GO UP

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ, ಬೆಂಗಳೂರು

separator
Scroll Down

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ (ವಿಐಟಿಎಂ) ಕರ್ನಾಟಕದ ಅತ್ಯಂತ ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ವಸ್ತುಸಂಗ್ರಹಾಲಯವಾಗಿದೆ. ಕರ್ನಾಟಕದಾದ್ಯಂತ ಹಲವಾರು ಸಂಕೀರ್ಣ ನಿರ್ಮಾಣ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಇಂಜಿನಿಯರ್ ಹಾಗು ಮೈಸೂರಿನ ದಿವಾನರಾಗಿದ್ದ, ಭಾರತ ರತ್ನ ಪ್ರಶಸ್ತಿ ವಿಜೇತ ಮೋಕ್ಷಗುಂಡಂ ಸರ್ ಎಂ ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ ಈ ಸಂಗ್ರಹಾಲಯಕ್ಕೆ ಹೆಸರಿಡಲಾಗಿದೆ 

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ಕಬ್ಬನ್ ಪಾರ್ಕ್ ಸನಿಹದಲ್ಲಿದೆ ಮತ್ತು ಇದನ್ನು1962 ರಲ್ಲಿ ತೆರೆಯಲಾಯಿತು. ಸರಳ ಚಿತ್ರಣಗಳು ಮತ್ತು ಪರಿಣಾಮಕಾರಿ ಪ್ರಾತ್ಯಕ್ಷಿಕೆಗಳ ಮೂಲಕ ವೈಜ್ಞಾನಿಕ ಪರಿಕಲ್ಪನೆ, ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬಹುದಾಗಿದೆ. 

ಅರ್ಥಮಾಡಿಕೊಳ್ಳಲು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದ ಪ್ರದರ್ಶನ ಸಭಾಂಗಣಗಳು:

  • ಯಂತ್ರ (ಎಂಜಿನ್) ಸಭಾಂಗಣ – ವಿವಿಧ ಯಂತ್ರಗಳು (ಆಂತರಿಕ ದಹನ, ಉಗಿ ಯಂತ್ರ, ಇತ್ಯಾದಿ) ಹೇಗೆ ಕೆಲಸ ಮಾಡುತ್ತದೆ ಎಂದು ನೋಡಬಹುದಾಗಿದೆ 
  • ಎಲೆಕ್ಟ್ರಾನಿಕ್ಸ್
  • ಫನ್ ಸೈನ್ಸ್
  • ಬಾಹ್ಯಾಕಾಶ ತಂತ್ರಜ್ಞಾನ
  • ಜೈವಿಕ ತಂತ್ರಜ್ಞಾನ ಕ್ರಾಂತಿ
  • ಹಾಲ್ ಆಫ್ ಎಲೆಕ್ಟ್ರಾನಿಕ್ಸ್
  • ಮಕ್ಕಳಿಗೆ ವಿಜ್ಞಾನ
  • ಡೈನೋಸಾರ್ ಎನ್‌ಕ್ಲೇವ್
  • ಸೈನ್ಸ್ ಆನ್ ಎ ಸ್ಪಿಯರ್ (ಭೂಗೋಳ ವಿಜ್ಞಾನ)
  • ಏವಿಯೇಷನ್ ​​(ರೈಟ್ ಬ್ರದರ್ಸ್)

 

ಸಮಯ: ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ಪ್ರತಿದಿನ ಬೆಳಿಗ್ಗೆ 9.30 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ. ಎಲ್ಲವನ್ನೂ ನೋಡಲು ಕನಿಷ್ಠ ಅರ್ಧ ದಿನ ಬೇಕಾಗುತ್ತದೆ. 

 

ತಲುಪುವುದು ಹೇಗೆ: ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯವು ಕಬ್ಬನ್ ಪಾರ್ಕ್‌ನಲ್ಲಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ 4 ಕಿ.ಮೀ ದೂರವಿದೆ. 

 ಬೆಂಗಳೂರು ವಿಮಾನ ನಿಲ್ದಾಣದಿಂದ 35 ಕಿ.ಮೀ ದೂರದಲ್ಲಿದೆ. ಬೆಂಗಳೂರು ನಗರದ ಯಾವುದೇ ಭಾಗದಿಂದ ಬೆಂಗಳೂರು ಮೆಟ್ರೊ (ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವು ಹತ್ತಿರದಲ್ಲಿದೆ),  ಬಸ್ ಅಥವಾ ಟ್ಯಾಕ್ಸಿ ಬಳಸಿ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ತಲುಪಬಹುದು.

ವಸತಿ: ಬೆಂಗಳೂರು ನಗರವು ವಿವಿಧ ಬಜೆಟ್‌ಗೆ ತಕ್ಕಂತೆ ಸಾಕಷ್ಟು ಹೋಟೆಲ್‌ಗಳನ್ನು ಹೊಂದಿದೆ. ಜೆಡಬ್ಲ್ಯೂ ಮ್ಯಾರಿಯಟ್ ಬೆಂಗಳೂರು ವಿಐಟಿಎಂ ಎದುರು ಇರುವ ಐಷಾರಾಮಿ ಹೋಟೆಲ್ ಆಗಿದೆ.

ಅಧಿಕೃತ ವೆಬ್‌ಸೈಟ್: https://www.vismuseum.gov.in/about.html

     

    Tour Location

     

    Leave a Reply

    Accommodation
    Meals
    Overall
    Transport
    Value for Money