Karnataka Tourism
GO UP

ಶಿವಪ್ಪ ನಾಯಕ ಅರಮನೆ

separator
ಕೆಳಗೆ ಸ್ಕ್ರಾಲ್ ಮಾಡಿ

ಶಿವಪ್ಪ ನಾಯಕ ಅರಮನೆ: ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಶಿವಪ್ಪ ನಾಯಕ ಅರಮನೆಗೆ ಜನಪ್ರಿಯ ಕೆಳದಿ ದೊರೆ ಶಿವಪ್ಪ ನಾಯಕನು ಬಳಸುತ್ತಿದ್ದ ಅರಮನೆಯಾಗಿತ್ತು. ಎರಡು ಅಂತಸ್ತಿನ ಕಟ್ಟಡವು ಬಹಳ ಕಲಾತ್ಮಕವಾಗಿದೆ ಮತ್ತು ಈಗ ಅದನ್ನು ಸರ್ಕಾರಿ ವಸ್ತುಸಂಗ್ರಹಾಲಯವಾಗಿ ಪ್ರಸ್ತುತಪಡಿಸಲಾಗಿದೆ.

ಶಿವಪ್ಪ ನಾಯಕ ಅರಮನೆಯ ಮುಖ್ಯಾಂಶಗಳು

  • ದರ್ಬಾರ್ ಹಾಲ್: ಬೃಹತ್ ಮರದ ಕಂಬಗಳು ಇರುವ ಅರಮನೆಯ ಮುಖ್ಯ ಸಭಾಂಗಣ. ದೊಡ್ಡ ಅರಮನೆ ಸಂಕೀರ್ಣ ಭಾಗವಾಗಿದ್ದ ದರ್ಬಾರ್ ಹಾಲ್ ಕಟ್ಟಡ ಇಂದು ಸುಸ್ಥಿತಿಯಲ್ಲಿದ್ದು ನವೀಕರಿಸಿ ಕಾಪಾಡಲಾಗಿದೆ. 
  • ನಾಲ್ಕು ಕೊಠಡಿಗಳು: ದರ್ಬಾರ್ ಹಾಲ್‌ನಲ್ಲಿ ನಾಲ್ಕು ಕೊಠಡಿಗಳಿದ್ದು, ಅವುಗಳಲ್ಲಿ ಒಂದನ್ನು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು
  • ಸಣ್ಣ ಬಾಲ್ಕನಿ: ದರ್ಬಾರ್ ಹಾಲ್ ಮೇಲೆ ಸಣ್ಣ ಬಾಲ್ಕನಿ ಇದೆ
  • ವಸ್ತುಸಂಗ್ರಹಾಲಯ: ಈ ಪ್ರದೇಶದ ಹಲವಾರು ವಿಗ್ರಹಗಳು, ಪ್ರತಿಮೆಗಳು, ಕಲ್ಲಿನ ಸ್ಮಾರಕಗಳು ಮತ್ತು ಕಲಾಕೃತಿಗಳು ಇತ್ಯಾದಿ ಪ್ರಾಚೀನ ವಸ್ತುಗಳನ್ನು ಶಿವಪ್ಪ ನಾಯಕ ಅರಮನೆಯಲ್ಲಿ ಸಂರಕ್ಷಿಸಲಾಗಿದೆ ಮತ್ತು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿವೆ.
  • ಉದ್ಯಾನ: ಶಿವಪ್ಪ ನಾಯಕ ಅರಮನೆಯ ಹೊರಗೆ ಒಂದು ಸುಂದರವಾದ ಉದ್ಯಾನವನವಿದೆ.

ಸಮಯ: ಶಿವಪ್ಪ ನಾಯಕ ಅರಮನೆ ಬೆಳಿಗ್ಗೆ 9 ರಿಂದ ಸಂಜೆ 6.30 ರವರೆಗೆ ತೆರೆದಿರುತ್ತದೆ. ಶಿವಪ್ಪ ನಾಯಕ ಅರಮನೆಯನ್ನು ವರ್ಷವಿಡೀ ಭೇಟಿ ಮಾಡಬಹುದು.

ತಲುಪುವುದು ಹೇಗೆ? ಶಿವಪ್ಪ ನಾಯಕ ಅರಮನೆಯು ಬೆಂಗಳೂರಿನಿಂದ 310 ಕಿ.ಮೀ ಮತ್ತು ಶಿವಮೊಗ್ಗ ನಗರ ಕೇಂದ್ರದಿಂದ 3 ಕಿ.ಮೀ ದೂರದಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 188 ಕಿ.ಮೀ ದೂರದಲ್ಲಿದೆ. ಶಿವಮೊಗ್ಗ ಪಟ್ಟಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಶಿವಮೊಗ್ಗ ಪಟ್ಟಣದಿಂದ ಶಿವಪ್ಪ ನಾಯಕ ಅರಮನೆಯನ್ನು ತಲುಪಲು ಆಟೋ ಬಾಡಿಗೆಗೆ ಪಡೆಯಬಹುದಾಗಿದೆ. 

ವಸತಿ: ಶಿವಮೊಗ್ಗ ನಗರವು ಹಲವಾರು ಬಜೆಟ್, ಮಧ್ಯ ಶ್ರೇಣಿಯ ಮತ್ತು ಐಷಾರಾಮಿ ಹೋಟೆಲ್‌ಗಳನ್ನು ಹೊಂದಿದೆ.

ತ್ವರಿತ ಲಿಂಕ್‌ಗಳು

Udupi Paryaya Utsava
Agumbe Shivamogga
 

Tour Location

 

Leave a Reply

Accommodation
Meals
Overall
Transport
Value for Money