ಮೌಂಟ್ ರೋಸರಿ ಚರ್ಚ್ ಕರಾವಳಿ ಪಟ್ಟಣವಾದ ಉಡುಪಿಯಲ್ಲಿರುವ ರೋಮನ್ ಕ್ಯಾಥೊಲಿಕ್ ಚರ್ಚ್ ಆಗಿದೆ. 1837 ರಲ್ಲಿ ನಿರ್ಮಿಸಲಾದ ಮೌಂಟ್ ರೋಸರಿ ಚರ್ಚ್ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಬಹಳ ಹತ್ತಿರದಲ್ಲಿದೆ ಮತ್ತು ಉಡುಪಿಯಲ್ಲಿನ ಕ್ರಿಶ್ಚಿಯನ್ ಸಮುದಾಯದ ಪ್ರಮುಖ ಪೂಜಾ ಸ್ಥಳವಾಗಿದೆ.
ಮೌಂಟ್ ರೋಸರಿ ಚರ್ಚ್ ವಿಶಾಲವಾಗಿದ್ದು ಪ್ರಾರ್ಥನೆಗಾಗಿ ಒಮ್ಮೆಗೆ 1200 ಜನರಿಗೆ ಅವಕಾಶ ಕಲ್ಪಿಸುತ್ತದೆ.
ಎತ್ತರದ ವೇದಿಕೆ, ಬೈಬಲ್ ಮತ್ತು ಮರದ ಶಿಲುಬೆ, ಗಾಜಿನ ಕಿಟಕಿಗಳ ಹಿನ್ನೆಲೆ, ಅವರ್ ಲೇಡಿ ಆಫ್ ಮೌಂಟ್ ರೋಸರಿಯ ಪ್ರತಿಮೆ ಮತ್ತು ಇತರ ಸಂತರ ಪ್ರತಿಮೆಗಳು ಉಡುಪಿಯ ಮೌಂಟ್ ರೋಸರಿ ಚರ್ಚ್ನ ಪ್ರಮುಖ ಆಕರ್ಷಣೆಗಳಾಗಿವೆ.
ಉಡುಪಿಯ ಮೌಂಟ್ ರೋಸರಿ ಚರ್ಚ್ನಲ್ಲಿ ಪ್ರಾರ್ಥನಾ ಸಮಯ
- ಸೋಮವಾರದಿಂದ ಶುಕ್ರವಾರದವರೆಗೆ: ಬೆಳಿಗ್ಗೆ 6.45
- ಶನಿವಾರ: ಬೆಳಿಗ್ಗೆ 6.45 ಮತ್ತು ಸಂಜೆ 4.30
- ಭಾನುವಾರ: 6 , 8 ಮತ್ತು 9.30 ಗಂಟೆಗೆ
ಹತ್ತಿರ: ಮಲ್ಪೆ ಬೀಚ್ ಮತ್ತು ಸೇಂಟ್ ಮೇರಿಸ್ ದ್ವೀಪ (8 ಕಿ.ಮೀ), ಕಾಪು ಬೀಚ್ (22 ಕಿ.ಮೀ) ಮತ್ತು ಉಡುಪಿ ಶ್ರೀ ಕೃಷ್ಣ ದೇವಸ್ಥಾನ (6 ಕಿ.ಮೀ) ಮೌಂಟ್ ರೋಸರಿ ಚರ್ಚ್ ಜೊತೆಗೆ ಭೇಟಿ ನೀಡಲು ಕೆಲವು ಉತ್ತಮ ಸ್ಥಳಗಳಾಗಿವೆ.
ತಲುಪುವುದು ಹೇಗೆ: ಉಡುಪಿ ರಾಜ್ಯ ರಾಜಧಾನಿ ಬೆಂಗಳೂರಿನಿಂದ 400 ಕಿ.ಮೀ ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣ (60 ಕಿ.ಮೀ). ಉಡುಪಿಯಲ್ಲಿ ರೈಲು ನಿಲ್ದಾಣವಿದೆ ಮತ್ತು ಉತ್ತಮ ರಸ್ತೆ ಸಂಪರ್ಕಿವಿದೆ . ಮೌಂಟ್ ರೋಸರಿ ಚರ್ಚ್ ಉಡುಪಿ ನಗರ ಕೇಂದ್ರದಿಂದ 7 ಕಿ.ಮೀ ದೂರದಲ್ಲಿರುವ ಸಂತೆಕಟ್ಟೆಯಲ್ಲಿದೆ ಮತ್ತು ಬಸ್ ಅಥವಾ ಆಟೋ ಮೂಲಕ ತಲುಪಬಹುದಾಗಿದೆ.
ವಸತಿ: ಹೋಟೆಲ್ ಬೃಂದಾವನ್ ಮೌಂಟ್ ರೋಸರಿ ಚರ್ಚ್ಗೆ ಬಹಳ ಹತ್ತಿರದಲ್ಲಿದೆ. ಉಡುಪಿ ಪಟ್ಟಣದಲ್ಲಿ (7 ಕಿ.ಮೀ ದೂರದಲ್ಲಿ) ಹಲವಾರು ಐಷಾರಾಮಿ ಮತ್ತು ಬಜೆಟ್ ವಸತಿಗೃಹಗಳು ಲಭ್ಯವಿದೆ.