ಇಡೀ ಭಾರತವನ್ನೇ ಬೆರಗುಗೊಳಿಸುವಂತಹ ಕಡಲತೀರಗಳನ್ನು ಗೋಕರ್ಣವು ಹೊಂದಿದೆ ಹಾಗೂ ವೇಗದ ಗತಿಯಲ್ಲಿ ಸಾಗುತ್ತಿರುವ ಸ್ವಪ್ನಮಯವಾದ ಬೆಂಗಳೂರಿನಂತಹ ಮಹಾನಗರಗಳಿಂದ ತುಂಬಿದೆ, ಹಾಗಾಗಿ ಕರ್ನಾಟಕವು ಪ್ರತಿ ಸಂದರ್ಶಕರಿಗೆ ಏನನ್ನಾದರೂ ಸಂಗ್ರಹಿಸುವುದರ ಬಗ್ಗೆ ಮಾಹಿತಿಯನ್ನು ಕೊಡುತ್ತದೆ ಎಂಬುದು ಹೆಮ್ಮೆಯ ವಿಚಾರ, ಹೀಗಾಗಿ ಕರ್ನಾಟಕವನ್ನು “ಒಂದು ರಾಜ್ಯ, ಅನೇಕ ಪ್ರಪಂಚಗಳು” ಎಂದು ವಿವರಿಸಲಾಗಿದೆ.
ಇಡೀ ಭಾರತವು ಗೋಕರ್ಣದ ಬೆರಗುಗೊಳಿಸುತ್ತದೆ ಕಡಲತೀರಗಳು ಮತ್ತು ಬೆಂಗಳೂರಿನಲ್ಲಿ ವೇಗದ ಗತಿಯ ಮತ್ತು ಸ್ವಪ್ನಮಯವಾದ ಮಹಾನಗರಗಳಿಂದ ತುಂಬಿದ್ದರೆ, ಕರ್ನಾಟಕವು ಪ್ರತಿ ಸಂದರ್ಶಕರಿಗೆ ಏನನ್ನಾದರೂ ಸಂಗ್ರಹಿಸುವುದರ ಬಗ್ಗೆ ಹೆಮ್ಮೆಪಡುತ್ತದೆ, ಅದಕ್ಕಾಗಿಯೇ ಇದನ್ನು “ಒಂದು ರಾಜ್ಯ, ಅನೇಕ ಪ್ರಪಂಚಗಳು” ಎಂದು ಸರಿಯಾಗಿ ವಿವರಿಸಲಾಗಿದೆ.
ಹಂಪಿ
ಹಂಪಿಯ ಪ್ರತಿ ಮೂಲೆ ಮೂಲೆಯಲ್ಲಿಯೂ ಸಹ ಇತಿಹಾಸದ ತುಣುಕುಗಳಿವೆ. ಇದೊಂದು ಐತಿಹಾಸಿಕ ಸ್ಥಳವಾಗಿದೆ ಬಹುಶಹ ಈ ರೀತಿ ಎಲ್ಲವನ್ನೂ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸಹ ಒಂದು. ಕರ್ನಾಟಕದಲ್ಲಿ ರಾಜಪರಂಪರೆಯ ನೆಲ ಮತ್ತು ಅರಮನೆ ಹಾಗೂ ಭವ್ಯವಾದ ಕಟ್ಟಡಗಳಿಂದ ಹಿಡಿದು ಇನ್ನೂ ಪತ್ತೆಯಾಗದ ಸ್ಥಳಗಳವರೆಗೂ ಉತ್ತಮವಾಗಿ ವಿವರಿಸಬಹುದು ಹಾಗೂ ಎಲ್ಲಾ ಮಾಹಿತಿಯು ಸಹ ದೊರೆಯುತ್ತದೆ. ಹಂಪಿಯ ದೇವಾಲಯಗಳು ಮತ್ತು ಅರಮನೆಗಳ ಪ್ರಾಚೀನ ಅವಶೇಷಗಳು ಇತಿಹಾಸದ ಮೂಲಕವೇ ನಡೆಯುತ್ತಿರುವಂತೆ ಭಾಸವಾಗುತ್ತದೆ.
ಹಂಪಿಯು ಎಷ್ಟು ಪ್ರಸಿದ್ಧಿಯಾಗಿದೆ ಎಂದರೆ ಇದು ಕರ್ನಾಟಕದ ಮತ್ತು UNESCO ವಿಶ್ವ ಪರಂಪರೆಯ ತಾಣವಾಗಿ ಸೇರ್ಪಡೆಯಾಗಿದೆ. ಈ ಮಾಂತ್ರಿಕ ಭೂಮಿಯು,ಪುರಾಣಗಳು,ದೇವಾನುದೇವತೆಗಳು ಮತ್ತು ಅವರ ಕಥೆಗಳು,ವಿಶಾಲವಾದ ಭತ್ತದ ಗದ್ದೆಗಳು,ಪ್ರಕೃತಿ ಸೌಂದರ್ಯ ಇವೆಲ್ಲವೂ ಶಾಂತಿಯನ್ನು ನೀಡುತ್ತದೆ ಹಾಗೂ ಪ್ರಯಾಣಿಕರಿಗೆ ಉಲ್ಲಾಸವನ್ನು ತಂದುಕೊಟ್ಟು ಅವರ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತದೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ 7 ನೇ ಶತಮಾನದಲ್ಲಿಯೇ ನಿರ್ಮಿಸಲಾದ ಶ್ರೀ ವಿರೂಪಾಕ್ಷ ದೇವಾಲಯ ಹಂಪಿಗೆ ಕಳಶ ವಿರುವಂತೆ ಕಂಗೊಳಿಸುತ್ತದೆ. ಹಂಪಿಯ ಪುರಾತನ ಅವಶೇಷಗಳು ಇದರ ಭವ್ಯತೆಯನ್ನು ತೋರಿಸುತ್ತದೆ.
ಗೋಕರ್ಣ
ಗೋಕರ್ಣದಂತಹ ಸ್ಥಳಗಳು ನಿಮಗೆ ಪ್ರಕೃತಿಗೆ ಹತ್ತಿರವಾಗುವಂತೆ ಮಾಡುತ್ತದೆ ಹಾಗೂ ಕಡಲ ಪ್ರೇಮಿಗಳಿಗೆ ಇದು ಸ್ವರ್ಗದ ತಾಣ. ಏಕೆಂದರೆ ಸೂರ್ಯಾಸ್ತವನ್ನು ವೀಕ್ಷಿಸುವುದು ಹಾಗೆ ಗೋಕರ್ಣದ ರಭಸದ ಅಲೆಗಳು ಪ್ರವಾಸಿಗರಿಗೆ ನೆಮ್ಮದಿಯನ್ನು ತಂದುಕೊಡುತ್ತದೆ. ಸಮುದ್ರ ತೀರದಲ್ಲಿ ನಿಂತರೆ ಕಾಲುಗಳ ಕೆಳಗೆ ಮರಳು ಅಲೆಗಳು ಅಪ್ಪಳಿಸುವ ಶಬ್ದ ಮತ್ತು ಶುದ್ಧ ಗಾಳಿ ಈ ರೀತಿಯ ಅನುಭವವನ್ನು ಪಡೆಯಲು ಜೀವನದಲ್ಲಿ ಒಮ್ಮೆಯಾದರೂ ಈ ಸ್ಥಳಕ್ಕೆ ಭೇಟಿ ನೀಡಬೇಕು. ಜೀವನದ ಚಿಂತೆಗಳನ್ನು ಮರೆಯಲು ಇಂತಹ ನೆಮ್ಮದಿಯ ಸ್ಥಳಗಳ ಅವಶ್ಯಕತೆಯಿದೆ.
ಅಡ್ರೆನಲಿನ್ ಜಂಕಿ ಅಂದರೆ (ರೋಮಾಂಚಕಾರಿ ಚಟುವಟಿಕೆಗಳನ್ನು ಪ್ರೀತಿಸುವ ಜನ ಎಂದು ಅರ್ಥ) ಇವರಿಗಾಗಿ ಜಲಕ್ರೀಡೆಗಳು ಇರುತ್ತದೆ, ಆಧ್ಯಾತ್ಮದ ಬಗ್ಗೆ ಒಲವನ್ನು ಹೊಂದಿರುವ ಭಕ್ತರಿಗೆ ಮಹಾಬಲೇಶ್ವರ ದೇವಸ್ಥಾನವಿದೆ, ಹಾಗೂ ಪ್ರತಿಯೊಬ್ಬರೂ ತಮ್ಮನ್ನು ತಾವು ಅರ್ಥಮಾಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಲು ಅಥವಾ ಹೊಸ ಚೈತನ್ಯವನ್ನು ಹೊಂದಲು ಗೋಕರ್ಣದ ಕಡಲ ತೀರಗಳು ಅದರ ಅಲೆಯ ಶಬ್ದಗಳಿಂದ ಸಾಧ್ಯ ಹೀಗೆ ಗೋಕರ್ಣದಲ್ಲಿ ಎಲ್ಲಾ ಇದೆ.
ಚಿಕ್ಕಮಗಳೂರು
ಕರ್ನಾಟಕದ ಕಾಫಿ ಜಿಲ್ಲೆ ಎಂದೇ ಪ್ರಸಿದ್ಧಿ ಹೊಂದಿರುವ ಚಿಕ್ಕಮಗಳೂರು ಕಾಫಿ ಪ್ರಿಯರಿಗೆ ಇಷ್ಟವಾಗುವ ಮುಖ್ಯವಾದ ಸ್ಥಳ. ಬೆರಗುಗೊಳಿಸುವಂತಹ ಬೆಟ್ಟಗಳು ಕಣಿವೆಗಳಿಂದ ತುಂಬಿರುವ ಈ ಪ್ರಕೃತಿಯ ಪ್ರಶಾಂತ ಸ್ಥಳಕ್ಕೆ ಪ್ರಕೃತಿ ಸೌಂದರ್ಯವನ್ನು ಪ್ರೀತಿಸುವ ಯಾರಾದರೂ ಸಹ ಭೇಟಿ ನೀಡಲೇಬೇಕಾದ ಸ್ಥಳ.
ಈ ಸ್ಥಳದಲ್ಲಿ ಹಲವಾರು ಚಟುವಟಿಕೆಗಳನ್ನು ಮಾಡಬಹುದು ಉದಾಹರಣೆಗೆ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಚಾರಣಕ್ಕೆ ಹೋಗುವುದು ಮತ್ತು ಭದ್ರಾ ನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡುವುದು ಹೀಗೆ ಮುಂತಾದ ಚಟುವಟಿಕೆಗಳನ್ನು ಮಾಡಬಹುದು. ನಗರ ಜೀವನದಿಂದ ಹಾಗೂ ಅದರ ಗದ್ದಲದಿಂದ ಹೊರಬಂದು ಇಂತಹ ನೈಸರ್ಗಿಕ ಸ್ಥಳಗಳಿಗೆ ಒಬ್ಬರೇ ಪ್ರಯಾಣ ಮಾಡುವುದರಿಂದ ತಾಜಾ ಅನುಭವ ಸಿಗುತ್ತದೆ. ಅಲ್ಲದೇ ಇಲ್ಲಿನ ತಾಜಾ ಗಾಳಿಯನ್ನು ಉಸಿರಾಡುವುದರಿಂದ ಮನಸ್ಸಿಗೆ ಶಾಂತಿಯೂ ಸಹ ಸಿಗುತ್ತದೆ. ಇಲ್ಲಿ ತಾಜಾ ಗಾಳಿಯು ಮನಸ್ಸಿಗೆ ಮುದ ನೀಡುತ್ತದೆ.
ಮೈಸೂರು
ಮೈಸೂರು ದಕ್ಷಿಣ ಭಾರತದ ಅತ್ಯಂತ ಸೊಗಸಾದ ಸುಂದರವಾದ ನಗರಗಳಲ್ಲಿ ಒಂದು. ಮೈಸೂರಿಗೆ ಭೇಟಿ ನೀಡಲು ಸಾಕಷ್ಟು ಕಾರಣಗಳಿವೆ. ಉದಾಹರಣೆಗೆ ವ್ಯಾಪಕ ಶ್ರೇಣಿಯಲ್ಲಿ ರೇಷ್ಮೆ ಸೀರೆಗಳನ್ನು ನೋಡಬಹುದು ಹಾಗೂ ನಿರ್ದಿಷ್ಟವಾದ ಆಹಾರವು ಪಟ್ಟಣಕ್ಕೆ ಭೇಟಿ ನೀಡಲು ಒಂದು ಉತ್ತಮ ಕಾರಣ. ಮೈಸೂರು ಪಾಕ್ ಎಂಬ ಸಿಹಿ ಮತ್ತು ದಕ್ಷಿಣ ಭಾರತದ ಊಟ ಜನರ ಬಾಯಲ್ಲಿ ನೀರೂರಿಸುವ ಖಾದ್ಯ ಎಂದು ಹೆಸರುವಾಸಿಯಾಗಿದೆ, ಪ್ರತಿ ಆಹಾರ ಪ್ರಿಯರಿಗೆ ಇದು ಸ್ವರ್ಗದಂತೆ.
ಮೈಸೂರಿನಲ್ಲಿ ಅತ್ಯಂತ ಜನಪ್ರಿಯವಾದ ತಾಣಗಳೆಂದರೆ ಮೈಸೂರು ಅರಮನೆ, ಈ ಅರಮನೆಯ ವಾಸ್ತುಶಿಲ್ಪದ ರಚನೆ ನಮ್ಮ ರಾಜ್ಯದ ಸಾಹಿತ್ಯವನ್ನು, ಪರಂಪರೆಯನ್ನು ಹಾಗೂ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ, ಇತರ ತಾಣಗಳೆಂದರೆ ಚಾಮುಂಡಿ ಬೆಟ್ಟ ಮತ್ತು ದೇವರಾಜ ಮಾರುಕಟ್ಟೆ ಮೈಸೂರಿನಲ್ಲಿ ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳು.
ಕಾರವಾರ
ಈ ಸ್ಥಳವು ಪ್ರವಾಸಿಗರನ್ನು ಅದರ ಸೌಂದರ್ಯದಿಂದ ಹಾಗೂ ಪ್ರಶಾಂತತೆಯಿಂದ ಮಂತ್ರಮುಗ್ಧಗೊಳಿಸುತ್ತದೆ. ಈ ಸಮುದ್ರ ತೀರ ದೇಶದ ಮಹಾನ್ ಕವಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ಸ್ಪೂರ್ತಿಯಾಗಿದೆ. ಅತ್ಯಂತ ಶಾಂತವಾದ ಕಡಲತೀರಗಳಲ್ಲಿ ಒಂದಾದ ದೇವ್‌ಬಾಗ್ ಬೀಚ್ ಉದ್ದದ ತೀರ ಮತ್ತು ಕ್ಯಾಸುರಿನಾ ಮರಗಳನ್ನು ಹೊಂದಿದೆ. ಕಾರವಾರದಲ್ಲಿ ವೀಕ್ಷಿಸಬೇಕಾದ ಮತ್ತೊಂದು ರಮಣೀಯವಾದ ಸ್ಥಳವೆಂದರೆ ಕೋಡಿಬಾಗ್ ಕೋಟೆ ಏಕೆಂದರೆ. ಈ ಕೋಟೆಯಲ್ಲಿ ಹಲವಾರು ಅವಶೇಷಗಳು ಹಾಗೂ ಅದರ ಸುತ್ತಲಿನ ಬೀಚ್ ಇತಿಹಾಸದಿಂದಲೇ ಕೂಡಿದೆ ಅಲ್ಲದೆ ಇದು ಕಡಲಆಹಾರ ಪ್ರಿಯರಿಗೆ ಒಂದು ಕನಸಿನ ತಾಣ.
ಪ್ರಯಾಣವು ನಿಮ್ಮನ್ನು ಮೂಕನನ್ನಾಗಿ ಮಾಡುತ್ತದೆ ಮತ್ತು ನಂತರ ನಿಮ್ಮನ್ನು ಕಥೆಗಾರನನ್ನಾಗಿ ಮಾಡುತ್ತದೆ ಮತ್ತು ಕರ್ನಾಟಕವು ಅದಕ್ಕೆ ಸಾಕ್ಷಿಯಾಗಿದೆ ಎಂದು ಸರಿಯಾಗಿ ಹೇಳಲಾಗಿದೆ.