Karnataka Tourism
GO UP

ಕುಂದಾದ್ರಿ ಜೈನ ದೇವಾಲಯ

separator
ಕೆಳಗೆ ಸ್ಕ್ರಾಲ್ ಮಾಡಿ

ಕುಂದಾದ್ರಿ ಜೈನ ದೇವಾಲಯ – ಕುಂದಾದ್ರಿ ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಒಂದು ಸುಂದರವಾದ ಬೆಟ್ಟ ಮತ್ತು ಜನಪ್ರಿಯ ಜೈನ ಯಾತ್ರಾ ಕೇಂದ್ರವಾಗಿದೆ. ಕುಂದಾದ್ರಿ ಸಮುದ್ರ ಮಟ್ಟಕ್ಕಿಂತ ಸುಮಾರು 826 ಮೀಟರ್ ಎತ್ತರದಲ್ಲಿದೆ ಮತ್ತು ತಂಪಾದ ಗಾಳಿ ಮತ್ತು ಮೋಡಿಮಾಡುವ ನೋಟಗಳೊಂದಿಗೆ ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತದೆ.

ಇತಿಹಾಸ:

4 ನೇ ಶತಮಾನದ ಜನಪ್ರಿಯ ಜೈನ ಸನ್ಯಾಸಿ ಆಚಾರ್ಯ ಕುಂದಕುಂದ ಅವರ ಹೆಸರಿನಿಂದ ಕುಂದಾದ್ರಿ ಎಂಬ ಹೆಸರು ಬಂದಿದೆ ಎಂದು ನಂಬಲಾಗಿದೆ. ಅವರು ಈ ಬೆಟ್ಟಗಳಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ.

ಕುಂದಾದ್ರಿ ಜೈನ ದೇವಾಲಯ:

17 ನೇ ಶತಮಾನದ ಜೈನ ದೇವಾಲಯವಾದ ಕುಂದಾದ್ರಿ ಬೆಟ್ಟದ ಮೇಲಿದೆ.  ಜೈನರ 23 ನೇ ತೀರ್ಥಂಕರರಾದ ಪಾರ್ಶ್ವನಾಥರಿಗೆ ಈ ದೇವಾಲಯವನ್ನು ಸಮರ್ಪಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಜೈನ ಭಕ್ತರು ತೀರ್ಥಯಾತ್ರೆಗೆ ಕುಂದಾದ್ರಿಗೆ ಬರುತ್ತಾರೆ. ಎರಡು ಸಣ್ಣ ಕೊಳಗಳ ಜೊತೆಗೆ ಇರುವ ಈ ಸಣ್ಣ ದೇವಾಲಯ, ಕುಂದಾದ್ರಿ ಬೆಟ್ಟಗಳ ಮೇಲಿರುವ ಏಕೈಕ ಕಟ್ಟಡವಾಗಿದೆ.

ಹತ್ತಿರದ ಆಕರ್ಷಣೆಗಳು:

ಕುಂದಾದ್ರಿ ಭೇಟಿಯ ಜೊತೆಗೆ ಹತ್ತಿರದ ಆಕರ್ಷಣೆಗಳಾದ ಅಗುಂಬೆ (16 ಕಿ.ಮೀ), ಶೃಂಗೇರಿ (ಕುಂದಾದ್ರಿಯಿಂದ 30 ಕಿ.ಮೀ) ಮತ್ತು ಕುಪ್ಪಳ್ಳಿ (ಕುಂದಾದ್ರಿಯಿಂದ 31 ಕಿ.ಮೀ) ಗಳನ್ನೂ ಭೇಟಿ ಮಾಡಬಹುದಾಗಿದೆ 

ಕುಂದಾದ್ರಿ ತಲುಪುವುದು:

ಕುಂದಾದ್ರಿ ಅಗುಂಬೆಯಿಂದ 16 ಕಿ.ಮೀ, ಶಿವಮೊಗ್ಗದಿಂದ 90 ಕಿ.ಮೀ ಮತ್ತು ಬೆಂಗಳೂರಿನಿಂದ 350 ಕಿ.ಮೀ. ದೂರವಿದೆ. ತೀರ್ಥಹಳ್ಳಿ ಅಥವಾ ಅಗುಂಬೆ ತನಕ ಸಾರ್ವಜನಿಕ ಸಾರಿಗೆ ಲಭ್ಯವಿದೆ. ಇಲ್ಲಿಂದ ಟ್ಯಾಕ್ಸಿ ಪಡೆದು ಕುಂದಾದ್ರಿ ಬೆಟ್ಟಗಳ ತುದಿಯನ್ನು ತಲುಪಬಹುದಾಗಿದೆ.  ಕುಂದಾದ್ರಿ ತಲುಪಲು ಕೊನೆಯ 15 ಕಿ.ಮೀ. ರಸ್ತೆಗಳು ತೀಕ್ಷ್ಣ ತಿರುವು, ಸುಧೀರ್ಘ ಏರುವಿಕೆಯಿಂದ ಕೂಡಿದ್ದು ಅನನುಭವಿ ಚಾಲಕರಿಗೆ ಕಷ್ಟವಾಗಬಹುದಾಗಿದೆ. 

ವಸತಿ:

ಕುಂದಾದ್ರಿ ಯಾವುದೇ ಸೌಲಭ್ಯಗಳು ಅಥವಾ ಜನರಿಲ್ಲದ ಏಕಾಂತ ಸ್ಥಳವಾಗಿದೆ. ರಾತ್ರಿಯ ಮೊದಲು ಹತ್ತಿರದ ಪಟ್ಟಣಕ್ಕೆ ವಾಪಸ್ ಹೋಗಬೇಕಾಗುತ್ತದೆ. ಅಗುಂಬೆ, ತೀರ್ಥಹಳ್ಳಿ ಮತ್ತು ಶಿವಮೊಗ್ಗಗಳಲ್ಲಿ ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಲಭ್ಯವಿದೆ.

Tour Location

Leave a Reply

Accommodation
Meals
Overall
Transport
Value for Money