GO UP

ಬಾಲ ಯೇಸು ಇಗರ್ಜಿ, ಮಂಗಳೂರು

separator
Scroll Down

ಇನ್ಫ್ಯಾಂಟ್  ಜೀಸಸ್ ಚರ್ಚ್ (ಬಾಲ ಯೇಸು ಇಗರ್ಜಿ )  ಮಂಗಳೂರಿನ ಕಾರ್ಮೆಲ್ ಬೆಟ್ಟಗಳ ಮೇಲೆ ಇರುವ ಸೇಂಟ್ ಜೋಸೆಫ್‌ಗೆ ಸಮರ್ಪಿತವಾದ ಕ್ರೈಸ್ತರ ಪ್ರಾರ್ಥನಾ ಮಂದಿರವಾಗಿದೆ. 

 17 ನೇ ಶತಮಾನದಲ್ಲಿ ಗೋವಾದಿಂದ ದಕ್ಷಿಣ ಕನ್ನಡಕ್ಕೆ ವಲಸೆ ಬಂದ ತೆರೇಸಿಯನ್ ಕಾರ್ಮೆಲೈಟ್‌ಗಳು ಬಾಲ ಯೇಸು ಇಗರ್ಜಿಯನ್ನು ಸ್ಥಾಪಿಸಿದರು. ಬಾಲ ಯೇಸು ಇಗರ್ಜಿ ಶಾಂತಿಯುತ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಕ್ಯಾಂಪಸ್‌ಗೆ ಹೆಸರುವಾಸಿಯಾಗಿದೆ.

ವೀಕ್ಷಣಾ ಕೇಂದ್ರ: ಎತ್ತರದ ಪ್ರದೇಶದಲ್ಲಿರುವುದರಿಂದ ಕಾರ್ಮೆಲ್ ಬೆಟ್ಟದ ಮೇಲಿನಿಂದ ಮಂಗಳೂರು ನಗರದ ಉತ್ತಮ ನೋಟವನ್ನು ಆಸ್ವಾದಿಸಬಹುದಾಗಿದೆ 

ವಾರ್ಷಿಕ ಹಬ್ಬ ಮತ್ತು ಭೋಜನ: ಜನವರಿ 13 ಮತ್ತು 14

ಸಾಮೂಹಿಕ ಪ್ರಾರ್ಥನಾ ಸಮಯ: ಬಾಲ ಯೇಸು ಇಗರ್ಜ ಕೊಂಕಣಿ, ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ಸಾಮೂಹಿಕ ಪ್ರಾರ್ಥನೆ  ನಡೆಸಿಕೊಡುತ್ತದೆ. 

ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ: ಬೆಳಗ್ಗೆ 6.30 & ಸಂಜೆ  6 ಗಂಟೆಗೆ, ಸೋಮವಾರ: ಬೆಳಗ್ಗೆ 6.30, ಸಂಜೆ 5.30 & 6 ಗಂಟೆಗೆ, ಗುರುವಾರ: ಬೆಳಗ್ಗೆ  6, 7.30, 9 , 10.30, ಸಂಜೆ 5 , 6 ಮತ್ತು 7 ಗಂಟೆಗೆ, ಭಾನುವಾರ: ಬೆಳಗ್ಗೆ 6 ಮತ್ತು 7.15 ಗಂಟೆಗೆ. 

ಹತ್ತಿರ: ಸೇಂಟ್ ಅಲೋಶಿಯಸ್ ಚಾಪೆಲ್, ಪಿಲಿಕುಳ  ನಿಸರ್ಗ ಧಾಮ, ತನ್ನೀರು ಭಾವಿ ಬೀಚ್ ಮತ್ತು ಕದ್ರಿ ಮಂಜುನಾಥ ದೇವಸ್ಥಾನಗಳು ಮಂಗಳೂರಿನಲ್ಲಿ ಭೇಟಿ ನೀಡಬಹುದಾದ ಇತರ ಜನಪ್ರಿಯ ಆಕರ್ಷಣೆಗಳಾಗಿವೆ.

ತಲುಪುವುದು ಹೇಗೆ: ಬಾಲ ಯೇಸು ಇಗರ್ಜಿ ಮಂಗಳೂರು ನಗರದ ಹೃದಯಭಾಗದಿಂದ 4 ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿದೆ. ಮಂಗಳೂರು ನಗರ ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿದೆ. ಮಂಗಳೂರು ವಾಯು, ರೈಲು ಮತ್ತು ರಸ್ತೆಯ ಮೂಲಕ ಕರ್ನಾಟಕದ ಉಳಿದ ಭಾಗಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಬಾಲ ಯೇಸು ಇಗರ್ಜಿಯನ್ನು ಮಂಗಳೂರು ನಗರದಿಂದ ಆಟೋ ಅಥವಾ ಟ್ಯಾಕ್ಸಿ ಬಾಡಿಗೆಗೆ ತಲುಪಬಹುದು.

ವಸತಿ: ಮಂಗಳೂರು ನಗರವು ಎಲ್ಲಾ ಶ್ರೇಣಿಯಲ್ಲಿ ಹಲವಾರು ಹೋಟೆಲ್ ಆಯ್ಕೆಗಳನ್ನು ಹೊಂದಿದೆ.

ಅಧಿಕೃತ ವೆಬ್‌ಸೈಟ್: https://www.infantjesusmangalore.net/

    Tour Location

    Leave a Reply

    Accommodation
    Meals
    Overall
    Transport
    Value for Money