GO UP

ಮಲೆ ಮಹದೇಶ್ವರ ಬೆಟ್ಟ

separator
Scroll Down

ಮಲೆ ಮಹದೇಶ್ವರ ಬೆಟ್ಟ, ಸಂಕ್ಷಿಪ್ತವಾಗಿ ಎಂಎಂ ಬೆಟ್ಟ ಸಂತ ಮಹದೇಶ್ವರನ ವಾಸಸ್ಥಾನ ಮತ್ತು ಕರ್ನಾಟಕದ ಪ್ರಮುಖ ಯಾತ್ರಾ ಕೇಂದ್ರವಾಗಿದ್ದು ಶಿವನಿಗೆ ಅರ್ಪಿತವಾಗಿದೆ. ಮಲೆ ಮಹದೇಶ್ವರ ಬೆಟ್ಟವನ್ನು ‘ಏಳು ಮಲೆ’ (ಏಳು ಬೆಟ್ಟಗಳು) ಎಂದೂ ಕರೆಯುತ್ತಾರೆ. ಮಲೆ ಮಹದೇಶ್ವರ ಬೆಟ್ಟಗಳ ಶ್ರೇಣಿಯು ಕೊಂಗುಮಲೆ, ಜೇನುಮಲೆ, ಪ್ಯಾಚೆಮಲೆ, ಅನುಮಲೆ, ಕಾನುಮಲೆ, ಪೊನ್ನಾಚಿಮಲೆ ಮತ್ತು ಪಾವಲಮಲೆಗಳನ್ನು ಒಳಗೊಂಡಿದೆ. ಎಂಎಂ ಬೆಟ್ಟಗಳ ಮೇಲಿರುವ ಮಹದೇಶ್ವರ ದೇವಸ್ಥಾನವನ್ನು ಸ್ಥಳೀಯ ಕುರುಬ ಜಮೀನ್ದಾರ ಜುಂಜೆ ಗೌಡ ನಿರ್ಮಿಸಿದನೆಂದು ಹೇಳಲಾಗುತ್ತದೆ. ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಶಿವಲಿಂಗವು ಸ್ವಯಂ ಉಧ್ಭವವಾಗಿದೆ  ಎಂದು ನಂಬಲಾಗಿದೆ. ಮಲೆ ಮಹದೇಶ್ವರ ಸ್ವಾಮಿ ಹುಲಿಯ ಮೇಲೆ ತಿರುಗಾಡುತ್ತಾರೆ, ಪವಾಡಗಳನ್ನು ಮಾಡುತ್ತಾರೆ ಮತ್ತು ಭಕ್ತರನ್ನು ಕೆಟ್ಟದ್ದರಿಂದ ರಕ್ಷಿಸುತ್ತಾರೆ ಎಂದು ಸ್ಥಳೀಯರು ನಂಬುತ್ತಾರೆ.

 ಮಲೆ ಮಹದೇಶ್ವರ ಬೆಟ್ಟಗಳು ಮತ್ತು ದೇವಾಲಯದ ಉಲ್ಲೇಖ ಕರ್ನಾಟಕದ ಹಲವಾರು ಜಾನಪದ ಗೀತೆಗಳಲ್ಲಿ ಕಂಡುಬರುತ್ತದೆ. ನೀವು ಜಾನಪದ ಹಾಡು ಅಥವಾ ಬುಡಕಟ್ಟು ನೃತ್ಯವನ್ನು ಕೇಳಿದಾಗ ‘ಏಳು ಮಲೆ’ ಮತ್ತು ‘ಮಾದೇವ’ ಎಂಬ ಪದಗಳನ್ನು ಗಮನಿಸಿ.

ತಲುಪುವುದು ಹೇಗೆ: ಮಲೆ ಮಹದೇಶ್ವರ ಬೆಟ್ಟಗಳು ಬೆಂಗಳೂರು ನಗರದಿಂದ 135 ಕಿ.ಮೀ ಮತ್ತು ಮೈಸೂರಿನಿಂದ (ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ).138 ಕಿ.ಮೀ ದೂರದಲ್ಲಿದೆ  ಮಲೆ ಮಹದೇಶ್ವರ ಬೆಟ್ಟ ತಲುಪಲು ಮೈಸೂರಿನಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಮಲೆ ಮಹದೇಶ್ವರ ಬೆಟ್ಟ ತಲುಪಲು ಸೀಮಿತ ಬಸ್ ಸೇವೆ ಲಭ್ಯವಿದೆ ಆದರೆ ಟ್ಯಾಕ್ಸಿ ಬಾಡಿಗೆ ಅಥವಾ ಸ್ವಂತ ವಾಹನ ಉತ್ತಮ ಆಯ್ಕೆಯಾಗಿರಲಿದೆ.  

ಉಳಿಯಿರಿ: ಮಲೆ ಮಹದೇಶ್ವರ ಬೆಟ್ಟದಿಂದ 72 ಕಿ.ಮೀ ದೂರದಲ್ಲಿರುವ ಕೊಳ್ಳೆಗಾಲ ಪಟ್ಟಣದಲ್ಲಿ ವಸತಿ ಲಭ್ಯವಿದೆ. ಶಿವನಸಮುದ್ರದಲ್ಲಿನ ಕೆಎಸ್‌ಟಿಡಿಸಿ ಹೋಟೆಲ್ ಭರಚುಕ್ಕಿ (91 ಕಿ.ಮೀ), ಕೆ-ಗುಡಿಯ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಕ್ಯಾಂಪಸ್ (120 ಕಿ.ಮೀ) ಉತ್ತಮ ಆಯ್ಕೆಗಳಾಗಿವೆ. ಹೆಚ್ಚಿನ ವಸತಿ ಮೈಸೂರು ನಗರದಲ್ಲಿ ಲಭ್ಯವಿದೆ (138 ಕಿ.ಮೀ)

ತ್ವರಿತ ಲಿಂಕ್‌ಗಳು

Hogenakkal Waterfalls Chamarajanagara
Mysuru Palace

    Tour Location

    Leave a Reply

    Accommodation
    Meals
    Overall
    Transport
    Value for Money