GO UP

ಉಂಚಳ್ಳಿ ಜಲಪಾತ

separator
Scroll Down

ಉಂಚಳ್ಳಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲ್ಲೂಕಿನ ಜನಪ್ರಿಯ ಜಲಪಾತವಾಗಿದೆ. ಅಘನಾಶಿನಿ ನದಿ ಇಲ್ಲಿ 116 ಮೀಟರ್ ಆಳಕ್ಕೆ ಧುಮುಕಿ ಭವ್ಯವಾದ ಜಲಪಾತವನ್ನು ಸೃಷ್ಟಿಸುತಾಳೆ. ಪ್ರವಾಸಿಗರು ಉಂಚಳ್ಳಿ ಜಲಪಾತವನ್ನು ವೀಕ್ಷಣಾ ಸ್ಥಳದಿಂದ ವೀಕ್ಷಿಸನೋಡಬಹುದಾಗಿದೆ ಅಥವಾ ಮೆಟ್ಟಿಲುಗಳನ್ನು ಇಳಿದು ಇನ್ನಷ್ಟು ಸಮೀಪ ಹೋಗಿ ಜಲಪಾತದ ಭೋರ್ಗೆರೆತ, ಸೌಂದರವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಮಳೆಗಾಲದ ನಂತರದ ಸಮಯ ಉಂಚಳ್ಳಿ ಜಲಪಾತ ನೋಡಲು ಅತ್ತ್ಯುತ್ತಮ ಸಮಯವಾಗಿದೆ.  ಉಂಚಳ್ಳಿ ಜಲಪಾತವನ್ನು ಮೊದಲು 1875 ರಲ್ಲಿ ಬ್ರಿಟಿಷ್ ಅಧಿಕಾರಿ ಜೆ. ಡಿ. ಲುಶಿಂಗ್ಟನ್ ಕಂಡುಹಿಡಿದನು.

ಉಂಚಳ್ಳಿ ಜಲಪಾತ ತಲುಪುವುದು ಹೇಗೆ?: ಉಂಚಳ್ಳಿ ಜಲಪಾತವು ಬೆಂಗಳೂರಿನಿಂದ 440 ಕಿ.ಮೀ ಮತ್ತು ಮಂಗಳೂರಿನಿಂದ 260 ಕಿ.ಮೀ ದೂರದಲ್ಲಿದೆ. ಹೆಗ್ಗರಣೆ ಉಂಚಳ್ಳಿ ಜಲಪಾತಕ್ಕೆ ಹತ್ತಿರದ ಹಳ್ಳಿ (ಉಂಚಳ್ಳಿ ಜಲಪಾತದಿಂದ 5 ಕಿ.ಮೀ) ಮತ್ತು ಶಿರಸಿ  (ಉಂಚಳ್ಳಿ ಜಲಪಾತದಿಂದ 35 ಕಿ.ಮೀ) ಹತ್ತಿರದ ಪಟ್ಟಣ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣ (140 ಕಿ.ಮೀ). ಉಂಚಳ್ಳಿ ಜಲಪಾತ ತಲುಪಲು ಉತ್ತಮ ರಸ್ತೆ ಇದೆ. ಕೊನೆಯ ಒಂದು ಕಿ ಮೀ ನಡೆದು ಕ್ರಮಿಸಬೇಕಾಗುತ್ತದೆ. ಸಾಗರ ಮತ್ತು ತಾಳಗುಪ್ಪ ಹತ್ತಿರದ ರೈಲು ನಿಲ್ದಾಣಗಳು.  ಶಿರಸಿಯ ವರೆಗೆ ತಲುಪಲು ಉತ್ತಮ ಬಸ್ಸಿನ ವ್ಯವಸ್ಥೆ ಇದೆ. ಇಲ್ಲಿಂದ ಟ್ಯಾಕ್ಸಿ ಬಾಡಿಗೆಗೆ ಪಡೆದು ಉಂಚಳ್ಳಿ ಜಲಪಾತ ತಲುಪಬಹುದು.

ಹತ್ತಿರದ ಪ್ರವಾಸಿ ತಾಣಗಳು: ಜೋಗ ಜಲಪಾತ (63 ಕಿ.ಮೀ), ಗೋಕರ್ಣ (80 ಕಿ.ಮೀ), ಮುರುಡೇಶ್ವರ (100 ಕಿ.ಮೀ) ಮತ್ತು  ದಾಂಡೇಲಿ (135 ಕಿ.ಮೀ)

ವಸತಿ: ಶಿರಸಿ ಮತ್ತು ಸಿದ್ದಾಪುರ (ಉಂಚಳ್ಳಿ ಜಲಪಾತದಿಂದ 35 ಕಿ.ಮೀ ದೂರ) ಹತ್ತಿರದ ಎರಡು ಪಟ್ಟಣಗಳಾಗಿದ್ದು, ವಸತಿ ವ್ಯವಸ್ಥೆ ಹೊಂದಿವೆ.

    Tour Location

    Leave a Reply

    Accommodation
    Meals
    Overall
    Transport
    Value for Money