ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ಹೆಸರಾಂತ ಗಿರಿಧಾಮವಾಗಿದೆ. ಕೆಮ್ಮಣ್ಣುಗುಂಡಿ ಮೈಸೂರಿನ ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರ ಬೇಸಿಗೆಯ ವಿಶ್ರಾಂತಿ ಸ್ಥಳವಾಗಿತ್ತು.
ಕೆಮ್ಮಣ್ಣುಗುಂಡಿಯ ಆಕರ್ಷಣೆಗಳು
- ಝಡ್ ಪಾಯಿಂಟ್‌ನಿಂದ ವೀಕ್ಷಣೆ: ಕೆಮ್ಮಣ್ಣುಗುಂಡಿಯ ಪ್ರಮುಖ ಆಕರ್ಷಣೆಯಾಗಿದ್ದು, ನಿಮ್ಮ ಕಣ್ಣುಗಳು ತಲುಪುವಷ್ಟು ದೂರದವರೆಗೂ ಪಶ್ಚಿಮ ಘಟ್ಟಗಳ ನಯನ ಮನೋಹರ ನೋಟವನ್ನು ನೀಡುತ್ತದೆ.
- ಶಾಂತಿ ಜಲಪಾತ: ಝಡ್ ಪಾಯಿಂಟ್‌ನಿಂದ 1 ಕಿ.ಮೀ. ದೂರದಲ್ಲಿದ್ದು ಚಾರಣದ ಮೂಲಕ ತಲುಪಬಹುದಾಗಿದೆ.
- ಹಬ್ಬೆ ಜಲಪಾತ: ಕೆಮ್ಮಣ್ಣುಗುಂಡಿಯಿಂದ 8 ಕಿ.ಮೀ ದೂರದಲ್ಲಿ, ಚಾರಣದ ಮೂಲಕ ಅಥವಾ 4×4 ಜೀಪ್‌ಗಳ ಮೂಲಕ ತಲುಪಬಹುದಾಗಿದೆ.
- ಬಂಡೆ ಉದ್ಯಾನ
- ಗುಲಾಬಿ ಉದ್ಯಾನ
- ಕಲ್ಲತ್ತಿಗಿರಿ ಜಲಪಾತ: ಕಲ್ಲತ್ತಿಗಿರಿ (ಕಲ್ಹತ್ತಿ) ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಒಂದು ಸಣ್ಣ, ಸುಂದರ ದೇವಾಲಯ ಮತ್ತು ಜಲಪಾತವಾಗಿದೆ. ಕಲ್ಲತ್ತಿಗಿರಿ ಜಲಪಾತವು ಕೆಮ್ಮಣ್ಣುಗುಂಡಿಗೆ ಹೋಗುವ ದಾರಿಯಲ್ಲಿದೆ. ಕೆಮ್ಮಣ್ಣುಗುಂಡಿಗೆ ಹೋಗುವ ಹೆಚ್ಚಿನ ಪ್ರವಾಸಿಗರು ಕಲ್ಲತ್ತಿಗಿರಿ ಜಲಪಾತಕ್ಕೂ ಭೇಟಿನೀಡುತ್ತಾರೆ. ಜಲಪಾತದ ಹತ್ತಿರ ಶ್ರೀ ವೀರ ಭದ್ರೆಶ್ವರ ಸ್ವಾಮಿ ದೇವಸ್ಥಾನ ಇದೆ
ಸಮಯಗಳು: ಎಲ್ಲಾ ದಿನಗಳಲ್ಲಿ ಕೆಮ್ಮಣ್ಣುಗುಂಡಿಯನ್ನು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಪ್ರವೇಶಿಸಬಹುದು.
ಹತ್ತಿರದಲ್ಲಿ ಇನ್ನೇನಿದೆ?: ಮುಲ್ಲಯನಗಿರಿ (68 ಕಿ.ಮೀ), ಭದ್ರಾ ವನ್ಯಜೀವಿ ಅಭಯಾರಣ್ಯ (53 ಕಿ.ಮೀ), ಅಯ್ಯನ ಕೆರೆ (58 ಕಿ.ಮೀ) ಕೆಮ್ಮಣ್ಣುಗುಂಡಿಯೊಂದಿಗೆ ಭೇಟಿ ನೀಡಬಹುದಾದ ಕೆಲವು ಆಕರ್ಷಣೆಗಳಾಗಿವೆ.
ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವುದು ಹೇಗೆ? ಕೆಮ್ಮಣ್ಣುಗುಂಡಿ ಬೆಂಗಳೂರಿನಿಂದ 250 ಕಿ.ಮೀ ಮತ್ತು ಚಿಕ್ಕಮಗಳೂರಿನಿಂದ (60 ಕಿ.ಮೀ) ದೂರದಲ್ಲಿದೆ.
ಬೀರೂರು ಜಂಕ್ಷನ್ ಹತ್ತಿರದ ರೈಲ್ವೆ ನಿಲ್ದಾಣ (33 ಕಿ.ಮೀ) ಮತ್ತು ಬಸ್ ನಿಲ್ದಾಣವಾಗಿದೆ. ಕೆಮ್ಮಣ್ಣುಗುಂಡಿಗೆ ಭೇಟಿ ನೀಡಲು ಹತ್ತಿರದ ನಗರಗಳಾದ ಬೀರೂರು, ಶಿವಮೊಗ್ಗ (72 ಕಿ.ಮೀ), ಭದ್ರಾವತಿ (51 ಕಿ.ಮೀ) ಅಥವಾ ಚಿಕ್ಕಮಗಳೂರಿನಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದಾಗಿದೆ.
ವಸತಿ: ತೋಟಗಾರಿಕೆ ಇಲಾಖೆ ಕೆಮ್ಮಣ್ಣುಗುಂಡಿಯಲ್ಲಿ ಅತಿಥಿಗೃಹವನ್ನು ನಡೆಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಐಷಾರಾಮಿ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತವೆ.