Karnataka logo

Karnataka Tourism
GO UP
Image Alt

ಮೈಸೂರು

separator
  /  ಮೈಸೂರು

ವೈಭವ, ಭವ್ಯತೆ, ಪರಂಪರೆ, ವನ್ಯಜೀವಿ, ಸಂಸ್ಕೃತಿ, ಕರಕುಶಲ ವಸ್ತುಗಳು, ರೇಷ್ಮೆ ಮತ್ತು ಆಹಾರವು ಇವೆಲ್ಲವೂ ಮೈಸೂರು ನಗರದ ಸಮಾನಾರ್ಥಕ ಪದಗಳಾಗಿವೆ ‘ಅರಮನೆಗಳ ನಗರ’, ಮೈಸೂರು ತನ್ನ ಶ್ರೀಮಂತ ಪರಂಪರೆ ಮತ್ತು ವೈಭವಕ್ಕೆ ಹೆಸರುವಾಸಿಯಾಗಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಅಂತರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದಿದೆ. ಮೈಸೂರು ತನ್ನ ಸಂಸ್ಕೃತಿ, ನೃತ್ಯ ಮತ್ತು ಸಂಗೀತ, ಕಲೆ ಮತ್ತು ಸಾಹಿತ್ಯ, ಕರಕುಶಲ, ರೇಷ್ಮೆ ಮತ್ತು ಆಹಾರಕ್ಕಾಗಿ ದಕ್ಷಿಣ ಭಾರತದಲ್ಲಿ ಹೆಚ್ಚು ಭೇಟಿ ನೀಡುವ ನಗರಗಳಲ್ಲಿ ಒಂದಾಗಿದೆ.ಮೈಸೂರಿನ ಭವ್ಯವಾದ ಸ್ಮಾರಕಗಳು ಮತ್ತು ಪಾರಂಪರಿಕ ಕಟ್ಟಡಗಳು ನಮಗೆ ಹಳೆಯ ಆಕರ್ಷಣೆಯ ಅನೇಕ ಐತಿಹಾಸಿಕ ಕಥೆಗಳನ್ನು ಹೇಳುತ್ತವೆ. ಇಲ್ಲಿನ ರುಚಿಕರವಾದ ಮೈಸೂರು ದೋಸೆ ಮತ್ತು ಮೈಸೂರು ಪಾಕ್‌ನ್ನು ಸೇವಿಸಲೇ ಬೇಕು. ಇಲ್ಲಿನ ಪಾಕ ಪದ್ಧತಿಯು ಪ್ರಯಾಣಿಕರು ಮತ್ತು ಆಹಾರಪ್ರೇಮಿಗಳನ್ನು ಆಕರ್ಷಿಸುತ್ತದೆ. ದೇಶದ ಪ್ರಮುಖ ಯೋಗ ಮತ್ತು ಕ್ಷೇಮ ಕೇಂದ್ರಗಳಲ್ಲಿ ಒಂದಾದ ಮೈಸೂರು ಯೋಗದ ಅಷ್ಟಾಂಗ ರೂಪದ ಜನ್ಮಸ್ಥಳವಾಗಿದೆ ಮತ್ತು ಯೋಗದ ಸಮಗ್ರ ಸ್ವರೂಪವನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಅತ್ಯುತ್ತಮ ಸ್ಥಳವಾಗಿದೆ.ಅಕ್ಟೋಬರ್‌ನಲ್ಲಿ ನಡೆಯುವ ಮೈಸೂರು ದಸರಾವು ದೇಶದಲ್ಲೇ ಅತ್ಯಂತ ವೈಭವದಿಂದ ಆಚರಿಸುವ ಹಬ್ಬವಾಗಿದೆ.

ಮೈಸೂರಿನ ಪ್ರೇಕ್ಷಣೀಯ ಸ್ಥಳಗಳು

ಮೈಸೂರು ಅರಮನೆ, ಲಲಿತ ಮಹಲ್ ಅರಮನೆ ತಲಕಾಡ್, ಮೈಸೂರು ಮೃಗಾಲಯ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಚಾಮುಂಡೇಶ್ವರಿ ದೇವಸ್ಥಾನ, ಮೇಲ್ಕೋಟೆ, ಮೈಸೂರು ರೈಲು ಮ್ಯೂಸಿಯಂ ಮತ್ತು ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
ಮೈಸೂರು ನಗರದ ವೈಭವವನ್ನು ಪ್ರವಾಸಿಗರು ನೋಡಲೇ ಬೇಕು.

ತಲುಪುವುದು ಹೇಗೆ?

ಮೈಸೂರು ಕರ್ನಾಟಕದ ಎಲ್ಲಾ ಪ್ರಮುಖ ನಗರಗಳೊಂದಿಗೆ ಮತ್ತು ದೇಶದಾದ್ಯಂತ ಉತ್ತಮ ಸಂಪರ್ಕ ಹೊಂದಿದೆ. ಮೈಸೂರು ನಗರವು ಬೆಂಗಳೂರು, ಚೆನ್ನೈ, ಹೈದರಾಬಾದ್, ಗೋವಾ ಮತ್ತು ಕೊಚ್ಚಿಯಿಂದ ವಿಮಾನಗಳನ್ನು ಹೊಂದಿರುವ ದೇಶೀಯ ವಿಮಾನ ನಿಲ್ದಾಣವನ್ನು ಹೊಂದಿದೆ. ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳೆಂದರೆ ಬೆಂಗಳೂರು ಮತ್ತು ಕಣ್ಣೂರು. ಮೈಸೂರು ದೇಶದ ಪ್ರಮುಖ ನಗರಗಳಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ರಸ್ತೆ ಸಾರಿಗೆಯ ಮೂಲಕವು ಕರ್ನಾಟಕದ ಪ್ರಮುಖ ನಗರಗಳು ಮತ್ತು ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ಮೈಸೂರಿನ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.