Karnataka Tourism
GO UP

ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಸ್ಥಾನ

separator
ಕೆಳಗೆ ಸ್ಕ್ರಾಲ್ ಮಾಡಿ

ಇಸ್ಕಾನ್ (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್) 1966 ರಲ್ಲಿ ಸ್ಥಾಪನೆಯಾದ ಒಂದು ಧಾರ್ಮಿಕ ಸಂಘಟನೆಯಾಗಿದೆ. ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಸ್ಥಾನ ವಿಶ್ವದಾದ್ಯಂತ ಹಲವಾರು ದೇವಾಲಯಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ನಡೆಸುತ್ತಿದೆ. ರಾಜಾಜಿನಗರದಲ್ಲಿರುವ ಇಸ್ಕಾನ್ ಬೆಂಗಳೂರು ಕರ್ನಾಟಕದ ಪ್ರಮುಖ ಇಸ್ಕಾನ್ ದೇವಾಲಯವಾಗಿದೆ.

ದೇವಾಲಯಗಳು: ಇಸ್ಕಾನ್ ದೇವಾಲಯಗಳಲ್ಲಿ ರಾಧಾ ಮತ್ತು ಶ್ರೀಕೃಷ್ಣ ಮುಖ್ಯ ದೇವತೆಗಳು. ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಸ್ಥಾನ ಬೆಂಗಳೂರಿನಲ್ಲಿ ಕೃಷ್ಣ ಮತ್ತು ಬಲರಾಮ, ಚೈತನ್ಯ ಮಹಾಪ್ರಭು ಮತ್ತು ನಿತ್ಯಾನಂದ ಪ್ರಭು, ಪ್ರಹ್ಲಾದ ನರಸಿಂಹ, ಶ್ರೀಲಾ ಪ್ರಭುಪಾದ ಮತ್ತು ಶ್ರೀನಿವಾಸ ಗೋವಿಂದ ಇತರ ಪೂಜನೀಯ ಸನ್ನಿಧಿಯಾಗಿವೆ. 

ಇಸ್ಕಾನ್ ಭಕ್ತರು ಮತ್ತು ಆಸಕ್ತ ಸಾರ್ವಜನಿಕರಿಗಾಗಿ ಹಲವಾರು ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಮುಂಬರುವ ಕಾರ್ಯಕ್ರಮಗಳ ವೇಳಾಪಟ್ಟಿಗಾಗಿ  ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಇಸ್ಕಾನ್ ಅಕ್ಷಯ ಪಾತ್ರೆ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಭಾರತದಾದ್ಯಂತ 1350 ಶಾಲೆಗಳಲ್ಲಿ 1.6 ಮಿಲಿಯನ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೌಷ್ಠಿಕಾಂಶದ ಬಿಸಿಯೂಟವನ್ನು ತಲುಪಿಸುತ್ತದೆ.

ಹತ್ತಿರ: ಫ್ರೀಡಂ ಪಾರ್ಕ್ (7 ಕಿ.ಮೀ), ಕಬ್ಬನ್ ಪಾರ್ಕ್ (8 ಕಿ.ಮೀ), ಬೆಂಗಳೂರು ಅರಮನೆ (8 ಕಿ.ಮೀ), ಲುಂಬಿನಿ ಉದ್ಯಾನಗಳು (11 ಕಿ.ಮೀ) ಮತ್ತು ಲಾಲ್‌ಬಾಗ್ (12 ಕಿ.ಮೀ) ಬೆಂಗಳೂರಿನಲ್ಲಿ ಇಸ್ಕಾನ್ ದೇವಸ್ಥಾನದ ಜೊತೆಗೆ ಭೇಟಿಕೊಡಬಹುದಾದ ಇತರ ಹತ್ತಿರದ ಆಕರ್ಷಣೆಗಳಾಗಿವೆ. 

ಸಮಯ: ವಾರದ ದಿನಗಳು: ಬೆಳಿಗ್ಗೆ 7.15 ರಿಂದ 1 ಗಂಟೆ, ಸಂಜೆ 4.15 ರಿಂದ ರಾತ್ರಿ 8.20, ವಾರಾಂತ್ಯಗಳು: ಬೆಳಿಗ್ಗೆ 7.15 ರಿಂದ ರಾತ್ರಿ 8.30 ರವರೆಗೆ. ದೇವಾಲಯದ ಆವರಣದಲ್ಲಿ ಛಾಯಾಗ್ರಹಣವನ್ನು ಅನುಮತಿಸಲಾಗುವುದಿಲ್ಲ. ಚೀಲಗಳು ಮತ್ತು ಕ್ಯಾಮೆರಾಗಳನ್ನು ಸುರಕ್ಷಿತವಾಗಿಡಲು ಲಾಕರ್ ಕೊಠಡಿಗಳು ಲಭ್ಯವಿದೆ.

ಭೇಟಿ: ಇಸ್ಕಾನ್ ದೇವಾಲಯವು ಬೆಂಗಳೂರು ವಿಮಾನ ನಿಲ್ದಾಣದಿಂದ 33 ಕಿ.ಮೀ ದೂರದಲ್ಲಿದೆ.  ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಕೇವಲ 7 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಬೆಂಗಳೂರು ಮೆಟ್ರೋ ಗ್ರೀನ್ ಲೈನ್ ಅನ್ನು ಹತ್ತಿ ರಾಜಾಜಿ ನಗರಕ್ಕೆ ತಲುಪಬಹುದು (ಮಹಾಲಕ್ಷ್ಮಿ ನಿಲ್ದಾಣ, ಇಸ್ಕಾನ್ ದೇವಸ್ಥಾನದಿಂದ 700 ಮೀಟರ್ ದೂರದಲ್ಲಿದೆ).

ವಸತಿ: ಇಸ್ಕಾನ್ ದೇವಾಲಯ ಯಾತ್ರಿ ನಿವಾಸ್ ಎಂಬ 70 ಕೋಣೆಗಳ ಅತಿಥಿ ಗೃಹವನ್ನು ನಡೆಸುತ್ತಿದೆ. ರಾಜಜಿನಗರ ಪ್ರದೇಶದಲ್ಲಿ ಹಲವು ಬಜೆಟ್ ಮತ್ತು ಐಷಾರಾಮಿ ಹೋಟೆಲ್‌ಗಳು ಲಭ್ಯವಿದೆ.

ಅಧಿಕೃತ ವೆಬ್‌ಸೈಟ್:  Click Here

 

Tour Location

 

Leave a Reply

Accommodation
Meals
Overall
Transport
Value for Money