GO UP

ಸೇಂಟ್ ಪ್ಯಾಟ್ರಿಕ್ ಚರ್ಚ್, ಬೆಂಗಳೂರು

separator
Scroll Down

ಸೇಂಟ್ ಪ್ಯಾಟ್ರಿಕ್ ಚರ್ಚ್ 1841ರಲ್ಲಿ ಸ್ಥಾಪಿತವಾದ ಬ್ರಿಗೇಡ್ ರಸ್ತೆಯಲ್ಲಿರುವ ಬೆಂಗಳೂರು ನಗರದ ಜನಪ್ರಿಯ ಚರ್ಚ್ ಆಗಿದೆ. ಸೇಂಟ್ ಪ್ಯಾಟ್ರಿಕ್ ಚರ್ಚ್ ಅನ್ನು ಮೂಲತಃ ವರ್ಜಿನ್ ಮೇರಿ ಮತ್ತು ಆರ್ಚಾಂಗೆಲ್ ಮೈಕೆಲ್ ಅವರಿಗೆ ಸಮರ್ಪಿಸಲಾಗಿತ್ತು. ಇದನ್ನು “ಚರ್ಚ್ ಆಫ್ ದಿ ಅಸಂಪ್ಷನ್” ಎಂದು ಗುರುತಿಸಲಾಗಿದೆ.  ಆದರೆ ಐರಿಶ್ ಸೈನಿಕರ ತುಕಡಿಗಳು ಚರ್ಚ್ ಬಳಿ ಉಳಿದುಕೊಂಡಿದ್ದರಿಂದ ಇದು ಸೇಂಟ್ ಪ್ಯಾಟ್ರಿಕ್ ಚರ್ಚ್ ಎಂದು ಕಾಲಕ್ರಮೇಣ ಜನಪ್ರಿಯವಾಯಿತು. ಸೇಂಟ್ ಪ್ಯಾಟ್ರಿಕ್ ಚರ್ಚ್ ಅನ್ನು 2000 ಮತ್ತು 2012 ರಲ್ಲಿ ನವೀಕರಿಸಲಾಯಿತು.

ಸೇಂಟ್ ಪ್ಯಾಟ್ರಿಕ್ ಚರ್ಚ್ನಲ್ಲಿ ಪ್ರತಿ ವರ್ಷ ಜೂನ್ 13 ರಂದು ಸೇಂಟ್ ಆಂಟೋನಿಯ ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ. 

ಸೇಂಟ್ ಪ್ಯಾಟ್ರಿಕ್ ಚರ್ಚ್ ಪ್ರಾರ್ಥನಾ ಸಮಯ:

  • ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 6 ಗಂಟೆ (ಇಂಗ್ಲಿಷ್), 6.30 (ತಮಿಳು), 7 ಗಂಟೆ,  ಅಪರಾಹ್ನ 1.15  ಮತ್ತು 5 ಗಂಟೆ (ಇಂಗ್ಲಿಷ್)
  • ಭಾನಿವಾರ : ಬೆಳಗ್ಗೆ 6 ಗಂಟೆ (ಕನ್ನಡ), 7.15  (ತಮಿಳು), 8.30, 9.45 , 11 ಗಂಟೆ ಮತ್ತು ಸಂಜೆ  6 ಗಂಟೆಗೆ (ಇಂಗ್ಲಿಷ್). 

ಹತ್ತಿರ: ಎಂಜಿ ರಸ್ತೆ (1 ಕಿ.ಮೀ) ಮತ್ತು ಕಮರ್ಷಿಯಲ್ ಸ್ಟ್ರೀಟ್ (3 ಕಿ.ಮೀ) ಬ್ರಿಗೇಡ್ ರಸ್ತೆ ಬಳಿಯ ಜನಪ್ರಿಯ ಶಾಪಿಂಗ್ ಬೀದಿಗಳಾಗಿವೆ. ಕಬ್ಬನ್ ಪಾರ್ಕ್ (1.8 ಕಿ.ಮೀ), ಲಾಲ್‌ಬಾಗ್ (4 ಕಿ.ಮೀ) ಮತ್ತು ಉಲ್ಸೂರ್ ಸರೋವರ (3.6 ಕಿ.ಮೀ) ಭೇಟಿ ನೀಡಬಹುದಾದ ಹತ್ತಿರದ ಇತರ ಆಕರ್ಷಣೆಗಳು.

ಸೇಂಟ್ ಪ್ಯಾಟ್ರಿಕ್ ಚರ್ಚ್ ಅನ್ನು ಹೇಗೆ ತಲುಪುವುದು?

ಸೇಂಟ್ ಪ್ಯಾಟ್ರಿಕ್ ಚರ್ಚ್ ಬ್ರಿಗೇಡ್ ರಸ್ತೆಯಲ್ಲಿದೆ.  ಮೆಜೆಸ್ಟಿಕ್‌ನಿಂದ 5 ಕಿ.ಮೀ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 36 ಕಿ.ಮೀ.ದೂರದಲ್ಲಿದೆ.  ಎಂಜಿ ರಸ್ತೆ ಮೆಟ್ರೋ ನಿಲ್ದಾಣವು ಹತ್ತಿರದ ಮೆಟ್ರೋ (1.4 ಕಿ.ಮೀ ದೂರದಲ್ಲಿದೆ) ನಿಲ್ದಾಣವಾಗಿದೆ. ಬ್ರಿಗೇಡ್ ರಸ್ತೆಯು ಬೆಂಗಳೂರಿನ ಎಲ್ಲಾ ಭಾಗಗಳಿಂದ ಅತ್ಯುತ್ತಮ ಬಸ್ ಸೇವೆಯನ್ನು ಹೊಂದಿದೆ.

ವಸತಿ: ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹಲವು ಬಜೆಟ್ ಮತ್ತು ಐಷಾರಾಮಿ ಹೋಟೆಲ್‌ಗಳು ಲಭ್ಯವಿದೆ.

ಅಧಿಕೃತ ವೆಬ್‌ಸೈಟ್: Click Here

    Tour Location

    Leave a Reply

    Accommodation
    Meals
    Overall
    Transport
    Value for Money