ್ನು ಅನುಭವಿಸಿ.

ಮಹಿಳೆಯರೇ ಈ ಮಹಿಳಾ ದಿನಾಚರಣೆಯಂದು ಏನು ಮಾಡುತ್ತೀರಿ. ನೀವು ಈಗ  ಪ್ರಕೃತಿಯಲ್ಲಿ ಮುಳುಗಿ, ಪ್ರಕೃತಿ ಸೌಂದರ್ಯವನ್ನು ಅನುಭವಿಸಿ ಅಥವಾ ಸಮುದ್ರತೀರಕ್ಕೆ ಹೋಗಿ ಸೂರ್ಯನ ಸ್ನಾನ ಮಾಡಿ. ಈ ಅಂತರಾಷ್ಟ್ರೀಯ ಮಹಿಳಾ ದಿನದಂದು ನೀವು ಬಯಸಿದ ರೀತಿಯಲ್ಲಿ ಕರ್ನಾಟಕವನ್ನು ಅನ್ವೇಷಿಸಿ. ಹೊಸದನ್ನು ಪ್ರಯತ್ನಿಸಿ, ಪಾಕಪದ್ಧತಿಯನ್ನು ಕಲಿಯಿರಿ, ಕರಕುಶಲ ವಸ್ತುಗಳನ್ನು ಹೇಗೆ ರಚಿಸಲಾಗಿದೆ ಎಂಬುದನ್ನು ನೋಡಿ, ಕರ್ನಾಟಕದ ಸೀರೆಗಳನ್ನು ಹೇಗೆ ನೇಯಲಾಗುತ್ತದೆ ಎಂಬುದನ್ನು ಕಲಿಯಿರಿ, ಚಾರಣಕ್ಕೆ ಹೋಗಿ, ಸರ್ಫಿಂಗ್ ಅಥವಾ ಜೀಪ್ ಸಫಾರಿ ಮಾಡಿ,  ನಮ್ಮ ಕರ್ನಾಟಕವು  ನಿಮಗೆ ಅವಶ್ಯ ಇರುವ ಎಲ್ಲವನ್ನೂ ಹೊಂದಿದೆ.

ಮಹಿಳಾ ಪ್ರಯಾಣಿಕರಿಗೆ ಕರ್ನಾಟಕ ದೇಶದಲ್ಲೇ ಅತ್ಯಂತ ಸುರಕ್ಷಿತ ತಾಣವಾಗಿದೆ ಎಂದರೆ ತಪ್ಪಲ್ಲ. ಕರ್ನಾಟಕದ ಜನಪ್ರಿಯ ಸ್ಥಳಗಳು ಯಾವುದಕ್ಕೆ ಪ್ರಸಿದ್ಧವಾಗಿವೆಯೋ ಅದಕ್ಕಿಂತ ಹೆಚ್ಚಾಗಿ ಅನ್ವೇಷಿಸಿ.

ಮೈಸೂರುಪರಂಪರೆ

ಮೈಸೂರು ಮಸಾಲೆ ದೋಸೆ

ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತವಾಗಿರುವ ಅರಮನೆಗಳ ನಗರ ಮೈಸೂರು ನಗರವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಒಮ್ಮೆ ನೀವು ಇಲ್ಲಿನ ಚಾಮುಂಡಿ ಬೆಟ್ಟಗಳು, ಮೈಸೂರು ಅರಮನೆ, ಸೇಂಟ್ ಫಿಲೋಮಿನಾ ಚರ್ಚ್, ಕೃಷ್ಣರಾಜಸಾಗರ ಅಣೆಕಟ್ಟು, ಮೃಗಾಲಯದಂತಹ ಜನಪ್ರಿಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲೇ ಬೇಕು.

 1. ನೀವು ಆಹಾರಪ್ರಿಯರಾಗಿದ್ದರೆ ಪ್ರಸಿದ್ಧ ಮೈಸೂರು ಪಾಕ್ ಮತ್ತು ಮೈಸೂರು ಮಸಾಲಾ ದೋಸೆಯನ್ನು ಸೇವಿಸದೆ ನೀವು ಮೈಸೂರಿನಿಂದ ಹೊರಬರಲು ಸಾಧ್ಯವಿಲ್ಲ.
 2. ಚಾಮುಂಡಿ ಬೆಟ್ಟದಲ್ಲಿ ಸೂರ್ಯಾಸ್ತವನ್ನು ತಪ್ಪದೇ ನೋಡಿ. ಮೈಸೂರು ನಗರದ ಮೋಡಿಮಾಡುವ ಈ ನೋಟ ಮತ್ತು ಗೋಲ್ಡನ್ ಅವರ್‌ನಲ್ಲಿ ಸ್ಕೈಲೈನ್ ನಿಮ್ಮನ್ನು ಖಂಡಿತವಾಗಿಯೂ ವಿಸ್ಮಯಗೊಳಿಸುತ್ತದೆ.
 3. ಶುಕವನ, ಪಕ್ಷಿಧಾಮಕ್ಕೆ ಭೇಟಿ ನೀಡಿ ಮತ್ತು ಗಿಳಿಗಳು, ಮಕಾವ್‌ಗಳು, ಕಾಕಟೂಗಳು ಮತ್ತು ಇತರ ವಿಶೇಷ ಪಕ್ಷಿಗಳೊಂದಿಗೆ ಸಂವಹನ ನಡೆಸಿ.
 4. ಕಾರಂಜಿ ಕೆರೆಗೆ ಖಂಡಿತವಾಗಿಯೂ ಭೇಟಿ ನೀಡಿ, ಈ ಸರೋವರ ಮತ್ತು ಪ್ರಕೃತಿ ಉದ್ಯಾನವನವು ಸುಮಾರು 147 ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಉದ್ಯಾನದ ಪ್ರಮುಖ ಅಂಶವೆಂದರೆ 6 ಅಡಿ ಎತ್ತರದ ಸಾರಸ್ ಕ್ರೇನ್ ಗಳು. ಈ ಕ್ರೇನ್ ಗಳನ್ನು ನೀವು ನೋಡಲೇಬೇಕು.
 5. ತೋಟಗಾರಿಕೆ ಎಂದರೆ ನಿಮಗೆ ಇಷ್ಟವೇ? ಹಾಗಾದರೇ 100 ಕ್ಕೂ ಹೆಚ್ಚು ಬಗೆಯ ಬೋನ್ಸಾಯ್ ಸಸ್ಯಗಳಿಗಾಗಿ ಕಿಷ್ಕಿಂದಾ ಮೂಲಿಕಾ ಬೋನ್ಸಾಯ್ ಗಾರ್ಡನ್‌ಗೆ ಭೇಟಿ ನೀಡಿ.
 6. ಮೈಸೂರು ಸಿಲ್ಕ್ ಸೀರೆ ಪ್ರತಿಯೊಬ್ಬ ಮಹಿಳೆ ತನ್ನ ವಾರ್ಡ್‌ರೋಬ್‌ನಲ್ಲಿ ಇರಬೇಕಾದ್ದೆ. ಈ ಸುಂದರ ಸೀರೆಯನ್ನು ರೇಷ್ಮೆ, ಚಿನ್ನ ಮತ್ತು ಬೆಳ್ಳಿಯ ಎಳೆಗಳಿಂದ ಹೇಗೆ ನೇಯಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಮೈಸೂರು ಸಿಲ್ಕ್ ಫ್ಯಾಕ್ಟರಿಯನ್ನು ಭೇಟಿ ಮಾಡಿ. ಸೀರೆ ನೇಯುವ ಕುಶಲತೆಯನ್ನು ನೋಡಿ ಆನಂದಿಸಿ.

ಮೈಸೂರು ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಹಂಪಿ-ಪರಂಪರೆ

ಹಂಪಿಯಲ್ಲಿ ಸೂರ್ಯಾಸ್ತ

ಯುನೆಸ್ಕೊ ಪಾರಿಂಪಾರಿಕ ತಾಣಗಳ ಪಟ್ಟಿಯಲ್ಲಿ ಹೆಸರು ಪಡೆದಿರುವ ಹಂಪಿ ವಿಶ್ವಪ್ರಸಿದ್ಧವಾಗಿದೆ. ಇಲ್ಲಿಗೆ ಪ್ರತಿವರ್ಷ ಸಹಸ್ರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೇ ವಿರೂಪಾಕ್ಷ ದೇವಸ್ಥಾನ, ಕಮಲ ಮಹಲ್,  ಇತ್ಯಾದಿ.

 1. ಹಂಪಿಯನ್ನು ಇನ್ನಷ್ಟು ಅನ್ವೇಷಿಸಲು ನೀವು ಒಂದು ಬೈಸಿಕಲ್ ಅಥವಾ ಮೊಪೆಡ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಿ. ಇದರಿಂದ ನಿಮಗೆ ಹಂಪಿಯನ್ನು ಸಂಪೂರ್ಣವಾಗಿ ನೋಡಲು ಸಾಧ್ಯವಾಗುತ್ತದೆ.
 2. ತುಂಗಭದ್ರಾ ನದಿಯಲ್ಲಿ ಸವಾರಿ ಮಾಡಲು ಕೊರಾಕಲ್ ದೋಣೆಯಲ್ಲಿ ಹೋಗಿ ಮತ್ತು ನೀವು ಅದೃಷ್ಟವಂತರಾಗಿದ್ದರೆ ನೀವು ಮೊಸಳೆಗಳನ್ನು ನೋಡಬಹುದು.
 3. ರಾಕ್ ಕ್ಲೈಂಬಿಂಗ್ ಇಷ್ಟವೇ ? ರಾಕ್ ಕ್ಲೈಂಬಿಂಗ್ ಕುರಿತು ಸೆಷನ್‌ಗಳನ್ನು ತೆಗೆದುಕೊಳ್ಳಿ ಮತ್ತು ಸುಂದರವಾದ ಮತ್ತು ಸವಾಲಿನ ಬಂಡೆಗಳನ್ನು ಏರಿ. ಈ ಮೂಲಕ ಹಂಪಿಯನ್ನು ವೀಕ್ಷಿಸಿ. ಇದನ್ನು ಭಾರತದ ಬೌಲ್ಡರಿಂಗ್ ಕ್ಯಾಪಿಟಲ್ ಎಂದೂ ಕರೆಯುತ್ತಾರೆ.
 4. ನದಿಯ ಬಳಿ ಕುಳಿತು ನಿಮ್ಮ ಸಮಯವನ್ನು ಆನಂದಿಸಿ ಮತ್ತು ನಿಮ್ಮ ಕಣ್ಣುಗಳಲ್ಲಿ ಪ್ರಕೃತಿಯನ್ನು ತುಂಬಿಕೊಳ್ಳಿ.
 5. ಸೂರ್ಯಾಸ್ತದ ರುದ್ರರಮಣೀಯ ನೋಟಗಳನ್ನು ಆನಂದಿಸಿ.
 6. ರಾಮಾಯಣದ ಕಥೆಗಳ ಬಗ್ಗೆ ತಿಳಿಯಲು ಆನೆಗುಂದಿಗೆ ಭೇಟಿ ನೀಡಿ. ಆನೆಗುಂದಿಯು ಹನುಮಂತನ ಜನ್ಮಸ್ಥಳ ಎಂದೂ ನಂಬಲಾಗಿದೆ.

ಹಂಪಿಯ ಕುರಿತು ಇನ್ನೂ ಹೆಚ್ಚು ತಿಳಿಯಲು ಇಲ್ಲಿ ಭೇಟಿ ನೀಡಿ.

ಮಡಿಕೇರಿಗಿರಿಧಾಮ

ಮಾಂದಲಪಟ್ಟಿ ಕೂರ್ಗ್

ಭಾರತದ ಸ್ಕಾಟ್‌ಲ್ಯಾಂಡ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೂರ್ಗ್ ಸುಂದರವಾದ ಭೂದೃಶ್ಯಗಳು ಮತ್ತು ಪ್ರಕೃತಿ ಸೌಂದರ್ಯ ವೈಭವವನ್ನು  ಹೊಂದಿದೆ. ಸ್ಟ್ರೆಕ್ಕಿಂಗ್ ಟ್ರೇಲ್ಸ್, ಹರಿಯುವ ಜಲಪಾತಗಳು,  ಧಾರ್ಮಿಕ ಸ್ಥಳಗಳು, ಅಧಿಕೃತ ಸ್ಥಳೀಯ ಪಾಕಪದ್ಧತಿಗಳು ಇಲ್ಲಿನ ಆಕರ್ಷಣೀಯ ಸಂಗತಿಗಳಾಗಿವೆ. ಇದು ನಿಮಗೆ ರಜೆಯನ್ನು ಕಳೆಯಲು ಹೇಳಿ ಮಾಡಿಸಿದ ಸ್ಥಳವಾಗಿದೆ

 1. ಕೊಡವರ ಜೀವನಶೈಲಿ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅನುಭವಿಸಲು ಸಾಂಪ್ರದಾಯಿಕ ಕೂರ್ಗಿ ಹೋಂಸ್ಟೇಗಳಲ್ಲಿ ವಾಸ್ತವ್ಯವನ್ನು ಅನುಭವಿಸಿ. ಮುಂಚಿತವಾಗಿ ಚೆಕ್-ಇನ್ ಮಾಡಿ ಮತ್ತು ಅವರ ಆಹಾರ, ನೃತ್ಯ, ಸಂಗೀತ, ವೇಷಭೂಷಣ ಮತ್ತು ಪದ್ಧತಿಗಳಿಗಾಗಿ ಕೂರ್ಗಿ ವಿವಾಹಕ್ಕೆ ಸಮಾರಂಭಕ್ಕೆ ಸಾಧ್ಯವಾದರೇ ಹಾಜರಾಗಿ.
 2. ಕೂರ್ಗ್‌ನಲ್ಲಿರುವಾಗ ಕೊಡವರಂತೆ ತಿನ್ನಿರಿ. ಪಾಂಡಿ ಕರಿ, ಕಡಮುಟ್ಟು ಮತ್ತು ಅಕ್ಕಿ ರೊಟ್ಟಿ (ಅಕ್ಕಿ ರೊಟ್ಟಿ), ಬಿದಿರಿನ ಚಿಗುರು ಕರಿ, ನೂಲ್‌ಪುಟ್ಟು (ಸ್ಟ್ರಿಂಗ್ ಹಾಪರ್‌ಗಳು), ಮತ್ತು ಕೊಮ್ಮು ಕರಿ (ಮಶ್ರೂಮ್ ಕರಿ) ನಂತಹ ಬಾಯಲ್ಲಿ ನೀರೂರಿಸುವ ಸ್ಥಳೀಯ ಪಾಕಶೈಲಿಗಳನ್ನು ಆನಂದಿಸಿ. ಅದರ ಜೊತೆಗೆ ವಿಶೇಷವಾಗಿ ಬೆಲ್ಲದ ಜೊತೆಗೆ.ಆರೊಮ್ಯಾಟಿಕ್ ಹೋಮ್‌ಗ್ರೋನ್ ಕಾಫಿಯನ್ನು ಸೇವಿಸಿ.
 3. ಕೊಡಗಿನ ದೊಡ್ಡ ಕೆರೆ, ಹೊನ್ನಮನ ಕೆರೆ ತನ್ನ ಸಮಚಿತ್ತತೆ ಮತ್ತು ಅದ್ಭುತ ಸೂರ್ಯಾಸ್ತಕ್ಕಾಗಿ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ. ಸರೋವರದ ಸಮೀಪದಲ್ಲಿರುವ ಹೊನ್ನಮ್ಮ ದೇವಿಯ ಹಿಂದೂ ದೇವಾಲಯಕ್ಕೆ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.
 4. ತಡಿಯಂಡಮೋಲ್, ಕೊಡಚಾದ್ರಿ, ಕುಮಾರ ಪರ್ವತ, ಮುಳ್ಳಯ್ಯನಗಿರಿ ಮತ್ತು ಬ್ರಹ್ಮಗಿರಿಯಂತಹ ಬೆಟ್ಟಗಳ ಪಾದಯಾತ್ರೆ ಮತ್ತು ಚಾರಣಕ್ಕಾಗಿ ಕೂರ್ಗ್ ಹೇರಳವಾದ ಸಂದರ್ಭಗಳನ್ನು ನೀಡುತ್ತದೆ. ಆದ್ದರಿಂದ ಈ ಸುಲಭದಿಂದ ಕಷ್ಟಕರವಾದ ಚಾರಣಗಳಿಗಾಗಿ ನಿಮ್ಮ ಬೂಟುಗಳು ಮತ್ತು ಟ್ರೆಕ್ಕಿಂಗ್ ಗೇರ್ ಗಳನ್ನು ಸಿದ್ಧವಾಗಿಟ್ಟುಕೊಳ್ಳಿ

ಕೂರ್ಗ-ಕೊಡಗು ಕುರಿತು ಹೆಚ್ಚು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಗೋಕರ್ಣ-ಬೀಚ್

ಗೋಕರ್ಣ ಬೀಚ್

ಗೋಕರ್ಣವು ಏಕಾಂಗಿಯಾಗಿ ಪ್ರಯಾಣಿಸುವವರಿಗೆ, ಸ್ನೇಹಿತರ ಗುಂಪಿಗೆ ಅಥವಾ ನೀವು ಕುಟುಂಬದೊಂದಿಗೆ ಪ್ರಯಾಣಿಸಲು ಬಯಸಿದರೂ ಸಹ ಒಂದು ಸೂಕ್ತವಾದ ಸ್ಥಳವಾಗಿದೆ. ಆಹಾರ, ರಾತ್ರಿ ಮಾರುಕಟ್ಟೆ, ಕಡಲತೀರದ ಟ್ರೆಕ್ಕಿಂಗ್, ಜಲ ಕ್ರೀಡೆಗಳು, ದೇವಾಲಯಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

 1. ಬೀಚ್ ಕ್ಯಾಂಪಿಂಗ್ – ಈ ಬೀಚ್ ಕ್ಯಾಂಪಿಂಗ್ ನಲ್ಲಿ ಸಮುದ್ರದ ಶಾಂತತೆಯಲ್ಲಿ ಮುಳುಗಿ ಅಥವಾ ಅಲೆಗಳ ಶಬ್ದದಲ್ಲಿ ಮುಳುಗಿ ಅಥವಾ ನಕ್ಷತ್ರಗಳನ್ನು ನೋಡುತ್ತಾ ಬೀಚ್‌ನಲ್ಲಿ ತಂಪಾದ ಮರಳಿನ ಮೇಲೆ ಮಲಗಿಕೊಳ್ಳಿ. ಈ ಅವಿಸ್ಮರಣೀಯ ಅನುಭವವು ನಿಮ್ಮನ್ನು ವಿಸ್ಮಯಗೊಳಿಸುತ್ತದೆ ಮತ್ತು ನೆನಪುಗಳನ್ನು ಶಾಶ್ವತವಾಗಿ ನಿಮ್ಮ ಹೃದಯದಲ್ಲಿ ಇರಿಸುತ್ತದೆ.
 2. ನೀವು ಇಲ್ಲಿನ ಆಹಾರವನ್ನು ಸವಿಯಲೇಬೇಕು. ಇಲ್ಲಿ ನಿಮಗೆ ತರಾವರಿ ತಿಂಡಿಗಳು ಸಿಗುತ್ತವೆ. ನೀವು ಇಲ್ಲಿ ಸೀಫುಡ್ ಲಸಾಂಜ, ಬಾಳೆ ಎಲೆಯ ಮೇಲೆ ಪ್ರಾನ್ ಪಿಜ್ಜಾ, ನುಟೆಲ್ಲಾ ಮತ್ತು ಸೋಡಾ ಮಾಕ್‌ಟೇಲ್‌ಗಳನ್ನು ಸೇವಿಸಬಹುದು. ಅಲ್ಲದೆ, ಕರಾವಳಿ ಕರ್ನಾಟಕದ ವಿಶೇಷವಾದ ವೆಜ್ ಮತ್ತು ನಾನ್ ವೆಜ್ ಕರಿಗಳ ಕಾಂಬಿನೇಷನ್ ಇರುವ ನೀರದೋಸೆಯನ್ನು ಸೇವಿಸಲೇಬೇಕು.
 3. ಇಲ್ಲಿ ಮಹಿಳೆಯರು ಶಾಪಿಂಗ್ ಮತ್ತು ಫ್ಲೀ ಮಾರ್ಕೆಟ್ ಶಾಪಿಂಗ್ ಅನ್ನು ಇನ್ನಷ್ಟು ಇಷ್ಟಪಡುತ್ತಾರೆ. ಇಲ್ಲಿ ಸುಂದರ ಆಭರಣಗಳು, ಸ್ಥಳೀಯರು ತಯಾರಿಸಿದ ಸ್ಮರಣಿಕೆಗಳು, ಟ್ರಿಂಕೆಟ್‌ಗಳು, ಸೀಶೆಲ್‌ಗಳಿಂದ ಮಾಡಿದ ಅಲಂಕಾರಿಕ ತುಣುಕುಗಳು ಮತ್ತು ಸಂಗೀತ ವಾದ್ಯಗಳು ಮತ್ತು ಔಷಧೀಯ ಗಿಡಮೂಲಿಕೆಗಳು ಸಿಗುತ್ತವೆ.
 4. ನೀವು ಫಿಟ್ನೆಸ್ ಮತ್ತು ವೆಲ್ನೆಸ್ ಫ್ರೀಕ್ ಆಗಿದ್ದೀರಾ? ಪ್ರತಿದಿನ ಬೆಳಿಗ್ಗೆ ಬೀಚ್ನಲ್ಲಿ ನಡೆಯುವ ಯೋಗ ಸೆಷನ್ಗಳಿಗೆ ಸೇರಿ ಮತ್ತು ಚೈತನ್ಯಶಾಲಿ ಆಗಿರಿ. ಸಮುದ್ರತೀರದಲ್ಲಿ ಯೋಗದ ಸುಂದರ ನೆನಪುಗಳನ್ನು ಮರಳಿ ತನ್ನಿ.
 5. ನೀವು ಪ್ರಕೃತಿಯನ್ನು ಇಷ್ಟಪಡುತ್ತೀರಾ? ಗೋಕರ್ಣವು ಕಡಲತೀರದ ಅತ್ಯಂತ ರೋಮಾಂಚಕಾರಿ ಟ್ರೀಹೌಸ್‌ಗಳನ್ನು ಹೊಂದಿದೆ. ನೀವು ಇಲ್ಲಿ ಕಡಲಿನ ಅದ್ಭುತ ದೃಶ್ಯಗಳನ್ನು ಆನಂದಿಸಬಹುದು. ದಡಕ್ಕೆ ಬರುವ ಅಲೆಗಳು ಮತ್ತು ಕಡಲ ಸುತ್ತಲೂ ಇರುವ ಸೊಂಪಾದ ತಾಳೆ ಮರಗಳನ್ನು ನೋಡಿ ಆನಂದಿಸಬಹುದು.

ಗೋಕರ್ಣದ ಕುರಿತು ಹೆಚ್ಚು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಉಡುಪಿ-ಬೀಚ್

ಉಡುಪಿಯಲ್ಲಿ ಜಲ ಕ್ರೀಡೆ

ಕರ್ನಾಟಕದ ಅತ್ಯಂತ ಜನಪ್ರಿಯ ಕರಾವಳಿ ಪಟ್ಟಣ ಉಡುಪಿಯಾಗಿದ್ದು, ಇದು ಎಲ್ಲಾ ಭಾಗದ ಪ್ರಯಾಣಿಕರಿಗೆ ಅತ್ಯುತ್ತಮ ಬೀಚ್ ಅನುಭವವನ್ನು ನೀಡುತ್ತದೆ. ವಾಟರ್ ಸ್ಪೋರ್ಟ್ಸ್, ಕಡಲತೀರದಲ್ಲಿ ನಡೆಯುವುದು, ದೇವಾಲಯಗಳು ಇಲ್ಲಿನ ಪ್ರಮಖ ಆಕರ್ಷಣೆಗಳು. ಇಲ್ಲಿ ಇನ್ನೂ ಅನೇಕ ಆಕರ್ಷಣೆಗಳಿವೆ.

 1. ದೇಶದ 8 ಬ್ಲು ಫ್ಲ್ಯಾಗ್ ಕಡಲತೀರಗಳಲ್ಲಿ ಒಂದಾದ ಪಡುಬಿದ್ರಿ ಬೀಚ್‌ಗೆ ಭೇಟಿ ನೀಡಿ. ಬ್ಲೂ-ಫ್ಲಾಗ್ ಎಂದರೆ ಅದು ಸುರಕ್ಷತೆ, ಪರಿಸರ ಸ್ನೇಹಪರತೆ ಮತ್ತು ಶುಚಿತ್ವದ ಪ್ರಮಾಣೀಕರಣವನ್ನು ಹೊಂದಿದೆ ಎಂದರ್ಥ. ನೀವು ಈ ಬೀಚ್ ಗೆ ಖಂಡಿತವಾಗಿಯೂ ಭೇಟಿ ನೀಡಬೇಕು. ಪಟ್ಟಣದಿಂದ ಕೇವಲ 8 ಕಿಮೀ ದೂರದಲ್ಲಿರುವ ಸ್ವರ್ಣಾ ನದಿಯ ದಡದಲ್ಲಿ ಸ್ವಲ್ಪ ನಿಮ್ಮ ಸಮಯವನ್ನು ಕಳೆಯಿರಿ. ಧ್ಯಾನ ಅಥವಾ ಯೋಗ ಮಾಡುವ ಮೂಲಕ ಪ್ರಕೃತಿಯಲ್ಲಿ ಮುಳುಗಿರಿ. ಹಾಗೆಯೇಹಿರಿಯಡ್ಕ ಬಜೆ ಅಣೆಕಟ್ಟಿಗೆ ಭೇಟಿ ನೀಡಲು ಮರೆಯದಿರಿ.
 2. ಇಂದ್ರಾಳಿ ಜಲಪಾತವು ಮೋಡಿಮಾಡುವ ಅದ್ಭುತ ಸ್ಥಳವಾಗಿದ್ದು ಎಂಜಿಎಂ ಕಾಲೇಜು ಮತ್ತು ಬಯಲು ಪ್ರದೇಶದಿಂದ ಕೇವಲ ಒಂದು ಕಿ.ಮೀ ದೂರದಲ್ಲಿದೆ. ಈ ಸ್ಥಳಕ್ಕೆ ಭೇಟಿ ನೀಡಲೇಬೇಕು.
 3. ಕೆಮ್ಮಣ್ಣು ಹ್ಯಾಂಗಿಂಗ್ ಬ್ರಿಜ್ ಮೇಲೆ ನಡೆಯುವ ಮೂಲಕ ಆದ್ಭುತ ಉತ್ಸಾಹವನ್ನು ಪಡೆಯಿರಿ. ಸ್ವರ್ಣಾ ನದಿಯ ಎರಡು ದಡಗಳನ್ನು ಸಂಪರ್ಕಿಸಲು ಈ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಸಾಹಸ ಮತ್ತು ಜಲ ಕ್ರೀಡೆಗಳಿಗೆ ಹಾಟ್‌ಸ್ಪಾಟ್ ಆಗಿದೆ. ಇಲ್ಲಿನ ಪ್ರಶಾಂತತೆಯ ಸೌಂದರ್ಯದಲ್ಲಿ ಮಿಂದೇಳಿ.

ಉಡುಪಿ ಕುರಿತು ಹೆಚ್ಚು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ