Karnataka Tourism
GO UP

ಐಎನ್‌ಎಸ್ ಚಾಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ

separator
ಕೆಳಗೆ ಸ್ಕ್ರಾಲ್ ಮಾಡಿ

ಐಎನ್‌ಎಸ್ ಚಾಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ

ಭಾರತೀಯ ನೌಕಾ ಸೇನೆಯ ಐಎನ್ಎಸ್ ಚಾಪಲ್ 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತೀಯ ನೌಕಾಪಡೆಯ ಸಕ್ರಿಯ ಯುದ್ಧನೌಕೆಯಾಗಿತ್ತು ಮತ್ತು ಕರಾಚಿಯ ಮೇಲಿನ ದಾಳಿಯ ಮುಂದಾಳತ್ವ ಹೊಂದಿತ್ತು. ಐಎನ್ಎಸ್ ಚಾಪಲ್ ಅನ್ನು ಈಗ ಸೇವೆಯಿಂದ ನಿವೃತ್ತಿಗೊಳಿಸಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ .ಕಾರವಾರದ ಕಡಲ ತೀರದಲ್ಲಿ ನಿಂತು ಗತ ವೈಭವದ ಕತೆ ಹೇಳುತ್ತಿದೆ ಮತ್ತು ನೌಕಾ ಪಡೆಯ ಜೀವನ, ಯುದ್ಧ ನೌಕೆಯ ಒಳಾಂಗಣ ಇತ್ಯಾದಿಗಳನ್ನು ತಿಳಿದುಕೊಳ್ಳ ಬಯಸುವವರಿಗೆ ಒಂದು ಉತ್ತಮ ಅವಕಾಶ ಒದಗಿಸುತ್ತದೆ 

ಐಎನ್ಎಸ್ ಚಾಪಲ್ ವಿಶೇಷಣಗಳು:

  • ವರ್ಗ: ಕ್ಷಿಪಣಿ ಉಡಾವಣೆ (ಒಎಸ್ಎ II ವರ್ಗ ಕ್ಷಿಪ್ತ ಕ್ಷಿಪಣಿ ದೋಣಿ)
  • ಗುಪ್ತ ಸಂಕೇತ: ಕೆ 94
  • ತೂಕ: 245 ಟನ್
  • ಉದ್ದ: 38.6 ಮೀಟರ್
  • ಅಗಲ: 7.6 ಮೀಟರ್
  • ಗರಿಷ್ಟ ವೇಗ: 37 ನಾಟ್  (ಗಂಟೆಗೆ ೬೮ ಕಿ ಮೀ )
  • ಶಸ್ತ್ರಾಸ್ತ್ರಗಳು: ಎರಡು 30 ಎಂಎಂ ಬಂದೂಕುಗಳು, ಒಂದು ವಾಯು ಕ್ಷಿಪಣಿ ಉಡಾವಣೆ ಯಂತ್ರ, ನಾಲ್ಕು ಹಡಗು ವಿರೋಧಿ ಕ್ಷಿಪಣಿ ಲಾಂಚರ್‌ಗಳು.
  • ಸೇವೆ ಪ್ರಾರಂಭಿಸಿದ ದಿನ: 4 ನವೆಂಬರ್ 1976
  • ಸೇವೆಯಿಂದ ನಿವೃತ್ತಿಯಾದ ದಿನ: 5 ಮೇ 2005

ಆಪರೇಷನ್ ಟ್ರೈಡೆಂಟ್: 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿ ಮತ್ತು ಅರೇಬಿಯನ್ ಸಮುದ್ರದಲ್ಲಿ ನೌಕಾ ದಿಗ್ಬಂಧನವನ್ನು ಜಾರಿಗೊಳಿಸಲು ಐಎನ್ಎಸ್ ಚಪಾಲ್ ಕಾರಣ. ಇದು ಪಾಕಿಸ್ತಾನದ ವಾಣಿಜ್ಯ ಶಕ್ತಿಯನ್ನು ಕುಂಠಿತಗೊಳಿಸಿತು ಮತ್ತು ಭಾರತದ ಅಂತಿಮ ಗೆಲುವಿಗೆ ನೆರವಾಯಿತು. ಐಎನ್‌ಎಸ್ ಚಾಪಲ್‌ನ ಸಿಬ್ಬಂದಿಗೆ ಭಾರತದ ಅತ್ಯುನ್ನತ ಮಿಲಿಟರಿ ಗೌರವಗಳಾದ  2 ಪರಮ ವೀರ ಚಕ್ರಗಳನ್ನು ಮತ್ತು 8 ವೀರ ಚಕ್ರಗಳನ್ನು ನೀಡಿ ಗೌರವಿಸಲಾಯಿತು. 

ಐಎನ್ಎಸ್ ಚಾಪಲ್ ಯುದ್ಧನೌಕೆ ವಸ್ತುಸಂಗ್ರಹಾಲಯದಲ್ಲಿ ಏನನ್ನು ನೋಡಬಹುದು?

ಸಂದರ್ಶಕರು ಐಎನ್ಎಸ್ ಚಾಪಲ್ ಯುದ್ಧನೌಕೆಯ ಒಳಾಂಗಣವನ್ನು ಹತ್ತಿರದಿಂದ ನೋಡಬಹುದಾಗಿದೆ. ಸಿಬ್ಬಂದಿ ಬಳಸುವ ಬ್ಯಾರಕ್‌ಗಳು, ಎಂಜಿನ್ ಕೊಠಡಿಗಳು, ಬಾಹ್ಯ ಬಂದೂಕುಗಳು, ಸೈನಿಕರ ಸಮವಸ್ತ್ರ ಮತ್ತು ಸಮುದ್ರದಲ್ಲಿನ ಜೀವನದ ಬಗ್ಗೆ ಒಳನೋಟವನ್ನು ಪಡೆಯುಬಹುದಾಗಿದೆ. ಭಾರತದ ತೀರಗಳನ್ನು ಕಾಪಾಡುವಲ್ಲಿ ಭಾರತೀಯ ನೌಕಾಪಡೆಯ ಪಾತ್ರವನ್ನು ವಿವರಿಸುವ 15 ನಿಮಿಷಗಳ ವೀಡಿಯೊ ಸಾಕ್ಷ್ಯಚಿತ್ರವನ್ನು ತೋರಿಸಲಾಗುತ್ತದೆ.

ಸಮಯ: ಐಎನ್‌ಎಸ್ ಚಾಪಲ್ ಯುದ್ಧನೌಕೆ ವಸ್ತುಸಂಗ್ರಹಾಲಯವು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ಸಂಜೆ 4.30 ರವರೆಗೆ ಸಂಜೆ 6 ರವರೆಗೆ ತೆರೆದಿರುತ್ತದೆ

ಹತ್ತಿರ: ಯಾಣ ಬಂಡೆಗಳು (89 ಕಿ.ಮೀ), ದಾಂಡೇಲಿ (107 ಕಿ.ಮೀ) ಮತ್ತು ಗೋಕರ್ಣ (65 ಕಿ.ಮೀ) ಕಾರವಾರದ ಜೊತೆಗೆ ಭೇಟಿ ನೀಡಬಹುದಾದ ಹತ್ತಿರದ ಸ್ಥಳಗಳಾಗಿವೆ.

ಭೇಟಿ: ಕಾರವಾರ ಬೆಂಗಳೂರಿನಿಂದ 520 ಕಿ.ಮೀ ಮತ್ತು ಮಂಗಳೂರಿನಿಂದ 271 ಕಿ.ಮೀ. ದೂರದಲ್ಲಿದೆ ಗೋವಾ ಹತ್ತಿರದ ವಿಮಾನ ನಿಲ್ದಾಣವಾಗಿದೆ (ಕಾರವಾರದಿಂದ 90 ಕಿ.ಮೀ). ಕಾರವಾರ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲ್ವೆ ನಿಲ್ದಾಣವನ್ನು ಹೊಂದಿದೆ. ಕರ್ನಾಟಕದ ಎಲ್ಲಾ ಭಾಗಗಳಿಂದ ಕಾರವಾರ ತಲುಪಲು ನಿಯಮಿತ ಬಸ್ ಸೇವೆ ಲಭ್ಯವಿದೆ. ಐಎನ್‌ಎಸ್ ಚಪಾಲ್ ನೆಲೆಗೊಂಡಿರುವ ರವೀಂದ್ರನಾಥ ಟ್ಯಾಗೋರ್ ಬೀಚ್ ಕಾರವಾರ ನಗರ ಕೇಂದ್ರದಿಂದ 1.4 ಕಿ.ಮೀ ದೂರದಲ್ಲಿದೆ.

ವಸತಿ : ಕಾರವಾರ ನಗರದಲ್ಲಿ ಅನೇಕ ಹೋಟೆಲ್‌ಗಳು, ಕಡಲತಡಿಯ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳಿವೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳು ಮತ್ತು ಸ್ಟರ್ಲಿಂಗ್ ರೆಸಾರ್ಟ್‌ಗಳು ನಿರ್ವಹಿಸುವ ದೇವ್‌ಬಾಗ್ ಬೀಚ್ ರೆಸಾರ್ಟ್ ಕಾರವಾರದಲ್ಲಿ ಉಳಿಯಬಹುದಾದ ಎರಡು ಐಷಾರಾಮಿ ರೆಸಾರ್ಟ್ಗಳಾಗಿವೆ. 

 

Tour Location

 

Leave a Reply

Accommodation
Meals
Overall
Transport
Value for Money