ದಾಂಡೇಲಿ ವೈಟ್ ವಾಟರ್ ರಾಫ್ಟಿಂಗ್: ದಾಂಡೇಲಿಯ ಕಾಳಿ ನದಿ ಕರ್ನಾಟಕದ ಜನಪ್ರಿಯ ಸಾಹಸ ಕ್ರೀಡಾ ತಾಣವಾಗಿದೆ. ರಾಫ್ಟಿಂಗ್ (ರಬ್ಬರ್ ದೋಣಿಯಲ್ಲಿ ತೇಲುತ್ತಾ, ಹುಟ್ಟು ಹಾಕುತ್ತಾ ರಭಸವಾಗಿ ಹರಿಯುವ ನದಿಯೊಡನೆ ಸಾಗುವುದು) ಮಾಡಲು ಕಾಳಿ ನದಿ ಹೇಳಿ ಮಾಡಿಸಿದ ಪ್ರದೇಶವಾಗಿದ್ದು ಕರ್ನಾಟಕದ ಅತ್ಯುತ್ತಮ ತಾಣವಾಗಿದೆ
ದೂರ ಮತ್ತು ಅವಧಿ: ದಾಂಡೇಲಿಯ ಕಾಳಿ ನದಿಯುಲ್ಲಿ 12 ಕಿ.ಮೀ.ವರೆಗೆ ರಾಫ್ಟಿಂಗ್ ಮಾಡಬಹುದಾಗಿದೆ. ನದಿಯ ಸುತ್ತಮುತ್ತ ದಟ್ಟವಾದ ಕಾಡುಗಳಿಂವೆ ಮತ್ತು ಹಲವಾರು ಗ್ರೇಡ್ 2 (ಸರಳ) ಮತ್ತು ಗ್ರೇಡ್ 3 (ಸ್ವಲ್ಪ ಹೆಚ್ಚು ಶ್ರಮ ಬೇಡುವ) ರಾಪಿಡ್‌ಗಳನ್ನು ನೀಡುತ್ತಾ ರಾಫ್ಟಿಂಗ್ ಅನುಭವವನ್ನು ಆಹ್ಲಾದಕರ, ಸಾಹಸ ಮತ್ತು ಸ್ಮರಣೀಯವಾಗಿಸುತ್ತದೆ. 12 ಕಿ.ಮೀ ರಾಫ್ಟಿಂಗ್ ವಿಹಾರವು 3 ರಿಂದ 4 ಗಂಟೆಗಳ ಅಂತ್ಯದಿಂದ ಕೊನೆಯವರೆಗೆ ಇರುತ್ತದೆ, ಇದರಲ್ಲಿ ರೆಸಾರ್ಟ್‌ನಿಂದ ಪ್ರಾರಂಭದ ಸ್ಥಳಕ್ಕೆ ತಲುಪಲು ವಾಹನ ವ್ಯವಸ್ಥೆ ಸೇರಿದೆ.
ಎಲ್ಲಿ ಬುಕ್ ಮಾಡುವುದು? ರಾಫ್ಟಿಂಗ್ ಅನ್ನು ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಜಂಗಲ್ ಲಾಡ್ಜ್ ಕಾಳಿ ಸಾಹಸ ಶಿಬಿರದಲ್ಲಿ ಬುಕಿಂಗ್ ಕೇಂದ್ರ ಕಾರ್ಯನಿರ್ವಹಿಸುತ್ತದೆ. ಹಲವಾರು ಖಾಸಗಿ ರೆಸಾರ್ಟ್‌ಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳು ದಾಂಡೇಲಿಯಲ್ಲಿ ರಾಫ್ಟಿಂಗ್ ವಿಹಾರವನ್ನು ಕಾಯ್ದಿರಿಸಲು ಸಹಾಯ ಮಾಡುತ್ತದೆ.
ಇತರ ಚಟುವಟಿಕೆಗಳು:ದೋಣಿ ವಿಹಾರ, ಕಯಾಕಿಂಗ್, ಪಕ್ಷಿ ವೀಕ್ಷಣೆ ಇತರ ಹೆಸರಾಂತ ಚಟುವಟಿಕೆಗಳಾಗಿವೆ.
ಗಮನಿಸಬೇಕಾದ ಅಂಶಗಳು:
- ದಾಂಡೇಲಿ ವೈಟ್ ವಾಟರ್ ರಾಫ್ಟಿಂಗ್ ಚಟುವಟಿಕೆಯು ಹತ್ತಿರದ ಅಣೆಕಟ್ಟಿನಿಂದ ನದಿ ನೀರನ್ನು ಬಿಡುಗಡೆ ಮಾಡುವುದರ ಮೇಲೆ ಅವಲಂಬಿತವಾಗಿರುತ್ತದೆ. ಮಳೆಗಾಲದಲ್ಲಿ ಮತ್ತು ನೀರಿನ ಮಟ್ಟ ಕಡಿಮೆಯಾದಾಗ ರಾಫ್ಟಿಂಗ್ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗುತ್ತದೆ. ರಾಫ್ಟಿಂಗ್‌ಗೆ ಉತ್ತಮ ಸಮಯವೆಂದರೆ ನವೆಂಬರ್‌ನಿಂದ ಫೆಬ್ರವರಿವರೆಗೆ.
- ರಾಫ್ಟಿಂಗ್ ಸ್ಟಾರ್ಟ್ ಪಾಯಿಂಟ್ ಬಳಿ ಯಾವುದೇ ಲಾಕರ್ ಕೊಠಡಿಗಳು ಲಭ್ಯವಿಲ್ಲ. ರಾಫ್ಟಿಂಗ್ ಸ್ಥಳಕ್ಕೆ ಅಮೂಲ್ಯವಾದ ಯಾವುದನ್ನೂ ಒಯ್ಯಬೇಡಿ.
ದಾಂಡೇಲಿಯನ್ನು ತಲುಪುವುದು ಹೇಗೆ? ದಾಂಡೇಲಿ ಬೆಂಗಳೂರಿನಿಂದ 460 ಕಿ.ಮೀ. ಹುಬ್ಬಳ್ಳಿ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ (65 ಕಿ.ಮೀ). ಲೋಂಡಾ, ಅಳ್ನಾವರ ಹತ್ತಿರದ ರೈಲು ನಿಲ್ದಾಣ (35 ಕಿ.ಮೀ). ವಿಮಾನ, ರಸ್ತೆ ಅಥವಾ ರೈಲು ಮೂಲಕ ಹುಬ್ಬಳ್ಳಿ / ಅಳ್ನಾವರ ತಲುಪಬಹುದು ಮತ್ತು ದಾಂಡೇಲಿಗೆ ಭೇಟಿ ನೀಡಲು ಟ್ಯಾಕ್ಸಿ ಪಡೆಯಬಹುದು.
ವಸತಿ : ಜಂಡಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳು ದಾಂಡೇಲಿ- ಕಾಳಿ ಸಾಹಸ ಶಿಬಿರ ಮತ್ತು ಓಲ್ಡ್ ಮ್ಯಾಗಜೀನ್ ಹೌಸ್ ಎರಡು ಸೌಲಭ್ಯಗಳನ್ನು ನಡೆಸುತ್ತವೆ. ದಾಂಡೇಲಿಯಲ್ಲಿ ಹಲವಾರು ಹೋಂ ಸ್ಟೇಗಳು ಲಭ್ಯವಿದೆ.