Karnataka logo

Karnataka Tourism
GO UP
Image Alt

ಹಾಸನ

separator
  /  ಹಾಸನ

ಹಾಸನವು ಪ್ರತಿಯೊಬ್ಬ ಪ್ರವಾಸಿಗರಿಗೆ ಪರಿಪೂರ್ಣ ರಜಾ ತಾಣವಾಗಿದೆ. ಸಕಲೇಶಪುರ ಮತ್ತು ಚಿಕಮಗಳೂರಿನಂತಹ ಗಿರಿಧಾಮಗಳಿಂದ ಸುತ್ತುವರೆದಿರುವ ಹಾಸನವು ತನ್ನ ವಾಸ್ತುಶಿಲ್ಪದ ಅದ್ಭುತಗಳು, ಪರಂಪರೆ, ಐತಿಹಾಸಿಕ ಕೋಟೆಗಳು ಮತ್ತು ಕರ್ನಾಟಕದ ಅನೇಕ ಗುಪ್ತ ರತ್ನಗಳಿಗೆ ಹೆಸರಾಂತ ನಗರವಾಗಿದೆ. ಪುರಾತನ ಅವಳಿ ದೇವಾಲಯಗಳಾದ ಬೇಲೂರು-ಹಳೇಬೀಡು ಹಾಸನ ಜಿಲ್ಲೆಯ ಹೈಲೈಟ್ಸ್ ಆಗಿದೆ.

ಹಾಸನದ ಪ್ರೇಕ್ಷಣೀಯ ಸ್ಥಳಗಳು

ಪುರಾತನ ಹೊಯ್ಸಳ ನಗರವಾದ ಹಾಸನದಲ್ಲಿ ವಿಶೇಷವಾಗಿ ಇತಿಹಾಸ ಮತ್ತು ಪರಂಪರೆಯನ್ನು ಪ್ರೀತಿಸುವವರಿಗೆ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಹೇಮಾವತಿ ನದಿಯ ದಡದಲ್ಲಿರುವ ಶೆಟ್ಟಿಹಳ್ಳಿ ಚರ್ಚ್‌ನ ಮುಳುಗಿದ ಅವಶೇಷಗಳು ಪ್ರತಿಯೊಬ್ಬ ಪ್ರಯಾಣಿಕರನ್ನು ವಿಸ್ಮಯಗೊಳಿಸುತ್ತವೆ. ಇಲ್ಲಿನ ಶ್ರವಣ ಬೆಳಗೊಳವು ಕೇವಲ ಜೈನ ಯಾತ್ರಿಕರಿಗೆ ಮಾತ್ರವಲ್ಲ, ಹಾಸನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಅತ್ಯಗತ್ಯವಾದ ಸ್ಥಳವಾಗಿದೆ. ಇಲ್ಲಿ ವಿಶ್ವದ ಅತಿ ಎತ್ತರದ ಮತ್ತು ಜೈನ ದೇವರ ಗೋಮಟೇಶ್ವರನ ಪ್ರತಿಮೆ ಇದ್ದು ಇಲ್ಲಿಗೆ ತಲುಪಲು ಸುಮಾರು 700 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಮಂಜೀರಾಬಾದ್ ಕೋಟೆ, ಬಿಸ್ಲೆ ಘಾಟ್ ಟ್ರೆಕ್, ದೇವಾಲಯಗಳು ಮತ್ತು ಇನ್ನೂ ಅನೇಕ ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳು ಇಲ್ಲಿನ ಪ್ರಮುಖ ಆಕರ್ಷಣೀಯ ಸ್ಥಳಗಳಾಗಿವೆ.

ತಲುಪುವುದು ಹೇಗೆ?

ಹಾಸನ ಜಿಲ್ಲಾ ಕೇಂದ್ರವಾಗಿರುವುದರಿಂದ ರಸ್ತೆ ಮತ್ತು ರೈಲು ಮಾರ್ಗದ ಮೂಲಕ ಇಲ್ಲಿಗೆ ತಲುಪಬಹುದು. ಬೆಂಗಳೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಹಾಸನವನ್ನು ತಲುಪಬಹುದು. ಈ ವಿಮಾನ ನಿಲ್ದಾಣಗಳು ಹಾಸನದಿಂದ ಸಮಾನ ದೂರದಲ್ಲಿವೆ. ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಆದರೆ, ಮೈಸೂರು ವಿಮಾನ ನಿಲ್ದಾಣವು ಕೇವಲ 140 ಕಿಮೀ ದೂರದಲ್ಲಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಂದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ರೈಲು ಮಾರ್ಗವು ದೇಶದ ಪ್ರಮುಖ ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ಹಾಸನದ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ