Karnataka Tourism
GO UP

ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್

separator
ಕೆಳಗೆ ಸ್ಕ್ರಾಲ್ ಮಾಡಿ

ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್

ಮುರುಡೇಶ್ವರ ಹತ್ತಿರದ ನೇತ್ರಾಣಿ ದ್ವೀಪವು ಕರ್ನಾಟಕದ ಪ್ರಮುಖ ಸ್ಕೂಬಾ ಡೈವಿಂಗ್ ತಾಣವಾಗಿದೆ. ನೇತ್ರಾಣಿ ದ್ವೀಪವು ಮುರುಡೇಶ್ವರ ತೀರದಿಂದ ಸುಮಾರು 22 ಕಿ.ಮೀ ದೂರದಲ್ಲಿದೆ ಮತ್ತು ದೋಣಿಯಲ್ಲಿ ಒಂದು ಗಂಟೆ ತೆಗೆದುಕೊಳ್ಳುತ್ತದೆ. ಮುರುಡೇಶ್ವರದಲ್ಲಿ ಸ್ವಯಂ ಮುಳುಗುವವರಿಗೆ (ಪಡಿ ಮಾನ್ಯತೆ ಇದ್ದವರು) ಸಹಾಯ ಮಾಡುವ, ಹವ್ಯಾಸಿ ಸ್ಕೂಬಾ ಡೈವ್ ಮತ್ತು ಸ್ಕೂಬಾ ಡೈವಿಂಗ್ ತರಬೇತಿ ಶಿಬಿರಗಳನ್ನು ನಡೆಸುವ ಖಾಸಗಿ ಕಂಪೆನಿಗಳಿವೆ. ಮೀನಿನಂತೆ ಈಜಲು ಸಾಧ್ಯವಾಗುವುದು, ಅವುಗಳನ್ನು ನೀರೊಳಗಿನ  ತಮ್ಮ ನೈಜ ಪರಿಸರದಲ್ಲಿ ನೋಡುವುದು ಮತ್ತು ವರ್ಣರಂಜಿತ ಹವಳಗಳನ್ನು ನೋಡುವುದು ಮರೆಯಲಾಗದ  ಅನುಭವವಾಗಿರುತ್ತದೆ, ಇದು ಕುಟುಂಬದ ಪ್ರತಿಯೊಬ್ಬರಿಗೂ ಒಂದು ಪರಿಪೂರ್ಣ ಸಾಹಸವಾಗಿದೆ.

ಸ್ಕೂಬಾ ಡೈವಿಂಗ್ ವಿಧಗಳು

ಸೋಲೋ ಡೈವ್: ಉಸಿರಾಟದ ಸಾಧನ ಧರಿಸಿ ನೀರೊಳಗಿನ ಮುಳುಗಿ ಹವಳಗಳನ್ನು ನೋಡುವ ಆಸಕ್ತಿ ಇರುವ ಯಾವುದೇ ವ್ಯಕ್ತಿ ಸ್ಕೂಬಾ ಡೈವಿಂಗ್ ಮಾಡಬಹುದು. ಸೂಕ್ತ ತರಬೇತಿ ಪಡೆದು (ಪಡಿ) ಮಾನ್ಯತೆ ಇರುವವರು ಯಾರದೇ ಹಂಗಿಲ್ಲದೆ ಸ್ಕೂಬಾ ಡೈವಿಂಗ್ ಮಾಡಬಹುದು. ಇತರ ಹವ್ಯಾಸಿ ಪ್ರವಾಸಿಗರು ಸ್ಕೂಬಾ ಡೈವಿಂಗ್ ನಡೆಸಿಕೊಡುವ ಸಂಸ್ಥೆಯ ಅನುಭವಿ ಮಾರ್ಗದರ್ಶಕರ ಕಣ್ಗಾವಲಿನಲ್ಲಿ ಸ್ಕೂಬಾ ಡೈವಿಂಗ್ ಮಾಡಬಹುದು. ನೀರಿನ ಅಡಿಯಲ್ಲಿ ಸಂವಹನಕ್ಕಾಗಿ ಬಳಸಬೇಕಾದ ವಿವಿಧ ಕೈ ಸನ್ನೆಗಳು, ಮೂಲ ಉಸಿರಾಟದ ತತ್ವಗಳು ಮತ್ತು ಉಪಕರಣಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಮಾರ್ಗದರ್ಶಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಾರೆ. ಕೈ ಚಿಹ್ನೆಗಳನ್ನು ತಪ್ಪಾಗಿ ಗ್ರಹಿಸಬಾರದು, ಕಿವಿಗಳ ಮೇಲಿನ ಒತ್ತಡವನ್ನು ಹೇಗೆ ಸಮನಾಗಿಸುವುದು ಎಂಬುದನ್ನು ಕಲಿಯುವುದು ಅವಶ್ಯಕ. ಕೆಲವು ನಿರ್ವಾಹಕರು ತೀರದ ಬಳಿ ಅಥವಾ ಈಜುಕೊಳದಲ್ಲಿ ಪ್ರಾತ್ಯಕ್ಷಿಕೆ ನೀಡಿ ವಿವರಿಸುತ್ತಾರೆ. ನಂತರ ಹವಳಗಳಿರುವ ತಾಣಕ್ಕೆ ದೋಣಿಯಲ್ಲಿ ಹೋಗಿ ಗೈಡ್ ಮತ್ತು ಹವ್ಯಾಸಿ ಮುಳುಗುಗಾರರು ಇಬ್ಬರೂ ನೀರಿಗೆ ಧುಮುಕಿ ನೀರೊಳಗಿನ ಮೀನುಗಳು ಮತ್ತು ಹವಳಗಳನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತಾರೆ. 

ಪಡಿ / ಎಸ್‌ಎಸ್‌ಐ ಕೋರ್ಸ್: ಗೈಡ್ ಇಲ್ಲದೆ ಖುದ್ದಾಗಿ ಡೈವಿಂಗ್ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ಪಡಿ  (ಪ್ರೊಫೆಷನಲ್ ಅಸೋಸಿಯೇಶನ್ ಆಫ್ ಡೈವಿಂಗ್ ಇನ್ಸ್ಟ್ರಕ್ಟರ್ಸ್) ಅಥವಾ ಎಸ್‌ಎಸ್‌ಐ (ಸ್ಕೂಬಾ ಸ್ಕೂಲ್ ಇಂಟರ್‌ನ್ಯಾಷನಲ್) ಅಡಿಯಲ್ಲಿ ಪ್ರಮಾಣಪತ್ರ ಕೋರ್ಸ್ ಅನ್ನು ಕೈಗೊಳ್ಳಬಹುದು. ಕೋರ್ಸ್ ಸಾಮಾನ್ಯವಾಗಿ 5-7 ದಿನಗಳವರೆಗೆ ಇರುತ್ತದೆ ಮತ್ತು 3 ಮಾಡ್ಯೂಲ್‌ಗಳು- ಪಠ್ಯ ಬೋಧನೆ, ಸೀಮಿತ ಡೈವ್‌ಗಳು (ಈಜುಕೊಳಗಳಲ್ಲಿ) ಮತ್ತು ಸಮುದ್ರ ನೀರಿನ ಡೈವಿಂಗ್ ಅನ್ನು ಒಳಗೊಂಡಿದೆ. ಕೋರ್ಸ್ ಅನ್ನು ಪೂರ್ಣಗೊಳಿಸುವುದರಿಂದ ಗೈಡ್ ಡೈವ್ ಕೈಗೊಳ್ಳಲು ಮತ್ತು ಇತರ ಡೈವರ್‌ಗಳಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ.

ವೆಚ್ಚ:

ಒಂದು ಡೈವ್‌ಗೆ 4000 ರೂಪಾಯಿಗಳಷ್ಟು ವೆಚ್ಚವಾಗಬಹುದು. ನಿಮ್ಮ ತಂಡದಲ್ಲಿ ಎಷ್ಟು ಜನರಿದ್ದಾರೆ, ಋತುಮಾನ, ಬೇಡಿಕೆ ಮತ್ತಿತರ ಅಂಶಗಳನ್ನು  ಅವಲಂಬಿಸಿ ಆಪರೇಟರ್‌ನೊಂದಿಗೆ ಉತ್ತಮ ದರವನ್ನು ಮಾತುಕತೆ ಮೂಲಕ ನಿಗದಿ ಪಡಿಸಲು ಸಾಧ್ಯವಿದೆ.

ಪ್ರಯಾಣ:

ಮುರುಡೇಶ್ವರ ಬೆಂಗಳೂರಿನಿಂದ 600 ಕಿ.ಮೀ ದೂರದಲ್ಲಿದೆ. ಮುರುಡೇಶ್ವರ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲ್ವೆ ನಿಲ್ದಾಣವನ್ನು ಹೊಂದಿದ್ದು, ಕರ್ನಾಟಕದ ಎಲ್ಲಾ ಭಾಗಗಳಿಂದ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಹೊಂದಿದೆ. 150 ಕಿ.ಮೀ ದೂರದಲ್ಲಿರುವ ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ.

ವಸತಿ :

ಮುರುಡೇಶ್ವರ ದೇವಾಲಯದ ಪಟ್ಟಣವಾಗಿದ್ದು, ವ್ಯಾಪಕ ಶ್ರೇಣಿಯ ಬಜೆಟ್ ಮತ್ತು ಮಧ್ಯ ಶ್ರೇಣಿಯ ಹೋಟೆಲ್ ಆಯ್ಕೆಗಳನ್ನು ನೀಡುತ್ತದೆ..

ತ್ವರಿತ ಲಿಂಕ್‌ಗಳು

Murudeshwara Shiva Statue
Jog waterfalls

Tour Location

Leave a Reply

Accommodation
Meals
Overall
Transport
Value for Money