Karnataka logo

Karnataka Tourism
GO UP
Image Alt

ಬೇಲೂರು

separator
  /  ಬೇಲೂರು

ಹಾಸನ ಜಿಲ್ಲೆಯ ಒಂದು ಸಣ್ಣ ಪಾರಂಪರಿಕ ಪಟ್ಟಣವಾದ ಬೇಲೂರು, ಹೊಯ್ಸಳ ರಾಜವಂಶದ ಪರಂಪರೆ ಮತ್ತು ಪುರಾತನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಹೊಯ್ಸಳರು ತಮ್ಮ ಭವ್ಯವಾದ ವಾಸ್ತುಶಿಲ್ಪ ಮತ್ತು ಸೊಗಸಾದ ಕರಕುಶಲತೆಗೆ ಹೆಸರುವಾಸಿಯಾಗಿದ್ದಾರೆ. ಯಗಚಿ ನದಿಯ ದಡದಲ್ಲಿರುವ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಗಳಲ್ಲಿ ಒಂದಾಗಿತ್ತು.

ಬೇಲೂರು ಪಟ್ಟಣವು ವಿಷ್ಣುವಿಗೆ ಸಮರ್ಪಿತವಾಗಿರುವ ಚೆನ್ನಕೇಶವ ದೇವಾಲಯಕ್ಕೆ ಹೆಸರುವಾಸಿಯಾಗಿದೆ. 14 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು ದ್ರಾವಿಡ ಸಂಸ್ಕೃತಿ ಮತ್ತು ಹೊಯ್ಸಳ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿದೆ. ಪುರಾಣ ಮತ್ತು ಮಹಾಕಾವ್ಯಗಳ ಕಥೆಗಳ ಕೆತ್ತನೆಗಳನ್ನು ಹೊಂದಿರುವ ದೇವಾಲಯದ ಹೊರಭಾಗ ಮತ್ತು ಒಳಗಿನ ಗೋಡೆಗಳು ನಿಮ್ಮನ್ನು ವಿಸ್ಮಯಗೊಳಿಸುತ್ತವೆ. ಈಎ ದೇವಾಲಯದ ಮುಖ್ಯ ದ್ವಾರವು ಬೃಹತ್ ಗೋಪುರವನ್ನು ಹೊಂದಿದ್ದು (ಅನೇಕ ಶ್ರೇಣಿಗಳನ್ನು ಹೊಂದಿರುವ ಮುಖ್ಯ ದ್ವಾರ) ಇದು ಸುಂದರವಾಗಿ ಕೆತ್ತಲಾದ ಶಿಲ್ಪಗಳನ್ನು ಹೊಂದಿದೆ. ಇದನ್ನು ನೃತ್ಯಗಾರರು, ಪ್ರಾಣಿಗಳು, ಪಕ್ಷಿಗಳು, ಕಥೆಗಳು ಮತ್ತು ಪುರಾಣಗಳ ನಿರೂಪಣೆಗಳೊಂದಿಗೆ ನಿಮ್ಮನ್ನು ವಿಸ್ಮಯಗೊಳಿಸುವಂತೆ ಉತ್ತಮವಾಗಿ ರಚಿಸಲಾಗಿದೆ.

ಈ ದೇವಾಲಯವು ಯುನೆಸ್ಕೋ ಪಾರಂಪರಿಕ ತಾಣಗಳ ಬಾಕಿಯಿರುವ ಪಟ್ಟಿಯಲ್ಲಿದೆ.

ದೇವಾಲಯದ ಸಮಯ: ದೇವಾಲಯವು ಪ್ರತಿದಿನ ಬೆಳಿಗ್ಗೆ 7.30 ರಿಂದ ಸಂಜೆ 7.30 ರವರೆಗೆ ತೆರೆದಿರುತ್ತದೆ.

ತಲುಪುವುದು ಹೇಗೆ?

ಜಿಲ್ಲಾ ಕೇಂದ್ರ ಹಾಸನವು ಮಂಗಳೂರಿನಿಂದ ಸುಮಾರು 155 ಕಿಮೀ ಮತ್ತು ಬೆಂಗಳೂರಿನಿಂದ ಸುಮಾರು 220 ಕಿಮೀ ದೂರದಲ್ಲಿದೆ. ಬೇಲೂರು ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿದೆ ಮತ್ತು ಇದನ್ನು ರಸ್ತೆ ಸಾರಿಗೆ ಮೂಲಕ ಸುಲಭವಾಗಿ ತಲುಪಬಹುದು. ಹಾಸನ ಜಂಕ್ಷನ್ ಕೂಡ ಹತ್ತಿರದ ರೈಲು ನಿಲ್ದಾಣವಾಗಿದೆ. ಇಲ್ಲಿಗೆ ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಂದ ರಾಜ್ಯ ರಸ್ತೆ ಸಾರಿಗೆಯ ನಿಯಮಿತ ಬಸ್ಸುಗಳ ಸೇವೆ ಇದೆ.

ಬೇಲೂರು ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.